Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಇಂಗ್ಲಿಷ್ ನಲ್ಲಿ ಕಿಚ್ಚ – ಕನ್ನಡದಲ್ಲಿ ಡಾಲಿ..ಏನಿದು ??
- ವಿಶೇಷ ಸಮಾಚಾರ

ಇಂಗ್ಲಿಷ್ ನಲ್ಲಿ ಕಿಚ್ಚ – ಕನ್ನಡದಲ್ಲಿ ಡಾಲಿ..ಏನಿದು ??

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ ಇಂಗ್ಲಿಷ್‌ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ) ಕೃತಿಯ ಇಂಗ್ಲಿಷ್ ಮತ್ತು ಕನ್ನಡ ಟ್ರೈಲರ್‌ಗಳು ನವೆಂಬರ್ 15ರಂದು ಬಿಡುಗಡೆಯಾಗಲಿವೆ. ಕೆಳದಿಯ ಶಿವಪ್ಪ ನಾಯಕ ಮತ್ತು ಪೋರ್ಚುಗೀಸರ ನಡುವಿನ ಐತಿಹಾಸಿಕ ನೌಕಾಯುದ್ಧದ ಕಥಾಹಂದರ ಹೊಂದಿರುವ ಈ ಕಾದಂಬರಿಯ ಇಂಗ್ಲಿಷ್ ಟ್ರೈಲರ್‌ಗೆ ಖ್ಯಾತ ನಟ ಕಿಚ್ಚ […]

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ

ಇಂಗ್ಲಿಷ್‌ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ

ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ) ಕೃತಿಯ ಇಂಗ್ಲಿಷ್ ಮತ್ತು ಕನ್ನಡ ಟ್ರೈಲರ್‌ಗಳು ನವೆಂಬರ್ 15ರಂದು ಬಿಡುಗಡೆಯಾಗಲಿವೆ.

ಕೆಳದಿಯ ಶಿವಪ್ಪ ನಾಯಕ ಮತ್ತು ಪೋರ್ಚುಗೀಸರ ನಡುವಿನ ಐತಿಹಾಸಿಕ ನೌಕಾಯುದ್ಧದ ಕಥಾಹಂದರ ಹೊಂದಿರುವ ಈ ಕಾದಂಬರಿಯ ಇಂಗ್ಲಿಷ್ ಟ್ರೈಲರ್‌ಗೆ ಖ್ಯಾತ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಕನ್ನಡ ಟ್ರೈಲರ್‌ಗೆ ನಟ ಡಾಲಿ ಧನಂಜಯ ನಿರೂಪಣೆ ಮಾಡಿದ್ದಾರೆ.

ಕಾದಂಬರಿಯ ಕಥೆಯನ್ನು ಮೆಚ್ಚಿಕೊಂಡ ಸುದೀಪ್ ಅವರು ತಮ್ಮ ಖಾಸಗಿ ಸ್ಟುಡಿಯೋದಲ್ಲೇ ನಿರೂಪಣೆ ಧ್ವನಿಮುದ್ರಣ ಮಾಡಿಕೊಟ್ಟಿದ್ದಾರೆ. ಕನ್ನಡ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಧನಂಜಯ ಅವರು ಕೂಡ ತಕ್ಷಣವೇ ಒಪ್ಪಿಕೊಂಡು ಕನ್ನಡ ನಿರೂಪಣೆ ನೀಡಿದ್ದಾರೆ.

ಕಾದಂಬರಿಯು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.