“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ
ಲತಾ ಜೈಪ್ರಕಾಶ್ ನಿರ್ಮಾಣದ, ಶ್ವೇತಾ ಶೆಟ್ಟಿ ನಿರ್ದೇಶನದ ಹಾಗೂ ಶ್ರೀಹರಿ ಸಂಗೀತ ಸಂಯೋಜಿಸಿರುವ, ಎಐ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮ ಅವರ ಜೀವನಾಧಾರಿತ “ರಾಣಿ ಚೆನ್ನಮ್ಮ” ಚಿತ್ರದ ಆಡಿಯೋ ರಿಲೀಸ್ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ,
ಗಿರಿಜಾ ಲೋಕೇಶ್, ಕಿತ್ತೂರು ಚೆನ್ನಮ್ಮ ಜಯಂತಿಯಂದು,ರಾಣಿ ಚೆನ್ನಮ್ಮ ಎಂಬ AI ಸಿನಿಮಾ ಮಾಡಿರುವ ನಿರ್ಮಾಪಕಿ ಲತಾ ಅವರಿಗೆ ಹಾಗೂ ನಿರ್ದೇಶಕಿ ಶ್ವೇತಾ ಶೆಟ್ಟಿ ಯವರಿಗೆ ಶುಭ ಹಾರೈಕೆಗಳು ಎಂದರು.
ಮಹಿಳಾ ನಿರ್ಮಾಪಕಿ,
ಲತಾ ಜೈ ಪ್ರಕಾಶ್ ಮಾತನಾಡಿ,ರಾಣಿ ಚೆನ್ನಮ್ಮ ಕುರಿತಾಗಿ ನಾವು ಭಕ್ತಿಯಿಂದ ನಾವೆಲ್ಲ ಮಾಡಿದ ಪ್ರಯೋಗಾತ್ಮಕ AI ಚಿತ್ರ,
ಹಿರಿಯ ನಿರ್ಮಾಪಕ ಮತ್ತು ಚಿತ್ರ ಹಂಚಿಕೆದಾರರು ಕುಮಾರ್ ರವರು ನಮಗೆ ದೊಡ್ಡ ಸಪೋರ್ಟ್ ಮಾಡ್ತಾ ಇದಾರೆ, ರಾಣಿ ಚೆನ್ನಮ್ಮ ದೊಡ್ಡ ಸಾಧಕಿಯಾಗಿ ಮತ್ತು ಹೋರಾಟಗಾರ್ತಿಯಾಗಿ ಬೆಳೆದಿದ್ದು ರಾಣಿ ಚೆನ್ನಮ್ಮ ನವರ ಜೀವನದಲ್ಲಿ ಅವ್ರ ತಂದೆಯ ಪಾತ್ರ ತುಂಬಾ ದೊಡ್ಡದು ಮಗಳಿಗೆ ತಂದೆ ಕೊಟ್ಟ
ಪ್ರೋತ್ಸಾಹ ಇವತ್ತು ಬಿಡುಗಡೆಯಾದ ಹಾಡಲ್ಲಿ ನಾವು ತೋರಿಸಿದ್ದೇವೆ,ಹಾಗೆ ನನಗೂ ಸಹ ನನ್ನ ಹೆತ್ತವರ ಆಶೀರ್ವಾದ ಇದೆ ಅದರಲ್ಲೂ ನನ್ನ ತಂದೆ ನನಗೆ ದೊಡ್ಡ ಪ್ರೇರಣೆ ಎಂದರು.
ರಾಣಿ ಚೆನ್ನಮ್ಮ ಚಿತ್ರದ ನಿರ್ದೇಶಕಿ
ಶ್ವೇತಾ ಶೆಟ್ಟಿ ಮಾತನಾಡಿ,ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತಂತಹ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ,AI ಮೂಲಕ ನಾವು ರಾಣಿ ಚೆನ್ನಮ್ಮನ ಚಿತ್ರ ಮಾಡಿದರು ಸಹ,ಇದರಲ್ಲಿ ನಮ್ಮೆಲ್ಲರ ಭಾವನೆ ಇದೆ,ರಾಣಿ ಚೆನ್ನಮ್ಮ ನಮ್ಮ ನಾಡು ಕಂಡಂತಹ ಅತ್ಯಂತ ಗಟ್ಟಿ ಶ್ರೇಷ್ಠ ಹೆಣ್ಮಗಳು, ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿದ ಮಹಾನ್ ಶಕ್ತಿ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ,ಇಂತದೊಂದು ಐತಿಹಾಸಿಕ ರಾಣಿ ಚೆನ್ನಮ್ಮ ಚಿತ್ರವನ್ನು ನಾವು ಮಾಡಿದ್ದರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
2026 ರ “ವೀರ ವನಿತೆ” ಸಾಧನಾ ಪ್ರಶಸ್ತಿಗೆ ಭಾಜನರಾದವರು,
ಗಿರಿಜಾ ಲೋಕೇಶ್,ಜಯಮಾಲಾ,ಪ್ರಿಯಾಂಕ ಉಪೇಂದ್ರ,
ಕಾರುಣ್ಯ ರಾಮ್,ಉಷಾ ಎಸ್ ಗೌಡ,ಡಾಕ್ಟರ್ ಪದ್ಮಾಸಿನಿ ಸೇರಿದಂತೆ ಇನ್ನೂ ಕೆಲವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
2026 ರ ಸಂಗೊಳ್ಳಿ ರಾಯಣ್ಣ ಮತ್ತು ಕನ್ನಡ ಕಣ್ಮಣಿ ಸಾಧಕ ಪ್ರಶಸ್ತಿಗೆ ಭಾಜನರಾದವರು,
ಡಾಕ್ಟರ್ ಮಹೇಶ್ವರಪ್ಪ,,ಸಾ ರಾ ಗೋವಿಂದು,ಗಣೇಶ್ ಕಾಸರಗೋಡು,ಕೆ ವಿ ಚಂದ್ರಶೇಖರ್,ಕೆ ಮಂಜು,
ಸುಧೀಂದ್ರ ವೆಂಕಟೇಶ್,ಸೇರಿದಂತೆ
ಶೈಕ್ಷಣಿಕ ಸೇವೆ, ವೈದ್ಯಕೀಯ ಸೇವೆ,
ಸಾಮಾಜಿಕ ಸೇವೆ ಯಂತಹ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ
ಜಯಮಾಲಾ ಮಾತನಾಡಿ, ಇಂದು
ರಾಣಿ ಚೆನ್ನಮ್ಮ ತಾಯಿಯ ಹುಟ್ಟುಹಬ್ಬ,ಇಂತಹ ಸಂಧರ್ಭ ನನಗೆ ಸಿಕ್ಕ ಗೌರವಕ್ಕೆ ನಾನು ತಲೆ ಬಾಗಿ ನಮಿಸುತ್ತೇನೆ ಹಾಗೆ ರಾಣಿ ಚೆನ್ನಮ್ಮನ ಬಗ್ಗೆ ಇಡೀ ಭಾರತೀಯರು ಮಾತನಾಡುತ್ತಾರೆ,ಅಂಥ ಗಟ್ಟಿ ಅಸ್ಮಿತೆ ಮತ್ತು ಅಸ್ತಿತ್ವ ವೀರ ವನಿತೆ ರಾಣಿ ಚೆನ್ನಮ್ಮನದು,ಅಂತಹ ದಿಟ್ಟ ಮಹಿಳೆಯರು ಓಡಾಡಿದ ಜಾಗದಲ್ಲಿ ನಾವು ಓಡಾಡ್ತಾ ಇದ್ದೀವಿ ನಾವು ಧನ್ಯ ಎಂದರು ಜಯಮಾಲಾ.
ಬಂಡಿ ಮಹಾಕಾಳಿ ಮಾತೆಗೆ ಜೈ ಎನ್ನುತ್ತಲೆ ಮಾತು ಶುರು ಮಾಡಿದ,ಪ್ರಿಯಾಂಕ ಉಪೇಂದ್ರ,ತಮ್ಮ ಮತ್ತು ರಾಣಿ ಚೆನ್ನಮ್ಮ ಚಿತ್ರದ ನಿರ್ಮಾಪಕಿ ಲತಾ ಜೈ ಪ್ರಕಾಶ್ ರವರ ಸ್ನೇಹಕ್ಕೆ ಸುಮಾರು ಹದಿನಾರು ವರ್ಷಗಳದ್ದು,ಲತಾ ತುಂಬಾ ಒಳ್ಳೆಯ ಮನಸ್ಸಿನ ಹೆಣ್ಮಗಳು,ಶುದ್ಧವಾದ ಹೃದಯವಂತೆ,ಇವರ ಬಗ್ಗೆ ಮಾತಾಡ್ತಾ ಹೊರಟರೇ ನಾನು ಭಾವುಕಳಾಗ್ತೀನಿ,ರಾಣಿ ಚೆನ್ನಮ್ಮನ ಮೇಲೆ AI ಸಿನಿಮಾ ಆಗ್ತಾ ಇರೋದು ನಮ್ಮ ಹೆಮ್ಮೆ,ನಾನು ಸಹ ಹೋರಾಟದ ನೆಲದಿಂದಲೇ ಬಂದವಳು,ಹೋರಾಟ ಪ್ರತಿ ಹೆಣ್ಣಲ್ಲೂ ಇರತ್ತೆ ಅದನ್ನು ನಾನು ನಂಬುತ್ತೇನೆ ಎಂದರು.
ಸಾ ರಾ ಗೋವಿಂದು ಮಾತನಾಡಿ.ರಾಣಿ ಚೆನ್ನಮ್ಮ ಅನ್ನೋ ಹೆಸರೇ ನಮಗೆಲ್ಲ ಸದಾ ಸ್ಪೂರ್ತಿ ತುಂಬುವ ಹೆಸರು,ನಿಜವಾದ ಶಕ್ತಿ ರಾಣಿ ಚೆನ್ನಮ್ಮ ಆದರೆ,ನಮ್ಮ ಜೊತೆ ಇದ್ದ ರಾಣಿ ಚೆನ್ನಮ್ಮನ ತರಹದ ವ್ಯಕ್ತಿ ಹಾಗೂ ನಟಿ ನಮ್ಮೆಲ್ಲರ ಹೆಮ್ಮೆಯ ಬಿ ಸರೋಜಾದೇವಿ ಅಂತಾ ನಾನು ನೆನಪಿಸಿಕೊಳ್ತೀನಿ ಎಂದು ಇತಿಹಾಸದ ಪುಟದತ್ತ ಮೆಲಕು ಹಾಕಿದರು,ಹಾಗೆ ರಾಣಿ ಚೆನ್ನಮ್ಮ AI ಚಿತ್ರ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಆಗತ್ತೆ ಎಂದರು.

ಕೆ ವಿ ಚಂದ್ರಶೇಖರ್ ಮಾತನಾಡಿ,ನಿರ್ಮಾಪಕಿ
ಲತಾ ಜೈ ಪ್ರಕಾಶ್ ಮಾಡ್ತಾ ಇರುವಂತಹ ಈ ಪ್ರಯತ್ನ ಅತಿ ಹೆಮ್ಮೆ ಮತ್ತು ಗರ್ವ ಪಡುವಂತಹ ಕೆಲಸ, ರಾಣಿ ಚೆನ್ನಮ್ಮ ಹೇಗೆ ನಮ್ಮೆಲ್ಲರ ಇತಿಹಾಸದ ಪುಟಗಳಲ್ಲಿ ಹೇಗೆ ಗಟ್ಟಿಯಾಗಿ ಶಾಶ್ವತವಾಗಿ ಇದ್ದಾರೋ ಹಾಗೆ ಈ ನಿರ್ಮಾಪಕರ ಮತ್ತು ನಿರ್ದೇಶಕಿಯ ಹೆಸರು ಎಲ್ಲರ ಮನಸ್ಸಲ್ಲಿ ಉಳಿಯುತ್ತೆ ಎಂಬ ಭರವಸೆಯ ಮಾತು ಹೇಳಿದರು.
ಗಣೇಶ್ ಕಾಸರಗೋಡು ಮಾತನಾಡಿ,ಸಾಮಾನ್ಯ ಚಿತ್ರಗಳನ್ನು ಎಲ್ಲರೂ ಮಾಡ್ತಾರೆ,ಆದರೆ ನಿರ್ಮಾಪಕಿ ಲತಾ ಜೈ ಪ್ರಕಾಶ್ ರಾಣಿ ಚೆನ್ನಮ್ಮ ನವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಗೆ ಕೈ ಹಾಕಿದ್ದು ಇಡೀ ನಾಡಿಗೆ ಹೆಮ್ಮೆ,ಇಂತಹ ಪ್ರಯತ್ನಕ್ಕೆ ಕೈಹಾಕಿದ ಸಂಪೂರ್ಣ ಚಿತ್ರತಂಡಕ್ಕೆ ಶುಭ ಹಾರೈಕೆಗಳು ಎಂದರು.
ರವೀ ಸಾಸನೂರ್ MasterNews365.Com

