Saturday, 26 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಹೆಗ್ಗಣ ಮುದ್ದು” ಮಾಸ್ಟರ್ ಕ್ಲಾಸ್
- ರಿವ್ಯೂ - ಸಿನಿಮಾ

“ಹೆಗ್ಗಣ ಮುದ್ದು” ಮಾಸ್ಟರ್ ಕ್ಲಾಸ್

ಹೆಗ್ಗಣ ಮುದ್ದು ಮಾಸ್ಟರ್ ಕ್ಲಾಸ್ ರೇಟಿಂಗ್ : 4/5 AMP ಅನ್ನೋದು ಒಂದು ಮಾರ್ಕೆಟಿಂಗ್ ಕಂಪನಿ, ಒಬ್ಬರು ಇನ್ನೊಬ್ಬರಿಗೆ ರೆಫರ್ ಮಾಡುವಂತಹ ಕಂಪನಿ, ಅಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಗಳದ್ದು ಒಂದೊಂತರ ಆಟಿಟ್ಯೂಡ್, ಅಷ್ಟಕ್ಕೂ ಏ ಎಂ ಪಿ ಅಂದ್ರೆ ಏನು ಗೊತ್ತಾ ??Attitude Money Power. ಚಿತ್ರದ ನಾಯಕ ಅಜಿತ್ ( ಪೂರ್ಣಚಂದ್ರ ಮೈಸೂರು ) AMP ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುತ್ತಾನೆ, ಆತನ ಜೊತೆಗೆ ಅವನದೇ ಶೈಲಿಯ ಸ್ನೇಹಿತರ ತಂಡವಿರುತ್ತದೆ, ಕಷ್ಟಪಟ್ಟು ಕೆಲಸ […]

ಹೆಗ್ಗಣ ಮುದ್ದು ಮಾಸ್ಟರ್ ಕ್ಲಾಸ್


ರೇಟಿಂಗ್ : 4/5

AMP ಅನ್ನೋದು ಒಂದು ಮಾರ್ಕೆಟಿಂಗ್ ಕಂಪನಿ, ಒಬ್ಬರು ಇನ್ನೊಬ್ಬರಿಗೆ ರೆಫರ್ ಮಾಡುವಂತಹ ಕಂಪನಿ, ಅಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಗಳದ್ದು ಒಂದೊಂತರ ಆಟಿಟ್ಯೂಡ್, ಅಷ್ಟಕ್ಕೂ ಏ ಎಂ ಪಿ ಅಂದ್ರೆ ಏನು ಗೊತ್ತಾ ??
Attitude Money Power.

ಚಿತ್ರದ ನಾಯಕ ಅಜಿತ್ ( ಪೂರ್ಣಚಂದ್ರ ಮೈಸೂರು ) AMP ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುತ್ತಾನೆ, ಆತನ ಜೊತೆಗೆ ಅವನದೇ ಶೈಲಿಯ ಸ್ನೇಹಿತರ ತಂಡವಿರುತ್ತದೆ, ಕಷ್ಟಪಟ್ಟು ಕೆಲಸ ಮಾಡುವುದು ಸಮಯ ಸಿಕ್ಕಾಗ ಮನಸ್ಸು ತುಂಬಿ ಪಾರ್ಟಿ ಮಾಡುವುದು ಅಜಿತ್ ಮತ್ತು ತಂಡದ ಕೆಲಸ,

ಅಜಿತ್ ಗೆ ಇನ್ನೂ ಮದುವೆಯಾಗಿರುವುದಿಲ್ಲ ದೇವರ ಆಶೀರ್ವಾದ ಕೊನೆಗೂ ಅಜೀತನ ಮೇಲಾಗಿ ಮದುವೆಗೆ ಸಿದ್ದನಾಗುತ್ತಾನೆ ಆತ ಮದುವೆಯಾಗುವ ಹುಡುಗಿ ಪ್ರೇರಣಾ, ಇವಳೇ ಕಥಾ ನಾಯಕಿ ( ಅದಿತಿ ಸಾಗರ್ )

ಮದುವೆಯಾದ ನಂತರ ಬೆಂಗಳೂರಿಗೆ ಗಂಡನ ಜೊತೆಗೆ ಬರುವ ಪ್ರೇರಣಾ ಗೆ ಆರಂಭದಲ್ಲಿ ಸ್ವಲ್ಪ ಭಯ ಆತಂಕ ಒಂಟಿತನ ಕಾಡುತ್ತದೆ ಆದರೆ ಗಂಡ ಅಜಿತ್ ತೋರಿಸುವ ಮುಗ್ಧ ಪ್ರೀತಿಯ ಮುಂದೆ ಎಲ್ಲವೂ ಮಾಯ ದಂಪತಿಗಳಿಬ್ಬರು ಸುಖವಾಗಿ ಅನ್ಯೋನ್ಯವಾಗಿ ಇರುತ್ತಾರೆ.

ಅಜಿತ್ ಹೇಗಾದರೂ ಮಾಡಿ ತಾನು ಕೆಲಸ ಮಾಡುವ ಎಎಂಪಿ ಕಂಪನಿಯಲ್ಲಿಯೇ ತನ್ನ ಹೆಂಡತಿ ಪ್ರೇರಣ ಕೂಡ ಕೆಲಸ ಮಾಡಬೇಕು ಎಂಬ ಬಯಕೆ, ಆದರೆ ಹೆಂಡತಿಯಿಂದ ಬಂದ ಉತ್ತರ ಕೇಳಿ ಶಾಕ್ ಆಗುವ ಅಜಿತ್ ಆಕೆ ಆಗಲೇ ಜ್ಯುವೆಲರಿ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರುವ ತೀರ್ಮಾನ ಮಾಡಿರುತ್ತಾಳೆ.

ಇಲ್ಲಿಂದ ಕಥೆ ಸ್ವಲ್ಪ ಟ್ವಿಸ್ಟ್ ತೆಗೆದುಕೊಳ್ಳುತ್ತದೆ,
ಜ್ಯುವೆಲರಿ ಶಾಪ್ ನಲ್ಲಿಯ ಇನ್ನೊಬ್ಬ ಉದ್ಯೋಗಿ ಜೊತೆ ಪ್ರೇರಣ ಮಾತನಾಡುವುದು ಆತನೊಂದಿಗೆ ಸಲುಗೆಯಿಂದ ಇರುವುದು ಸಹಿಸಲಾಗದೆ ಅಜಿತ್ ಒಳಗೊಳಗೆ ಹಾಕಿಯ ಮೇಲೆ ಸಂಶಯಪಡುವುದು ಸಿಟ್ಟಾಗಲು ಶುರು ಮಾಡುತ್ತಾನೆ.

ಹೆಂಡತಿ ಪ್ರೇರಣಾ ಗೆ ಇದೆಲ್ಲವೂ ಅರ್ಥವಾಗುತ್ತದೆ ಆದರೂ ಆಕೆ ಏನನ್ನು ಪ್ರತಿಕ್ರಿಯೆ ಕೊಡದೆ ತನ್ನಷ್ಟಕ್ಕೆ ತಾನು ಸುಮ್ಮನಿರುತ್ತಾಳೆ. ಇದರ ಮಧ್ಯೆ ಆ ಜೆವೆಲ್ಲರಿ ಶಾಪ್ ನ ಬಳಿ ಗುಪ್ತ ಕ್ಯಾಮೆರಾ ಒಂದನ್ನು ಇಟ್ಟು ಹೆಂಡತಿಯ ಮೇಲೆ ಒಂದು ಕಣ್ಣಿಡಲು ಮಾಸ್ಟರ್ ಪ್ಲಾನ್ ಮಾಡಿರುತ್ತಾನೆ,ಆದರೆ ಹಣೆಬರಹ ಅವನಿಗೆ ರಿವರ್ಸ್ ಗುಮ್ಮುತ್ತದೆ ಎಂಬುದು ದುರಂತ.

ಹೆಗ್ಗಣ ಮುದ್ದು ಮಧ್ಯಂತರದ ವೇಳೆಗೆ ಅಜಿತ್ ನನ್ನ ಪೊಲೀಸರು ಬಂಧಿಸುತ್ತಾರೆ ಅಷ್ಟೇ ಅಲ್ಲದೆ ಪ್ರೇರಣಾ ಗೆ ಒಂದು ಖಡಕ್ ಆದಂತಹ ಫ್ಲಾಶ್ ಬ್ಯಾಕ್ ಇದೆ ಎನ್ನುವುದು ಕೂಡ ಗಂಡ ಅಜಿತಗೆ ಗೊತ್ತಾಗುತ್ತದೆ,ಚಿತ್ರದ ದ್ವಿತೀಯಾರ್ದ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ತನಕ ನೋಡುವರನ್ನು ಕುತೂಹಲದಿಂದಲೇ ಥಿಯೇಟರ್ ನಲ್ಲಿ ಉಳಿಸಿಕೊಳ್ಳುವದರಲ್ಲಿ ಹೆಗ್ಗಣ ಮದ್ದು ಚಿತ್ರ ಸಕ್ಸಸ್ ಆಗಿದೆ.

ಅಷ್ಟಕ್ಕೂ ಈ ಅಜಿತ್ ಯಾರು ??

ಪ್ರೇರಣಾಳ ಅಸಲಿ ಫ್ಲಾಶ್ ಬ್ಯಾಕ್ ಏನು ??

ಅಜಿತ್ ನನ್ನ ಪೊಲೀಸರು ಬಂಧಿಸಿದ್ದು ಯಾಕೆ ??

ಅಜಿತ್ ಮತ್ತು ಪ್ರೇರಣಾಳ ಮುಂದಿನ ಕಥೆ ಏನು ??

ಚಿತ್ರದಲ್ಲಿ ಒಂದು ಕಡೆ ಡಾಲಿ ಧನಂಜಯ್,ಮತ್ತೊಂದು ಕಡೆ ನಾಗಭೂಷಣ ಕೂಡ ಕಾಣುತ್ತಾರೆ,ವಿಷ್ಯ ಏನು ??

ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೆಗ್ಗಣಮುದ್ದು ಚಿತ್ರನಡುಗರಿಗೆ ಥಿಯೇಟರ್ ನಲ್ಲಿ ಕಾಣುತ್ತದೆ.

ಕುಟುಂಬ ಸಮೇತ ನೋಡಬಹುದಾದ ಚಿತ್ರ, ಅದರಲ್ಲೂ ವಿಶೇಷವಾಗಿ ಹೇಳೋದಾದ್ರೆ ಈಗಷ್ಟೇ ಮದುವೆ ಆದವರು, ಮದುವೆ ಆಗಲು ಯೋಚನೆ ಮಾಡುತ್ತಿರುವವರು, ಭವಿಷ್ಯದಲ್ಲಿ ಮದುವೆಯಾಗುವ ಯುವಕ ಯುವತಿಯರು ಹಾಗೂ ಬದುಕನ್ನ ತಿಳಿದುಕೊಳ್ಳುವ ಯುವ ಜೋಡಿಗಳು ತಪ್ಪದೇ ಈ ಚಿತ್ರವನ್ನು ನೋಡಿದರೆ ಉತ್ತಮ.

ಹೆಗ್ಗಣ ಮುದ್ದು ನಿರ್ದೇಶನ ಮಾಡುವುದರ ಮೂಲಕ
ಅವಿನಾಶ್ ಬೆಳಕಲ್ ನಿಜವಾಗಿಯೂ ಗೆದ್ದಿದ್ದಾರೆ,
ಅಬ್ಬರವಿಲ್ಲದ ದೃಶ್ಯಗಳು, ವೈಭವಿಕರಿಸದ ಚಿತ್ರಕಥೆ, ಎಷ್ಟು ಬೇಕು ಅಷ್ಟು ಮಾತುಗಳು, ಅದರಲ್ಲೂ ನಾಯಕನಟ ಪೂರ್ಣಚಂದ್ರ ಮೈಸೂರು ಮಾತ್ರ ಸಕ್ಕತ್ತಾಗಿ ನಟಿಸಿದ್ದಾರೆ, ಅದರಲ್ಲೂ ಕುಡಿದ ಮತ್ತಿನಲ್ಲಿ ಅಭಿನಯಿಸಿದ ಆ ಸಿಂಗಲ್ ಟೇಕನ್ ದೃಶ್ಯ ಅದ್ಭುತ ಹಾಗೇ ಅದಿತಿ ಸಾಗರ್ ಕೂಡ ಎಲ್ಲರ ಮನಸ್ಸಲ್ಲಿ ಉಳಿಯುತ್ತಾರೆ, ಪ್ರದ ಕ್ಲೈಮ್ಯಾಕ್ಸ್ ನಲ್ಲಿ ಒಂದು ದೃಶ್ಯದಲ್ಲಿ ಆಕೆಯ ನಟನೆ ನೋಡಿದಾಗ, ವಾವ್ ಅನ್ನಿಸುತ್ತದೆ.

ಅಜಿತ್ ನಾಗಿ ಪೂರ್ಣಚಂದ್ರ, ಪ್ರೇರಣಾ ಆಗಿ ಅದಿತಿ ಸಾಗರ್ ಸಂಪೂರ್ಣ ಚಿತ್ರವನ್ನ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿರುವ ವಿಜಯ್ ಶೋಭರಾಜ್, ಮೈಸೂರು ಆನಂದ್, ರೇಖಾ ಕೂಡ್ಲಿಗಿ, ಭರತ್ ನಾಯಕ್,ವಿಶೇಷ ಪಾತ್ರದಲ್ಲಿ ನಾಗಭೂಷಣ ಸೇರಿ ಎಲ್ಲ ಪಾತ್ರಧಾರಿಗಳು ಅತ್ಯುತ್ತಮವಾಗಿ ನಡೆಸಿದ್ದಾರೆ,ಎಲ್ಲರ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ.

ಇನ್ನು ಚಿತ್ರದ ತಾಂತ್ರಿಕ ವಿಭಾಗದ ಬಗ್ಗೆ ಮಾತನಾಡುವುದಾದರೆ, ಕಾರ್ತಿಕ್ ಚೆನ್ನೊಜಿ ಸಂಗೀತ, ನಚಿಕೇತ್ ಬಳೆಕಲ್ ಛಾಯಾಗ್ರಹಣ,ಪ್ರತಿಕ ಶಟ್ಟಿ ಸಂಕಲನ ಎಲ್ಲವೂ ನ್ಯಾಯ ಬದ್ಧ ಮತ್ತು ಎಲ್ಲವೂ ಬ್ಯಾಲೆನ್ಸ್ ಆಗಿ ಮೂಡಿಬಂದಿದೆ.

ಇನ್ನು ಕೊನೆಯದಾಗಿ ಹೇಳುವುದಾದರೆ, ಒಳ್ಳೆಯ ಕಥೆಗಳು ಸಿನಿಮಾ ವಾಗಬೇಕು ಎಂದು ಹಪಹಪಿಸುವ ಮತ್ತು ರಿಸ್ಕ್ ಗಳನ್ನು ತೆಗೆದುಕೊಳ್ಳುವ, ಡಾಲಿ ಧನಂಜಯ್ ನಿರ್ಮಾಣ ಮಾಡಿದ ಹೆಗ್ಗಣ ಮುದ್ದು, ನಿಜಕ್ಕೂ ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆ ಟ್ರೀಟ್.

ಅಷ್ಟಕ್ಕೂ ಚಿತ್ರಕ್ಕೆ ಹೆಗ್ಗಣ ಮುದ್ದು ಎಂದು ಟೈಟಲ್ ಇಟ್ಟಿದ್ದು ಯಾಕೆ,ಅನ್ನೋದೇ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕ ಅವಿನಾಶ್ ಬಿಚ್ಚಿಟ್ಟ ಬ್ರಿಲಿಯಂಟ್ ಐಡಿಯಾ.

ಹೆಗ್ಗಣ ಮದ್ದು ಎಲ್ಲರೂ ನೋಡಬಹುದಾದ ಚಿತ್ರ

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.