Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸೂಕ್ಷ್ಮ ಜೀವದಲ್ಲಿ ಭಗವಂತ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಸೂಕ್ಷ್ಮ ಜೀವದಲ್ಲಿ ಭಗವಂತ

          ಜೀವ ಅವಿದ್ಯಕೂಡಿಕೊಂಡು ಅವಿದ್ಯಕೂಡಿಕೊಂಡು ಜೀವ ಆಗ್ಯಾನ ಅವನಿಗೂ ಉಪಾದಿ ಆದ . ಉದಾಹರಣೆಗೆ ಇದು ಮನೆಯ ಸುತ್ತಲಿನ ಗೋಡೆಯಾದ . ಗೋಡೆಯ ನಡುವೆ ಬಯಲು ಅದ ಅದನ್ನು ಬಿಟ್ಟು ಹೊರಗೂ ಬಯಲು ಆದ ಹೊರಗಿನ ಬಯಲು ಅಖಂಡ ಅಂದರೆ ವಿಶಾಲ ಅದ ಆದರೆ ಒಳಗಿನ ಬಯಲುಸಂಕುಚಿತ ಅದ.           ಇದು ದೇಹ ಘಟಾಕಾಶ, ಮಠಾಕಾಶ.. ಹೊರಗಿಂದು ಮಹದಾಕಾಶ. ಈಗ ಘಟಕದೊಳಗಿನ ಬಯಲೂ ತೆಗಿಬೇಕು. ಮಠಾಕಾಶದೊಳಗಿನ ಬಯಲು ತೆಗಿಬೇಕು.ಎರಡು ತೆಗೆದಾಗ ಏನಾಗ್ತದೆ ಅಂದ್ರೆ ಗೋಡೆ ಬಿತ್ತಂದ್ರ ಬಯಲು ಬಯಲು […]

          ಜೀವ ಅವಿದ್ಯಕೂಡಿಕೊಂಡು ಅವಿದ್ಯಕೂಡಿಕೊಂಡು ಜೀವ ಆಗ್ಯಾನ ಅವನಿಗೂ ಉಪಾದಿ ಆದ . ಉದಾಹರಣೆಗೆ ಇದು ಮನೆಯ ಸುತ್ತಲಿನ ಗೋಡೆಯಾದ . ಗೋಡೆಯ ನಡುವೆ ಬಯಲು ಅದ ಅದನ್ನು ಬಿಟ್ಟು ಹೊರಗೂ ಬಯಲು ಆದ ಹೊರಗಿನ ಬಯಲು ಅಖಂಡ ಅಂದರೆ ವಿಶಾಲ ಅದ ಆದರೆ ಒಳಗಿನ ಬಯಲುಸಂಕುಚಿತ ಅದ.
  
         ಇದು ದೇಹ ಘಟಾಕಾಶ, ಮಠಾಕಾಶ.. ಹೊರಗಿಂದು ಮಹದಾಕಾಶ. ಈಗ ಘಟಕದೊಳಗಿನ ಬಯಲೂ ತೆಗಿಬೇಕು. ಮಠಾಕಾಶದೊಳಗಿನ ಬಯಲು ತೆಗಿಬೇಕು.ಎರಡು ತೆಗೆದಾಗ ಏನಾಗ್ತದೆ ಅಂದ್ರೆ ಗೋಡೆ ಬಿತ್ತಂದ್ರ ಬಯಲು ಬಯಲು ಕೂಡಿ ಬಿಡ್ತದ ಆಗ ನಿರ್ಭಯಲು ಆಗ್ತದೆ ಅದಕ್ಕೆ ಶಿವನ ಉಪಾದಿನು ತೆಗಿಬೇಕು. ಜೀವದ ಉಪಾದಿನೂ ತೆಗಿಬೇಕು.

          ಅದಕ್ಕ ಒಂದನ್ನು ಎರಡೊಂದು ಮಾಡಿ, ಆ ಒಂದಿದ್ದ ದ್ದು ಎರಡಾಗಿದೆ. ಆ ಎರಡು ಇದ್ದದ್ದು ಒಂದು ಮಾಡಬೇಕು. ಅಲ್ಲಿ ಒಂದನ್ನು ಒಂಭತ್ತು ತೆರೆದಿಂದ ನೋಡಿ  ಮುಂದಾರು ಮೂರೊಂದು ಕೂಡಿ, ಅಲ್ಲಿ ಒಂಬತ್ತು ಜೀವನದ ಗುಣಗಳು ಅದಾವು. ಆರು ಶೆಡ್ ವಿಕಾರಗಳು ಅದಾವ . ಮೂರು ತಾಪತ್ರೆಗಳು ಅದಾವು. ಇವೆಲ್ಲವನ್ನು ಒಂದು ಮುಂದಾರು ಮೂರೊಂದು ಗೂಡಿ, ಸಂದು  ನಿಂದೊಂದರಿವುದು ತಾನಿಲ್ಲದೆ ನೋಡಿ.

              ಇವೆಲ್ಲವನ್ನು ನೋಡಿ ತಿಳಿಯಬೇಕು ಎಲ್ಲದರಲ್ಲಿ ಭಗವಂತನೇ ಅದಾನ. ಸೂಕ್ಷ್ಮ ಜೀವದಲ್ಲೂ ಭಗವಂತ ಅದಾನ. ಒಂದು ದೊಡ್ಡ ಆನೆ ಅದ. ಅದರಲ್ಲೂ ಭಗವಂತ ಅದಾನ . ಭಗವಂತ ಇಲ್ಲಂದ್ರ ಅದು ನೆಲಕ್ಕೆ ಬೀಳುತ್ತಿತ್ತು. ಅದಕ್ಕೆ ಸಂದು  ನಿಂದೊಂದರಿವುದು  ನಾನಿಲ್ಲದೇ ನೋಡಿ.

                ಎಲ್ಲದರೊಳಗೂ ಅವ ಅದಾನ. ಇದೆಲ್ಲವೂ ಅವನಿಂದಲೇ ಚಲನವಲನ ಆಗ್ತದ. ನಮ್ಮಿಂದೇನೂ ಆಗಿಲ್ಲ. ಪರಬ್ರಹ್ಮ ಚೈತನ್ಯ ಸ್ವರೂಪ ಆತ್ಮ ಅವನೇ.ನೀ ಇದ್ದಿ
ತಾನಿಲ್ಲದೆ ನೋಡಿ ತನ್ನ ತಾನರಿದೊಡೆ ಮುಕ್ತ . ಬರಿಯ ಶಾಸ್ತ್ರಗಳಿಂದಲ್ಲ. ಬರಿ ಬಾಯಲ್ಲಿ ಹೇಳಿದ್ರಲ್ಲ ಪೂರ್ಣ ಪರತತ್ವದನುಭವ ಬಾಯಿ ಮಾತಲ್ಲ. ಇದು ತಿಳಿಯೋದಿಲ್ಲ. ಮತ್ತು ಗುರು ಪುತ್ರರಿಗೆ ದೂರಿಲ್ಲ. ಇದನರಿತವನು ಗುರು ಸಿದ್ದನೂರ್ವನೆ ಬಲ್ಲ .

          ಈ ಪದ ಹಾಡಿ ಬಿಡಿಸಿ ಹೇಳಿಬಿಟ್ಟೆ ಎಲ್ಲಪ್ಪ ಮಹಾರಾಜರು ಗುಡಿಯಾಗ ಕುಂತಿದ್ರು ಅವರು ಎಂತವ್ರು ಅಂದ್ರೆ ಸತ ಕೂಸನ್ನ ಪಡೆದವರು. ನನಗ ಐದು ರೂಪಾಯಿ ಆಹೇರಿ ಕಳಿಸಿಕೊಟ್ಟರು. ಇನ್ನೊಂದು ಪದ ಹಾಡ ಅಂತ ಹೇಳಿ ಕಳಿಸಿದ್ರು, ಮತ್ತೊಂದು ಹಂಥದ್ದೇ ಪದ ಹಾಡಿ ಬಿಡಿಸಿ ಹೇಳ್ದೆ . ಅವ್ರು ಒಳಗ ಕುಂತಿದ್ರು ನನ್ನ ಕರೆ ಕಳಿಸಿದ್ರು ನಾ ಹೋದೆ. ನನ್ನ ಅಪ್ಪಿಕೊಂಡು ಲೊಟ ಲೊಟ ಅಂತ ಮುತ್ತು ಕೊಟ್ಟರು.

  ಏನ್ರೀಪಾ .... ನೀವು ಯಾರು ? ನಾನು ಯಾರು .....?ಅಂದೆ ಅದಕ್ಕೆ - ಅವರು 
  ನೋಡ್ರಿ 3000 ಮಂದಿ ಶಿಷ್ಯರು ಅದಾರ .ಅವರೆಲ್ಲ ಸುಳ್ಳು,ನೀವೊಬ್ಬರೇ ಖರೇ ಅಂತ ಅಂದರು . ನಾ ಹಾಡಿ ಬಿಟ್ಟಿಂದ ಯಾರೊಬ್ಬರೂ ಬಜನಾ ಪದ ತಗೋಳಿಲ್ಲ.

 ಯಲ್ಲಪ್ಪ ಮಹಾರಾಜರ ಒಂದು ಘಟನೆ -

     ಅವರು ಹೆಂತವರು ಅಂದ್ರೆ ಸತ್ತುಕೋಶನ್ನು ಪಡೆದವರು ಇವರು ಉಡಚಣ ಹುಚ್ಚಯ್ಯನ ಆರಾಧಕರು ಹಿಂಗ ಒಮ್ಮೆ ಕಾರ್ಯಕ್ರಮನಡೆದಾಗ ಕೂಸು ತೀರಿಕೊಂಡ್ಬಿಡ್ತುಇವ್ರು ಖುಷಿನಾ ಹಾಕ್ರಿ ಅಂತ ಜೀವ ಹೋದ ಕೂಸನ್ನು ಅಲ್ಲೇ ನೆಲದ ಮೇಲೆ ಮಲಗಿಸಿ ಅದರ ಮೇಲೆ ತಮ್ಮ ಹೆಗಲಿನ ಮೇಲಿನ ಶೆಲ್ಲೆಯನ್ನು ಒಗೆದು ಭಜನಾ ಮಾಡಲಿಕ್ಕೆ ಹಚ್ಚಿ ಬಿಟ್ಟಿರಂತ. 

     ಇಲ್ಲಿಂದ ತಾಳ ಹಾಕೊಂತ ಡೊಳ್ಳು ಹೊಡಕೊಂಡ ಅಲ್ಲಿತನ ಓಡಿಕೊಂಡ  ಹೋಗಿ ವಾಪಸ್ ಇಲ್ಲಿತನ ಓಡಿಕೊಂಡು ಬರಾಂವಾ .ಗಿಡ್ಡ ಮುದುಕ ಅವನ ಭಜನಾ ನೋಡಬೇಕು ಅವರು ಭಜನಾ ಮಾಡಾಕತ್ತಿದ್ರೆ ಕೂಸು ಮಿಸ್ಗಾಡಾಕ ಹತ್ತಿತು. ಮತ್ತ ಸತ್ತ ಕೂಸು ಎದ್ದು ಬಿಡ್ತಂತ . ಆವಾಗ ಯಲ್ಲಪ್ಪ ಮಹಾರಾಜರು ಅಂತ ನಾಮಕರಣ ಮಾಡ್ಯಾರ .

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.