ಶಿವಣ್ಣನ ‘ಬೇಲ್’ ಪವರ್ಫುಲ್ ಗುರು

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಮತ್ತು ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಅವರ ಕಾಂಬಿನೇಷನ್ ಚಿತ್ರ, ಶುರುವಾಗುತ್ತದೆ ಅಂದಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿದ್ದವು, ಅದಕ್ಕೆ ಪುಷ್ಟಿಕರಣವನ್ನು ನೀಡಿದ್ದು ಬೇಲ್ ಅನ್ನುವಂತಹ ಚಿತ್ರದ ಶೀರ್ಷಿಕೆ.
ಕನ್ನಡದಲ್ಲಿ ಯಾವುದೇ ಚಿತ್ರ ನಿರ್ಮಾಣವಾಗಲಿ ಅಥವಾ ಅದಕ್ಕೆ ಸಂಬಂಧಪಟ್ಟಂತಹ ಪ್ರಮೋಶನಲ್ ಚಟುವಟಿಕೆಗಳು ಒಂದೊಂದಾಗಿ ಆಚೆ ಬರುತ್ತಿದ್ದಂತೆ ಆಯಾ ಚಿತ್ರಗಳ ಮೇಲಿನ ನಿರೀಕ್ಷೆ ಹೆಚ್ಚಾಗುತ್ತದೆ ಜೊತೆಗೆ ಸಿನಿಮಾ ವನ್ನ ಯಾವಾಗ ನೋಡುತ್ತಿವೆ ಎನ್ನುವಂತಹ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತದೆ,
ಇಂಥದ್ದೇ ಒಂದು ಕುತೂಹಲಕ್ಕೆ ನಾಂದಿ ಹಾಡಿದ್ದು ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರ.
ಇವತ್ತು ಸಂಜೆ ಬೇಲ್ ಚಿತ್ರದ ಟೀಸರ್ ರಿಲೀಸ್ ಆಗಿದೆ, ಇದಕ್ಕಿಂತಲೂ ಮುಂಚೆ ಬಂದಂತಹ ಬೇಲ್ ಚಿತ್ರದ ಕಂಟೆಂಟ್ ನ ನೋಡಿದಾಗ, ಬಹಳಾನೇ ಕುತೂಹಲ ಮೂಡಿಸುವಂತಹ ಮೇಕಿಂಗ್ ಮತ್ತು ಡೈಲಾಗ್ ಡಿಲೆವರಿ ಜೊತೆಗೆ ಶಿವಣ್ಣನ ಆ ಗೆಟಪ್ ಮತ್ತಷ್ಟು ನಿರೀಕ್ಷೆಯನ್ನ ಹುಟ್ಟಿಸಿತ್ತು..
ಆದರೆ ಇವತ್ತು ಬಿಡುಗಡೆಯಾದಂತಹ ಬೇಲ್ ಚಿತ್ರದ ಟೀಸರ್ ನೋಡಿದಾಗ, ನೋಡ್ಗರು ಅಂದುಕೊಂಡಿದ್ದಕ್ಕಿಂತ ದುಪ್ಪಟ್ಟು,ಅದಕ್ಕಿಂತಲೂ ಹೆಚ್ಚಿನ ಕಂಟೆಂಟ್ ಹೆಚ್ಚಿನ ಭರವಸೆ ಪವನ್ ಒಡೆಯರ್ ಮೇಲೆ ಹಾಕಿ ಕೆವಿಎನ್ ಮೇಲೆ ಬಂದಿದೆ ಎಂದರೆ ತಪ್ಪಿಲ್ಲ.
ಶಿವರಾಜ್ ಕುಮಾರ್ ಅವರ ಪೊಲೀಸ್ ಅಧಿಕಾರಿಯ ಆ ಗೆಟಪ್ ಜೊತೆ ಜೊತೆಗೆ ಹೆಜ್ಜೆ ಹಾಕುವ ಡೈಲಾಗ್ ಕಿಂಗ್ ಸಾಯಿ ಕುಮಾರ್, ಜಯರಾಂ, ರಮೇಶ್ ಇಂದಿರಾ,ದೀಕ್ಷಿತ್ ಶೆಟ್ಟಿ ಸಂಜನಾ ಆನಂದ್, ಸುನಿಲ್ ಪುರಾಣಿಕ್, ಹೀಗೆ ಇನ್ನೂ ಮುಂತಾದವರ ಆಪಿರೆನ್ಸ್ ನೋಡಿದಾಗ ಖಂಡಿತವಾಗಿಯೂ ಬೇಲ್ ಚಿತ್ರ ನೋಡುವ ಎಲ್ಲಾ ಅಭಿಮಾನಿಗಳಿಗೆ, ದೊಡ್ಡ ಹಬ್ಬ ವಾಗಲಿದೆ ಎನ್ನುವುದು ನಮ್ಮ ನಂಬಿಕೆ.ಹೌದು

ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ‘ಬೇಲ್’ ಚಿತ್ರದ ಅಧಿಕೃತ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವಣ್ಣ ಎಂದಿನ ತಮ್ಮ ಖಡಕ್ ಶೈಲಿಯ ಪವರ್ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.
ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಖುದ್ದು ಪವನ್ ಒಡೆಯರ್ ಅವರೇ ಬರೆದಿದ್ದಾರೆ.
ಬೃಹತ್ ತಾರಾಗಣದ ಜುಗಲ್ಬಂದಿ:
ಚಿತ್ರದಲ್ಲಿ ಶಿವರಾಜ್ಕುಮಾರ್ ಅವರ ಜೊತೆಗೆ ಮಲಯಾಳಂನ ಖ್ಯಾತ ನಟ ಜಯರಾಮ್, ‘ಡೈಲಾಗ್ ಕಿಂಗ್’ ಸಾಯಿಕುಮಾರ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಬಹುತೇಕ ಅನುಭವಿ ಹಾಗೂ ಪ್ರತಿಭಾವಂತ ಕಲಾವಿದರ ದಂಡೇ ಬಣ್ಣ ಹಚ್ಚಿದೆ. ಈ ಘಟಾನುಘಟಿ ನಟರ ಕಾಂಬಿನೇಷನ್ ಮತ್ತು ಪವರ್ಫುಲ್ ಸಂಭಾಷಣೆಗಳು ಟೀಸರ್ನ ಹೈಲೈಟ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಈ ಚಿತ್ರಕ್ಕೆ ಹಿಟ್ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಟೀಸರ್ನಲ್ಲಿನ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ವೈದಿ ಅವರ ಛಾಯಾಗ್ರಹಣ ಹಾಗೂ ಶಶಾಂಕ್ ನಾರಾಯಣ ಅವರ ಚುರುಕಾದ ಸಂಕಲನ ಚಿತ್ರಕ್ಕಿದೆ.
ಭಾರಿ ಕುತೂಹಲ ಕೆರಳಿಸಿರುವ ‘ಬೇಲ್’ ಸಿನಿಮಾ ಇದೇ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ಚಿತ್ರದ ಮೇಲೆ ಈಗಾಗಲೇ ಸಿನಿಪ್ರಿಯರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಬಿಗ್ ಸ್ಕ್ರೀನ್ ಮೇಲೆ ಶಿವಣ್ಣನ ಖಡಕ್ ಪೊಲೀಸ್ ಅವತಾರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
