Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಚ್ಚನ್ ಎದುರು ಬಚ್ಚನ್
- ವಿಶೇಷ ಸಮಾಚಾರ - ಸಿನಿಮಾ

ಬಚ್ಚನ್ ಎದುರು ಬಚ್ಚನ್

ಕಿಚ್ಚ @30 ತಮ್ಮ ವಿಭಿನ್ನವಾದ ನಟನೆ, ವಿಭಿನ್ನವಾಗಿ ಡೈಲಾಗ್ ಹೇಳುವ ಶೈಲಿ, ತುಂಬಾನೇ ಸ್ಟೈಲಿಶ್ ಆದಂತ Swag,ಜ್ಞಾನದ ಭಂಡಾರ,ಎದುರಿಗಿರುವ ವ್ಯಕ್ತಿಗಳ ಜೊತೆ ಎಷ್ಟು ಮಾತನಾಡಬೇಕು ಅಷ್ಟೇ ಮಾತುಗಳನ್ನು ಕರಾರುವಕ್ಕಾಗಿ ಡೆಲಿವರಿ ಮಾಡುವ ನಟ, ಅದು ಕಿಚ್ಚ ಸುದೀಪ. ಸ್ಪರ್ಶ ಚಿತ್ರದ ಮೂಲಕ ಸುದೀಪ್ ನಾಯಕ ನಟರಾಗಿದ್ದು ಎಷ್ಟು ಸತ್ಯವೋ ಸ್ಪರ್ಶ, ಚಿತ್ರಕ್ಕಿಂತಲೂ ಮುಂಚೆ ತಾವು ಅಭಿನಯಿಸಿದ ಹಾಗೂ ಕೆಲಸ ಮಾಡಿದ ಪ್ರಾಜೆಕ್ಟ್ ಗಳ ಬಗ್ಗೆ ಕಿಚ್ಚ ಸುದೀಪ್ ನೆನಪನ್ನ ಮಾಡಿಕೊಳ್ಳುತ್ತಾರೆ, ಆ ಮೂಲಕ ತಾವು ಚಿತ್ರೋದ್ಯಮಕ್ಕೆ ಬಂದು […]

ಕಿಚ್ಚ @30

ತಮ್ಮ ವಿಭಿನ್ನವಾದ ನಟನೆ, ವಿಭಿನ್ನವಾಗಿ ಡೈಲಾಗ್ ಹೇಳುವ ಶೈಲಿ, ತುಂಬಾನೇ ಸ್ಟೈಲಿಶ್ ಆದಂತ Swag,ಜ್ಞಾನದ ಭಂಡಾರ,ಎದುರಿಗಿರುವ ವ್ಯಕ್ತಿಗಳ ಜೊತೆ ಎಷ್ಟು ಮಾತನಾಡಬೇಕು ಅಷ್ಟೇ ಮಾತುಗಳನ್ನು ಕರಾರುವಕ್ಕಾಗಿ ಡೆಲಿವರಿ ಮಾಡುವ ನಟ, ಅದು ಕಿಚ್ಚ ಸುದೀಪ.

ಸ್ಪರ್ಶ ಚಿತ್ರದ ಮೂಲಕ ಸುದೀಪ್ ನಾಯಕ ನಟರಾಗಿದ್ದು ಎಷ್ಟು ಸತ್ಯವೋ ಸ್ಪರ್ಶ, ಚಿತ್ರಕ್ಕಿಂತಲೂ ಮುಂಚೆ ತಾವು ಅಭಿನಯಿಸಿದ ಹಾಗೂ ಕೆಲಸ ಮಾಡಿದ ಪ್ರಾಜೆಕ್ಟ್ ಗಳ ಬಗ್ಗೆ ಕಿಚ್ಚ ಸುದೀಪ್ ನೆನಪನ್ನ ಮಾಡಿಕೊಳ್ಳುತ್ತಾರೆ, ಆ ಮೂಲಕ ತಾವು ಚಿತ್ರೋದ್ಯಮಕ್ಕೆ ಬಂದು ಎಷ್ಟು ವರ್ಷಗಳಾದವು ಎಂಬುದನ್ನು ನೋಡುಗರಿಗೆ ನೆನಪಿಸುತ್ತಲೇ ಇರುತ್ತಾರೆ.

ಹೌದು ಸುದೀಪ ಕಿಚ್ಚ ಸುದೀಪ್ ಆದದ್ದು ಒಂದು ಇತಿಹಾಸವಾದರೆ ಕನ್ನಡ ಚಿತ್ರರಂಗದ ಇತಿಹಾಸದ ಪುಟದಲ್ಲಿ ಕಿಚ್ಚ ಸುದೀಪ್ ಭರ್ಜರಿಯಾಗಿ 30 ವರ್ಷಗಳನ್ನು ಪೂರೈಸಿದ್ದಾರೆ.ದುಡ್ಡಿರಲಿ ಅಥವಾ ದುಡ್ಡು ಇರದೆ ಇರಲಿ ಒಬ್ಬ ನಟನಾಗಿ ಒಬ್ಬ ನಿರ್ದೇಶಕನಾಗಿ ಒಬ್ಬ ನಿರ್ಮಾಪಕನಾಗಿ ಸಿನಿಮಾ ಉದ್ಯಮದ ಜೊತೆಗೆ ನಿರಂತರವಾಗಿ ಬೆರೆಯಬೇಕು ಎಂದರೆ, ಅದು ಸಾಮಾನ್ಯವಾಗಿ ಮಾತಲ್ಲ.

ಭರ್ಜರಿ 30 ವರ್ಷಗಳನ್ನ ಪೂರೈಸಿರುವ ನಮ್ಮ ಪ್ರೀತಿಯ ಕಿಚ್ಚ ಸುದೀಪ,
ಕನ್ನಡ ಸೇರಿ ಬಹು ಭಾಷೆಗಳಲ್ಲಿ ನಟಿಸಿ ತಾವೊಬ್ಬ ಪ್ರತಿಭಾವಂತ ನಟ ಎಂಬುದನ್ನು ಕನ್ನಡಿಗರ ಹೆಮ್ಮೆಯಾಗಿ ಪ್ರತಿನಿಧಿಸಿದ್ದಾರೆ ಅನ್ನೋದು ನಮ್ಮೆಲ್ಲರಿಗೂ ಹೆಮ್ಮೆ ತರುತ್ತದೆ.

ಸ್ಪರ್ಶ ಚಿತ್ರದಿಂದ ಇತ್ತೀಚೆಗೆ ಬಂದಂತಹ ಮಾರ್ಕ್ ಚಿತ್ರದ ತನಕ ಸುದೀಪ ಎಲ್ಲ ಅಭಿಮಾನಿಗಳನ್ನ ರಂಜಿಸಿದ್ದಾರೆ ಅನ್ನೋದು ಸತ್ಯ.ಸುದೀಪ್ ನಟಿಸಿದ ಎಲ್ಲ ಚಿತ್ರಗಳನ್ನು ನಾನು ನೋಡಿದ್ದೇನೆ ಆದರೆ ನನಗೆ ತುಂಬಾ ವಿಶೇಷವಾಗಿ ಮನಸ್ಸಿಗೆ ಹತ್ತಿರವಾದ ಚಿತ್ರ ಅಮಿತಾ ಬಚ್ಚನ್ ಅವರ ಜೊತೆ ನಟಿಸಿದ ರನ್.

ಅಮಿತಾ ಬಚ್ಚನ್ ಭಾರತೀಯ ಚಿತ್ರಾಂಗ ತಂಡ ಒಂದು ದೈತ್ಯ ಪ್ರತಿಭೆ, ಅಂತಹ ಬಚ್ಚನ್ ಎದುರು ನಮ್ಮ ಬಚ್ಚನ್ ನಟಿಸಿದ ದೃಶ್ಯಗಳು ಇವತ್ತಿಗೂ ಕಣ್ಮುಂದೆ ಹಾಗೆ ಬಂದು ಹೋಗುತ್ತವೆ.ತಾವು ಸಿನಿಮಾ ಉದ್ಯಮಕ್ಕೆ ಬಂದು 30 ವರ್ಷಗಳಾದ ಸಂಭ್ರಮವನ್ನು ಸಂಭ್ರಮಿಸುತ್ತ ಕಿಚ್ಚ ಸುದೀಪ್ ತಾವೇ ಬರೆದ ಒಂದಷ್ಟು ಪದಪುಂಜಗಳನ್ನು ನಾನು ಪ್ರೀತಿಯಿಂದ ನಿಮಗೂ ಸಹ ಅರ್ಪಿಸುತ್ತಿದ್ದೇನೆ.

ಹಾಗಿದ್ರೆ ಕಿಚ್ಚ ಸುದೀಪ್ ರನ್ನ ಸಂಭ್ರಮಿಸಲು ನೀವೆಲ್ಲರೂ ಸಿದ್ಧರಾಗಿ ಕಿಚ್ಚ ನಮ್ಮೆಲ್ಲರ ಹೆಮ್ಮೆ.

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.