ಸೆಪ್ಟೆಂಬರ್ 18ಕ್ಕೆ –
ವಿಜಯ್ ಸಿಟಿಲೈಟ್ಸ್

ಸ್ಯಾಂಡಲ್ ವುಡ್ ಸಲಗ, ಸ್ಯಾಂಡಲ್ವುಡ್ ಭೀಮ ವಿಜಯ್ ಕುಮಾರ್ ನಿರ್ದೇಶನದ ಸಿಟಿಲೈಟ್ಸ್ ಚಿತ್ರದ ಕೆಲವು ಕಂಟೆಂಟ್ ನೋಡಿದಾಗ,
ವಿಜುಯಲ್ಸ್ ಮೂಲಕ ನಿರ್ದೇಶಕ ಒಂದೊಳ್ಳೆ ಕಥೆಯನ್ನು ಹೇಳುವ ಪ್ರಯತ್ನ ಮಾಡಿದರೆ, ಇನ್ನೂ ಒಳ್ಳೆಯ ಟ್ಯೂನ್ ಗಳ ಮೂಲಕ ಚರಣ್ ರಾಜ್ ಅದ್ಭುತ ಮ್ಯಾಜಿಕ್ ಮಾಡಿದ್ದಾರೆ,
ಅದೇ ರೀತಿಯಾಗಿ ನಾಗಾರ್ಜುನ ಶರ್ಮಾ ಬರೆದ ಸಾಹಿತ್ಯ ಎಲ್ಲರ ಹೃದಯಕ್ಕೆ ಪ್ರೀತಿಯಿಂದ ಲಗ್ಗೆ ಇಟ್ಟಿದೆ,ಮಾಸ್ತಿ ಬರೆದ ಡೈಲಾಗ್ಸ್ ನೋಡುಗರಿಗೆ ಹೊಸ ಪ್ರಪಂಚವನ್ನು ತೋರಿಸಲಿದೆ,
ಈ ರೀತಿಯಾದ ಕೆಲವು ವಿಷ್ಯ ಸಿಟಿಲೈಟ್ಸ್ ಕಂಟೆಂಟ್ ಗಳನ್ನು ನೋಡಿದ ನಮಗೆಲ್ಲ ಸಿಕ್ಕ ಗಟ್ಟಿ ಮಾಹಿತಿಯಾಗಿದೆ.
ನಟ ನಿರ್ದೇಶಕ ವಿಜಯ್ ಕುಮಾರ್ ಮಾಡಿದ ಪ್ರತಿಯೊಂದು ಸಿನಿಮಾ,ಕ್ರಿಯೇಟ್ ಪ್ರತಿಯೊಂದು ಪಾತ್ರಗಳು ತುಂಬಾ ಕನ್ವೆನ್ಸಿಂಗ್ ಆದ ರೀತಿಯಲ್ಲಿ ಗಟ್ಟಿಯಾದ ತೂಕವನ್ನು ಹೊಂದಿರುವುದು ಮಾತ್ರವಲ್ಲದೆ ಚಿತ್ರ ನೋಡುಗರಿಗೆ ಒಂದು ಹೈ ವೋಲ್ಟೇಜ್ ನ ಎನರ್ಜಿ ಕೊಡುವುದು ಮಿನಿಮಮ್ ಗ್ಯಾರಂಟಿ.
ನಿರ್ದೇಶಕರಾಗಿ ವಿಜಯ್ ಕುಮಾರ್ ಮಾಡಿದ ಮೊದಲ ಚಿತ್ರ ಸಲಗ, ಅದರ ನಂತರ ಬಂದಿದ್ದು ಭೀಮ,ಈಗ ಅವರ ಜರ್ನಿ ಸಿಟಿಲೈಟ್ಸ್ ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದೆ.

ರೌಡಿಸಂ ಅನ್ನೋ ಕರಾಳ ಪ್ರಪಂಚದೊಳಗೆ ಇಳಿಯಬೇಡಿ ಇಳಿದರೆ ಬದುಕು ಏನಾಗುತ್ತದೆ ಎಂಬುದು ಸಲಗ ಚಿತ್ರದಲ್ಲಿ ವಿಜಯ್ ಕುಮಾರ್ ಹೇಳಿದರೆ, ನಂತರ ಮಾಡಿದ ಭೀಮಾ ಚಿತ್ರದಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳು ಸಮಾಜಕ್ಕೆ ಎಷ್ಟು ಕೆಟ್ಟ ಪರಿಣಾಮವನ್ನು ತುಂಬಾ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದರು.

ಸದ್ಯ ವಿಜಯ್ ಕುಮಾರ್ ಅವರ ಬತ್ತಳಿಕೆಯ ಸಿಟಿಲೈಟ್ಸ್ ಕೂಡ ಬೆಂಗಳೂರಿನ ಕರಾಳ ಪ್ರಪಂಚವನ್ನ ಎತ್ತಿ ತೋರಿಸಲಿದೆ,ಅದರಲ್ಲೂ ವಿಶೇಷವಾಗಿ ಪ್ರೇಮಿಗಳ ಕಥೆಯನ್ನು ಇದು ಹೇಳುತ್ತಿದೆ.
ಪ್ರೀತಿ ಅನ್ನೋದು ಎಷ್ಟು ಮುಖ್ಯ ಪ್ರೀತಿಯಲ್ಲಿ ಬಿದ್ದವರಾಗಲಿ ಅಥವಾ ಆಗಲೇ ಪ್ರೀತಿಸುತ್ತಿರುವವರಾಗಲಿ, ಪ್ರೇಮಿಗಳೇ ಆಗಲಿ ಅಥವಾ ಪ್ರೀತಿಯನ್ನು ಬಯಸುವ ಮುಗ್ಧ ಜೀವಿಗಳೇ ಆಗಲಿ ತಮಗೆ ಸಿಗುವ ಆ ಪವಿತ್ರ ಪ್ರೀತಿಯನ್ನು ಎಷ್ಟೇ ಕಷ್ಟವಾದರೂ ಉಳಿಸಿಕೊಂಡು ಹೋಗಬೇಕು ಅನ್ನೋ ಸೂಕ್ಷ್ಮ ಅಥೆಂಟಿಕ್ ಎಳೆ ಸಿಟಿಲೈಟ್ಸ್ ನಲ್ಲಿದೆ ಅನ್ನೋ ಸೂಚನೆ ಕಾಣುತ್ತಿದೆ.

ಇಲ್ಲಿಯತನಕ ಬಿಡುಗಡೆಯಾದಂತಹ ಸಿಟಿಲೈಟ್ಸ್ ನ ಎಲ್ಲ ಕಂಟೆಂಟ್ ಹಾಗೂ ಹಾಡುಗಳು ಸದ್ದು ಮಾಡುತ್ತಿದ್ದು, ಈಗ ಬಿಡುಗಡೆಯಾಗಿರುವ “ಒಂದೇ ಚಂದ್ರನ ಎರಡು ತುಂಡು” ಹಾಡು ನಿಜವಾದ ಪ್ರೇಮಿಗಳ ಹೃದಯ ಗೆದ್ದಿದೆ ,ಅಷ್ಟೇ ಅಲ್ಲದೇ ಸಿನಿಮಾದಲ್ಲಿ ಪ್ರೇಮಿಗಳಾಗಿ ನಟಿಸಿರುವ ವಿನಯ್ ರಾಜಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ರವರಿಗೆ ಒಂದೊಳ್ಳೆ ಹೆಸರನ್ನ ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ..
ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗುತ್ತಿರುವ ಸಿಟಿಲೈಟ್ಸ್ ಬಹಳಷ್ಟು ಜನರಿಗೆ ಹೊಸದೊಂದು ಬೆಳಕನ್ನು ನೀಡಲಿದೆ ಎಂಬುದು ಸಿನಿಮಾ ಅಭಿಮಾನಿಗಳ ಆಶಯ
#CITYLIGHTS #ONDECHANDRA #duniyavijaykumar #AntonyDasan #citylightsmovie #vinayrajkumar #kandammakandamma #nagarjunsharma #bavabava #anandaudio #charanraj #monishavijaykumar #youtube #nagarjunasharma
ರವೀ ಸಾಸನೂರ್
