ಇದು ಘನವೆಂದು ತಿಳಿಮಂಗಲಾಂಗಿ ಪ್ರಣಮ ಮತ್ತು ಪಂಚಾಕ್ಷರಿ ಪ್ರಣಮ ಅಂದ್ರೆ ಮಂತ್ರ ಪಂಚಾಕ್ಷರಿ ಎಂದರೆ ಐದು ಅಕ್ಷರ ಅದನ್ನು ಅರಿತಂತಹ ಗುರುವಿನ ಅದನ್ನು ಅರಿತಿರಬೇಕು. ಗುರು ಹ್ಯಾಂಗ ಇರಬೇಕು ಅಂದ್ರ ಶ್ರೋತ್ರೀಯ ಬೃಹ್ಮನಿಷ್ಠ ಸದ್ಗುರು.ಶೃತಿ ಅಂದ್ರೆ ನಾವು ಹೇಳಿದಂತಹ ಪ್ರಶ್ನೆ ಅ೦ವಾ ಬಿಡಿಸಬೇಕು ಮತ್ತು ಬ್ರಹ್ಮ ನಿಷ್ಠೆಯೊಳಗೆ ಅಂವಾ ಇರಬೇಕು.ಋತ್ರಿಯ ಇದ್ರೆ ಅದು ಹೇಳಕ್ ಬರ್ತದೆ ಆದರೆ ಬ್ರಹ್ಮ ನಿಷ್ಠೆ ಇಲ್ಲಂದ್ರ ಆಗುವುದಿಲ್ಲ ಜೊತೆಗೆ ಬ್ರಹ್ಮ ನಿಷ್ಠೆಯನ್ನು ಹೊಂದಿರಬೇಕು ಶಾಸ್ತ್ರ ಪರಿಣಿತಿ ಇರಬೇಕು ಎಲ್ಲವನ್ನು ಬಲ್ಲೆ ಎಂಬ ಜಂಬದ ಮುಖವಾಡ ಹಾಕಿದವನು ಇರಬಾರದು.ಶಿಷ್ಯ ಏನ್ ಪ್ರಶ್ನೆ ಕೇಳ್ತನ ಅದನ್ನ ಹೇಳು ಹಂಗಿರಬೇಕು ಅಂತ ಗುರುವಿನ ಪಾದಕ್ಕೆ ಎರಗು ಅಂತ ಹೇಳಿದ್ದಾರೆ ಮಹಾತ್ಮರು ಮುಂದೆ ಹೇಳ್ತಾರೆ –
ಗುರು ತಾಯಿ ತಂದೆಯವ್ವ
ಗುರು ಬಂದು ಬಳಗವ್ವ
ಗುರುದೇವರು ಪರಮಾತ್ಮನು ತಂಗಿ
ಪರಮಾತ್ಮ ನಿರ್ಗುಣದಾನ್ರಿ ಅವನಿಗೆ ದೇಹ ಇಲ್ಲ ರೂಪ ಇಲ್ಲ ಆಕಾರ ಇಲ್ಲ ನಮ್ಮ ಎದುರು ಬದುರು ಕುಂತು ಮಾತಾಡಂಗಿಲ್ಲ.ಹಂಗಿದ್ರೆ ನಮಗೆ ಎದುರು ಬದುರು ಕುಂತು ಮಾತಾಡೋರು ಯಾರು ? ಅವನೇ ಗುರುನಾಥಅವನೇ ಪರಮಾತ್ಮ ಸಗುಣ ರೂಪದಿಂದ ಗುರು ರೂಪ ತಾಳಿ ಜಗತ್ತು ಉದ್ಧಾರ ಮಾಡಿ ಸಲುವಾಗಿ ಎಲ್ಲೋ ಒಬ್ಬರು ಜನ್ಮ ತಾಳ್ಯಾರ ಪರಮಾತ್ಮ ನಿರ್ಗುಣ ಅವರೋಕ್ಷ ಅವಾ ಅಪರೋಕ್ಷ ಆದರ ಇಂವಾ ಪರೋಕ್ಷ.ಶಿವನೇ ಶಿವನೇ ಆ ರೂಪ ತಾಳಿ ಈಗ ಸಿದ್ಧಾರೂಢರಾಗಿ ಬಂದು ಬಂದರು ಅವರೇ ಸಾಕ್ಷಾತ್ ಶಿವನೇ.
ಅವರು ಯಾರು ಸಲುವಾಗಿ ಬಂದರು ಅಲ್ಲಿ ದೇವ ದೇವತೆಗಳ ಒಳಗೆ ಪೂಜಾ ನಡ್ದಿತ್ತು ಅಷ್ಟೊತ್ತಿಗೆ ಮಂಗಳಾರತಿ ಚಾಲು ಆಯ್ತು ಎಲ್ಲಾ ದೇವತೆಗಳು ಎದ್ದು ನಿಂತು ಆರತಿ ಮಾಡ್ಲಿಕ್ಕೆ ಹತ್ತಿದರು. ಒಬ್ಬ ಗಂಧರ್ವದೇವ ಪುರುಷ ಒಟ್ಟಿಗೆ ಅವ ಏಳಲಿಲ್ಲ ಅವ ಯೋಗದಲ್ಲಿ ಕುಳಿತಿದ್ದ .
ಅದನ್ನು ನೋಡಿ ಏಳಪ್ಪ ಪರಮಾತ್ಮನ ಪೂಜೆ ನಡೆದ ಅಂದ್ರು ಆದರೂ ಆತ ಏಳಲಿಲ್ಲ. ಆ ಕಡೆಗೆ ಮಂಗಳಾರತಿ ಮುಗಿಯಿತು ಇದನ್ನು ನೋಡಿ ಶಿವನಿಗೆ ಸಿಟ್ಟು ಬಂತು. ನಿನಗೆ ಇಷ್ಟು ಅಹಂಕಾರವೋ ಸಾಕ್ಷಾತ್ ಶಿವನ ಪೂಜೆ ನಡೆದಾಗ ನೀನು ಎದ್ದು ನಿಂತಿಲ್ಲ ಅಂದ್ರೆ ನೀನು ಭೂಲೋಕದ ಶ್ರೀಶೈಲದೊಳಗ ವ್ಯಾಘ್ರನಾಗಿ ಹುಟ್ಟಿ ಬಾ ಅಂತ ಶಾಪ ಹಾಕಿಬಿಟ್ಟರು...
ಆವಾಗ ಜ್ಞಾನೋದಯವಾಗಿ ಹಾಂ....!ಅಂದ.ಹಿಂದುಗಡೆ ಶಿವನ ಪಾದ ಕೆರೆಗೆ ಪಾದದ ಮೇಲೆ ಬಿದ್ದು ಹೊರಳಾಡಿದ ಭೋರ್ಗರೆದು ಅಳುತ್ತ ಪರಿಪರಿಯಾಗಿ ಬೇಡುಕೊಂಡ ಅದಕ್ಕೆ ಶಿವ ಅಂತ ಆಯ್ತಪ್ಪ ಒಮ್ಮೆ ಕೊಟ್ಟ ಶಾಪ ಮರಳಿ ಪಡೆಯಾಕ ಆಗೋದಿಲ್ಲ ಮತ್ತೆ ನಾ ನಿಮ್ಮೆಲ್ಲರನ್ನು ಬಿಟ್ಟು ಹೆಂಗ್ ಹೋಗ್ಲಿ ಅಂದ ಸರಿ ಆಯ್ತು ನೀನು ಹೋಗುವುದಿಲ್ಲ ಅಂದ್ರೆ ನಾವು ನಿನ್ನ ಜೊತೆ ಬರ್ತಿವಿ ಆ ಕಾರಣಕ್ಕಾಗಿ ಎಲ್ಲಾ ದೇವರುಗಳು ಆತನ ಸಲುವಾಗಿ ಭೂಲೋಕಕ್ಕೆ ಬಂದರು ಎಲ್ಲರೂ ಭೂಲೋಕದಲ್ಲಿ ಬೇರೆ ಬೇರೆ ಕಡೆ ನೆಲೆ ನಿಂತರು ಆ ಶಿವನೇ ಹುಬ್ಬಳ್ಳಿಯಲ್ಲಿ ಸಿದ್ದಾರೂಢನಾಗಿ ಜನ್ಮ ತಾಳಿದನು ಹುಲಿನೇ ಮುಂದೆ ಗುರುನಾಥರೂಢರಾಗಿ ಸಿದ್ಧಾರೂಡರ ಶಿಷ್ಯರಾದರುಭೂಲೋಕದಲ್ಲಿ ಹಲವಾರು ವರ್ಷಗಳಿಗೊಮ್ಮೆ ಕರ್ಮ ತಾಂಡವ ಆಡ್ತದ ಆ ಕರ್ಮ ತಾಂಡವ ಆಡೋ ಹೊತ್ತಿನ್ಯಾಗಈ ಲೋಕ ಲಯ ಆಗ್ತದೋವಂತಹ ಕಾಲಕ್ಕೆ ಲೋಕೋದ್ಧಾರ ಮಾಡುವ ಸಲುವಾಗಿಆ ಶಿವನೇ ನರ ರೂಪದಿಂದ ಬಂದು ಧರ್ಮ ಪ್ರಚಾರ ಪ್ರಸಾರ ಮಾಡುವ ಸಲುವಾಗಿ ಅವತರಿಸಿ ಬರ್ತಾನ ಅಂತವರ ಪಾದಕ್ಕೆ ನಾವು ಹೊಂದಬೇಕು ಅಂತವರನ್ನು ನಾವು ಅರಿಯಬೇಕು.
ಶಿವಪ್ಪ ತರಿದೋಡೆ ಗುರು ಪಥ ಮೊದಲು ಅಂದರೆ ಶಿವನನ್ನು ಕಾಣಬೇಕು ಅಂತ ಆಗಿದ್ರೆ ಮೊದಲು ಯಾರು ಬೇಕು?ಗುರು ಬೇಕು ಗುರುವೇ ನಮಗೆ ದಾರಿ ತೋರಿಸುವವನು ಮತ್ತೆ ಶಿವಪತ ಅರಿದೊಡೆ ಗುರು ಪ್ರಥಮ ಮೊದಲು ಅಂದರೆ ಶರಣರ ಸಂಗವೇ ಮೊದಲು.
ಮುಂದುವರಿಯುತ್ತದೆ ….
ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.

