“ಶ್ರೀ ಅನ್ನದಾನೀಶ್ವರ ಮಹಾತ್ಮೆ ಟ್ರೈಲರ್ ಲಾಂಚ್”
ಇಟಗಿ ಮಠದ ಮಹಾಸ್ವಾಮಿಗಳು ಮಾತನಾಡಿ,ನಮ್ಮ
ಅನ್ನದಾನ ಮಹಾ ಶಿವಯೋಗಿಗಳು,
ಮಹಾನ ಸಂತರು ಅವ್ರು ನನ್ನ ಸಂಸ್ಕೃತ ಗುರುಗಳು,ಗುರುಗಳ ಜೀವನಾಧಾರಿತ “ಶ್ರೀ ಅನ್ನದಾನೀಶ್ವರ ಮಹಾತ್ಮೆ” ಒಂದೊಳ್ಳೆ ಚಿತ್ರವಾಗಲಿದೆ,ಇದರಲ್ಲಿಸಾಮಾಜಿಕ ಮೌಲ್ಯ,ಸಾಮಾಜಿಕ ಬದ್ಧತೆ,ಅನ್ನದಾನ,ಜ್ಞಾನ ದಾನ,ಅರಿವಿನ ದಾನ ಎಲ್ಲ ರೀತಿಯ ಮಹತ್ವದ ಅಂಶಗಳು ಕಾಣುತ್ತವೆ ಎಂದು ಹೇಳುತ್ತಾ,ಶ್ರೀ ಅನ್ನದಾನೀಶ್ವರ ಮಹಾತ್ಮೆ ಟ್ರೈಲರ್ ಲಾಂಚ್ ಮಾಡಿದರು.
ಅಂತಃಪುರದ ಮಹಾ ಸ್ವಾಮಿಗಳು ಮಾತನಾಡಿನಾವು ಸ್ವಾಮೀಜಿಗಳು, ನಮಗೆ ನಮ್ಮದೇ ಆದಂತಹವ ಕೆಲಸ ಕರ್ತವ್ಯಗಳು ಸಾಕಷ್ಟಿವೆ, ನಿರ್ದೇಶಕಿ ಗೌರಿ ತುಂಬಾ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹಾಗೆ ನಮಗೂ ಸಹ ಒಂದು ಅವಕಾಶ ಕೊಟ್ಟಿದ್ದಾರೆ,ನಾವೇನು ಕಲಾವಿದರಲ್ಲ,ಆದರೂ ಸಹ ನಾವು ನಮ್ಮ ಪಾತ್ರವನ್ನು ಮಾಡಿದ್ದೇವೆ ಎಂದು ಹೇಳಿ,
ಚಿತ್ರದಲ್ಲಿನ ಒಂದು ಹಾಡು
“ಜ್ಞಾನ ಮೇರುವಾಗಿ ಮೆರೆದೇ” ಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಪೂರ್ವ ಜನ್ಮದ ಪುಣ್ಯ,ಹಾಗಾಗಿಯೇ ಈ ಪಾತ್ರ ಸಿಕ್ಕಿತು ಅನ್ನೋದರ ಮೂಲಕ ,ಮಾತು ಶುರು ಮಾಡಿದ ಅಭಿಜಿತ್.
ನನ್ನ ವೃತ್ತಿ ಜೀವನದಲ್ಲಿ ಯಾವತ್ತೂ,ಇಂತಹ ಪಾತ್ರ ಮಾಡಿರಲಿಲ್ಲ,ಸಾಮಾನ್ಯವಾಗಿ ಯಾವುದೇ ನಿರ್ದೇಶಕ ಅಥವಾ ನಿರ್ದೇಶಕಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡ್ತಾರೆ ಆದರೆ ನಿರ್ದೇಶಕಿ ಗೌರಿ ಮಾಡಿದ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರ ತುಂಬಾ ಒಳ್ಳೆಯ ನಿರ್ಧಾರ, ವಿ ಮನೋಹರ್ ಮಾಡಿದ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.
ನನಗೆ ನಿಜವಾಗಿಯೂ ಖುಷಿ ಆಗಿದ್ದು, ನಾನೊಬ್ಬ ಕಲಾವಿದನಾಗಿ ನಟಿಸಿದ್ದರ ಬಗ್ಗೆ ಅನ್ನೋದಕಿಂತಲೂ, ಕಲಾವಿದರಲ್ಲದ ಹಾಗು ನಿಜವಾದ ಸ್ವಾಮೀಜಿಗಳು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದು ನೋಡಿ ನನಗೆ ಖುಷಿ ಆಯಿತು ಎಂದರು.
ನಿರ್ದೇಶಕಿ – ನಿರ್ಮಾಪಕಿ,
ಗೌರಿ ಎಲ್ ರಾಮೇಗೌಡ ಮಾತನಾಡಿ.ಮೂವತ್ತೈದು ಚಿತ್ರಗಳಲ್ಲಿ ನಟನೆ,ಕೆಲವು ಧಾರಾವಾಹಿಗಳಲ್ಲಿ ನಟನೆ,ಇದು ನಾನು ನಿರ್ದೇಶನ ಮಾಡ್ತಾ ಇರೋ ಮೊದಲ ಚಿತ್ರ,ನಾನು ರಾಘವೇಂದ್ರ ಸ್ವಾಮಿಗಳ ಭಕ್ತೆ,ರಾಯರು ನಮ್ಮ ಜೊತೆಗೆ ಸದಾ ಇದ್ದು,ಯಾವುದೇ ತೊಂದರೆ ಆಗದಂತೆ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರೀಕರಣ ಆಗುವಂತೆ ಮಾಡಿದ್ದಾರೆ,ಪ್ರಮುಖ ಪಾತ್ರದಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟ ಅಭಿಜಿತ್ ಮನ ಮುಟ್ಟುವಂತೆ ನಟಿಸಿದ್ದಾರೆ,ಸುಮಾರು ಅರವತ್ತು ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ,ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಬಹುತೇಕೆ ಕಡೆ ಶೂಟಿಂಗ್ ಆಗಿದೆ,ಎಲ್ಲರೂ ಕುಟುಂಬ ಸಮೇತ ಬಂದು ಇಂತದೊಂದು ಭಕ್ತಿ ಪ್ರಧಾನ ಚಿತ್ರ ನೋಡಿ ಸಹಕರಿಸಿ ಎಂದು ವಿನಂತಿಸಿಕೊಂಡರು..
ಚಿತ್ರಕಥೆ,,ಸಾಹಿತ್ಯ,,ಸಂಭಾಷಣೆ ಬರೆದಿರುವ ಸಂಜಯ್ ಕುಮಾರ್ ಮಾತನಾಡಿ,ಯಾವುದೇ ರೀತಿಯ ಶ್ರೀಮಂತಿಕೆಯ ಜೀವನ ನಡೆಸದೆ,ಅತ್ಯಂತ ಸರಳವಾಗಿ ಪುಸ್ತಕಗಳ ಮಧ್ಯ ಜೀವನ ನಡೆಸುವ ,ನಮ್ಮ ಗುರುಗಳ ಬಗ್ಗೆ ಬರೆಯುವುದು ನನಗೆ ಸಿಕ್ಕ ಸೌಭಾಗ್ಯ ಎನ್ನಬಹುದು.ಗುರುವಿನ ಶಕ್ತಿ ಎಂತದ್ದು,ಯಾಕೆ ಗುರು ಈಗಿನ ಮಕ್ಕಳಿಗೆ ಮಹತ್ವ ಆಗ್ತಾರೆ,ಅನ್ನೋದು ಶ್ರೀ ಅನ್ನದಾನೀಶ್ವರ ಮಹಾತ್ಮೆ ಸಾರತ್ತೆ ಎಂದರು.

ಹಿರಿಯ ನಟ ಶಿವಕುಮಾರ್ ಆರಾಧ್ಯ ಮಾತನಾಡಿ,
ನಾನು ಚಿತ್ರೋದ್ಯಮಕ್ಕೆ ಬಂದು ಸುಮಾರು 35 ವರ್ಷ ಆಯ್ತು,ಅಭಿಜಿತ್ ಸರ್ ನನಗೆ ತುಂಬಾ ಹಳೆಯ ಪರಿಚಯ, ತುಂಬಾ ಗಟ್ಟಿ ಇರುವಂತಹ ಕಥೆಯನ್ನು ಸಿನಿಮಾ ಆಗಿ ಮಾಡ್ತಾ ಇರುವ ಈ ನಿರ್ಮಾಣ ಸಂಸ್ಥೆಗೆ ಧನ್ಯವಾದ ಹೇಳಿ “ಶ್ರೀ ಅನ್ನದಾನೀಶ್ವರ ಮಹಾತ್ಮೆ” ತುಂಬಾ ಒಳ್ಳೆಯ ಚಿತ್ರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ರವೀ ಸಾಸನೂರ್ MasterNews365.Com

