ನಿನ್ನ ಪ್ರಶ್ನೆ ಇದೆ ಉತ್ತರ ನಿನಗೆ ಹೇಳಿದರೂ ಇದು ತಿಳಿಯುವುದಿಲ್ಲ ಇಷ್ಟು ಹೇಳಿಬಿಟ್ಟೆ . ಮಹಾದೇವಪ್ಪ ಅಂತ ಅವನು ನಾಯನೇಗಲಿ ಅಂವಾ. ಅವನು ಒಂದು ಯಾವುದೋ ಪದಾ ತಗೊಂಡು ಹಸನಾಗಿ ತೊಳೆದುಬಿಟ್ಟ. ಜೊತೆಗೆ ಒಂದು ಸವಾಲು ಹಾಕಿ ಬಿಟ್ಟ. ಅಷ್ಟೊತ್ತಿಗೆ ಸಂಗಣ್ಣ ಬಂದ ಅವನು ಬಂದ ಅನ್ನಾಕ್ಕ ಹತ್ತಿದ-
ಏ ಶರಣ…. ನೀನು ಬಿ.ಎ ಕಲಿತವ ಗ್ರಾಜುವೇಟ್ ಬ್ಯಾರೆ. ಬಿ ಅಂದರೇನು? ಎ ಅಂದರೇನು? ಅದನ್ನು ಹೇಳಬೇಕು. ಹೇಳಿಲ್ಲ ಅಂದ್ರ ನೋಡು-
ಎ ಬಿ ಸಿ ಡಿ ಎಫ್ ಮಚ್ಚಿಲೆ ಬಡಿತೀನಿ ಗಪ್ ಅಂತ ಹೇಳಿಬಿಟ್ಟರಿ.
ಅವನಿಗೆ ಏನು ಹೇಳಕ್ಕೆ ಬರವಲ್ದು ಭಜನಾ ಬಿಡುವುದು ಇಷ್ಟು ತಡಾ ರಿ ಪದವೀಧರ ಯಾವ ಕಡೆ ಹೋದನೋ ಪತ್ತೆನೇ ಇಲ್ಲ ರೋಡಿನಬಸವಣ್ಣ ದೇವರ ಗುಡಿಯಾಗ ಯಾರ ಕೈಗೂ ಸಿಗಲಾರದಂಗೆ ಹೋಗಿ ಮಲ್ಕೊಂಡ್ಬಿಟ್ಟಾನ.
ಮೈಕ್ ನ್ಯಾಗ ಪದವೀಧರ ಶರಣ ಬರಬೇಕು ಪದವೀಧರ ಶರಣ ಬರಬೇಕು ಅಂತ ಕರಿಲಿಕ್ ಹತ್ಯಾರ.ಅವ ಎಲ್ಲಿಂದ ಬರಬೇಕು ? ಅವಳಿಗೆ ಡವಳಗಿ ನಾನಾಗೌಡರ ಮಗ ಶಿವಪ್ಪ ಅವನ್ಗೆ ಅವನಿಗೆ ಗೆಳತನ ಪ್ರೇಮಬ್ಯಾರೆ .ಅವ ಹುಡುಕಾಡಿ ಆ ಶರಣಾಗ ಎಬ್ಬುಸ್ಕೊಂಡ್ ಬರಾಕ್ ಹೋದ್ರಿ ..
ಈ ಶರಣ ಅಲ್ಲಿ ಮೈಕ್ ನ್ಯಾಗ ನಿನಗೆ ಎಲ್ಲರೂ ಕರೆಯಾಕ್ ಹತ್ಯಾರ ನೀ ಬರವಲ್ಲಿ ಲಗುನ ನಡಿ ಅಂದ . ಕೂಡಲೇ ಗೌಡ್ರ ಕೈಮುಗಿತಿನಿ ಅಲ್ಲಿನ ಬಂದರೆ ನನ್ನದು ಏನು ಉಳಿಯೂದಿಲ್ಲ .ಶರಣರಿಗೆ ಹೇಳಬೇಕಂತ ಆಣೆ ಹಾಕಿದ್ದೆ ಹೇಳಿದರು. ಆದರೆ ಈಗ ಅವರಿಬ್ಬರೂ ಸವಾಲ್ ಹಾಕ್ಯಾರ ಅದಕ್ ಉತ್ತರ ಹೇಳಕ್ಕ ನನಗೆ ಬರುವುದಿಲ್ಲ ಬ್ಯಾಡ್ರಿ ಅಂದ.
ನಾನು ಉತ್ತರ ಹೇಳಿಲ್ಲ ಅಂದ್ರೆ ನನಗೆ ಹಾಡು ಕೊಡುವುದಿಲ್ಲ .ನನ್ನ ಮರ್ಯಾದೆ ಉಳಿಯಲ್ಲ. ಗೌಡ್ರೆ ನಾ ಹಿಂಥಲ್ಲಿ ಅದೀನಿ ಅಂತ ಯಾರಿಗೂ ಹೇಳಬೇಡಿ. ಅಂತ ಗೌಡರಿಗೆ ವಿನಂತಿ ಮಾಡಿಕೊಂಡವನು ಹೊತ್ತು ಹೊರಡುವ ತನಕ ಬರಲೇ ಇಲ್ಲ ನಾನಾ ಗೌಡ್ರು ಅಂದ್ರು –
ಏನೋ ಶರಣ ನೀನು ಹೆಂತಾವನಿಗೆ ಮೂಲಿ ಗುಂಪಿ ಮಾಡಿಬಿಟ್ಟಿ ಅಂದರು.
ಯಾಕ್ರೀ ಅಂದೆ..?
ಥೂ…. ಥೂ… ಥೂ…. ಪದವೀಧರ ಶರಣ ನಮ್ಮ ಮಗ ಶಿವಪ್ಪನ ಕಾಲು ಹಿಡ್ಕೊಂಡವ ಎಲ್ಲೆಲ್ಲಿ ಬಿಡವಲ್ಲ ಅಂತ.
ಬ್ಯಾಡ್ರಿ ಗೌಡ್ರೆ , ನಾ ಬಂದ್ರ ನನ್ನ ಮರ್ಯಾದೆ ತೆಗೆದು ಬಿಡ್ತಾರೆ. ಹಿಂಗ ಮನುಷ್ಯನ ಅನುಭವಕ್ಕೆ ಬೆಲೆ ಆದ. ಆದರೆ ಅನುಭವದ ಕೊರತೆ ನಮ್ಮಲ್ಲಿ ಇತ್ತು ಅಂದ್ರೆ ಅವಮಾನ ಆಗಿ ಹೋದಲ್ಲಿ ಬಂದಲ್ಲಿ ಅಮಂಗಳ ಆಗಿ ಬಿಡಬೇಕಾಗುತ್ತದೆ.
ಓಂ ನಮಃ ಶಿವಾಯ ಇದು ಮಹಾ ಮಂತ್ರ. ಇದಕ್ಕೆ ಷಡಕ್ಷರಿ ಮಂತ್ರ ಅಂತಲೂ ಕರೆಯುತ್ತಾರೆ. ಆರು ಅಕ್ಷರಗಳ ಮಂತ್ರ ಒಟ್ಟು ಏಳು ಕೋಟಿ ಮಂತ್ರಗಳು ಅದಾವು. ಎಲ್ಲಾ ಜಾತಿಯೊಳಗೆ ಒಂದೊಂದು ತರದ ಮಂತ್ರಗಳು ಅದಾವು. ಸಿದ್ದಿ ಮಂತ್ರ,ಕ್ಷುದ್ರ ಮಂತ್ರ, ಭೂತ ಪಿಶಾಚಿಗೊಂದು ಮಂತ್ರ ಹಿಂಗ ಏಳು ಕೋಟಿ ಮಂತ್ರಗ ಳು ಅದಾವು. ಏಳು ಕೋಟಿ ಮಂತ್ರಕ್ಕ ಇದು ತಾಯಿ ಆಗ್ತದ. ಇದರಿಂದ ಬಹಳಷ್ಟು ಪ್ರಯೋಜನಗಳು ನಮಗ ಆಗತಾವು.
ಮಂತ್ರ ಪಠಣ ನಿಮ್ಮ ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ಹೃದಯ ಬಡಿತ ಸ್ಥಿರಗೊಳಿಸುತ್ತದೆ ನಿಮ್ಮ ತರ್ಕ ಬದ್ಧ ಗೊಳಿಸುತ್ತದೆ ನಿಮ್ಮ ದೈಹಿಕ ಯೋಗ ಕ್ಷೇಮ ಸುಧಾರಣೆ ಮಾಡುವಂತಹ ಶಕ್ತಿ ಆ ಮಂತ್ರದಾಗೈತಿ.
ಭೂಮಿ ನೀರು ಬೆಂಕಿ ಗಾಳಿ ಮತ್ತು ಆಕಾಶವನ್ನು ಸೂಚಿಸುತ್ತದೆ ಹಿಂದೂ ಧರ್ಮದಲ್ಲಿ ಇವುಗಳಿಗೆ ಪಂಚಭೂತಗಳು ಅಂತ ಕರೀತಾರೆ ಭೂಮಿಯೊಳಗ ನ ನೀರೊಳಗೆ ಮಾ ಅಗ್ನಿ ಒಳಗ ಶಿ ವಾಯುವಿನಲ್ಲಿ ವಾ ಆಕಾಶದಲ್ಲಿ ಯ ಹುಟ್ಟಿದೆ.
ಭೂಮಿಯೊಳಗ ನಾ ಹ್ಯಾಂಗ್ ಹುಟ್ಟಿತು. ಇದರ ಅನುಭವ ಬೇಕಲ್ಲ. ಭೂಮಿಯಲ್ಲಿ ಅಹಂಕಾರ ಕಠಿಣತ್ವ ಆದ ತಿಳಿಯಂಗಿಲ್ಲ ಅದು. ನಾನು ಅಂತದ. ಅದರಲ್ಲಿ ಜಡತ್ವ ಅದ.
ಜಲದೊಳಗ ನಾ ಹುಟ್ಟಿತು ಅದು ಹೆಂಗ್ ಹುಟ್ಟಿತು ಅಂದ್ರೆ ನೀರು ಹರಿದಾಡುತ್ತದೆ ಅದರ ಒಳಗ ಚಿತ್ತ ಹುಟ್ಟಿದ ಅಲ್ಲಿ ಹರಿದಾಡುತ್ತಿರುತ್ತದೆ.
ಅಗ್ನಿ ಒಳಗ ಶಿ ಹುಟ್ಟಿದ್ದು ಈ ಮೇಲ್ಮುಖ ಆದ ಅಗ್ನಿ ಹಚ್ಚಿದ ಕೂಡಲೇ ಮೇಲ್ಮುಖ ಆಗ್ತದ ಅದು ಉರಿತದ ಮತ್ತು ಅದರಲ್ಲಿ ಏನು ಬುದ್ಧಿ ಆದ ಅಂದ್ರೆ ತಿಳುವಳಿಕೆ ಆದ ಅದು ಹೆಂಗ ಅಂದ್ರೆ ಅಗ್ನಿ ಅಂಶ ಬಂದಾಗ ನಮಗೆಲ್ಲ ತಿಳಿತದ.
ವಾಯುವಿನಲ್ಲಿ ವಾ ಹುಟ್ಟಿತು ಅದು ಹಂಗಂದ್ರೆ ಗಾಳಿ ಎಲ್ಲಾ ಕಡೆಗೂ ವಿಶಾಲವಾಗಿ ಹಬ್ಬದ ಮತ್ತು ಮನಸ್ಸು ವಾಯುವಳಗ್ ಹುಟ್ಟಿದ ಹಿಂಗಾಗಿ ಮನಸ್ಸು ಒಂದು ಕಡೆ ಇರುವುದಿಲ್ಲ ಎಲ್ಲಾ ಕಡೆ ಹರಿದಾಡುತ್ತದೆ.
ಆಕಾಶದೊಳಗ ಯ ಹುಟ್ಟಿತು ಆಕಾಶ ಅಂದ್ರೆ ಅದು ಎಲ್ಲದಕ್ಕೂ ಆಶ್ರಯ ಆಕಾಶ ಗುಣ ಹ್ಯಾಂಗ್ ಅಂದ್ರೆ ಕೆಲವು ಆದ ಆಕಾಶ ಗುಣ ಬಂತು ಅಂದ್ರೆ ತಿಳುವಳಿಕೆ ಬರುತ್ತದೆ ಆಕಾಶ ಬಿಟ್ಟು ವಾಯುವಿಗೆ ಬಂತು ಅಂದ್ರೆ ಅಲ್ಲಿ ಹರಿದಾಡುತ್ತದ ಅಗ್ನಿ ತತ್ವಕ್ಕೆ ಬಂತು ಅಂದ್ರೆ ಇರುತನ ತಿಳಿಗೊಡುವುದಿಲ್ಲ ಮತ್ತು ತಿಳುವಳಿಕೆ ಬರಬೇಕಾದರೆ ಆಕಾಶ ತತ್ವ ಬರಬೇಕು.
ಹೆಂಗ ಪಂಚಭೂತದೊಳಗ 5 ಅಕ್ಷರಗಳು ಹುಟ್ಟು ಒಮ್ಮೆ ನಮಃ ಶಿವಾಯ ಅಂದ್ರೆ ಭೂಮಂಡಲದೊಳಗ ಎಲ್ಲಾ ದೇವರು ಅದಾವು. ನೀರು ಒಳಗ ನಾವು ಬೆಂಕಿಯೊಳಗ ಅದಾವು ಗಾಳಿಯೊಳಗೆ ಅದಾವು ಆಕಾಶದಾಗ ಅದಾವು ಅವರೆಲ್ಲರಿಗೂ ತಿರುಗಾಡಿ ಪೂಜೆ ಮಾಡೇನೂ ಅಂದ್ರ, ಮಾಡಕ್ ಆಗ್ತದೆನು ನಿಮಗೆ ನಿಮ್ಮ ಆಯುಷ್ಯ ಸಾಕಾಗುವುದಿಲ್ಲ ನಾವು ಒಮ್ಮೆ ಮನಸಿಲೆ ಓಂ ನಮಃ ಶಿವಾಯ ಅಂದ ಬಿಟ್ಟಿವೆ ಅಂದ್ರ ಲೋಕದೊಳಗಿನ ಎಲ್ಲ ದೇವರಿಗೆ ಪೂಜೆ ಮಾಡಿದಂಗ ಆಗ್ತದ ಅದಕ್ಕ ಓಂ ನಮ ಶಿವಾಯ ಅಂತಾರೆ ಇದು ತುಂಬಾ ಶ್ರೇಷ್ಠವಾದದು.
ಮುಸ್ಲಿಮರದ್ದು ನಿರಾಕರಿ ಪೂಜೆ ಅವರು ಅಲ್ಲಾಹು ಅಕ್ಬರ್ ಅನ್ನೋದು ಓಂಕಾರ ನುಡಿತದ ನಿರ್ಗುಣ ಅದು ಸಗುಣ ಪೂಜೆ ಅಲ್ಲ ಹಿಂದೂ ಸಂಪ್ರದಾಯದಲ್ಲಿ ಸಗುಣ ನಿರ್ಗುಣ ಅಂತ ಅದಾವು ಸಗುಣ ಅಲ್ಲಿ ಮುಟ್ಟುತನ ಬೇಕು ನಿರ್ಗುಣಕ ಹೋದಾಗ ಮುಕ್ತಿ ಅದಕ್ಕೆ ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ.
ಸಗುಣ ಅಂದರೇನು? ನಿರ್ಗುಣ ಅಂದರೇನು? ಇದನ್ನು ಅರಿತಾಗ ಮಾತ್ರ ಗೊತ್ತಾಗ್ತದ ಅದರ ಫಲ ಸಿಗುತ್ತದೆ ಈ ಹನುಮಂತನಂತಾವನಿಗೆ ಗೊತ್ತು? ಇದೆಲ್ಲಾ ನಾನು ನಮ್ಮ ಗುರು ಮುಖ್ಯನ ತಿಳಿದುಕೊಂಡಿರಿ ಇಷ್ಟಾದರೂ ಅವಾ ಜಗಳ ಬಿಡುವಲ್ರಿ.ಹೋದಲ್ಲಿ ಬಂದಲ್ಲಿ ಇಂಥವು ಹೊಲಸು ಹಾಡ ಹಾಡ್ತಿರ್ತಾನ.
ಮುಂದುವರಿಯುತ್ತದೆ ….
ಬಳಗಾನೂರಕ್ಕೆ ಎರಡನೇ ಬಾರಿ ಹೋದಗಿನ ಘಟನೆ ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.

