Tuesday, 29 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಳಗಾನೂರಕ್ಕೆ ಎರಡನೇ ಬಾರಿ ಹೋದಾಗಿನ ಘಟನೆ –
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಳಗಾನೂರಕ್ಕೆ ಎರಡನೇ ಬಾರಿ ಹೋದಾಗಿನ ಘಟನೆ –

ಬಳಗಾನೂರ ಮೂರನೇ ವರ್ಷಕ್ಕೆ ಬಂದಿದ್ದರು ಮೂರನೇ ವರ್ಷಕ್ಕೆ ಬಂದಾಗ ಅಲ್ಲಿ ಮುಲ್ಲಾ ಮಠಪತಿ ಪದ ಬಹಳ ಜೋರು ಇತ್ತು ಅವಾಗ ಕಂಡಪಟ್ಟೆ ಹಾಯೇರಿ ಆಗುವುದು ನಮ್ಮನ್ನು ಮೂರು ವರ್ಷ ಬಿಡದಂಗೆ ಕರಿಸಿದ್ರು.ನಾವು ಗಾಡಿ ಹೂಡಿಕೊಂಡು 34 ಮಂದಿ ಹೋಗ್ತಿದ್ದೀವಿ ಕೊಲ್ಲೂರು ಪದವೀಧರ ಯಾರಿಗೂ ಗೊತ್ತಾಗಬಾರದು ಹಂಗ ನಮಗೆ ಕರೆದುಕೊಂಡು ಹೋಗುತ್ತಿದ್ದ. ಆ ಕಡೆ ಭಜನಾ ನು ನಡೆದಿರಬೇಕು ಈ ಕಡೆ ಚಹಾನು ಕುಡಿದು ಕುಡಿದಿರಬೇಕು ಹಿಂಗ ಎರಡೂ ಕೆಲಸಾನೂ ಆಗಬೇಕು ನಾವೆಲ್ಲ ಹೋಗುವಷ್ಟು ಹೊತ್ತಿಗೆ ಮುಲ್ಲಾ ಮಠಪತಿ […]

ಬಳಗಾನೂರ ಮೂರನೇ ವರ್ಷಕ್ಕೆ ಬಂದಿದ್ದರು ಮೂರನೇ ವರ್ಷಕ್ಕೆ ಬಂದಾಗ ಅಲ್ಲಿ ಮುಲ್ಲಾ ಮಠಪತಿ ಪದ ಬಹಳ ಜೋರು ಇತ್ತು ಅವಾಗ ಕಂಡಪಟ್ಟೆ ಹಾಯೇರಿ ಆಗುವುದು ನಮ್ಮನ್ನು ಮೂರು ವರ್ಷ ಬಿಡದಂಗೆ ಕರಿಸಿದ್ರು.ನಾವು ಗಾಡಿ ಹೂಡಿಕೊಂಡು 34 ಮಂದಿ ಹೋಗ್ತಿದ್ದೀವಿ ಕೊಲ್ಲೂರು ಪದವೀಧರ ಯಾರಿಗೂ ಗೊತ್ತಾಗಬಾರದು ಹಂಗ ನಮಗೆ ಕರೆದುಕೊಂಡು ಹೋಗುತ್ತಿದ್ದ. ಆ ಕಡೆ ಭಜನಾ ನು ನಡೆದಿರಬೇಕು ಈ ಕಡೆ ಚಹಾನು ಕುಡಿದು ಕುಡಿದಿರಬೇಕು ಹಿಂಗ ಎರಡೂ ಕೆಲಸಾನೂ ಆಗಬೇಕು ನಾವೆಲ್ಲ ಹೋಗುವಷ್ಟು ಹೊತ್ತಿಗೆ ಮುಲ್ಲಾ ಮಠಪತಿ ಪದ ಹಿಡಿದಿನ್ರಿ ಮಡಿಕೇಶ್ವರದವರು ಬಜನಾಪದ ಹಾಡ್ತಿದ್ರು ಮಡಿಕೇಶ್ವರದವರು ಕೇಳುತ್ತಾರೆ -

ಶರಣ್ರೀ ಈ ಪದವೀಧರ ಆಡುಪದ ಎದುರಾಗದ ?
ಅದು ಎದರಾಗದ ಇವನೌವನ,ಇದು ದಾಸರಿಗೆ ಹುಟ್ಟಿದವರು ಹಾಡ್ತಾರೆ ಅಂದೆ ನಾನು.ಹುಲ್ಲೂರು ಶರಣ ಹಾಡ ಮುಗಿಸಿ ನಮ್ಮ ಹಿಂದೂ ನಿಂತಾನ ಮತ್ತು ನಾವು ಅನ್ನೋದನ್ನ ಕೇಳ್ಯಾನ. ಅದನ್ನು ಕೇಳಿ ಏನಂದ್ರಿ ...?ಅಂದ.

ನಾನಂತೂ ಇದು ದಾಸರಿಗೆ ಹುಟ್ಟಿದವರು ಆಡ್ತಾರ ಅಂದಿನಿ.
"ಯಾಕ್ರಿ? ಅಂದ..... "
"ಮತ್ತೇನು...? ಆದ ಅದರಾಗ . ಮುಲ್ಲಾ ಅಂದ ಮನಸ್ಸು ಅಂತ ಹೇಳುತ್ತಿದಿ ಮತ್ತ ಮಠಪತಿ ಅಂದ್ರೆ ಅಜ್ಞಾನ ಅಂತ ಹಾಡ್ತಿರಿ. ಮತ್ತು ಮಠಪತಿ ಪಾದ ಭಕ್ತರೆಲ್ಲ ತೊಳ್ಕೊಂಡು ಕುಡಿತಾರ ಅಂತ ಹೇಳ್ತಿದಿ. ಅಜ್ಞಾನಿ ಪಾದ ಭಕ್ತರು ತೊಳೆದು ಕುಡಿತಾರೇನು ? ಮುಲ್ಲಾಅಂದ್ರೆ ಮನಸ್ಸು ಅಂತ ಹೇಳುತ್ತೀರಿ. ಮುಲ್ಲಾ ಅಂದ್ರ ಅಲ್ಲಾ . ಅಲ್ಲಾಹೋಗಿ ಮುಲ್ಲಾ ಆಗ್ಯಾನ. ಮುಲ್ಲಾನ ಅವತಾರ ಅಲ್ಲಾ. ಅಲ್ಲಾನ ಅವತಾರ ಮುಲ್ಲಾ ಮನಸ್ಸು ಅಂತ ಹೇಳುತ್ತಿ ಇದು ಯಾವ ಗ್ರಂಥದೊಳಗ ಆದ. "

"ಏ ಬಳಬಟ್ಟೀಗಿ ನಡ್ರಿ ಅಂದಾ. "
"ಯಾಕ...?"
"ನಡ್ರಿ ನಮ್ಮ ಗುರುಗಳ ಹತ್ರ "
"ಕರ್ಕೊಂಡು ಬಾ ನಿಮ್ಮ ಗುರುಗಳಿಗೆ ನನ್ನ ಹತ್ರ " ಅಂದ್ಯ. ಅವರಿಗನ್ನು ಅದೇನೆಂದರೆ ಹಳ್ಳೂರ್ ಶರಣ ನಿಮ್ಗ ಕರ್ಕೊಂಡು ಬಾ ಅಂದಾನಂತೆ ಹೇಳು. ಅಷ್ಟು ಅನ್ನುಕ ಅವ ಗಪ್ಪ ಆದನು. ಚಹಾ ಕುಡಿದಂಗ ಬೆಳತಾನ ಬಳಬಟ್ಟಿಯವರು ಭಜನಾ ಮಾಡಿದರು.

"ಕತ್ತೇನು ಬಲ್ಲದು ಕರಿಗಡಬಾ. ದಂಟು ತಿನ್ನುವ ಸ್ವಭಾವ ಹಂಗ ಹಿಂಗ ಏನೇನೋ ಪದ ಹಾಡಿದ. "
"ಹಿಂಗ ಹಾಡಕ್ಕ ಹತ್ತಿಂದ ನಮ್ಮೂರ್ ಮಂದಿಗೆ ಸಿಟ್ಟು ಬರಲಕ್ಕ ಹತ್ತಿತು. "
" ಏ ಬಸವಂತ ಬಾ ಇಲ್ಲಿ ? ಅಂವಾ ನಮ್ಮನ್ನು ಬೈದು ಬೈದು ಹಾಡಕ್ಕ ಹತ್ಯಾನ . ನಮಗೇನೂ ಬೈಯು ಹಂಗಿಲ್ಲ ಅವಾ ' ಅವನು ಪದವು ಅಲ್ಲ ಮಹಾತ್ಮರು ಬರೆದಾರ. ಗುಣಗಳನ್ನು ಬೈದು ಬೈದು ಹೇಳ್ಳಾರ ಅಂದ್ರು. ತಡಿಲಿಲ್ಲ ನಮ್ಮೂರವರು ಸಿಟ್ಟು ಬಂದು ನಮ್ಮ ಹುಡುಗರು ಖಡಕ್ ನಿಂತ್ಬಿಟ್ರು. "
"ಬೆಳಗಾನ ಆತು ಬೆಳಿಗ್ಗೆ ಎದ್ದ ನಂತರ ನಮ್ಮೂರಾಗ ಮಠ ಆದ ಬಳಗಾನೂರದಾಗ, ಅಲ್ಲಿಗೆ ಎಲ್ಲರೂ ಭಜನಾದವರು ಹೋಗ್ಯಾರ್ರೀ ಮತ್ತು ಎಲ್ಲರ ಕಡೆಯಿಂದ ಒಂದೊಂದು ಭಜನಾ ಪದ ಹಾಡಿಸುತ್ತಾರೆ. ನಾನು ಇಲ್ಲೇ ಮೆಲ್ಲಗೆ ಮಾತನಾಡಿಕೊಂಡು ಹೊಂಟೆ, ಅವರು ಮುಂದೆ ಹೋಗ್ಯಾರ ಆ ಪದವೀಧರನಿಗೆ ಹಾಡಲಿಕ್ಕೆ ಹಚ್ಚಾರು . ಅಲ್ಲಿನೂ ಮುಲ್ಲಾ ಮಠಪತಿ ಪದ ಹಿಡದಾನ. ಮಠದ ಮುತ್ಯಾ ಸಿಕ್ಕಾಪಟ್ಟೆ ಜ್ಞಾನಿ. ಹುಡುಗರಿಗೆ ಕರೆದು ಒಂದು ಹಗ್ಗ ತಗೊಂಡು ಪದವೀಧರ ಮಾಸ್ತ್ರಗ ಕಟ್ಟಿ ಹಾಕ್ರಿ ಅಂತ ಹೇಳಿ ಕಳಶ್ಯಾರು. "

"ಮುಂದೆ ಭಜನಾ ಮಾಡೋ ಮಂದಿ ನಮ್ಮ ಮಂದಿ ಎಲ್ಲರಿಗೂ ಕಾಲ್ ಕಾಲ್ ಹಿಡ್ಕೊಳ್ಳಕ್ ಹತ್ತಿದ. ಇನ್ನು ಹಳ್ಳೂರ ಅವರು ಬಂದರು ಅಂದ್ರ ನಮ್ಮ ಬಜನಾ ಕಾರ್ಯಕ್ರಮ ನೂ ಕೆಟ್ಟೋಗ್ತದ. ಅವಂಗ ಬಿಟ್ ಬಿಡ್ರಿ ಮುತ್ಯಾಅಂದು ಕೂಡಲೇ ಮಠದ ಗುರುಗಳು ಅವನಿಗೆ ಬಿಟ್ಟುಕೊಟ್ಟರು. "

"ನಾವು ಅಲ್ಲಿಗೆ ಹೋಗುದ್ರಾಗ ಎಲ್ಲರೂ ಮರಳಿ ಬಂದು ಬಿಟ್ರು. "

"ಯಾಕ್ರಪ್ಪ ಅಂತ ಕೇಳಿದೆ . "

"ಇಲ್ಲ ಭಜನಾ ಮುಗೀತು ಬರ್ರಿ ಅಂತ ಬಂದ ಗುಡಿಯ ಮುಂದೆ ಕುಂತಿವ್ರಿ. ನಮ್ ಕಡೆ ಹಗುರವಾಗಿ ಪದವೀಧರ ಶರಣ ಬಂದು- "

"ತಪ್ಪಾತರಿ ಬಸಪ್ಪ ಶರಣರ ಅಂದ ಕೈ ಮುಗಿದ. " ಯಾಕ್ರೀ ಅಂತ ನಾ ಅಂದೆ, ಇಲ್ರೀ ಇನ್ಮ್ಯಾಗ ಮುಲ್ಲಾ ಮಠಪತಿ ಪದ ಎಲ್ಲಿಯೂ ಹಾಡುವುದಿಲ್ಲತಪ್ಪಾಯ್ತು ಅಂದ.

"ಯಾಕೋ ತಂದೆ "ಅಂದೆ

"ಇಲ್ಲ ಶರಣ್ರ ನಾನು ಸುಮ್ಮ ಸುಮ್ಮನೆ ನಿಮ್ಮ ಬಗ್ಗೆ ಏನೇನೋ ತಿಳಿದುಕೊಂಡಿದ್ದೆ ತಪ್ಪಾಯ್ತು ಬಿಡ್ರಿ ಅಂದ. "

" ಹಿಂಗೆಲ್ಲ ಆಗೇದ ಬಿಡ್ರಿ. ನನಗೇನು ಇಲ್ಲ ಜನರಿಗೆ ತಪ್ಪು ಸಂದೇಶ ಹೋಗಬಾರದು ಅನ್ನೋದೇ ನನ್ನ ಉದ್ದೇಶ. ನಿದ್ದಿಗೆಟ್ಟು ಏನೋ ಒಂದೆರಡು ತತ್ವಪದ , ಬಜನಾಪದ ಕೇಳಬೇಕು ಅಂತ ಬಂದು ಕುಂತ್ ಮಂದಿಗೆ ನಾವು ಏನೇನು ಹಾಡಿದೆವು ಅಂದ್ರೆ ಅವರಿಗೆ ಮೋಸ ಮಾಡಿದ ಹಂಗ, ಅದು ಅವರಿಗೆ ಮಾಡುವ ಮೋಸ ಅಷ್ಟೇ ಅಲ್ಲ. ದೇವರಿಗೆ ಮೋಸ ಮಾಡಿದಾಂಗ ಆಗ್ತದ ಅಲ್ಲೇನ್ರಿ.....?"

ಮುಂದುವರಿಯುತ್ತದೆ ….

ದೇವೂರಕ್ಕೆ ಹೋದಾಗಿನ ಘಟನೆ –
ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.