ಲವಲವಿಕೆ ಟ್ರೆಂಡಿಂಗ್
ಈಗಾಗಲೇ ಅಮೊರಾ ಅಮೊರಾ ಹಾಡು ಸೂಪರ್ ಹಿಟ್ ಆಗಿ,ಸಿಕ್ಕಾಪಟ್ಟೆ ರೀಲ್ಸ್ ಆಗಿ ಎಲ್ಲ ಕಡೆ ವೈರಲ್ ಆದ ಖುಷಿಯ ಸಂಭ್ರಮದಲ್ಲಿಯೇ ನಾವು ಮತ್ತೊಂದು ಹಾಡು ನಿಮ್ಮೆಲ್ಲರ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆವು,ಎಂದು ಪ್ರೀತಿಯಿಂದ ಮಾತು ಶುರು ಮಾಡಿದ,
ಕೃಷ್ಣ ಅಜೇಯ್ ರಾವ್.
ಹೆಣ್ಣು ಅಂದ್ರೆ ಸುಂದರ,ಜಗತ್ತು ಸುಂದರವಾಗಿ ಕಾಣೋದೇ ಹೆಣ್ಣು ಮಕ್ಕಳಿಂದ,ನಾವು ಹೆಣ್ಣನ್ನು ಗೌರವಿಸಬೇಕು.
ಈ ಹಾಡಲ್ಲಿ ನೀವು ಗಮನಿಸಿದರೆ,
ಬೃಂದಾ ಆಚಾರ್ಯ ಮತ್ತು ನನಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಪ್ರಾಪರ್ ಪ್ಲಾನ್ ಮಾಡಿಯೇ,
ನಾನು ಇನ್ನೂ ತರುಣ ಹುಡುಗನಂತೆ ನಂತೆ ಕಾಣ್ತಾ ಇರೋದಕ್ಕೆ ಕಾರಣ,ದೇವರ ಹತ್ರ ಕೇಳಿದ್ದೀನಿ ನನಗೆ ಏಜ್ ಆಗೋದನ್ನು ನಿಲ್ಲಿಸು ಅಂತಾ,ಎಂದು ಹಾಸ್ಯ ಚಟಾಕಿ ಹಾರಿಸಿದರು. ಹಾಗೆ ನನ್ನ ಮತ್ತು ಕವಿರಾಜ್ ಸ್ನೇಹ ಸುಮಾರು 25 ವರ್ಷದ್ದು,
ನಕುಲ್ ಅಭಯಂಕರ ಮ್ಯೂಸಿಕ್ ಸಖತ್,ಚಿತ್ರದ ಬಿಜಿಎಂ ಬೇರೆ ರೇಂಜ್ ನಲ್ಲಿದೆ,ಅದನ್ನು ಥಿಯೇಟರ್ ನಲ್ಲಿ ನೋಡಿ ಖುಷಿ ಪಡ್ತೀರಾ ಎಂದು ಹೇಳಿದರು.
ನಗುತ್ತಲೇ ಮಾತು ಶುರು ಮಾಡಿದ ನಾಯಕಿ,
“ಬೃಂದಾ ಆಚಾರ್ಯ” ಪಾರ್ಟನರ್ ಚಿತ್ರ ಒಂತರ ಗೊಂಬೆಗಳ ಸಂಗ್ರಹ ಇದ್ದ ಹಾಗೆ,ತುಂಬಾ ಕ್ಯೂಟ್ ಆದಂತಹ ಕಥೆ,ಇದೇ ಮೊದಲ ಬಾರಿಗೆ ನನ್ನ ಸಿನಿಮಾದ ಕಾರ್ಯಕ್ರಮಕ್ಕೆ ನಮ್ಮ ಅಪ್ಪ – ಅಮ್ಮ ಮತ್ತು ಕುಟುಂಬ ಬಂದಿದ್ದಾರೆ. ಅಜೇಯ್
ಕಾಲಿಗೆ ಏಟಾಗಿದ್ದ ಸಮಯ ನನಗೆ ಇನ್ನೂ ನೆನಪಿದೆ,ಸಿನ್ಮಾ ಶೂಟಿಂಗ್,ಸಾಹಸ ದೃಶ್ಯಗಳು ಅಂದಾಗ ಅಜೇಯ್ ಎನರ್ಜಿ ಎಲ್ಲಿಂದ ಬರ್ತಾ ಇತ್ತೋ ಗೊತ್ತಿಲ್ಲ,ವಾವ್ ಅಜೇಯ್ ಮಾತ್ರ ಸೂಪರ್ ಆಕ್ಟರ್, ಎನ್ನುತ್ತ ಇಡೀ ತಂಡಕ್ಕೆ ಧನ್ಯವಾದ ಹೇಳಿದರು
ಸಂಗೀತ ನಿರ್ದೇಶಕ,ನಕುಲ್ ಅಭಯಂಕರ ಮತ್ತು ಗಾಯಕಿ ರಮ್ಯ ಮಾತನಾಡಿ,ಅಮೋರ್ ಅಮೋರ್ ಹಾಡು ಹಿಟ್ ಕೊಟ್ಟಿದ್ದೆ,ನಾನು ಮಾಡುವ ಮತ್ತೊಂದು ಹಾಡು ಇನ್ನೂ ಚೆನ್ನಾಗ್ ಆಗ್ಬೇಕು ಅನ್ನೋ ಆಸೆ ಇತ್ತು,ದೇವರ ಆಶೀರ್ವಾದ ಲವಲವಿಕೆ ಹಾಡು ಹಿಟ್ ಆಗಿದೆ,ನನ್ನ ಸಂಗೀತ ನಿರ್ದೇಶನದ ಹಾಡಿಗೆ ರಮ್ಯ ಮತ್ತು ಕಾರ್ತಿಕ್ ಧ್ವನಿಯಾಗಿದ್ದಾರೆ ಎಂದರು.
ನಮ್ಮ ಮನಸ್ಸು ಶಾಂತವಾಗಿದ್ದರೆ ಎಲ್ಲವೂ ಶಾಂತವಾಗಿರತ್ತೆ,ನಾನೊಬ್ಬ ಆಧ್ಯಾತ್ಮ ಜೀವಿ ಎಂಬ ಗಟ್ಟಿ ಮಾತುಗಳೊಂದಿಗೆ,ಎಲ್ಲ ನಿರ್ಮಾಪಕರಿಗೂ ಎನರ್ಜಿ ಕೊಟ್ಟವರು,
ಪಾರ್ಟನರ್ ನಿರ್ಮಾಪಕ ಹರೀಶ್.,ಒಂದೊಳ್ಳೆ ಚಿತ್ರ ಮಾಡಿದ್ರೆ ಜನ ಯಾಕ್ ಸಿನ್ಮಾ ನೋಡಲ್ಲ, ನೋಡಿಯೇ ನೋಡ್ತಾರೆ,ನಾನು ತುಂಬಾ ಪಾಸಿಟಿವ್ ಪರ್ಸನ್,ಹೀರೋ ಅಜೇಯ್ ರಾವ್ ಮತ್ತು ನಾನು ಆವತ್ತೇ ಮಾತಾಡಿದ್ವಿ ಪಾರ್ಟನರ್ ಚಿತ್ರದ ಪ್ರತಿ ಹಾಡು ಹಿಟ್ ಆಗತ್ತೆ ಅಂತಾ ಡಿಸ್ಕಸ್ ಮಾಡಿದ್ದು ಸತ್ಯ ಆಗಿದೆ.
ತುಂಬಾ ಒಳ್ಳೆಯ ಸೆನ್ಸಿಬಲ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಶಿವತೇಜಸ್ ಮಾತನಾಡಿ,ಅಮೋರ್ ಅಮೋರ್ ಹಿಟ್ ಆದಾಗಲೇ ನಮಗೆ ಸೆನ್ಸ್ ಆಗಿತ್ತು ಲವಲವಿಕೆ ಹಾಡು ಕೂಡಾ ಹಿಟ್ ಆಗತ್ತೆ,ಕಾರಣ ಕವಿರಾಜ್ ಬರೆದ ಹಾಡು, ಪಾಂಡಿಚೇರಿಯಲ್ಲಿ ಚಿತ್ರೀಕರಣ ಆಗಿದೆ, ತುಂಬಾ ಕಲರ್ಫುಲ್ ಆದಂತಹ ಬ್ಯಾಕ್ಡ್ರಾಪ್ ನಲ್ಲಿ ಪ್ಲಾನ್ ಮಾಡಿದ ಕಂಟೆಂಟ್ ಇದು.
ಫ್ಯಾಮಿಲಿ ಥಿಯೇಟರ್ ಗೆ ಬಂದಾಗ ಮಾತ್ರ ಚಿತ್ರಗಳು ಗೆಲ್ಲೋದು, ಈಗ ಸಧ್ಯದ ಪರಿಸ್ಥಿತಿ ಅದೇ ತರಹ ಆಗಿದೆ,ಸಣ್ಣ ಬಜೆಟ್ ನಲ್ಲಿ ಸಿದ್ಧವಾದ,ಪ್ರೇಮದ ಊರಲಿ ಅನ್ನೋ ಚಿತ್ರ,ದೊಡ್ಡ ಹಿಟ್ ಆಗಿದೆ ಇದು ಕನ್ನಡಿಗರಿಗೆ ಸಿಕ್ಕ ಗೌರವ ಎಂದರು.
ಚಿತ್ರ ಸಾಹಿತಿ ಕವಿರಾಜ್,ಲವಲವಿಕೆ ಅನ್ನೋ ಪದವೇ ಸಖತ್ ಆಗಿದೆ, ರವಿ ಬೆಳಗೆರೆ ಲವಲವಿಕೆ ಬಗ್ಗೆ ಬರಿತಾ ಇದ್ದ ಬರಹ,ಇವತ್ತಿಗೂ ಟ್ರೆಂಡಿಂಗ್ ನಲ್ಲಿದೆ ಎಂದರೆ ತಪ್ಪಿಲ್ಲ.
ಅಜೇಯ್ ಮತ್ತು ಬೃಂದಾ ಜೋಡಿ ನೋಡುಗ ವೀಕ್ಷಕ ಪ್ರಭುಗಳಿಗೆ ತುಂಬಾ ಒಳ್ಳೇ ಮಜಾ ಕೊಡತ್ತೆ ಅಷ್ಟೇ ಅಲ್ಲದೆ ತುಂಬಾ ವರ್ಷದಿಂದ ಪ್ರತಿ ಸಿನಿಮಾವನ್ನು ಸಹ ಅಷ್ಟೇ ಪ್ರಾಮಾಣಿಕತೆಯಿಂದ ಮಾಡುವ ಅನುಭವಿಗಳು ಇಲ್ಲಿದ್ದಾರೆ..
ರವೀ ಸಾಸನೂರ್ MasterNews365.Com

