Thursday, 24 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “36” ತತ್ವ ಪದಗಳ “ಮರ್ಮ”
- ಕ್ರೀಡೆ | ಆಧ್ಯಾತ್ಮ | ರಾಜಕೀಯ

“36” ತತ್ವ ಪದಗಳ “ಮರ್ಮ”

36 ತತ್ವಗಳ ಮರ್ಮವನ್ನು ತಿಳಿದು ಮೂರೈದು ಮದಗಳ ಕಳೆದು, ಅಂದ್ರ ಮೂರು ತಾಪತ್ರಯಗಳು ಅದಾವ್ರಿ.. ಅವುಗಳೆಂದರೆ ಆಧ್ಯಾತ್ಮಿಕ, ಆದಿ ದೈವಿಕ , ಆದಿಭೌತಿಕ ಇವು ದೇಹದ ತಾಪತ್ರೆಗಳು. ಇನ್ನ  ಐದು ವಿಷಯಗಳು ಅದಾವು. ಶಬ್ದ, ಸ್ಪರ್ಶ, ರೂಪ, ರಸ ,ಗಂಧ , ಈ ವಿಷಯಗಳು ಕಳೆಯಬೇಕು. ಆಮೇಲೆ ಎಂಟು ಮದಗಳು ಅದಾವ್ರಿ – ಅಷ್ಟಮದಗಳು – ಸುಳಿದು ತಾರಕ ಅಂದ್ರು ನಕ್ಷತ್ರ ನಕ್ಷತ್ರದಂತೆ ಹೊಳೆಯುವ ಬ್ರಹ್ಮನ ಪ್ರಕಾಶವನ್ನು ನೋಡಿದಾಗ ಮುಕ್ತಿ ಸಿಕ್ತದ . ತನ್ನ ತಾನರಿದೊಡೆ ಮುಕ್ತ […]


36 ತತ್ವಗಳ ಮರ್ಮವನ್ನು ತಿಳಿದು ಮೂರೈದು ಮದಗಳ ಕಳೆದು, ಅಂದ್ರ ಮೂರು ತಾಪತ್ರಯಗಳು ಅದಾವ್ರಿ.. ಅವುಗಳೆಂದರೆ ಆಧ್ಯಾತ್ಮಿಕ, ಆದಿ ದೈವಿಕ , ಆದಿಭೌತಿಕ ಇವು ದೇಹದ ತಾಪತ್ರೆಗಳು. ಇನ್ನ  ಐದು ವಿಷಯಗಳು ಅದಾವು. ಶಬ್ದ, ಸ್ಪರ್ಶ, ರೂಪ, ರಸ ,ಗಂಧ , ಈ ವಿಷಯಗಳು ಕಳೆಯಬೇಕು. ಆಮೇಲೆ ಎಂಟು ಮದಗಳು ಅದಾವ್ರಿ –

ಅಷ್ಟಮದಗಳು –

  1. ಬಲಮದ——– ——-ಶಕ್ತಿ
    2.ಕುಲಮದ ———– —ವಂಶ
  2. ಧನಮಧ – —- —– – ಸಂಪತ್ತು
    4.ರೂಪ ಮದ———- —ಸೌಂದರ್ಯ
    5.ಯವ್ವನ ಮದ ———- ಪ್ರಾಯ
    6.ವಿದ್ಯಾ ಮದ ————-ಶಿಕ್ಷಣ
  3. ಪರಿವಾರಮದ——— ಕುಟುಂಬ
  4. ಅಧಿಕಾರಮದ———- ನಾಯಕತ್ವ ಹಿಂಗ ಕೆಲವೊಂದು ಮಗ ಇದ್ದರೂ ನಮಗೆ ಸೊಕ್ಕು ಅಹಂಕಾರ ಬರುತ್ತದೆ ಇದನ್ನು ಬಿಟ್ಟರೆ ಮನುಷ್ಯ ಸುಖವಾಗಿ ಇರ್ತಾನೆ ಈ ಮದಗಳು ನಮ್ಮಲ್ಲಿ ಇರಬಾರದು ಈ ಮದಗಳನ್ನು ಕಳೆದು ಪೂರ್ಣ ತಾರಕ ಬ್ರಹ್ಮದ ಪ್ರಭೆಯೊಳ್ ಸುಳಿದು ಅಂದರೆ ಮದಗಳನ್ನು ಕಳೆದು ತಾರಕ ಅಂದ್ರೆ ನಕ್ಷತ್ರ ನಕ್ಷತ್ರಕ್ಕ ತಾರಕ ಅಂತಾರೆ. ಈಗ ಹೊರಗ ಜಗತ್ತು ಕಾಣಿಸುತ್ತದೆ ಹೊರಗೆ ನೋಡಕ್ಕಾಗೋದಿಲ್ಲ ಇನ್ನೊಂದು ಕಣ್ಣು ಐತಿ ಒಳಗಿನ ಕಣ್ಣು ಒಳಗಿನ ಕಣ್ಣಿಂದ ಜಗತ್ತು ಕಾಣುತ್ತದೆ ಅದಕ್ಕೆ ಜ್ಞಾನದ ಕಣ್ಣು ಅಂತಾರ ಅದು ಹೆಂಗ್ ನೋಡಬೇಕು ಅಂದ್ರೆ ಯೋಗದಾಗ್ ನೋಡಬೇಕು ಹೊರಗಿನ ಕಣ್ಣು ಮುಚ್ಚಿ ಒಳಗಿನ ಕಣ್ಣಿಂದ ನೋಡಬೇಕು ಒಬ್ಬ ಸೂರ್ಯನಿಂದ ಇಡೀ ಬ್ರಹ್ಮಾಂಡಕ್ಕೆ ಬೆಳಕಾಗುತ್ತದೆ ಇಂತಹ ಒಂದು ಕೋಟಿ ಸೂರ್ಯ ಪ್ರಕಾಶ ಒಳಗ ಕಾಣುತ್ತದೆ. ಪೂರ್ಣ ತಾರಕ ಬ್ರಹ್ಮದ ಪ್ರಭೆಯೊಳು

ಸುಳಿದು ತಾರಕ ಅಂದ್ರು ನಕ್ಷತ್ರ ನಕ್ಷತ್ರದಂತೆ ಹೊಳೆಯುವ ಬ್ರಹ್ಮನ ಪ್ರಕಾಶವನ್ನು ನೋಡಿದಾಗ ಮುಕ್ತಿ ಸಿಕ್ತದ . ತನ್ನ ತಾನರಿದೊಡೆ ಮುಕ್ತ ಆರು ಬಾಗಿಲು ಮುಚ್ಚಿ ನಡೆದು ಅಂದ್ರೆ
ಇವು ಆರು ಬಾಗಿಲು ಅದಾವು

                     ಆಧಾರ ,ಸ್ವಾದಿಷ್ಟ ,ಮಣಿಪುರ ,ಅನಾಹತ ,ವಿಶುದ್ಧಿ, ಅಗ್ನಿ. ಈ ಆರು ಬಾಗಿಲುಗಳನ್ನು ಮುಚ್ಚಬೇಕು ಮುಚ್ಚಿ ಒಳಗೆ ನೋಡಿದಾಗ ಬ್ರಹ್ಮ ಕಾಣಿಸ್ತಾನ ಆರು ಬಾಗಿಲು ಮುಚ್ಚಿ ನಡೆದು ಮುಂದೆ ಮೂರು ನದಿಯ ದಾಟಿ ದಾರಿಯ ಹಿಡಿದು ರೇಚಕ,ಪೂರಕ ,ಕುಂಭಕ ,ಗಂಗಾ ,ಯಮುನಾ, ಸರಸ್ವತಿ ಇವುಕ ನದಿಗಳು ಅಂತಾರೆ.

  ರೇಚಕ ಅಂದ್ರೆ ಒಂದು ಮೂಗಿನ ವಾಯು ಹೊಳ್ಳಿಯಿಂದ ಹೊರಗೆ ಬಿಡುವುದು.
  ಪೂರಕ ಅಂದ್ರೆ ಒಂದು ಮೂಗಿನ ಹೊಳ್ಳಿಯಿಂದ ವಾಯುವನ್ನು ಒಳಗೆ ಎಳೆದುಕೊಳ್ಳುವುದು.
     ಕುಂಭಕ ಅಂದ್ರೆ ನಡು ಉಸಿರು ಹಿಡಿಯುವುದು ಇದಕ್ಕ ರೇಚಕ ಪೂರಕ ಕುಂಭಕ ಅಂತಾರ. ಅದಕ್ಕೆ ಆರು ಬಾಗಿಲು ಮುಚ್ಚಿ ನಡೆದು ಮುಂದೆ ಮೂರು ನದಿಯ ದಾಟಿ ದಾರಿಯ ಹಿಡಿದು ಬೋರೆಂಬ ಸರ್ಪ ತಡೆದು ಇಲ್ಲಿ ಬೋರಂಬ ಸರ್ಪ ಅಂದರೆ ಯಾವುದಪ್ಪ .... ಅದು ಜೀವ. ಜೀವ ಹಲವು ವಿಷಯಗಳಿಗೆ ಹಿಡಿತದ ಅದನ್ನು ಹೊರಗೆ ಎಲ್ಲಿ ಬಿಡಬಾರದು ಅದು ಪ್ರಕಾಶದೊಳಗ ಮುಳುಗಬೇಕು.

     ಮೇಲಕ್ಕೆ ಏರಿ ಸುಷುಮ್ನೆ ಸುಧೆಯನ್ನು ಕುಡಿದು ಸುಮ್ಮನೆ ನಾಡಿ ಅಂತ ಒಂದು ನಾಡಿ . ( ಅದು ಸುಷುನ್ನ ನಾಡಿ  ಬೃಕುಟಿಯ ಮಧ್ಯ ಇರುತ್ತದೆ) ಅದರ ಸುಧೆ ಅಂದರೆ ಅಮೃತ. ಅಮೃತ  ಎಲ್ಲಿಂದ ಬೀಳುತ್ತದ ಅಂದರೆ ಈ ಬ್ರಹ್ಮರಂದ್ರದಿಂದ ಬೀಳುತ್ತದ. ಆ ಅಮೃತ ಕುಡಿಯಬೇಕು. ಅದನ್ನು ಕುಡಿದವನು ಮುಕ್ತನಾಗತಾನ.

“ಒಂದನ್ನು ಎರಡೊಂದು ಮಾಡಿ ಅಲ್ಲೇ
ಒಂದನ್ನು ಒಂಭತ್ತು ತೆರೆದಿಂದ ನೋಡಿ
ಮುಂದಾರು ಮೂರೊಂದು ಕೂಡಿ
ಸಂದು ನಿಂದೊಂದರಿವು ತಾನಲ್ಲದೆ ನೋಡಿ
ಒಂದನ್ನು ಎರಡೊಂದು ಮಾಡಿ …. ಒಂದು ಅಂದಿದ್ದೇನು ? ಬ್ರಹ್ಮ. ಬಯಲು ಆತ್ಮ ಅದು ಒಂದು.
ಎರಡಾಯ್ತು ಅದೇನು ? “

     ಸಗುಣ, ನಿರ್ಗುಣ, ಶಿವ ಮತ್ತು ಜೀವ ಕೂಡಿಕೊಂಡು ಶಿವ ಆಗಿದೆ. ಪರಬ್ರಹ್ಮ ಬಯಲದು. ದೇಹ ಬಂತಿಲ್ಲೊ ಅಲ್ಲಿ ಜೀವ ಬಂತು, ದೇಹ ಸಗುಣ ಆತ್ಮ ನಿರ್ಗುಣ. ಅದು  ಒಂದು ಹೋಗಿ ಎರಡಾಯ್ತು. ಶಿವ ಮತ್ತು ಜೀವ ಆಗ್ಯಾದ.. ಆ ಶಿವನನ್ನು ತೆಗಿಬೇಕು ,ಜೀವವನ್ನು ತೆಗಿಬೇಕು. ಶಿವನಿಗೂ ಉಪಾದಿ ಆದ . ಶಿವಮಾಯೆಯನ್ನು ಕೂಡಿಕೊಂಡು ಮಹೇಶ್ವರ ಆಗ್ಯಾನ • ಅವನಿಗೂ ಉಪಾದಿ ಆದ .

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.