Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *ಅನಾವರಣವಾಯ್ತು ಯಶ್* “ರಾವಣ ತಾಂಡವ”
- ಸಿನಿಮಾ

*ಅನಾವರಣವಾಯ್ತು ಯಶ್* “ರಾವಣ ತಾಂಡವ”

ರಾಕಿಂಗ್ ಸ್ಟಾರ್ ಯಶ್ ‘ರಾವಣ ತಾಂಡವ’ ಅನಾವರಣ, ಮುಂಗಡ ಟಿಕೆಟ್ ಬುಕಿಂಗ್ ಆರಂಭ! ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮುಂಗಡ ಬುಕಿಂಗ್‌ಗಳು ಭಾರತಾದ್ಯಂತ ಅಕ್ಟೋಬರ್ 20ರಿಂದ ಅಧಿಕೃತವಾಗಿ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ದಸರಾ ಹಬ್ಬದ ವಿಶೇಷವಾಗಿ ಚಿತ್ರತಂಡವು ರಾಕಿಂಗ್ ಸ್ಟಾರ್ ಯಶ್ ಅವರ ‘ರಾವಣ’ ಅವತಾರದ ವಿಶೇಷ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಈ ಹೊಸ ವೀಡಿಯೊದಲ್ಲಿ ಲಂಕೆಯ ಪ್ರಬಲ ದೊರೆ ರಾವಣನ ಪಾತ್ರದಲ್ಲಿ ಯಶ್ ಅವರ ಭರ್ಜರಿ […]

ರಾಕಿಂಗ್ ಸ್ಟಾರ್ ಯಶ್ ‘ರಾವಣ ತಾಂಡವ’ ಅನಾವರಣ, ಮುಂಗಡ ಟಿಕೆಟ್ ಬುಕಿಂಗ್ ಆರಂಭ!

ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮುಂಗಡ ಬುಕಿಂಗ್‌ಗಳು ಭಾರತಾದ್ಯಂತ ಅಕ್ಟೋಬರ್ 20ರಿಂದ ಅಧಿಕೃತವಾಗಿ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ದಸರಾ ಹಬ್ಬದ ವಿಶೇಷವಾಗಿ ಚಿತ್ರತಂಡವು ರಾಕಿಂಗ್ ಸ್ಟಾರ್ ಯಶ್ ಅವರ ‘ರಾವಣ’ ಅವತಾರದ ವಿಶೇಷ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಈ ಹೊಸ ವೀಡಿಯೊದಲ್ಲಿ ಲಂಕೆಯ ಪ್ರಬಲ ದೊರೆ ರಾವಣನ ಪಾತ್ರದಲ್ಲಿ ಯಶ್ ಅವರ ಭರ್ಜರಿ ಹಾಗೂ ಗಂಭೀರ ರೂಪವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದೆ.

ಹಿಂದೂ ಪುರಾಣಗಳ ಪ್ರಕಾರ ‘ತಾಂಡವ’ ಎಂದರೆ ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಂಕೇತವಾಗಿರುವ ಶಿವನಿಗೆ ಸಂಬಂಧಿಸಿದ ದೈವಿಕ ನೃತ್ಯ. ಶಿವನ ಪರಮ ಭಕ್ತನಾದ ರಾವಣನಿಗೆ ‘ಶಿವ ತಾಂಡವ ಸ್ತೋತ್ರಂ’ ಅತ್ಯಂತ ಪ್ರಮುಖವಾದುದು. ದಸರಾ ಹಬ್ಬದ ಈ ವಿಶೇಷ ಅನಾವರಣವು ರಾವಣನ ಭಕ್ತಿ, ಬಲ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ದೊಡ್ಡ ಪರದೆಯ ಮೇಲೆ ಹೇಗೆ ಬಿಂಬಿಸಲಾಗಿದೆ ಎಂಬುದರ ಸುಂದರ ಝಲಕ್ ನೀಡಿದೆ. ಯಶ್ ಅವರ ಈ ಹೊಸ ಗೆಟಪ್ ಮತ್ತು ತೀವ್ರತೆಯು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ ‘ಭಗವಾನ್ ಶ್ರೀರಾಮ’ನಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ‘ರಾವಣ’ನಾಗಿ ನಟಿಸುತ್ತಿರುವುದು ಈ ಬೃಹತ್ ಮಹಾಕಾವ್ಯದ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ರಾಮಾಯಣ ಕಥೆಯನ್ನು ಅತಿ ದೊಡ್ಡ ಮಟ್ಟದಲ್ಲಿ ತೆರೆಮೇಲೆ ತರಲು ಚಿತ್ರತಂಡ ಸಜ್ಜಾಗಿದೆ.

ಈ ವಿಶೇಷ ಮ್ಯೂಸಿಕಲ್ ಯೂನಿಟ್ ಅನ್ನು ಹಿಂದಿಯಲ್ಲಿ ‘ರೈಸ್ ಆಫ್ ಅಸುರ’, ಕನ್ನಡದಲ್ಲಿ ‘ರಾವಣ ತಾಂಡವ’, ಹಾಗೂ ತಮಿಳು ಮತ್ತು ತೆಲುಗಿನಲ್ಲಿ ‘ರಾವಣ ತಾಂಡವಂ’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹಿಂದಿ ಆವೃತ್ತಿಗೆ ವಿಶಾಲ್ ದದ್ಲಾನಿ ಧ್ವನಿಯಾಗಿದ್ದು, ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದಾರೆ. ಹಾಗೆಯೇ ಕನ್ನಡ ಆವೃತ್ತಿಗೆ ರವಿ ಬಸ್ರೂರ್ ಧ್ವನಿ ನೀಡಿದ್ದು, ಕಾರ್ತಿಕ್ ಸರಗೂರ್ ಸಾಹಿತ್ಯ ಒದಗಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಡಿಎನ್‌ಇಜಿ (DNEG) ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸುತ್ತಿವೆ. ರಾಮಾಯಣ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ‘ಭಾಗ 1’ ಜಾಗತಿಕ ಮಟ್ಟದಲ್ಲಿ ನವೆಂಬರ್ 5, 2026ರಂದು ಬಿಡುಗಡೆಯಾಗಲಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.