ಪತ್ತೇದಾರಿ ಮುಹೂರ್ತ
ಪತ್ತೇದಾರಿ ಚಿತ್ರಕ್ಕೆ ಶುಭ ಹಾರೈಸಿದ ನವೀನ್ ಶಂಕರ್.
ಪತ್ತೇದಾರಿ ಹೆಸರೇ ಹೇಳುವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರವಾಗಿರಲಿದೆ ಎನ್ನಬಹುದು. ಒಂದು ಚಿತ್ರದ ಶೀರ್ಷಿಕೆಯಲ್ಲಿಯೇ ಕಥೆಯ ಎಳೆ ಏನಿರಬಹುದು ಎಂಬ ಸುಳಿವು ಸಿಕ್ಕೆ ಬಿಡುತ್ತದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪತ್ತೇದಾರಿ ಚಿತ್ರದ ಮುಹೂರ್ತ ನಡೆದಿದ್ದು,
ಶ್ರೀನಿವಾಸ ಜಯರಾಮ್ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಇದೊಂದು ಪಕ್ಕಾ ಮಾಸ್ ಪೈಸಾ ವಸೂಲ್ ಚಿತ್ರ ಇದಕ್ಕಿಂತ ಮುಂಚೆ ನಾನು ನಿರ್ದೇಶನ ಮಾಡಿರುವ ಚಿತ್ರಕ್ಕಿಂತಲೂ ಇದು ತುಂಬಾ ಬಿನ್ನವಾಗಿರತ್ತೆ ,
ಮೊಹಮ್ಮದ ಅತೀಕ್ ನಿರ್ಮಾಣದ ಈ ಚಿತ್ರದಲ್ಲಿ
ಕಿಝಾರ್ ಎಂಬ ಕಲಾವಿದ ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇರುವ ಚಿತ್ರ,ಇದೊಂದು ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಇವತ್ತಿನಿಂದ 45 ದಿನಗಳ ಕಾಲ ಶೂಟಿಂಗ್ ಪ್ಲಾನ್ ಆಗಿದೆ,ಒಟ್ಟು ಎರಡು ಹಂತಗಳಲ್ಲಿ ಶೂಟ್ ಆಗತ್ತೆ ಎಂಬ ಮಾಹಿತಿ ಕೊಟ್ಟರು.
ನಾಯಕ ನಟ ಕಿಝಾರ್ ಮಾತನಾಡಿ,ಕಥೆಗೆ ಏನು ಬೇಕು ಆ ತಯಾರಿ ಮಾಡಿಕೊಂಡಿದ್ದೇನೆ,ನಾನೊಬ್ಬ ಕಲಾವಿದ ಅಷ್ಟೇ,ನಿರ್ದೇಶಕರು ನಮ್ಮ ಕ್ಯಾಪ್ಟನ್ ಅವ್ರೆ ನಮಗೆಲ್ಲ ದಾರಿ ತೋರಿಸುತ್ತಾರೆ,ಒಂದೊಳ್ಳೆಯ ಕಥೆಗೆ ನಾಯಕನಟ ಆಗಿದ್ದರ ಬಗ್ಗೆ ಖುಷಿ ಇದೇ ಎಂದರು.ನೋಡಲು ಸ್ವಲ್ಪ ಬಾಲಿವುಡ್ ನ ಗ್ರೇಟ್ ನಟ ನಾನಾ ಪಾಟೇಕರ್ ತರಹ ಹೋಲಿಕೆ ಇರುವ, ಕಿಝಾರ್ ಪತ್ತೇದಾರಿ ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಎಲ್ಲರಿಗಿದೆ ಎನ್ನಬಹುದು.
ಪತ್ತೇದಾರಿ ಚಿತ್ರದ ನಾಯಕಿ,
ರೂಪಾ ಗೌಡ ಮಾತನಾಡಿ,
ಇದು ನನ್ನ ಐದನೆಯ ಚಿತ್ರ,ಇಲ್ಲಿಯ ತನಕ ನಾನು ಮಾಡಿದ ಎಲ್ಲ ಚಿತ್ರಗಳು ತುಂಬಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ,ಇದೊಂದು ಹೊಸ ತರಹದ ಫೀಲ್ ಇರುವ ಪಾತ್ರ.ಇದರಲ್ಲಿ ನಾನು ಪತ್ತೇದಾರಿ ತಂಡದ ಒಬ್ಬ ಮೆಂಬರ್ ಆಗಿ ನಟಿಸ್ತಾ ಇದ್ದೀನಿ.ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಎಂದರು.
ಚಿತ್ರದಲ್ಲಿ ಹಾಸ್ಯ ಕಲಾವಿದರಾದ ತುಕಾಲಿ ಸಂತು ಮತ್ತು ಸೂರಜ್ ಕೂಡಾ ನಟಿಸುತ್ತಿದ್ದು,

ನಾನು ಮಾಡಬೇಕಿದ್ದ ಪಾತ್ರವನ್ನು ನಿಮಗೆ ಕೊಟ್ಟಿದ್ದಾರೆ,ನೀವು ಮಾಡುತ್ತಿದ್ದೀರಾ ಎಂದು ತಲೆ ತಿಂದ ಸೂರಜ್ ನನ್ನು ಗೋಳು ಹೊಯ್ಯುವುದರ ಜೊತೆಗೆ ಮಾತನಾಡಿದ ತುಕಾಲಿ ಸಂತು,
ಬಹಳಷ್ಟು ಕಥೆಗಳನ್ನು ಕೇಳ್ತಾ ಇದ್ದೀನಿ ಆದರೆ ಎಲ್ಲವನ್ನೂ ಒಪ್ಪಿಕೊಳ್ಳದೆ,ಸೆಲೆಕ್ಟ್ ಮಾಡಿ ಪಾತ್ರ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದು,ನನಗೆ ಒಳ್ಳೆಯ ನಿರ್ಧಾರ ಅನಿಸಿದೆ ಎಂದರು.
ಹಾಗೆ ಸೂರಜ್ ಮಾತನಾಡಿ,ಪತ್ತೇದಾರಿ ಒಂದೊಳ್ಳೆ ಚಿತ್ರವಾಗಲಿದೆ ಎಂದರು,ಇನ್ನೂ ಸಿನಿಮಾದ ಕುರಿತ ಕೆಲಸ ಬಹಳ ಇದೆ,ಮತ್ತೊಮ್ಮೆ ಮಾತನಾಡುವೆ ಎಂದು ಎಲ್ಲರಿಗೂ ಧನ್ಯವಾದ ಹೇಳಿದರು.
ರವೀ ಸಾಸನೂರ್ MasterNews365.Com

