ಇವರೇನಾ
ಬೋನಿ ಕಪೂರ್ ??
ಬೋಳು ತಲೆ ಹೊಂದಿದ್ದ ಮತ್ತು ತಲೆ ಕೂದಲು ಕಮ್ಮಿ ಇರುವಂತಹ,ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಅದರಲ್ಲೂ ವಿಶೇಷವಾಗಿ, ದೇಶ ವಿದೇಶದ ಗ್ರಾಹಕರಿಗೆ ತಮ್ಮ “ಈಜುನಿಕ್ಸ್ ಹೇರ್ ಸೈನ್ಸ್ ” ಮೂಲಕ ಟ್ರೀಟ್ಮೆಂಟ್ ನೀಡಿ, ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗದಂತೆ ನೋಡಿಕೊಂಡು, ತಮ್ಮ ಮಳೆ ಬಂದ ಎಲ್ಲ ಗ್ರಾಹಕರಿಗೂ ನ್ಯಾಯ ಸಲ್ಲಿಸಿದ ಕೀರ್ತಿ ಮುಂಬೈ ಮೂಲದ ಡಾ.ಪ್ರದೀಪ್ ಸೇಥಿ ಯವರಿಗೆ ಹಾಗೂ ಸಂಪೂರ್ಣ ತಂಡಕ್ಕೆ ಸಲ್ಲುತ್ತದೆ.
ಡಾಕ್ಟರ್ ಪ್ರದೀಪ್ ಸೇಥಿ,”ಈಜುನಿಕ್ಸ್ ಹೇರ್ ಸೈನ್ಸ್” ಇದರ ಸಂಸ್ಥಾಪಕರು ಮತ್ತು ಅಲ್ಲಿನ ಅತ್ಯಂತ ಪ್ರಮುಖ ವೈದ್ಯರು.
ಇವರು ಬಾಲಿವುಡ್ ನ ಕ್ಯಾಥ ನಿರ್ಮಾಪಕ ಬೋನಿ ಕಪೂರ್ ಅವರ ಬೋಳು ತಲೆಗೆ ಟ್ರೀಟ್ಮೆಂಟ್ ಮಾಡುವುದರ ಮೂಲಕ 70 ಹರಿಯದ ಅವರನ್ನು 55ರ ಯುವಕನ ಹಾಗೇ ಕಾಣುವಂತೆ ಮಾಡಿದ್ದಾರೆ.
ಇದೇ ವಿಚಾರವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಬಾಲಿವುಡ್ ನ ಖ್ಯಾತ ನಿರ್ಮಾಪಕ ಬೋನಿ ಕಪೂರ್, ಮಾಧ್ಯಮ ಘೋಷ್ಠಿಯಲ್ಲಿ ಮನಸಾರೆ ಮಾತನಾಡಿದ್ದು ಹೀಗೆ.
ಕನ್ನಡ ಚಿತ್ರರಂಗದ ಲೆಜೆಂಡರಿ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ರವರ ಪಡುವಾರಳ್ಳಿ ಪಾಂಡವರು ಚಿತ್ರ ನನ್ನ ಫೇವರೆಟ್ ಚಿತ್ರ, ಅದು ಹಿಂದಿಯಲ್ಲಿ ಹಮ್ ಪಾಂಚ್ ಎಂಬುದಾಗಿ ನಿರ್ಮಾಣವಾಗಿತ್ತು, ಅಷ್ಟೇ ಅಲ್ಲದೆ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ಗೆಜ್ಜೆಪೂಜೆ ಚಿತ್ರವು ನನ್ನ ಫೇವರೆಟ್.
ವರನಟ ಡಾಕ್ಟರ್ ರಾಜಕುಮಾರ್ ಅಂದ್ರೆ ನನಗೆ ಪ್ರೀತಿ ಗೌರವ, ಅವರ ಸುಪುತ್ರರಾದ ಶಿವರಾಜಕುಮಾರ್ ಪುನೀತ್ ರಾಜಕುಮಾರ್ ಕೂಡ ನನಗೆ ಗೊತ್ತು,
ಕಿಚ್ಚ ಸುದೀಪ್ ನನ್ನ ಆಪ್ತ ಗೆಳೆಯ, ಅವರ ಜೊತೆ ಹಲವಾರು ಬಾರಿ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದೇನೆ,ಸುದೀಪ್ ಜೊತೆ ಒಂದು ಚಿತ್ರ ಮಾಡಬೇಕಿದೆ ಈ ತರಹದ ಬಹಳಷ್ಟು ಮಾತುಗಳನ್ನು ಆಡುತ್ತಲೇ, ಬೋನಿ ಕಪೂರ್ ಹೇಳಿದ್ದ ಒಂದು ಮಾತು ಕನ್ನಡಿಗರೆಲ್ಲರಿಗೂ ಖುಷಿ ತರುವಂತ ಮಾತಾಗಿತ್ತು.
2006ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರನದಲ್ಲಿ ದಾಖಲೆ ಸೃಷ್ಟಿ ಮಾಡಿದ ಈ ಕೃಷ್ಣಪ್ಪ ನಿರ್ಮಾಣದ ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಅಭಿನಯದ “ಮುಂಗಾರು ಮಳೆ” ಚಿತ್ರದ ಹಕ್ಕನ್ನ ನಾನಾಗಲೇ ಪಡೆದುಕೊಂಡಿದ್ದೆ..
ಅದು ಎಂತಹ ಅದ್ಭುತವಾದ ಚಿತ್ರ ಅಂದರೆ, ಇವತ್ತಿಗೂ ಆ ಚಿತ್ರದ ಕಥೆ ಮತ್ತು ಹಾಡುಗಳು ನನಗೆ ಕಾಡುತ್ತವೆ, ಆದರೆ ನನಗೆ ಇನ್ನೂ ಆ ಚಿತ್ರವನ್ನು ಹಿಂದಿಯಲ್ಲಿ ಮಾಡಲು ಸಾಧ್ಯವಾಗಿಲ್ಲ ನನ್ನ ಎರಡನೇ ಮಗಳು ಕೃಷಿ ಕಪೂರ್ ಗೆ ಮಾಡುವ ಯೋಚನೆ ಮಾಡುತ್ತೇನೆ ಎಂದರು.
ಸಿನಿಮಾ ಜೊತೆ ಜೊತೆಗೆ
“ಈಜುನಿಕ್ಸ್ ಹೇರ್ ಸೈನ್ಸ್” ಕುರಿತಾಗಿ ಮಾತನಾಡಿದ ಬೋನಿ ಕಪೂರ್, ಕೂದಲಿಗೆ ಸಂಬಂಧಪಟ್ಟಂತಹ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಸಮಯದಲ್ಲಾಗಲಿ ಅಥವಾ ಟ್ರೀಟ್ಮೆಂಟ್ ತೆಗೆದುಕೊಂಡ ನಂತರದಲ್ಲಾಗಲಿ ನನ್ನ ದೇಹದಲ್ಲಿ ಯಾವುದೇ ರೀತಿಯ ತೊಂದರೆಗಳಾಗಿಲ್ಲ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗಿಲ್ಲ ಎಂದು ದೃಢಪಡಿಸಿದರು.
ಡಾಕ್ಟರ್ ಪ್ರದೀಪ್ ಸೇಥಿ ನನ್ನ ಆತ್ಮೀಯ ಸ್ನೇಹಿತರು ಹಾಗೂ ಅಷ್ಟೇ ಒಬ್ಬ ಒಳ್ಳೆಯ ವೈದ್ಯರು.

ತಮ್ಮ ಬಳಿ ಬರುವಂತಹ ಎಲ್ಲ ಗ್ರಾಹಕರಿಗೂ ನ್ಯಾಯ ಸಲ್ಲುವಂತೆ ಪ್ರಾಮಾಣಿಕ ಹಾಗೂ ಅನುಭವದ ಮೂಲಕ ಸೇವೆಯನ್ನ ಮಾಡಿ, ಬೋಳು ತಲೆ ಹೊಂದಿದ ಎಲ್ಲರಿಗೂ ಆತ್ಮವಿಶ್ವಾಸವನ್ನ ತುಂಬೋದು ಮಾತ್ರವಲ್ಲದೆ ಅವರನ್ನ ಸುಂದರವಾಗಿ ಕಾಣುವಂತೆ ಕೂಡ ಮಾಡುತ್ತಾರೆ ಅದಕ್ಕೆ ನಾನೇ ಬೆಸ್ಟ್ ಉದಾಹರಣೆ ಎಂದರು ಬೋನಿ ಕಪೂರ್.
ಸದ್ಯಕ್ಕೆ ಡಾಕ್ಟರ್ ಪ್ರದೀಪ್ ಭಾರತದಲ್ಲಿ ಮಾತ್ರ ಹಲವು ಶಾಖೆಗಳನ್ನು ಹೊಂದಿದ್ದಾರೆ ಗೊತ್ತಿಲ್ಲ ಶೀಘ್ರದಲ್ಲಿಯೇ ಅವರು ಬೇರೆ ರಾಷ್ಟ್ರಗಳಲ್ಲಿ ಈ ಸೇವೆಯನ್ನ ಶುರು ಮಾಡಬಹುದು ಎಂದು ಶುಭ ಹಾರೈಸಿದರು.
ರವೀ ಸಾಸನೂರ್
MasterNews365.Com

