"ಕಡಕೋಳ ಮಡಿವಾಳರ ಪದಾರಿ ಇದು ಮಾತು ಕಲಿ ಬೇಕಾದರೆ ಮಾತಿನ ಮರ್ಮ ತಿಳಿಯಬೇಕು. ಎಲ್ಲರಿಗೂ ಮಾತಾಡಾಕ್ ಬರೋದಿಲ್ಲ. ಒಬ್ಬೊಬ್ಬರು ಮಾತಾಡಿದ್ರು ಮುಂದೆ ಪ್ರಶ್ನೆನೇ ಬರುವುದಿಲ್ಲ. ಅಷ್ಟು ವಿಚಾರ ಮಾಡಿ ಮಾತಾಡ್ತಾರೆ ಒಬ್ಬೊಬ್ಬರು ಮಾತಿನ್ಯಾಗ ಸಿಕ್ಕು ಒದ್ದಾಡುತ್ತಾರ. "
"ಈಗ ಒಂದು ಆದುದ್ದೇನು ? ಬ್ರಹ್ಮ, ಎರಡು ಆಗಿದ್ದು ಸಗುಣ ನಿರ್ಗುಣ, ಮೂರಾಗಿದ್ದು ಸತ್ವ ರಜು ತಮೋ ಗುಣ ನಾಲ್ಕು ಚತುಷ್ಠಿ ಅಂತ:ಕರಣ (ಮನ,ಬುದ್ಧಿ ,ಚಿತ್ತು ಅಹಂಕಾರ) ಐದು ಆಗಿದ್ದು ಪಂಚಭೂತ, ಆರು ಆಗಿದ್ದು ಷಡ್ವಿಕಾರ , ಏಳಾಗಿದ್ದು ವ್ಯಸನ, ಎಂಟ ಆಗಿದ್ದು ಅಷ್ಟಮದ, ಒಂಬತ್ತ ಆಗಿದ್ದು ಜೀವನ ಗುಣಗಳು, ಹತ್ತ ಆಗಿದ್ದು ಇಂದ್ರಿಯಗಳು. 108 ಗುಣಗಳು 72 ಸಾವಿರ ನಾಡಿಗಳು 260 ದೊಡ್ಡ ನಾಡಿಗಳು, 92 ಅಂಗುಲ ದೇಹ ಪರಿಮಿತ ಉಳ್ಳದ್ದು. ಪಂಚೇರ್ (ಪಂಚೆರ್ ಅಂದ್ರ ಆರು ಸೇರು) ಅದು ಮಲ ಆದ. ಸವಾಸೆರು ಬಿಂದು ಆದ ಒಂದು ದಿವಸ 4444 ಮಾತ ಆಗ್ತಾದ ಪ್ರತಿಯೊಬ್ಬರಿಗೆ. 21600 ಜಪ ಸ್ವಾಶೋಚ್ವಾಸ ಎಲ್ಲರಿಗೂ ಆಗ್ತಾವ. ಯೋಗಿ , ಭೋಗಿ ತ್ಯಾಗಗಳಿಗೂ ಅಷ್ಟು ಜಪ ಆಗ್ತವು. ಅದರಾಗ ಒಂದು ಜಪ ಕಡಿಮೆ ಆದರೂ ಈ ದೇಹ ಹೋಗಿಬಿಡುತ್ತದೆ. ರೋಮಗಳು 8 ಕೋಟಿ ಅದಾವು.ಇವೆಲ್ಲ ಅಳಿದು ತೂಗಿ ವೇದದೊಳಗ ಬರದು ಇಟ್ಟಾರ್ರಿ. "
"ಇವನ್ನು ಕಲಿತುಕೊಂಡು ಪಟಪಟ ಹೇಳಬಹುದು. ಯಾವು ಯಾವು ಎಲ್ಲದಾವು ?ಯಾವು ಏನ್ ಕೆಲಸ ಮಾಡ್ತಾವು? ಇದರ ಅರ್ಥ ಗೊತ್ತಿರಬೇಕಲ್ಲ. ಸದಾ ಬಾಯಿಪಾಟ್ ಮಾಡಿ ಹಾಡಲು ಬರ್ತದ ಹೇಳಕು ಬರ್ತದ ಆದರೆ ಪದದ ಅರ್ಥ ಹೇಳಬೇಕಲ್ಲ. ಪದದ ಅರ್ಥ ತಿಳಿ ಬೇಕಾದರೆ ಗುರು ಮುಖದಿಂದ, ಬ್ರಹ್ಮ ಜ್ಞಾನದಿಂದ ತಿಳಿಯಬೇಕು. ಅದನ್ನು ತಿಳಿಯಬೇಕಾದರೆ ಅಂವಾ ಅದಕ್ಕ ಕತ್ತಿ ಹಂಗ ಬೆನ್ನ ಹತ್ತಿರಬೇಕು ಮತ್ತಅಂತ ಶರಣರು ಹೇಳುತ್ತಾರೆ. ಶರಣರು ನಂಬುವುದು ಅಂದ್ರೆ ಹ್ಯಾಂಗ ?ಬಲವಾಗಿ ನಂಬಬೇಕು. "
" ನಮ್ಮ ಗುರುಗಳ ಕಡೆ ಶಿಷ್ಯ ಮತ್ತಪು ಶರಣರು ಕಡೆಗಾಲಕ್ಕೆ ಅವರಿಗೆ ಉಪದೇಶ ಮಾಡು ತಾಕತ್ತು ಇದ್ದಿದ್ದಿಲ್ಲ.ಮಾತಾಡು ಶಕ್ತಿ ಸಹಿತ ಇದ್ದಿದ್ದಿಲ್ಲಮಾತಾಡು ಶಕ್ತಿ ಸಹಿತ ಇದ್ದಿದ್ದಿಲ್ಲ ಅವರಿಗೆ ಆರಾಮ ತಪ್ಪಿತ್ತು ಅಲ್ಲೇ ಅಗಸ್ಬಳಕೆ ಹೋದೆವು.ಅವರಿಬ್ರೂ ಗಂಡ ಹೆಂಡತಿ ಬಂದ್ರು ಗುರುಗಳು ಉಪದೇಶ ಮಾಡಿದರು ಮುತ್ತಪ್ಪ ಶರಣ್ರು ಪ್ರತಿಯೊಂದು ಕೇಳಲಾಕ್ಕ ನನ್ನ ಹತ್ತಿರ ಬರುತ್ತಿದ್ದರು.ನನಗೆ ಗುರು ಅಂತಾನೂ ನಂಬಿದ್ದರು. ಅವಾಗ ಗುರುಗಳು ಹೇಳಿದ್ದು ಮುತ್ತಣ್ಣ ಏನು ಕೇಳುತ್ತಾನೆ ಅವನಿಗೆ ನೀನು ಎಲ್ಲಾ ಹೇಳು ಬಸಣ್ಣ ಅಂದಿದ್ದರು ಯಾಕಂದ್ರೆ ನನಗೆ ಹೇಳುವುದಾಗುವುದಿಲ್ಲ ಅಂದಿದ್ದರು.ಮುತ್ತಪ್ಪ ಶರಣ ಬಂದು ಕೇಳಾ೦ವಾ ನಾನು ಅವನಿಗೆ ಹೇಳಾಂವಾ ".
"ಬಿಸಲದಿನ್ನಿ ಗುರುಗಳು ಮೂಲತಹ ಬನೋಶಿ ತಾರನಾಳದವರು. ಅವರ ತಳ ಗಂಜಾಳ ಹುನುಗುಂದ ತಾಲೂಕು. ಇದು ಅವರ ಹೆಣ್ಣು ಮಕ್ಕಳ ತಾಯಿ ಆಸ್ತಿ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಆ ಆಸ್ತಿ ಅವರಿಬ್ಬರಿಗೆ ಆಯಿತು. ಹಿಂಗಾಗಿ ಅವರ ಆಸ್ತಿಗೆ ಬಂದು ಇಲ್ಲೇ ಉಳಿದುಕೊಂಡರು. ಅವರು ಬಹಳ ಶಾಣ್ಯಾರು 7ನೇ ಈಯತ್ತೆ ಲೆಕ್ಕ ಪಕ್ಕ ಮಾಡಬೇಕಾದರೆ ಬಾಯಿಲೆ ಪಟ ಪಟ ಅಂತ ಹಿಂಬರಕಿ ಮುಂಬರ್ಕಿ ಮಗ್ಗಿ ಓದವ್ರು. ಅವರಿಗೆ ಕಂಪನಿ ಒಳಗ ಕೆಲಸಕ್ಕೆ ತಗೊಂಡಿದ್ರು ಜೋಗಡಿಪಾಳ್ಯ ಅಂತ ದೊಡ್ಡ ಕಂಪನಿ. ಅಲ್ಲಿ ಎಲ್ಲಾ ಕೆಲಸಗಾರರಿಗೆ ಪಗಾರ್ ಕೊಡುವುದು ರೊಕ್ಕ ತಗೊಂಡ್ಬರು ಕೆಲಸ ಮಾಡುತ್ತಿದ್ದರು. "
"ಅವರು ಹ್ಯಾಂಗಂದ್ರ ಏನೂ ಖರ್ಚು ಮಾಡೋರೆಲ್ಲ ದಾರು ಕೂಡ ಅವರು ಅಲ್ಲ ಅಡಕಿ ಹೊಳ ಸಹಿತ ಹಾಕವರಲ್ಲ ಮಾಂಸಹಾರಿಗಳು ಅಲ್ಲ ಹಿಂಗಾಗಿ ಅವರು ಸಿಕ್ಕಾಪಟ್ಟೆ ಸಂಪಾದನೆ ಮಾಡಿಬಿಟ್ಟಾರ ಅವರ ಗುರುಗಳು ಮಲ್ಲಾವದೂತರು ಒಂದೊಂದು ಹರಿವಿಗಟ್ಲೆ ದಾರು ಕುಡ್ಯಾವ್ರು ಅವರು ಅವರಿಗೆ ಹಂಡರ್ಗಲ್ಲದವರು ಅಂತಾರೆ ಅವಧೂತರು ಸುಮಾರು 30 ವರ್ಷಗಳಿಂದ ಅವರು ಜಳಕ ಮಾಡಿರಲಿಲ್ಲ ಊಟ ಮಾಡಿರಲಿಲ್ಲ ಸುಡುಗಾಡಕ್ಕೆ ಹೋಗಿ ಮೈ ತುಂಬಾ ಬುದ್ಧಿ ಬಡ್ಕೊಂಡು ಬಂದುಬಿಡೋರು.
ಮುಂದುವರಿಯುತ್ತದೆ ….
ಹಳ್ಳೂರಿನಲ್ಲಿ ನಡೆದ ಘಟನೆ –
ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.

