Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಸಪ್ಪ ಶರಣರ ಕುರಿತು….
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಸಪ್ಪ ಶರಣರ ಕುರಿತು….

ಬಸಪ್ಪ ಶರಣರ ಕುರಿತು…… ಬಸಣ್ಣ ಅವ್ರಿಗಿ ಜಾತಿ ಗೋತ್ರ ಕುಲ ಯಾವುದು ಗೊತ್ತಿಲ್ಲ.ಜ್ಞಾನಕ್ಕ ಇದಕ್ಕೇನು ಸಂಬಂಧ ಇಲ್ಲ.ಜ್ಞಾನಕ್ಕೆ ಎಷ್ಟು ಬೆಲೆ ಐತಿ, ಅದು ಯಾವಾಗಲೂ ಇದ್ದೇ ಇರುತ್ತದೆ. ಮಂದಿ ಅಂತಾರ ಬಜನಾಕ್ ಬಸವಣ್ಣ ಬರ್ತಾನೆ ಅಂದ್ರೆ ಅದನ್ನು ಕೇಳಕ್ಕೆ ಹಳ್ಳೂರಿನವರು ಬಳವಾಟ್ ಸೋಲುವಾಡಗಿ ಪಡೇಕನೂರ ತಾರ್ನಾಳ ಹೀಗೆ ಸುತ್ತೆಲ್ಲ ಹಳ್ಳಿಯವರಿಗೆ ಕರೆಯಿಸಿ ಬಡತನ ಭಜನೆ ಮಾಡಿ ಆನಂದಿಸುತ್ತಾರೆ. ವಿಜಯಪುರ ಜಿಲ್ಲೆಯಲ್ಲಿಯೇ ಬಹುಶಹ ತತ್ವಪದಕಾರ ಅನುಭವಿ ಶರಣರೆಂದರೆ ಬಸಪ್ಪ ಶರಣರೊಬ್ಬರೇ ಇರಬಹುದೆಂದು ನನ್ನ ಊಹೆ ಇವರನ್ನು ಬಿಟ್ಟರೆ ಸದ್ಯದ […]

ಬಸಪ್ಪ ಶರಣರ ಕುರಿತು……

ಬಸಣ್ಣ ಅವ್ರಿಗಿ ಜಾತಿ ಗೋತ್ರ ಕುಲ ಯಾವುದು ಗೊತ್ತಿಲ್ಲ.ಜ್ಞಾನಕ್ಕ ಇದಕ್ಕೇನು ಸಂಬಂಧ ಇಲ್ಲ.ಜ್ಞಾನಕ್ಕೆ ಎಷ್ಟು ಬೆಲೆ ಐತಿ, ಅದು ಯಾವಾಗಲೂ ಇದ್ದೇ ಇರುತ್ತದೆ. ಮಂದಿ ಅಂತಾರ ಬಜನಾಕ್ ಬಸವಣ್ಣ ಬರ್ತಾನೆ ಅಂದ್ರೆ ಅದನ್ನು ಕೇಳಕ್ಕೆ ಹಳ್ಳೂರಿನವರು ಬಳವಾಟ್ ಸೋಲುವಾಡಗಿ ಪಡೇಕನೂರ ತಾರ್ನಾಳ ಹೀಗೆ ಸುತ್ತೆಲ್ಲ ಹಳ್ಳಿಯವರಿಗೆ ಕರೆಯಿಸಿ ಬಡತನ ಭಜನೆ ಮಾಡಿ ಆನಂದಿಸುತ್ತಾರೆ.

ವಿಜಯಪುರ ಜಿಲ್ಲೆಯಲ್ಲಿಯೇ ಬಹುಶಹ ತತ್ವಪದಕಾರ ಅನುಭವಿ ಶರಣರೆಂದರೆ ಬಸಪ್ಪ ಶರಣರೊಬ್ಬರೇ ಇರಬಹುದೆಂದು ನನ್ನ ಊಹೆ ಇವರನ್ನು ಬಿಟ್ಟರೆ ಸದ್ಯದ ಕಾಲಘಟ್ಟದಲ್ಲಿ ಆಧ್ಯಾತ್ಮಿಕ ಶರೀರದೊಳಗ ದಕ್ಷಿಣ ಸೋಲಾಪುರದಲ್ಲಿ ಬರುವ ಅಂದೆವಾಡಿ ಗೈಬಿಷಾ ಅವರನ್ನು ಕಾಣಬಹುದು.

ಬಸಪ್ಪ ಶರಣರು ದೇವಿಯ ಉಪವಾಸಕರು ದೇವಿಯ ಪುರಾಣ ಪಾರಾಯಣ ಜ್ಞಾನದಲ್ಲಿ ನಾನೇ ಜಾಣನೆಂದು ಬೀಗು ಅವರಿಗೆ ಮುಂಗೈ ಹಿಡಿದು ನಿಲ್ಲಿಸುವಂತಹ ಅದ್ಭುತ ಪಾಂಡಿತ್ಯ ಇವರಲ್ಲಿ ಅಡಗಿದೆ . ನಿಗರ್ವಿ , ನಿರ್ಮಲ, ನಿರಾಭಾರಿ, ನಿರಾಡಂಬರ, ವಿನಯ, ಸಹನೆಯ ಸಾಕಾರ ಮೂರ್ತಿ. ಇವರು ತತ್ವಪದ ಹಾಡಲು ನಿಂತರೆ ಬೆಳಗಾಗಿದ್ದೆ ಅರಿವಿಗೆ ಬರುವುದಿಲ್ಲ.

ಹಾಡುಗಾರಿಕೆಯಲ್ಲಿ ಯಾರಾದರೂ ತಪ್ಪು ಹಾಡಿದರೆ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ವೇದಿಕೆಯವರೆಗೂ ಬಂದು ಅವರ ತಪ್ಪಿನ ಅರಿವನ್ನು ಅವರಿಗೆ ಮಾಡಿಸುವಂತಹ ಜಾಯಮಾನ ಇವರದ್ದು ಅದನ್ನು ಸರಿಪಡಿಸಿ ಹೇಳುವರೆ ವಿನಹ ಇದು ನನಗೆ ಬರುತ್ತದೆ ಎಂಬ ಅಹಂನಿಂದ ಅಲ್ಲ.ಹಾಡುವ ಪದ ಕಾರರು ತಪ್ಪಾಗಿ ಹಾಡಿ ಜನರಿಗೆ ತಪ್ಪು ಸಂದೇಶ ತಲುಪಿಸಬಾರದೆಂಬ ಸಾಮಾಜಿಕ ಕಾಳಜಿ ಹಾಗೂ ಕಳಕಳಿ ಅವರದಾಗಿತ್ತು.

ಜ್ಞಾನಿಗಳಾಗಿದ್ದರೆ ತಪ್ಪು ಒಪ್ಪಿ ಸರಿಪಡಿಸಿ ಹೇಳಬೇಕು. ಇಲ್ಲವಾದರೆ ಸಾಮಾಜಿಕವಾಗಿ ಅವರ ಎದುರಿಗೆ ಕೈಮುಗಿದು ತಪ್ಪಾಯಿತು ಎಂದು ತುಂಬಿದ ಸಭೆಯಲ್ಲಿ ಒಪ್ಪಿಕೊಳ್ಳಬೇಕು. ಹಾಡಲು ಹೋದಾಗ ಮಠಮಾನ್ಯಗಳು ಇವರನ್ನು ಗೌರವಿಸಿರಬಹುದು. ಅದನ್ನು ಬಿಟ್ಟರೆ ಇಲ್ಲಿಯವರೆಗೆ ಸರಕಾರ ಸಂಘ ಸಂಸ್ಥೆಗಳಿಂದ ಯಾವುದೇ ಮಾನ ಸನ್ಮಾನಗಳು ಇವರಿಗೆ ದೊರೆತಿಲ್ಲ. ಇದು ದುರ್ದೈವದ ಸಂಗತಿ ಎಂದು ಹೇಳಬಹುದು.ಸರ್ಕಾರ ಇವರನ್ನು ಸೂಕ್ತ ಪ್ರತಿಭೆ ಎಂದು ಗುರುತಿಸಿ ಗೌರವ ಪ್ರಶಸ್ತಿ ನೀಡಿ ಸರ್ಕಾರಿ ಮಟ್ಟದಲ್ಲಿ ಸನ್ಮಾನಿಸಬೇಕಿದೆ. ಇದನ್ನು ಅರಿತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುದ್ದೇಬಿಹಾಳ ದ ಅಧ್ಯಕ್ಷನಾದ ನಾನು ನಮ್ಮ ಪರಿಷತ್ತಿನ ವತಿಯಿಂದ ಇವರನ್ನು ಕಾರ್ಯಕ್ರಮಕ್ಕೆ ಕರೆದು ಗೌರವದೊಂದಿಗೆ ಸನ್ಮಾನಿಸಿದ್ದು ನನ್ನ ಸೌಭಾಗ್ಯ ಎಂದೇ ಅರಿತಿರುವೆ.

ಈ ತತ್ವಪದಕಾರರು ಯಾವುದೇ ಹಣದಾಸೆಗೆ ಪದ ಹಾಡಿ ಬಿಡಿಸಿ ಹೇಳಲು ಹೋದವರಲ್ಲ. ಅವರಾಗಿಯೇ ಏನಾದರೂ ಗುರು ಕಾಣಿಕೆ ಕೊಟ್ಟಲ್ಲಿ ಅದನ್ನು ಮಾತ್ರ ಪಡೆದದ್ದು ಉಂಟು ಎಂದು ಬಸಪ್ಪನವರು ಹೇಳಿಕೊಳ್ಳುತ್ತಾರೆ .ಈ ಹಾಡುಗಾರಿಕೆ ಧಾರ್ಮಿಕ ಕ್ಷೇತ್ರಗಳಲ್ಲಿ ನಾನೊಂದು ಮಾಡುವಂತ ಭಕ್ತಿಯ ಸೇವೆ ಎಂದು ಸಂತಸದಿಂದ ಅನ್ನುತ್ತಾರೆ.

ಬಸಪ್ಪ ಶರಣರದ್ದು ತುಂಬಾ ಸೌಮ್ಯ ಸ್ವಭಾವ. ಮುಖದಲ್ಲೇ ಸೌಮ್ಯ ನಗುವನ್ನು ನಗುವಂತಹ ವ್ಯಕ್ತಿ ಈ ವ್ಯಕ್ತಿಯನ್ನು ನೋಡಿದರೆ ಎತ್ತರದ ದೇಹ ನೋಡಲು ತುಂಬಾ ಬಡಕಲು ಕಪ್ಪು ವರ್ಣ ಸಾಮಾನ್ಯರಂತೆ ಕಾಣುವ ಸರಳ ವ್ಯಕ್ತಿ. ಇವರು ಅವರನ್ನು ನೋಡಿದರೆ ಇವರನ್ನು ಜ್ಞಾನಿಯೆ ಅನ್ನದೇ ಯಾರು ಇರಲಾರರು. ಇಲ್ಲಿ ನಾವು ನೋಡಬೇಕಾಗಿದ್ದು ಆ ವ್ಯಕ್ತಿಯನ್ನಲ್ಲ, ಅವರ ವ್ಯಕ್ತಿತ್ವವನ್ನು ಅವರಲ್ಲಿನ ಜ್ಞಾನದ ಶಕ್ತಿಯನ್ನು ನೋಡಬೇಕಾಗಿದೆ.

ಅವರನ್ನು ಹತ್ತಿರದಿಂದ ನೋಡಿದರೆ ಮಾತನಾಡುತ್ತಾರೋ ಇಲ್ಲವೋ ಉಸಿರಾಟ ತಗೋತಾರೋ ಇಲ್ಲವೋ ಅನ್ನುವಂತೆ ನೋಡುಗರಿಗೆ ಬಸವ ವಾಗುತ್ತದೆ ಇವರು ಬಹಳ ಸೂಕ್ಷ್ಮಜೀವಿ. ಅವರನ್ನು ನೋಡಿದ ತಕ್ಷಣ ನಮ್ಮಲ್ಲಿ ಎಲ್ಲಿಲ್ಲದ ಗೌರವ ತುಂಬಿ ಬಂದು ವ್ಯಕ್ತಿಯಾಗಿ ಎದ್ದು ನಿಂತು ಶಿರವಾಗಿ ನಮಸ್ಕರಿಸಬೇಕೆಂಬ ಭಾವನೆ ನಮ್ಮಲ್ಲಿ ಜಾಗೃತಗೊಳ್ಳುತ್ತದೆ. ಎಲ್ಲರನ್ನೂ ನೋಡಿದ ತಕ್ಷಣ ಈ ಭಾವನೆ ಜಾಗೃತಗೊಳ್ಳಲಾರದು. ಆದರೆ ಇದಕ್ಕೊಂದು ಅಪವಾದವೇನೊ ಎಂಬಂತೆ ಶ್ರೀ ಬಸಪ್ಪ ಶರಣರು.

ಯಾವಾಗ ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ನಾವು ಎರಡು ಕೈಗಳನ್ನೆತ್ತಿ ಕೈ ಮುಗಿದು ಅವರನ್ನು ಗೌರವಿಸುತ್ತೇವೆಯೋ ಆವಾಗ ಆ ವ್ಯಕ್ತಿಯ ವ್ಯಕ್ತಿತ್ವ ಘನತೆ ಗಾಂಭೀರ್ಯ ಇನ್ನೂ ಹೆಚ್ಚಾಗಿ ಮೇಲೆತ್ತರಕ್ಕೆ ಹೋಗುತ್ತದೆ. ಅಂತಹ ಅದ್ಭುತ ವ್ಯಕ್ತಿ. ಇವರು ಒಂದು ತರಹ ನೀರಿನ ಚೆಲುವೆ ಇದ್ದಂತೆ ಜ್ಞಾನಿಯಾಗಬೇಕು ಜ್ಞಾನದ ತೀರಿಸಿಕೊಳ್ಳಬೇಕೆಂದರೆ ಜ್ಞಾನದಾಹಿಗಳೆ ತಮ್ಮ ದಾಹ ತುಣಿಸಿಕೊಳ್ಳಲು ಇವರಲ್ಲಿ ಬರಬೇಕು ಎಂದು ಹೇಳಬಹುದು.

ಮುಂದುವರೆಯುತ್ತದೆ . . . . .

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.