Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಖಾಡಕ್ಕೆ ಬಂದ್ರು – ರಿಯಲ್ ಫೈಟರ್ಸ್
- ಸಿನಿಮಾ

ಅಖಾಡಕ್ಕೆ ಬಂದ್ರು – ರಿಯಲ್ ಫೈಟರ್ಸ್

ರಿಯಲ್‌ ಸ್ಟಂಟ್‌ ಮಾಡಲು ಅಖಾಡಕ್ಕೆ ಬಂದಾಯ್ತು ʻರಿಯಲ್‌ ಫೈಟರ್ಸ್‌ʼ; ಚಿತ್ರದ ಅದ್ದೂರಿ ಟೀಸರ್‌ ಬಿಡುಗಡೆ ಚಾಮರಾಜ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಿಯಲ್ ಫೈಟರ್ಸ್’ ಚಿತ್ರದ ಅಧಿಕೃತ ಟೀಸರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೈಜ ಸಾಹಸ ಹಾಗೂ ವಿದ್ಯಾರ್ಥಿ ಕಲಾವಿದರ ಶ್ರಮವನ್ನು ಹೊತ್ತು ತರುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಕೆ. ಗೋಪಾಲಯ್ಯ, ನಟ ‘ನೆನಪಿರಲಿ’ ಪ್ರೇಮ್, ಉದ್ಯಮಿ ಎಚ್ ಎಸ್ ರಾಘವೇಂದ್ರ ಶೆಟ್ರು ಹಾಗೂ ಖ್ಯಾತ ರಾಕ್ ಕ್ಲೈಂಬರ್ ಜ್ಯೋತಿರಾಜ್ (ಕೋತಿರಾಜ್) […]

ರಿಯಲ್‌ ಸ್ಟಂಟ್‌ ಮಾಡಲು ಅಖಾಡಕ್ಕೆ ಬಂದಾಯ್ತು ʻರಿಯಲ್‌ ಫೈಟರ್ಸ್‌ʼ; ಚಿತ್ರದ ಅದ್ದೂರಿ ಟೀಸರ್‌ ಬಿಡುಗಡೆ

ಚಾಮರಾಜ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಿಯಲ್ ಫೈಟರ್ಸ್’ ಚಿತ್ರದ ಅಧಿಕೃತ ಟೀಸರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೈಜ ಸಾಹಸ ಹಾಗೂ ವಿದ್ಯಾರ್ಥಿ ಕಲಾವಿದರ ಶ್ರಮವನ್ನು ಹೊತ್ತು ತರುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಕೆ. ಗೋಪಾಲಯ್ಯ, ನಟ ‘ನೆನಪಿರಲಿ’ ಪ್ರೇಮ್, ಉದ್ಯಮಿ ಎಚ್ ಎಸ್ ರಾಘವೇಂದ್ರ ಶೆಟ್ರು ಹಾಗೂ ಖ್ಯಾತ ರಾಕ್ ಕ್ಲೈಂಬರ್ ಜ್ಯೋತಿರಾಜ್ (ಕೋತಿರಾಜ್) ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ‘ನೆನಪಿರಲಿ’ ಪ್ರೇಮ್, “ಚಾಮರಾಜ್ ಮಾಸ್ಟರ್ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದಲೇ ಎಲ್ಲರ ಕೀಳರಿಮೆಯನ್ನು ಹೋಗಲಾಡಿಸುವ ಅದ್ಭುತ ವ್ಯಕ್ತಿ. ಲಕ್ಷಾಂತರ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಾನು ಮತ್ತು ನನ್ನ ಮಕ್ಕಳು ಕೂಡ ಅವರ ಶಿಷ್ಯಂದಿರು ಎಂದು ಹೇಳಿಕೊಳ್ಳಲು ಹೆಮ್ಮೆ ಹಾಗೂ ಪುಣ್ಯವೆನಿಸುತ್ತದೆ. ಅಂದು ನಾವೆಲ್ಲಾ ಮೋರಿ ಪಕ್ಕ, ಪಾರ್ಕ್‌ಗಳಲ್ಲಿ ತಾಲೀಮು ನಡೆಸುತ್ತಿದ್ದೆವು. ಇಂದು ನಮ್ಮ ಶಾಸಕರಾದ ಕೆ. ಗೋಪಾಲಯ್ಯ ಅವರು ಉತ್ತಮ ವೇದಿಕೆ ಮಾಡಿಕೊಟ್ಟಿದ್ದಾರೆ” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಚಿತ್ರದ ನಿರ್ದೇಶಕ ಡಾ. ಚಾಮರಾಜ್ ಮತ್ತು ಅವರ ತಂಡವು ಸಿನಿಮಾ ನಿರ್ಮಾಣದ ಹಿಂದಿನ ರೋಚಕ ಸವಾಲುಗಳನ್ನು ಹಂಚಿಕೊಂಡಿತು. ಯಾವುದೇ ರೋಪ್‌ಗಳು ಅಥವಾ ಆಧುನಿಕ ರಕ್ಷಣಾ ಸಾಧನಗಳನ್ನು ಬಳಸದೆ, ಕೇವಲ ನೈಜ ಕೌಶಲದಿಂದಲೇ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಅಪಾಯಕಾರಿ ದೃಶ್ಯಗಳಲ್ಲಿ ವಿದ್ಯಾರ್ಥಿ ಕಲಾವಿದರು ತೋರಿದ ಶ್ರದ್ಧೆ, ಬದ್ಧತೆ ಮತ್ತು ಸಹಕಾರವನ್ನು ಇಡೀ ತಂಡ ಕೊಂಡಾಡಿತು.

ಡಾ. ಚಾಮರಾಜ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಡಾ. ಎನ್. ಚಂದ್ರಶೇಖರ್, ಡಾ. ಎಸ್. ಮಂಜುನಾಥ್, ಜ್ಯೋತಿರಾಜ್ (ಕೋತಿರಾಜ್), ಡಾ. ವಿ. ನಾಗೇಂದ್ರ ಪ್ರಸಾದ್, ಎಂ.ಎಸ್. ಜಹಂಗೀರ್, ಡ್ಯಾನಿ ಕುಟ್ಟಪ್ಪ, ಚೆಲುವರಾಜ್, ಅದ್ಭುತ್ ಆರ್.ಕೆ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿದ್ದಾರೆ. ಅನಿಲ್‌, ಅರುಣ್‌ ರೋಹಿತ್‌, ರಾಕ್ ಶ್ರೀ, ನೇತ್ರಾ ಮತ್ತು ಶ್ರೀಹರ್ಷ ಅವರು ಚಿತ್ರದಲ್ಲಿ ರಿಯಲ್‌ ಸ್ಟಂಟ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸತೀಶ್ ಆರ್ಯನ್ ಸಂಗೀತ ಸಂಯೋಜಿಸಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್, ಸತೀಶ್ ಆರ್ಯನ್ ಮತ್ತು ಶಿವರಾಮ್ ಸಾಹಿತ್ಯ ರಚಿಸಿದ್ದಾರೆ. ವಿಘ್ನೇಶ್ ಮಲೈಚಾಮಿ ಹಾಗೂ ಯುಜೀನ್ ಡಿಸೋಜಾ ಛಾಯಾಗ್ರಹಣ ನಿರ್ವಹಿಸಿದ್ದು, ಅರ್ಜುನ್ ಕಿಟ್ಟು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಗೋಪಾಲ್ ಬಿ.ಎಸ್. ಅವರ ಸಂಭಾಷಣೆ ಹಾಗೂ ಗುಟ್ಟಳ್ಳಿ ಸುರೇಶ್, ಬಿ. ಧನಂಜಯ್, ಡಾ. ಚಾಮರಾಜ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಎನ್‌ಕೆಎಂ & ಸನ್ಸ್, ಡಾ. ಎಸ್. ಮಂಜುನಾಥ್ (ಎಬಿಬಿ ಮಂಜಣ್ಣ), ಗಗನ್ ಸತೀಶ್ ಮತ್ತು ವಕೀಲ ಜಗದೀಶ್ ಎಲ್. ಚಿತ್ರದ ನಿರ್ಮಾಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಗೋಪಾಲ್‌ ಹಳ್ಳೇರ , ಭರತ್,ಶೇಖರ್ ಕೆ. ಸಹ ನಿರ್ದೇಶನವನ್ನು ಮಾಡಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.