ರಾಕಿಂಗ್ ಟಾಕ್ಸಿಕ್ ಜೊತೆಗೆ
ಜಾಕಿ42 ಟ್ರೈಲರ್

ನಾಳೆಯಿಂದ ವಿಶ್ವದಾದ್ಯಂತ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ, ಟಾಕ್ಸಿಕ್ ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿ ಎಲ್ಲ ಕಡೆ ಶರವೇಗದಲ್ಲಿ ಮುಟ್ಟಿದ್ದಲ್ಲದೆ ಎಲ್ಲರೂ ಟಾಕ್ಸಿಕ್ ಚಿತ್ರವನ್ನ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.ಹೆಮ್ಮೆಯ ಕನ್ನಡಿಗ ಯಶ್ ರವರ ಟಾಕ್ಸಿಕ್ ಚಿತ್ರವನ್ನು ನೋಡುವ ಎಲ್ಲ ಕನ್ನಡಿಗರಿಗೂ, ಮತ್ತೊಂದು ಸಂಭ್ರಮವನ್ನು ಕನ್ನಡತಿ ಖ್ಯಾತಿಯ ಕಿರಣ್ ರಾಜ್ ತಂದು ಕೊಡಲಿದ್ದಾರೆ.

ಕರ್ನಾಟಕದಲ್ಲಿ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುವ ಎಲ್ಲ ಥಿಯೇಟರ್ ಗಳಲ್ಲಿ,
ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷೆ ಮೂಡಿಸಿರುವ ಜಾಕಿ 42 ಚಿತ್ರದ ಟ್ರೈಲರ್ ಪ್ರದರ್ಶನಗೊಳ್ಳಲಿದೆ, ಇದರ ಮೂಲಕ ಚಿತ್ರತಂಡ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆಯನ್ನು ಕೊಡಲಿದೆ.
ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದು ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ನನಗೆ ತಿಳಿದ ಹಾಗೆ ಭಾರತೀಯ ಚಿತ್ರರಂಗದಲ್ಲೇ ಯಾವ ಚಿತ್ರದಲ್ಲೂ ಕುದುರೆ ರೇಸ್ ಕುರಿತು ಇಡೀ ಸಿನಿಮಾ ಬಂದಿಲ್ಲ. ನಮ್ಮ ಇಡೀ ಸಿನಿಮಾ ಕುದುರೆ ರೇಸ್ ಸುತ್ತ ಸಾಗುತ್ತದೆ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಟವಾದ ಚಿತ್ರಕಥೆಯಿರುವ ಚಿತ್ರವಿದು. ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ ಹಾಗೂ ಥಿಯೇಟರಲ್ಲೇ “ಜಾಕಿ 42” ಸಿನಿಮಾವನ್ನ ನೋಡಬೇಕು ಅಂತ ಪ್ರೇರಪಿಸಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.”ಜಾಕಿ 42 “ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ “ಜಾಕಿ 42” ಚಿತ್ರದ ಎರಡು ಹಾಡುಗಳು ಗಮನ ಸೆಳೆದಿದ್ದು, ಮತ್ತಷ್ಟು ಇಂಟರೆಸ್ಟಿಂಗ್ ಆದ ಕಂಟೆಂಟ್ ಚಿತ್ತ ತಂಡ ನೋಡುಗರಿಗೆ ಬಿಟ್ಟುಕೊಡಲಿದೆ…ಅಂದ ಹಾಗೆ ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಅಣಿಯಾಗಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡೋ ಯೋಜನೆಯಲ್ಲಿದೆ… ಅದೇನೆ ಇದ್ರೂ ಟಾಕ್ಸಿಕ್ ನೋಡೋ ಕನ್ನಡ ಪ್ರೇಕ್ಷಕರಿಗೆ ಥಿಯೇಟರ್ ಗಳಲ್ಲಿ “ಜಾಕಿ 42” ಅಚ್ಚರಿ ಕಾದಿದೆ.

ರವೀ ಸಾಸನೂರ್

