Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *ಸೆಪ್ಟೆಂಬರ್ 18ಕ್ಕೆ* ಅರ್ಜುನ್ ದೇವ್ ಟಾಸ್
- ಸಿನಿಮಾ

*ಸೆಪ್ಟೆಂಬರ್ 18ಕ್ಕೆ* ಅರ್ಜುನ್ ದೇವ್ ಟಾಸ್

ಸೆಪ್ಟೆಂಬರ್ 18ಕ್ಕೆ ಅರ್ಜುನ್ ದೇವ್ – ಟಾಸ್ ತುಳು ನಾಡಿನಲ್ಲಿ ತಮ್ಮ ಅದ್ಭುತ ಬರವಣಿಗೆ ನಟನೆ ನಿರ್ದೇಶನದಿಂದ ಖ್ಯಾತಿಯನ್ನು ಪಡೆದ ಡಾ. ದೇವದಾಸ್ ಕಾಪಿಕಾಡ್ ಯಾರಿಗೆ ತಾನೇ ಗೊತ್ತಿಲ್ಲ,ತಮ್ಮದೇ ಆದಂತಹ 32 ಜನರ ತಂಡವನ್ನ ಕಟ್ಟಿಕೊಂಡು ನಿರಂತರವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ಅಪ್ಪಟ ಪ್ರತಿಭೆ ಸಮಯ ಸಿಕ್ಕಾಗಲೆಲ್ಲಾ ತುಳು ಸಿನಿಮಾಗಳಿಗೆ ಬರವಣಿಗೆಯನ್ನ ತುಳು ಸಿನಿಮಾಗಳಿಗೆ ನಿರ್ದೇಶನವನ್ನ ಹಾಗೂ ನಟನೆಯನ್ನು ಮಾಡುತ್ತಿದೆ ಆಗಾಗ ಕನ್ನಡ ಭಾಷೆಯಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.ಈಗ ಮತ್ತೆ ಈ ಪ್ರತಿಭಾವಂತ ಸುದ್ದಿಯಲ್ಲಿದ್ದಾರೆ ಅದು ಟಾಸ್ […]

ಸೆಪ್ಟೆಂಬರ್ 18ಕ್ಕೆ

ಅರ್ಜುನ್ ದೇವ್ – ಟಾಸ್

ತುಳು ನಾಡಿನಲ್ಲಿ ತಮ್ಮ ಅದ್ಭುತ ಬರವಣಿಗೆ ನಟನೆ ನಿರ್ದೇಶನದಿಂದ ಖ್ಯಾತಿಯನ್ನು ಪಡೆದ ಡಾ. ದೇವದಾಸ್ ಕಾಪಿಕಾಡ್ ಯಾರಿಗೆ ತಾನೇ ಗೊತ್ತಿಲ್ಲ,
ತಮ್ಮದೇ ಆದಂತಹ 32 ಜನರ ತಂಡವನ್ನ ಕಟ್ಟಿಕೊಂಡು ನಿರಂತರವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ಅಪ್ಪಟ ಪ್ರತಿಭೆ ಸಮಯ ಸಿಕ್ಕಾಗಲೆಲ್ಲಾ ತುಳು ಸಿನಿಮಾಗಳಿಗೆ ಬರವಣಿಗೆಯನ್ನ ತುಳು ಸಿನಿಮಾಗಳಿಗೆ ನಿರ್ದೇಶನವನ್ನ ಹಾಗೂ ನಟನೆಯನ್ನು ಮಾಡುತ್ತಿದೆ ಆಗಾಗ ಕನ್ನಡ ಭಾಷೆಯಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.ಈಗ ಮತ್ತೆ ಈ ಪ್ರತಿಭಾವಂತ ಸುದ್ದಿಯಲ್ಲಿದ್ದಾರೆ ಅದು ಟಾಸ್ ಚಿತ್ರದ ಮೂಲಕ, ಹೌದು ಬಹಳಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ ನಟನೆ ಹಾಗೂ ನಿರ್ದೇಶನ ಮಾಡುತ್ತಿರುವ ಹಾಗೂ ಅದರಲ್ಲಿ ಸಕ್ಸಸ್ ಕೂಡ ಆಗಿರುವಂತಹ ತಮ್ಮ ಮಗ ಅರ್ಜುನ್ ದೇವ್ ನಾಯಕ ನಟನಾಗಿ ನಟಿಸಿ ನಿರ್ದೇಶನ ಮಾಡುತ್ತಿರುವ ಟಾಸ್ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗೂ ಸಾಹಿತ್ಯವನ್ನು ಬರೆದು ಒಂದು ಪಾತ್ರವನ್ನು ಸಹ ನಿಭಾಯಿಸಿ ತೋರಿಸಿದ್ದಾರೆ.

ಟಾಸ್ ಚಿತ್ರದ ಎರಡನೇ ಹಾಡು,ಮಿರ ಮಿರ ಮಿಂಚುತ್ತಾ ನನ್ನ ಕಣ್ಣೀಗೆ ಬಿದ್ದೋಳೆ ಹಾಡಿನ ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವದಾಸ್ ಕಾಫಿಕಾಡ್ ಒಂದೊಳ್ಳೆ ಕಥಾಂದರದ ಚಿತ್ರ ಟಾಸ್, ಅರ್ಜುನ್ ದೇವ್ ಮನೆಯಲ್ಲಿ ಮಾತ್ರ ನನಗೆ ಮಗ,ಕೆಲಸ ಅಂತ ಬಂದಾಗ ಆತ ಒಬ್ಬ ಒಳ್ಳೆಯ ತಂತ್ರಜ್ಞ ಎಂದು ಹೇಳಿದರು.

ತುಳು ಮತ್ತು ಕನ್ನಡ ಚಿತ್ರದಲ್ಲಿ ಏಕಕಾಲಕ್ಕೆ ಚಿತ್ರಿಕರಣವಾಗುತ್ತಿದ್ದ ಟಾಸ್ ಚಿತ್ರದ ಕಥೆ ಮತ್ತು ಮೇಕಿಂಗ್ ಕುರಿತಾಗಿ ಮಾಹಿತಿ ಪಡೆದಿದ್ದ ಹಾಗೂ ಡಾಕ್ಟರ್ ದೇವದಾಸ್ ಕಾಫಿಕಾಡರನ್ನ ಮೇಷ್ಟ್ರೇ ಅಂತಲೇ ಕರೆಯುತ್ತಿದ್ದ ಮತ್ತು ಅವರನ್ನು ಗೌರವಿಸುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ರವರ ಧರ್ಮಪತ್ನಿ ಶಿಲ್ಪ ಗಣೇಶ್ ಟಾಸ್ ಚಿತ್ರವನ್ನು ತಮ್ಮ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಪ್ರೆಸೆಂಟ್ ಮಾಡಿ ಅದೇ ಬ್ಯಾನರ್ಡಿಯಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ..

ಇನ್ನು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜಕುಮಾರ್ ಕೂಡ ಟಾಸ್ ಚಿತ್ರದ ಕಂಟೆಂಟ್ ನೋಡಿ ಖುಷಿಯಾಗಿದ್ದು ಚಿತ್ರತಂಡಕ್ಕೆ ಡಬಲ್ ಸಂತೋಷ ನೀಡಿದೆ..ಟಾಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಪ್ರತಿಭಾವಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ.
ಈಗಾಗಲೇ ಬಿಡುಗಡೆಯಾಗಿರುವ ಟಾಸ್ ಚಿತ್ರದ ಮೊದಲ ಹಾಡು ಹಲೋ ಹಲೋ ನೀಲಾಂಬರಿ ಹಿಟ್ ಆಗಿದ್ದು ಅದನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ,
ಇಂದು ಬಿಡುಗಡೆಯಾದ
ಮಿರ ಮಿರ ಮಿಂಚುತ್ತಾ ನನ್ನ ಕಣ್ಣೀಗೆ ಬಿದ್ದೋಳೆ ಹಾಡನ್ನು ನಾಗಾರ್ಜುನ್ ಶರ್ಮಾ ಬರೆದಿದ್ದು,
ಚಿತ್ರದಲ್ಲಿರುವ ಇನ್ನೊಂದು ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

ಇನ್ನು ಚಿತ್ರದ ನಾಯಕ ನಟ ನಿರ್ದೇಶಕ ಅರ್ಜುನ್ ದೇವ್ ಮಾತನಾಡಿ 2012ರಿಂದಲೇ ಚಿತ್ರೋದ್ಯಮದಲ್ಲಿದ್ದೇನೆ ನನ್ನ ಜೀವನದ ಕೊನೆತನಕ ಸಿನಿಮಾ ಮಾಡುವುದೇ ನನ್ನ ಕೆಲಸ ಮತ್ತು ಸಿನಿಮಾನೇ ನನ್ನ ಉಸಿರು ಎಂದರು.ತುಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಏಕಕಾಲದಲ್ಲೇ ಚಿತ್ರೀಕರಣ ಮಾಡಿದ್ದು, ಒಮ್ಮೆ ತುಳು ಪೋರ್ಷನ್ ಶೂಟಿಂಗ್ ಆದರೆ ಮತ್ತೊಮ್ಮೆ ಕನ್ನಡ ಪೋರ್ಷನ್ ಶೂಟಿಂಗ್ ಆಗುತ್ತಿತ್ತು ಎಂದು ಅರ್ಜುನ್ ದೇವ್ ಹೇಳಿಕೊಂಡರು..

ಟಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು
P & Y World Tours LLP – ಸಾಗರ್ ಪೂಜಾರಿ,
ಇನ್ನೂ ಚಿತ್ರದ ತಾರಾಗಣದಲ್ಲಿ ನಾಯಕನಟ ಅರ್ಜುನ್ ದೇವ ಜೊತೆಗೆ ನಾಯಕಿ ನಟಿಯಾಗಿ ಸುತೇಜ್ ಶೆಟ್ಟಿ ಗರುಡ ರಾಮ್ ಬಾಲಾಜಿ ಮನೋಹರ್ ಕೃತಿ ಶೆಟ್ಟಿ ಡಾಕ್ಟರ್ ದೇವದಾಸ್ ಕಾಫಿಕಾಡ್ ಸೇರಿ ಇನ್ನು ಮುಂತಾದವರಿದ್ದಾರೆ

ಸಪ್ಟೆಂಬರ್ 18ಕ್ಕೆ ಟಾಸ್ ಬಿಡುಗಡೆಯಾಗುತ್ತಿದೇ..

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.