Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ವಿಕ್ರಮ್ ವೇದಾಂತ್” ಚಿತ್ರ ಆರಂಭ
- ಸಿನಿಮಾ

“ವಿಕ್ರಮ್ ವೇದಾಂತ್” ಚಿತ್ರ ಆರಂಭ

ತಾತ – ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ . ‌‌‌ ‌‌‌‌‌ ‌‌‌‌‌‌ ‌‌‌‌ ‌‌‌ ‌ ಮಧುರೇನಹಳ್ಳಿ ವಂಶಸ್ಥರಾದ ಗುಬ್ಬಿ ನಾಟಕ ಕಂಪನಿ ಸ್ಥಾಪಕರಾದ ಚಂದಣ್ಣನವರ ಮೊಮ್ಮಗ ಶ್ರೀ ಬ್ರಹ್ಮದೇವಯ್ಯ ರವರ ಬ್ರಹ್ಮದೇವ ಪ್ರೊಡಕ್ಷನ್ಸ್ ಹಾಗೂ ಗುಬ್ಬಿ ವೀರಣ್ಣ ರವರ ಮೊಮ್ಮಗ ಶ್ರೀ ಶಿವಪ್ರದೀಪ ರವರು ಮತ್ತು ಆದಿನಾಥ ಪಿಕ್ಚರ್ಸ್ ಲಾಂಛನದಲ್ಲಿ ಹಾಗೂ ನವೀನ್ ಶಕ್ತಿ ನಿರ್ದೇಶನದ “ವಿಕ್ರಮ್ ವೇದಾಂತ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭಗವಾನ್ ಶ್ರೀ ಸುವರ್ಣ ಪಾರ್ಶ್ಚನಾಥ ತೀರ್ಥಂಕರರ […]

ತಾತ – ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ . ‌‌
‌ ‌‌‌‌‌ ‌‌‌‌‌‌ ‌‌‌‌ ‌‌‌ ‌ ಮಧುರೇನಹಳ್ಳಿ ವಂಶಸ್ಥರಾದ ಗುಬ್ಬಿ ನಾಟಕ ಕಂಪನಿ ಸ್ಥಾಪಕರಾದ ಚಂದಣ್ಣನವರ ಮೊಮ್ಮಗ ಶ್ರೀ ಬ್ರಹ್ಮದೇವಯ್ಯ ರವರ ಬ್ರಹ್ಮದೇವ ಪ್ರೊಡಕ್ಷನ್ಸ್ ಹಾಗೂ ಗುಬ್ಬಿ ವೀರಣ್ಣ ರವರ ಮೊಮ್ಮಗ ಶ್ರೀ ಶಿವಪ್ರದೀಪ ರವರು ಮತ್ತು ಆದಿನಾಥ ಪಿಕ್ಚರ್ಸ್ ಲಾಂಛನದಲ್ಲಿ ಹಾಗೂ ನವೀನ್ ಶಕ್ತಿ ನಿರ್ದೇಶನದ “ವಿಕ್ರಮ್ ವೇದಾಂತ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭಗವಾನ್ ಶ್ರೀ ಸುವರ್ಣ ಪಾರ್ಶ್ಚನಾಥ ತೀರ್ಥಂಕರರ ದಿಗಂಬರ ಜೈನ ಬಸದಿಯಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ವಿಕ್ರಮ್ ವೇದಾಂತ್”, ತಾತ ಹಾಗೂ ಮೊಮ್ಮಗನ ಬಾಂಧವ್ಯದ ಕಥೆ. ಚಿತ್ರಕ್ಕೆ “ಹೆಸರಲ್ಲ ಒಂದು ಅಧ್ಯಾಯ” ಎಂಬ ಅಡಿಬರಹವಿದೆ. ಕುಣಿಗಲ್ ಸುತ್ತಮುತ್ತ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಹಾಗೂ ಸಂವಲ್ ಎಸ್ ಜೈನ್ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಂವಲ್ ಎಸ್ ಜೈನ್ ಅಭಿನಯದ ಮೂರನೇ ಚಿತ್ರವಿದು. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಸುನೀಲ್ ಹೊನ್ನಾಳಿ ಛಾಯಾಗ್ರಹಣ, ಅಕ್ಷತ ಎಸ್ ಜೈನ್ ಕಾರ್ಯಕಾರಿ ನಿರ್ಮಾಣ ಮತ್ತು ಸುನಯ್ ಎಸ್ ಜೈನ್ ರವರ ಸಂಕಲನ ಈ ಚಿತ್ರಕ್ಕಿದೆ. ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಆರ್ ಮಹಾಂತೇಶ್ ಅವರ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಭಾರತಿ ಎಸ್ ಅವರು ಕಥೆ ಬರೆದಿದ್ದಾರೆ ಎಂದು ನಿರ್ದೇಶಕ ನವೀನ್ ಶಕ್ತಿ ತಿಳಿಸಿದರು.

ತಾತ – ಮೊಮ್ಮಗನ ಬಾಂಧವ್ಯದ ಈ ಚಿತ್ರದಲ್ಲಿ ನಾನು ತಾತನ ಪಾತ್ರ ಮಾಡುತ್ತಿದ್ದೇನೆ‌. ಕಥೆ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದು ನಟ ಶಿವಪ್ರದೀಪ್ ಹೇಳಿದರು. ಮೊಮ್ಮಗನ ಪಾತ್ರ ಮಾಡುತ್ತಿರುವ ಸಂವಲ್ ಎಸ್ ಜೈನ್ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.