Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಶೆಟ್ಟರ್ ಅಂಗಡಿಗೆ ಹೋಗಿದ್ಯಾಕೆ !!!
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಶೆಟ್ಟರ್ ಅಂಗಡಿಗೆ ಹೋಗಿದ್ಯಾಕೆ !!!

ಆವಾಗ ನನಗೆ ಸಕ್ಕರೆ ಪುಡಿ ತಗೊಂಡು ಬರ್ಲಾ ಶೆಟ್ಟರೆ ಅಂಗಡಿಗೆ ಕಳಿಸಿದ್ದರು ನಾನು ಅಂಗಡಿಗೆ ಹೋಗಿ ಬರುವುದರಾಗ ಮತ್ತೆ ನಿರ್ಧಾರ ಗಟ್ಟಿ ಮಾಡಿಕೊಂಡಿದ್ದರು.ಅಪ್ಪಾರಿಗೆ ಮಾತಾಡಿದೆ, ಅಪ್ಪಾರು ಶಿವಯೋಗಕ್ಕೆ ಮಾಡೋಣ ಅಂತಾರಪ್ಪ ಅಂತಂದ್ರು. ನಾನು ಅವರು ಕೂಡ ಮಾತಾಡಿದೆ, ಯಪ್ಪಾ ಅಂದೆ … ಯಾಕಪ್ಪ ಅಂದ್ರು ಗುರುಗಳು ಶಿವಯೋಗ ಇನ್ನೂ ಮೂರು ತಿಂಗಳದ ಶಿವಯೋಗದ ತನಕ ನನ್ನದು ನಿನ್ನದು ದೇಹ ಇರ್ತದಂತ ಆಧಾರ ಏನಾದ ಎಂದು ಅಂದೆ.. ಮಡಿವಾಳಪ್ಪ …. ಮಡಿವಾಳಪ್ಪ… ಅಂದ್ರು. ಗುರುಗಳು ಯಾಕಪ್ಪ ಏನಾಯ್ತು? ಮಡಿವಾಳಪ್ಪನವರು […]

ಆವಾಗ ನನಗೆ ಸಕ್ಕರೆ ಪುಡಿ ತಗೊಂಡು ಬರ್ಲಾ ಶೆಟ್ಟರೆ ಅಂಗಡಿಗೆ ಕಳಿಸಿದ್ದರು ನಾನು ಅಂಗಡಿಗೆ ಹೋಗಿ ಬರುವುದರಾಗ ಮತ್ತೆ ನಿರ್ಧಾರ ಗಟ್ಟಿ ಮಾಡಿಕೊಂಡಿದ್ದರು.ಅಪ್ಪಾರಿಗೆ ಮಾತಾಡಿದೆ, ಅಪ್ಪಾರು ಶಿವಯೋಗಕ್ಕೆ ಮಾಡೋಣ ಅಂತಾರಪ್ಪ ಅಂತಂದ್ರು.

ನಾನು ಅವರು ಕೂಡ ಮಾತಾಡಿದೆ, ಯಪ್ಪಾ ಅಂದೆ …

ಯಾಕಪ್ಪ ಅಂದ್ರು ಗುರುಗಳು

ಶಿವಯೋಗ ಇನ್ನೂ ಮೂರು ತಿಂಗಳದ ಶಿವಯೋಗದ ತನಕ ನನ್ನದು ನಿನ್ನದು ದೇಹ ಇರ್ತದಂತ ಆಧಾರ ಏನಾದ ಎಂದು ಅಂದೆ..

ಮಡಿವಾಳಪ್ಪ …. ಮಡಿವಾಳಪ್ಪ… ಅಂದ್ರು.

ಗುರುಗಳು ಯಾಕಪ್ಪ ಏನಾಯ್ತು? ಮಡಿವಾಳಪ್ಪನವರು ಅಂದರು.

ಆಯ್ತು ಪಂಚಾಂಗ ತಗೊಂಡ್ ಬಾ ಅಂದರು. ಪಂಚಾಂಗ ಒಯ್ದು ಕೊಟ್ಟೆ. ಸೋಮವಾರ ರೋಹಿಣಿ ನಕ್ಷತ್ರ ಏಕಾದಶಿ ತಿಥಿ ಇತ್ತು ನಾನು ಅವಾಗ ಜರಾ ಜರಾ ಪಂಚಾಂಗ ನೋಡುತ್ತಿದ್ದೆ.

ಆಯ್ತು ನಾಳೆ ಸೋಮವಾರ ಮಾಡಿ ಬಿಡುನು ಅಂದ್ರು.ಮುಂದೆ ಎರಡು ದಿನ ಇ ತ್ತ್ರಿ ನಿರ್ಧಾರ ಮಾಡಿದಂಗ ಬಾಗೇವಾಡಿಗೆ ಕೆಲಸಕ್ಕೆ ಹೋಗಿ ಎಲ್ಲಾ ಪೂಜಾದ ಸಾಮಾನು ತಾವ ತಂದ್ರು. ನನ್ನ ಕೂಡ ಅವಗಾರು ಮಂದಿ ದೀಕ್ಷಾ ತಗೊಂಡ್ರಿ.

ದೀಕ್ಷಾ ತೊಗೊಂಡವರು ನಾವಿಬ್ರು ಗಂಡ ಹೆಂಡ್ತಿ , ನಮ್ಮ ತಂಗಿ, ನಮ್ಮ ತಂಗಿ ಗಂಡ ,ನಮ್ಮ ಓಣಿ ಒಳಗ ಸಂಗಪ್ಪ ಸಂಗಪ್ಪನ ಹೆಂಡತಿ , ಹಿಂಗ ನಾವು ಆರು ಮಂದಿ ಏಕಕಾಲಕ್ಕೆ ದೀಕ್ಷೆ ತೆಗೆದುಕೊಂಡವು. ಬಹಳ ಖುಷಿಯಾಯಿತು. ಮತ್ತು ಬರ ಬರುತ್ತಾ ಬಹಳ ಮಂದಿ ದೀಕ್ಷಾ ತೊಗೊಂಡ್ರು. ಗುರುಗಳು ಮೇಲೆ ಅವಲಂಬನ . ಗುರುಗಳಿಗೆ ಏನಾರಾ ಕೇಳಾಂವಾ . ಗುರುಗಳು ಬಹಳ ಜ್ಞಾನಿಗಳು. ಅವರು ಏನಾದರೂ ಹೇಳಿದರೆ ಪಳ ಪಳ ಮುತ್ತು ಸುರಿದಂಗೆ ಇರುತ್ತಿತ್ತು.

ನನಗೊಮ್ಮೆ ಕಾಯಿಲೆ ಬಂದಿದ್ರಿ ಮಲಗಿಕೊಂಡುಬಿಟ್ಟಿದ್ದೆ ನಮ್ಮ ಅವ್ವ ನನ್ನ ಮಗ ಎಲ್ಲೇರಾಗಲಿ ಎದ್ದು ಕುತಂತ್ರ ಸಾಕು ಅಂತಿದ್ರು. ಅಷ್ಟು ಆರಾಮ ತಪ್ಪಿತ್ತು, ಅಪ್ಪರ ಅಲ್ಲೇ ಗುಡಿಯಾಗಿ ಇರುವವರು.ನಾ ಏನರ ಅದಾವ ಇದು ಅವರಿಗೆ ಹೇಳುತ್ತಿದ್ದೆ ಅವರು ಕೇಳಿದ್ದಲ್ಲ ತಿಳಿಸಿ ಹೇಳೋರು.

ನನಗೆ ಜ್ಞಾನ ಸಿಂಧು ಜ್ಞಾನಪೀಪಾದನಾ ಸ್ಥಳ ಪರಮಾನುಭವ ಬೋಧೆ ಹಂಚಿಕರನ ಹಿಂಗ ಎಲ್ಲಾ ನಮೂನೆ ಗ್ರಂಥಗಳನ್ನು ತಂದು ಕೊಟ್ಟರು. ನಾನು ಅದನ್ನು ಓದಾಂವಾ ಅವರು ಬಿಡಿಸಿ ಬಿಡಿಸಿ ಹೇಳುವುದು ಮಾಡುತ್ತಿದ್ದರು.ಇಂದು ಮಾಡಿ ಮಾಡಿ ಅಪ್ಪವರಿಂದ ಜ್ಞಾನ ಪಡೆದುಕೊಂಡೆ ಎಂದು ಹಸಣ್ಮುಖಿಯಾಗಿ ಬಸಪ್ಪ ಶರಣರು ಹೇಳುವವರು.

ನಮ್ಮ ಒಬ್ಬ ತಾಳಿಕೋಟಿ ಮಾಸ್ಟರ್ ಅಂತ ಇದ್ದ ಮ್ಯಾಟ್ರಿಕ್ ಓದಿದವ ಶಾಣೆನು ಇದ್ದ. ಅವನು ಉಪದೇಶ ತೊಗೊಂಡಿದ್ದ. ನಾವು ಸಾಯಂಕಾಲ ಎಲ್ಲರೂ ಕೂಡಾವ್ರು. ಅವರು ಪ್ರಶ್ನೆ ಮಾಡುವರು ಗುರುಗಳು ಅದನ್ನು ಬಿಡಿಸಿ ಬಿಡಿಸಿ ಹೇಳೋರು.ನಾವು ಸುಮ್ನೆ ಕುಂತ ಕೇಳುವವ. ಮುಂದೆ ಪಂಚಿಕರಣ ಕೋಷ್ಟಕ ಹಾಕಿ ಹಾಕಿ ತಿಳಿಸಿದರು. ಸ್ವಾಮಿಗಳು ನನಗೂ ತಿಳಿಸಿದರು.ಅದರ ಅವಂಗ ತಿಳಿಸಲಿಲ್ಲ.

ಮಾಸ್ಟರ್ ಅಂದ್ರುಗುರುಗಳು •

ಯಾಕರಪ್ಪ ….!

ನಿನ್ನ ಬುದ್ಧಿ ತಗಣಿ ತಿಂದದೇನು ?ಸರಿ ಆ ಕಡೆ . ಪಂಚಿಕರಣ ನಿನಗೆ ತಿಳಿಯಂಗಿಲ್ಲ ಬಿಡು. ಆ ಬಸಪ್ಪಗೆ ತಿಳಿತದ ನಿನಗೆ ತಿಳಿಯವಲ್ಲದು ಅಂದ್ರು.ಗುರುಗಳು ಮುಂದ ಅವನಿಗೆ ತಿಳಿಸಲೇ ಇಲ್ಲ.

ನನಗೆ ಬಹಳ ಸಂತೋಷದಿಂದ ಕಳಿಸುವರು. ನಾ ಕಲಿತೀನ್ರಿ , ಮಾಸ್ತರು ತಿಳಿಲಾರದ್ದು ಮುಂದೆ ನನಗೆ ಬಂದು ಕೇಳಿ ತಿಳಿಸಿಕೊಳ್ಳಕ ಹತ್ತಿದ.

ಮುಂದುವರೆಯುತ್ತದೆ …..

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.