Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಯಾರು ನೀನು ?? ಇಲ್ಲೇಕೆ ಬಂದೆ ??
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾರು ನೀನು ?? ಇಲ್ಲೇಕೆ ಬಂದೆ ??

ಶಾಸ್ತ್ರ ಎಲ್ಲರೂ ಹೇಳುತ್ತಾರೆ ಶಾಸ್ತ್ರ ಹೇಳಿದರೆ ಏನಾಯ್ತು ಗುರುವಿನ ಸಲುವಾಗಿ ಸಿದ್ಧಾರೂಢರು ಎಲ್ಲಾ ಜಗತ್ತು ತಿರುಗಾಡಿದರು ಸುರಪುರದ ಒಂದು ಮಠಕ್ಕೆ ಹೋದರು ಅಲ್ಲಿ ಎಷ್ಟೋ ಮಂದಿ ಸತ್ಪುರುಷರಿದ್ದರು ಈತ ಸಣ್ಣ ಹುಡುಗ ಅಲ್ಲಿ ಹೋಗಿ ಸತ್ಪುರುಷರಿಗೆ ನಮಸ್ಕಾರ ಮಾಡ್ಯಾನ, ಯಾರು ನೀನು ? ಇಲ್ಲೇಕೆ ಬಂದೆ ? ಅಂತ ಕೇಳಿದರು ನಾನು ತಕ್ಕ ಗುರುವಿನ ಹುಡುಕಾಟದಲ್ಲಿ ಬಂದೀನಿ ಅಂದ್ರು ಮುಂದ ಕೇಳ್ತಾರೆ – ಇಲ್ಲಿ ಅಂತವರು ಯಾರಾದರೂ ಇರುವರೇ ?ಎಂದರು. ಇಲ್ಲ ಇಲ್ಲಿ ಅಂತವರು ಯಾರು ಇಲ್ಲ […]

ಶಾಸ್ತ್ರ ಎಲ್ಲರೂ ಹೇಳುತ್ತಾರೆ ಶಾಸ್ತ್ರ ಹೇಳಿದರೆ ಏನಾಯ್ತು ಗುರುವಿನ ಸಲುವಾಗಿ ಸಿದ್ಧಾರೂಢರು ಎಲ್ಲಾ ಜಗತ್ತು ತಿರುಗಾಡಿದರು ಸುರಪುರದ ಒಂದು ಮಠಕ್ಕೆ ಹೋದರು ಅಲ್ಲಿ ಎಷ್ಟೋ ಮಂದಿ ಸತ್ಪುರುಷರಿದ್ದರು ಈತ ಸಣ್ಣ ಹುಡುಗ ಅಲ್ಲಿ ಹೋಗಿ ಸತ್ಪುರುಷರಿಗೆ ನಮಸ್ಕಾರ ಮಾಡ್ಯಾನ,
ಯಾರು ನೀನು ? ಇಲ್ಲೇಕೆ ಬಂದೆ ? ಅಂತ ಕೇಳಿದರು
ನಾನು ತಕ್ಕ ಗುರುವಿನ ಹುಡುಕಾಟದಲ್ಲಿ ಬಂದೀನಿ ಅಂದ್ರು ಮುಂದ ಕೇಳ್ತಾರೆ -
ಇಲ್ಲಿ ಅಂತವರು ಯಾರಾದರೂ ಇರುವರೇ ?ಎಂದರು. ಇಲ್ಲ ಇಲ್ಲಿ ಅಂತವರು ಯಾರು ಇಲ್ಲ ನೀನು ಮುಂದೆ ಅಮರಗೊಂಡಕ್ಕೆ ಹೋಗು ಅಲ್ಲಿ ಗಜದಂಡ ಸ್ವಾಮಿಗಳು ಅಂತದಾರಅವರು ನಿನಗೆ ಸರಿಯಾದ ಗುರುವನ್ನು ತೋರಿಸುತ್ತಾರೆ.
ಮುಂದ ಸಿದ್ದಾರೂಢರು ಗಜದಂಡ ಸ್ವಾಮಿಗಳ ಹುಡುಕಾಟದಲ್ಲಿ ಹೋಗುತ್ತಾರೆ. ಹೋಗಿ ಅಲ್ಲಿ ದೀಕ್ಷೆ ಪಡೆಯುತ್ತಾರೆ. ಇಂವ ಗುರು ಅದಾನಂತ ಅವನ ವೇಷಭೂಷಣ ನೋಡಿ ಅವನ ಪಾದಕ್ಕೆ ಬಿದ್ದರು.ಅವ ಹೆಂಗ್ ಅದನ್ನು ಏನು ? ಅವನ ನಡಿ ಏನು ? ನೀತಿ ಏನು ?ಇಬ್ಬರೂ ಕುರುಡರು ಸೇರಿ ಹಳ್ಳ ಬಿದ್ದಂಗಾಯ್ತು. ಬಳ್ಳಿಗುರುಡರು ಕೂಡಿ ಹಳ್ಳವನು ಬಿದ್ದಂತೆ.ಒಳ್ಳೆಯ ಸದ್ಗುರುವಿನ ಉಪದೇಶವಿಲ್ಲದೆ ಎಲ್ಲಿಹುದು ಮುಕ್ತಿ ಎಂದು ಸರ್ವಜ್ಞ. ಮತ್ತು ಕಣ್ಣ ಇದ್ದವ ಆದರೆ ಕರ್ಕೊಂಡು ಹೋಗ್ತಾನೆ ಅದಕ್ಕೆ ಗುರು ತಾಯಿ ತಂದೆವ್ವ ಗುರು ಬಂದು ಬಳಗವ್ವ ಗುರುದೇವ ಪರಮಾತ್ಮ ತಂಗಿ ಇದರ ನಿಜವನ್ನು ತಿಳಿ ಮಂಗಲಾಂಗಿ ಗುರುವಿನ ಕರುಣೆಯ ಮರೆತು ನಾವಿದ್ದರೆ ಗುರುಪಾದಕ್ಕೆ ಹೊಂದಿ ಆತನ ಕರುಣೆ ನಾವು ಹೊಂದಿದ್ದರೆ ಅಂತಃಕರಣದ ಭಾವದಿಂದಅವರ ಕರುಣೆ ತಪ್ಪಿತು ಅಂದ್ರೆ ನರಕ ಆಗುತ್ತದೆ.
ಗುರು ಹರನೆಂದು ತಿಳಿದು ನರನೆಂದು ಜರಿದರೆ ನರಕ ತಪ್ಪದು ಸರ್ವಜ್ಞ ಅಂತಾನ.ಪರಮಾತ್ಮ ಅದಾನಂತ ನಾವು ಅವನ ಪಾದಕ್ಕೆ ಹೊಂದಿವೆಒಳ್ಳೆ ನಾವು ಅವನಿಗೆ ನರ ಅಂದ್ರೆ ನರಕಪ್ರಾಪ್ತಿಯಾಗುತ್ತದೆ ಗುರು ಮುನಿದೊರೆ ನಮಗೆ ಯಾರು ಕಾಯುವುದಿಲ್ಲ ಹರ ಮುನಿದರೆ ನಮಗೆ ಯಾರಾದರೂ ಕಾಯ್ತಾರೆ .
ಛಿದ್ರ ಗುಣಗಳೆಲ್ಲ ಚೀಕರಿಸಿ ಹೋಗಲಿ ನಮ್ಮ ಕಾಮ ಕ್ರೋಧ ಲೋಭ ಮದ ಮತ್ಸರ ಮೋಹಗಳೆಂಬ ಅರಿಷಡ್ ವರ್ಗಗಳು ಅದಾವು. ಅವು ಸಮುದ್ರದ ಅಲೆಗಳು ಬಂದಂಗೆ ಒಂದರ ಮೇಲೆ ಒಂದರಂತೆ ಬರ್ತಾವು. ಕಾಮ ಅಂದ್ರ ಆಸೆ ಅದು ಸಿಕ್ತು ಅಂದ್ರೆ ಅದು ಬಿಡಬಾರದು ಯಾರಿಗೂ ಕೊಡಬಾರದು ಅಲ್ಲಿ ಕ್ರೋಧ ಬರ್ತದ ಅದು

ವಶಾ ಆತು ಅಂದ್ರೆ ಅದನ್ನು ಬಚ್ಚಿ ಇಡಬೇಕು. ಲೋಭ ಬಂತಂದ್ರ ಮುಂದ ಮೋಹ ಬರ್ತದೆ ಇದನ್ನು ಯಾರರ ನೋಡಿದರೆ ಇದನ್ನು ಮಕ್ಕಳಿಗೆ ಕೊಡಂಗಿಲ್ಲ ಇನ್ನಾರಿಗೂ ಕೊಡಂಗಿಲ್ಲ ಮೋಹ ಗುಣ ಬಂದ ಮ್ಯಾಲೆ ನನ್ನ ಹತ್ತಿರ, ಇಷ್ಟೆಲ್ಲಾ ಸಂಪತ್ತು ಐತಿ ನಾನೇ ಶ್ರೇಷ್ಠ ನನ್ನ ಸಮಾನ ಯಾರು ? ಇಲ್ಲ ಇಲ್ಲಿ ಬಂತು ಮದ, ಮದ ಬಂತಿಲ್ಲ ಅಲ್ಲಿ ನಮಗಿಂತ ಯಾರ ಹೆಚ್ಚಿನವರು ? ಹೊಟ್ಟೆಕಿಚ್ಚು ಬರುತ್ತದೆ ಅಂದರೆ ಅಲ್ಲಿ ಮತ್ಸರ ಬಂತು ಇಂವ ನಮಗಿಂತ ಬಲ ಅದನಲ್ಲ . ಹಂಗ ಇವು ಶಟ್ ವೈರಿಗಳು ಮೇಲೊಂದು ಬರ್ತಾವು ಮತ್ತು ಇವು ಯಾವು ಸ್ಥಿರ ಅಲ್ಲ. ಇವುಗಳನ್ನು ನಮ್ಮಿಂದ ಇವುಗಳನ್ನು ಏನು ಮಾಡಕ್ಕಾಗೋದಿಲ್ಲ.
ಈ ಮೊದಲೇ ದೇವರು ನಿರ್ಧರಿಸಿದಂತೆ ಯಾರ ತಂದೆ ತಾಯಿ ಹೊಟ್ಟೆಒಳಗ ಹುಟ್ಟಬೇಕು ಯಾರು ಹೆಂಡ್ ಇರಾಗಬೇಕು ಯಾರು ಮಕ್ಕಳಾಗಬೇಕು ಯಾರು ಅಧಿಕಾರ ಮಾಡಬೇಕು ಎಷ್ಟು ಸಿರಿವಂತಿಕೆ ಬರಬೇಕು ಎಷ್ಟು ಬಡತನ ಇರಬೇಕು ಯಾರ ಕಡೆಯಿಂದ ಪೂಜೆಗೊಳ್ಳಬೇಕು ಯಾವಾಗ ಸಾಯಬೇಕು ಇವೆಲ್ಲವೂ ಮೊದಲೇ ದೇವರಿಂದ ನಿರ್ಧರಿಸಲ್ಪಟ್ಟಿವೆ.
ತದನಂತರ ದೇವರು ನಮಗೆ ಬಹುಲಕಕ್ಕೆ ಕಳಿಸಿ ಯಾನ ಭೂಲೋಕಕ್ಕೆ ಕಳಿಸಿದ್ದಾನೆ ಇದ್ದದ್ದು ವಿಚಾರ ಮಾಡಿದ ಅದು ಹೆಚ್ಚು ಆಗುವುದಿಲ್ಲ ಕಡಿಮೆಯೂ ಆಗುವುದಿಲ್ಲ ಇದು ಸತ್ಯ ಆದ ಮತ್ತ ಇಷ್ಟೆಲ್ಲ ಗೊತ್ತಿದ್ರು ಇದು ಹಂಗ ತಿಳಿಯಂಗಿಲ್ಲ ಮಹಾತ್ಮರ ಸಂಘ ಶಾಸ್ತ್ರ ಪರಿಣಿತಿಯಿಂದ ಇದೆಲ್ಲ ತಿಳಿತದ
ಇದು ತಿಳಿತು ಅಂದ್ರೆ ಚಿಂತೆ ಆಗುವುದಿಲ್ಲ. ಇನ್ನೊಂದಕ್ಕೆ ಆಸೆ ಮಾಡೋದಿಲ್ಲ ಆರಾಮಾಗಿ ಗುರುನಾಥನ ಧ್ಯಾನ ಸತ್ಪುರುಷರ ದರುಶನದಿಂದ ತುಂಬಾ ಸಂತೋಷದಿಂದ ಕಾಲ ಕಳೆತನ ನೀವು ಛಿದ್ರ ಗುಣಗಳೆಲ್ಲ ಸ್ವೀಕರಿಸಿ ಹೋಗಲಿ ಪ್ರಣಮ ರುದ್ರಾಕ್ಷಿ ಧರಿಸವ ತಂಗಿ ಪ್ರಣಮ ಅನ್ನುವಂತಹ ರುದ್ರಾಕ್ಷಿ ಅಂದ್ರೆ ಅದು ಐದು ಅಕ್ಷರಗಳ ಮಂತ್ರ ಆ ಮಂತ್ರ ನಮ್ಮಲ್ಲಿ ಎಡಬಿಡದೆ ಸಂಚರಿಸಬೇಕು.

•ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.