Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಾಗು “ಮದುವೆ” ಆಗ್ಲೇಬೇಕು
- ಸಿನಿಮಾ

ನಾಗು “ಮದುವೆ” ಆಗ್ಲೇಬೇಕು

ನಾಗು “ಮದುವೆ” ಆಗಲೇಬೇಕು ನಾಗುಗೆ ವಧು ಬೇಕಾಗಿದೆ,ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಚಂದನವನದ ನಟಿ,ಜಿಮ್ನಾಸ್ಟಿಕ್ ವಿಮೆನ್ ಎಂದೇ ಖ್ಯಾತಿ ಪಡೆದಿರುವ ಚಿತ್ರಾಲ್ ರಂಗಸ್ವಾಮಿ, ರೈತರು ಮತ್ತು ರೈತರ ಮಕ್ಕಳು ಎಂದರೆ ಒಂಥರಾ ಅಸಡ್ಡೆ ಭಾವನೆ ಇದೆ, ಹಳ್ಳಿಯಲ್ಲಿ ಇರುವವರಿಗೆ ತಮ್ಮ ಮಗಳನ್ನ ಕೊಡುವುದು ಹೇಗೆ ಎಂಬ ಪ್ರಶ್ನೆಯಲ್ಲಿ ಈಗಿನ ಪೋಷಕರು ಇದ್ದಾರೆ, ಇದು ಒಂದು ಸಣ್ಣ ಸಂಗತಿಯಲ್ಲ ದೊಡ್ಡ ಯಕ್ಷಪ್ರಶ್ನೆಯಾಗಿ ಎಲ್ಲ ರೈತರಿಗೂ ಕಾಡುತ್ತಿದ್ದು, ಇತ್ತೀಚೆಗೆ ರೈತ ಯುವಕನೊಬ್ಬ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ […]

ನಾಗು “ಮದುವೆ” ಆಗಲೇಬೇಕು

ನಾಗುಗೆ ವಧು ಬೇಕಾಗಿದೆ,ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಚಂದನವನದ ನಟಿ,ಜಿಮ್ನಾಸ್ಟಿಕ್ ವಿಮೆನ್ ಎಂದೇ ಖ್ಯಾತಿ ಪಡೆದಿರುವ ಚಿತ್ರಾಲ್ ರಂಗಸ್ವಾಮಿ, ರೈತರು ಮತ್ತು ರೈತರ ಮಕ್ಕಳು ಎಂದರೆ ಒಂಥರಾ ಅಸಡ್ಡೆ ಭಾವನೆ ಇದೆ, ಹಳ್ಳಿಯಲ್ಲಿ ಇರುವವರಿಗೆ ತಮ್ಮ ಮಗಳನ್ನ ಕೊಡುವುದು ಹೇಗೆ ಎಂಬ ಪ್ರಶ್ನೆಯಲ್ಲಿ ಈಗಿನ ಪೋಷಕರು ಇದ್ದಾರೆ, ಇದು ಒಂದು ಸಣ್ಣ ಸಂಗತಿಯಲ್ಲ ದೊಡ್ಡ ಯಕ್ಷಪ್ರಶ್ನೆಯಾಗಿ ಎಲ್ಲ ರೈತರಿಗೂ ಕಾಡುತ್ತಿದ್ದು, ಇತ್ತೀಚೆಗೆ ರೈತ ಯುವಕನೊಬ್ಬ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ ಬಳಿ, ರೈತರಿಗೆ ರೈತರ ಮಕ್ಕಳಿಗೆ ಮದುವೆಯಾಗುತ್ತಿಲ್ಲ ಇದಕ್ಕೆ ಏನಾದರೂ ಒಂದು ಯೋಜನೆ ಮಾಡಿ ಎಂದು ಹೇಳಿದ್ದು ದೊಡ್ಡ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತಿದೆ.

“ನಾಗುಗೆ ವಧು ಬೇಕಾಗಿದೆ” ಇದೊಂದು ಸಮಾಜಮುಖಿ ಚಿತ್ರವಾಗಿದ್ದು ಇದರಲ್ಲಿ ನಾನು ಸಹ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದೇನೆ, ನಿರ್ದೇಶಕ ರಾಜ್ ಕಾರ್ತಿಕ್ ತುಂಬಾ ಒಳ್ಳೆಯ ಕಥೆಯನ್ನ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಇಂತಹ ಕಥೆಗಳು ಎಲ್ಲರಿಗೂ ತಲುಪಬೇಕು ಮದುವೆಯಾಗದ ಅದರಲ್ಲೂ ವಿಶೇಷವಾಗಿ ರೈತರ ಹಾಗೂ ರೈತರ ಮಕ್ಕಳಿಗೆ ಆದಷ್ಟು ಬೇಗ ಹೆಣ್ಣು ಸಿಕ್ಕು ಮದುವೆಯಾಗಬೇಕು ಎಂಬುದು ನಮ್ಮ ಚಿತ್ರತಂಡದ ಆಶಯ ಎಂದರು.

ನಿರ್ದೇಶಕ ರಾಜ್ ಕಾರ್ತಿಕ್ ಮಾತನಾಡಿ,
ನೂರಕ್ಕೂ ಹೆಚ್ಚು ಹೆಣ್ಣು ನೋಡಿದ ನಾಗು ನಮ್ಮ ಚಿತ್ರದ ನಾಯಕ,ಆತನ ತೊಳಲಾಟ,ತಾಯಿಯ ಸಂಕಟ ಹೇಳುವ ಕಥೆಯನ್ನೇ ಸಿನಿಮಾದ ಪ್ರಮುಖ ಹೈಲೈಟ್ ಆಗೀ ಮಾಡಿಕೊಂಡಿದ್ದೇನೆ, ನಗರ ಕೇಂದ್ರಗಳು ಸೇರಿದಂತೆ
ಈಗ ಸಧ್ಯ ಹಳ್ಳಿಯ ಕಡೆ, ಮದುವೆಯಾಗಲು ಹೊರಟಿರುವ ರೈತರಿಗೆ ಹಾಗೂ ರೈತರ ಮಕ್ಕಳಿಗೆ, ಮದುವೆ ಅನ್ನೋ ವಿಷಯವೇ ತುಂಬಾ ದೊಡ್ಡ ಸಮಸ್ಯೆ ಆಗಿ ನಿಂತಿದ್ದನ್ನ ನಾನು ಕಣ್ಣಾರೆ ಕಂಡಿದ್ದೇನೆ ಕಿವಿ ಯಾರೆ ಕೇಳಿದ್ದೇನೆ ಗಮನಿಸಿದ್ದೇನೆ, ಅದರ ಮೇಲೆ ಬೆಳಕು ಚೆಲ್ಲುವ ಸಿನಿಮಾನೇ “ನಾಗುಗೆ ವಧು ಬೇಕಾಗಿದೆ”

ನಾಯಕ ನಟನಾಗಿ ದತ್ತು,ಸೋನಿಕಾ,
ಅಪೂರ್ವಶ್ರೀ, ಚಿತ್ರಾಲ್ ರಂಗಸ್ವಾಮಿ,ಹಿರಿಯ ನಟಿ
ರೇಖಾದಾಸ್,ಬೌ ಬೌ ಬಿರಿಯಾನಿ ಹಿರಿಯ ನಟ ಜಯರಾಮ್ ಸೇರಿದಂತೆ ಇನ್ನೂ ಪ್ರತಿಭಾವಂತ ಕಲಾವಿದರ ದಂಡು ಈ ಚಿತ್ರದಲ್ಲಿದೆ, ಸಮಾಜದಲ್ಲಿನ ಸಮಸ್ಯೆಯನ್ನ ಎತ್ತಿ ಹಿಡಿಯುವ ಕಾರಣಇಂತದೊಂದು ಪ್ರಯತ್ನ ಮಾಡಿದ್ದು, ನಿಮ್ಮ ಸಹಕಾರವಿರಲಿ ಎಂದು ಮಾಧ್ಯಮದವರಲ್ಲಿ ಕೇಳಿಕೊಂಡರು.
ನಾಗುಗೆ ವಧು ಬೇಕಾಗಿದೆ ಅನ್ನೋ ಈ ಚಿತ್ರ ಒಳ್ಳೆಯ ಬಜೆಟ್ ನಲ್ಲಿ ಮಾಡಿದ್ದು,ಶೂಟಿಂಗ್,ಕ್ಯಾಮರಾಮ್ಯೂಸಿಕ್, ಎಲ್ಲವೂ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ಅಷ್ಟೇ ಅಲ್ಲದೆ,ಚಿತ್ರ ನೋಡಿದ,ಸೆನ್ಸಾರ್ ಅಧಿಕಾರಿಗಳು,ಅಪ್ರಿಸಿಯೇಟ್ ಮಾಡಿದ್ದು ವಿಶೇಷ ಎಂದರು.

ಹಿರಿಯ ನಟಿ ಅಪೂರ್ವಶ್ರೀ ಮಾತನಾಡಿ, ಇಲ್ಲಿಯ ತನಕ ನಾನೊಬ್ಬ ಕಲಾವಿದೆಯಾಗಿ ಬಹಳಷ್ಟು ವಿಭಿನ್ನ ಕಥೆಗಳ ಸಿನಿಮಾಗಳನ್ನು ಮಾಡಿದ್ದೇನೆ, ಪ್ರತಿಯೊಂದು ಪಾತ್ರವೂ ಅದರದೇ ಆದ ತೂಕ ಮತ್ತು ಘನತೆಯನ್ನು ಹೊಂದಿದ್ದು ಇಲ್ಲೂ ಸಹ ನಾನು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಮದುವೆಯಾಗದ ಮಗ ಮತ್ತು ಮಗನ ಮದುವೆ ನೋಡಬೇಕು ಎಂಬ ಆಶಾ ಭಾವನೆಯಲ್ಲಿರುವ ತಾಯಿ, ಈ ಸೂಕ್ಷ್ಮಗಳ ಮೇಲೆ ಕಥೆ ತುಂಬಾ ಚೆನ್ನಾಗಿ ಕ್ಯಾರಿಯಾಗಿದೆ, ಈ ಚಿತ್ರದ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನ ನಿರ್ದೇಶಕ ರಾಜಕಾರ್ತಿಕ್ ನೀಡಲಿದ್ದಾರೆ ಎಂಬ ಭರವಸೆ ನನಗಿದೆ ಎಂದರು.

ನಾಯಕ ನಟನ ಪಾತ್ರ ಮಾಡಿದ ದತ್ತು ಹೇಳಿದಂತೆ, ರೈತರು ನಿಜವಾಗಿಯೂ ಶ್ರೀಮಂತರು, ಭೂಮಿಯನ್ನು ಹೊಂದಿದ ವಿಚಾರಕ್ಕೂ ಶ್ರೀಮಂತರು ಹಾಗೆ ಹೃದಯವಂತಿಕೆಯಿಂದಲೂ ಶ್ರೀಮಂತರು ಆದರೆ ಅಂತಹ ರೈತರಿಗೆ ರೈತರ ಮಕ್ಕಳಿಗೆ ಯಾಕೆ ಹೆಣ್ಣು ಸಿಗುತ್ತಿಲ್ಲ ಎಂಬ ಪ್ರಶ್ನೆ ನನಗೆ ತುಂಬಾ ಕಾಡುತ್ತದೆ, ಈ ಚಿತ್ರ ಮಾಡುವುದಕ್ಕೂ ಮುಂಚೆ ನನಗೂ ಇದರ ಗಂಭೀರತೆ ಅರ್ಥವಾಗಿರಲಿಲ್ಲ ಆದರೆ ಚಿತ್ರ ಮಾಡಿದ ನಂತರ, ಜೊತೆ ಜೊತೆಗೆ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸತ್ಯ ಗೊತ್ತಾದ ಮೇಲೆ ನನಗೂ,ರೈತರ ಮೇಲೆ ಅನುಕಂಪ ಜಾಸ್ತಿಯಾಗಿದೆ ಎಂದು,ರೈತರ ಮೇಲಿನ ಪ್ರೀತಿಯನ್ನು ತೋಡಿಕೊಂಡರು..

ನಾಯಕಿ ಪಾತ್ರವನ್ನು ಮಾಡಿದ ಸೋನಿಕಾ ಮಾತನಾಡಿ, ಇದರಲ್ಲಿ ನನ್ನದು ತುಂಬಾ ತೂಕವಿರುವ ಪಾತ್ರ, ನಾಯಕನನ್ನ ತುಂಬಾ ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ, ಪ್ರಸ್ತುತ ಈಗಿನ ಯುವಕ ಯುವತಿಯರಿಗೆ ಈ ಸಿನಿಮಾ ನೋಡಿದಾಗ ತುಂಬಾ ಗಟ್ಟಿಯಾದ ಅಂಶ ಕಂಡುಬರುತ್ತದೆ ಹಾಗೆ ಅವರು ಕೂಡ ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ, ಎಂಬ ನಂಬಿಕೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಯೇ “ನಾಗುಗೆ ವಧು ಬೇಕಾಗಿದೆ” ಚಿತ್ರವನ್ನ ಇದೇ ತಿಂಗಳು ಬಿಡುಗಡೆ ಮಾಡುವ ಯೋಜನೆ ಬಂದಿದ್ದು, ಬಿಡುಗಡೆಯ ದಿನಾಂಕದ ಕುರಿತಾಗಿ ತಿಳಿಸುವದಾಗಿ ಚಿತ್ರತಂಡ ವಿನಂತಿಸಿಕೊಂಡಿತು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.