Thursday, 24 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ವಿಜಯ್ “ರುದ್ರಾಭಿಷೇಕಂ”
- ಸಿನಿಮಾ

ವಿಜಯ್ “ರುದ್ರಾಭಿಷೇಕಂ”

‘ ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗ ಕಂಡ,ಪ್ರತಿಭಾವಂತ ನಟ ಮತ್ತು ಅಷ್ಟೇ ಅದ್ಬುತ ಗಾಯಕ ಕೂಡಾ ಹೌದು. ಬಾಲ ಕಲಾವಿದನಾದಾಗಿನಿಂದಲೇ ಕಲೆ ಅನ್ನೋದನ್ನ ಕರಗತ ಮಾಡಿಕೊಂಡಿದ್ದ, ಕಲಾಸೇವೆಯ ಕುಟುಂಬದ ಮತ್ತೊಂದು ಕುಡಿ ಈ ಚಿನ್ನಾರಿ ಮುತ್ತ. ಚೆಂದನವನದಲ್ಲಿ ಬಹಳಷ್ಟು ಜನ ಬಾಲ ಕಲಾವಿದರು ಇವತ್ತು ದೊಡ್ಡ ಕಲಾವಿದರಾಗಿ ಬೆಳೆದಿದ್ದರು ಸಹ,ಅಂತಹ ಎಲ್ಲ ಕಲಾವಿದರನ್ನು ಮಾಸ್ಟರ್ ಅಥವಾ ಬೇಬಿ ಅಂತಾನೆ ಕರೆಯುವುದು,ಅಂತಹ ಗ್ರೇಟೆಸ್ಟ್ ವ್ಯಕ್ತಿಗಳನ್ನು ಸಿನಿ ಪ್ರೇಮಿಗಳು ಇವತ್ತಿಗೂ ತಮ್ಮ ನೆನಪಲ್ಲಿ ಇಟ್ಟುಕೊಂಡಿದ್ದಲ್ಲದೇ ಅವರು ಮಾಡುವ ಚಿತ್ರಗಳನ್ನು ಇವತ್ತಿಗೂ […]

‘ ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗ ಕಂಡ,ಪ್ರತಿಭಾವಂತ ನಟ ಮತ್ತು ಅಷ್ಟೇ ಅದ್ಬುತ ಗಾಯಕ ಕೂಡಾ ಹೌದು.

ಬಾಲ ಕಲಾವಿದನಾದಾಗಿನಿಂದಲೇ ಕಲೆ ಅನ್ನೋದನ್ನ ಕರಗತ ಮಾಡಿಕೊಂಡಿದ್ದ, ಕಲಾಸೇವೆಯ ಕುಟುಂಬದ ಮತ್ತೊಂದು ಕುಡಿ ಈ ಚಿನ್ನಾರಿ ಮುತ್ತ.

ಚೆಂದನವನದಲ್ಲಿ ಬಹಳಷ್ಟು ಜನ ಬಾಲ ಕಲಾವಿದರು ಇವತ್ತು ದೊಡ್ಡ ಕಲಾವಿದರಾಗಿ ಬೆಳೆದಿದ್ದರು ಸಹ,ಅಂತಹ ಎಲ್ಲ ಕಲಾವಿದರನ್ನು ಮಾಸ್ಟರ್ ಅಥವಾ ಬೇಬಿ ಅಂತಾನೆ ಕರೆಯುವುದು,ಅಂತಹ ಗ್ರೇಟೆಸ್ಟ್ ವ್ಯಕ್ತಿಗಳನ್ನು ಸಿನಿ ಪ್ರೇಮಿಗಳು ಇವತ್ತಿಗೂ ತಮ್ಮ ನೆನಪಲ್ಲಿ ಇಟ್ಟುಕೊಂಡಿದ್ದಲ್ಲದೇ ಅವರು ಮಾಡುವ ಚಿತ್ರಗಳನ್ನು ಇವತ್ತಿಗೂ ನೋಡುತ್ತಾರೆ,ಅಂತಹ ಸಾಲಲ್ಲಿ ಸದಾ ನಿಲ್ಲುವ ನಟ,ನಮ್ಮ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ.

ರುದ್ರಾಭಿಷೇಕಂ’ ಈ ವಾರ ತೆರೆಗೆ,ನಮ್ಮ ಕಲೆ, ಸಾಂಸ್ಕೃತಿಕ‌ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಹೇಳುವುದನ್ನು ಮುಂದುವರೆಸಿಕೊಂಡು ಬಂದಿರುವ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸ ಹೇಳುವ ಚಿತ್ರ ರುದ್ರಾಭಿಷೇಕಂ ಸೆ.25ರ ಶುಕ್ರವಾರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ, ಪ್ರಿಯಾಕಾ ತಿಮ್ಮೇಶ್ ನಾಯಕ, ನಾಯಕಿಯಾಗಿ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಿದ್ದಾರೆ.


ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮೊದಲ ಬಾರಿಗೆ ತಂದೆ, ಮಗನಾಗಿ, ಪ್ರಿಯಾಂಕ ತಿಮ್ಮೇಶ್ ಹಳ್ಳಿಯ ಶಿವನ ಭಕ್ತೆ ಹಾಗೂ ಸಿಟಿ ಹುಡುಗಿಯಾಗಿ ದ್ವಿಪಾತ್ರದಲ್ಲಿ ನಟಿಸಿದ್ದು, ಗೌಡ್ರು ಪಾತ್ರದಲ್ಲಿ ಬಲ ರಾಜವಾಡಿ,ಅವರು ಕಾಣಿಸಿಕೊಂಡಿದ್ದಾರೆ.’ರುದ್ರಾಭಿಷೇಕಂ’ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಸಂಸ್ಥೆಯ ಮೊದಲ ಚಿತ್ರವಾಗಿದ್ದು, ಮಂಜುನಾಥ ಕೆ.ಎನ್, ಎನ್.ಜಯರಾಮಪ್ಪ, ಕೆ.ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್.ರವಿಕುಮಾರ್‌, ಕುಸುಮ ವಸಂತ್ ಕುಮಾರ್ ಸೇರಿದಂತೆ 9 ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


ದೈವದ ಹಿನ್ನೆಲೆಯ ಜನಪದ ಕಲೆಯನ್ನು ನಾಡಿನ ಮನೆ ಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಸಿನಿಮಾದ ಉದ್ದೇಶ. ಚಿತ್ರದಲ್ಲಿ ನಾನೂ ಒಬ್ಬ ತತ್ವಜ್ಞಾನಿಯಾಗಿ ನಟಿಸಿದ್ದೇನೆ. ತಂದೆ, ಮಗ ಎರಡೂ ಪಾತ್ರಗಳ ಜತೆ ನನ್ನ ಪಾತ್ರ ಸಾಗಲಿದೆ ಎಂದು ನಿರ್ದೇಶಕ ವಸಂತಕುಮಾರ್ ಹೇಳಿದರು.
ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ.


ಈ ಕಥೆಯ ಮೂಲಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರ ಹೇಳುತ್ತದೆ. ವಿ.ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿ.ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.