Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಡೈಲಾಗ್ ಕಿಂಗ್ ಇದ್ದಲ್ಲಿ……!!!
- ಸಿನಿಮಾ

ಡೈಲಾಗ್ ಕಿಂಗ್ ಇದ್ದಲ್ಲಿ……!!!

ಡೈಲಾಗ್ ಕಿಂಗ್ ಇದ್ದಲ್ಲಿ – ಎನರ್ಜಿ ಇಲ್ಲಾಂದ್ರೆ …?? ಸತ್ಯ ಸನ್ ಆಫ್ ಹರಿಶ್ಚಂದ್ರ ಟೀಸರ್ ಲಾಂಚ್ ಆದನಂತರ ಮಾತನಾಡಿದ ನಿರ್ದೇಶಕ ಸಚಿನ್ ವಾಲಿ,, ನಿರ್ಮಾಪಕರಿಗೆ ಧನ್ಯವಾದ ಹೇಳುವುದರ ಮೂಲಕ ಮಾತು ಶುರು ಮಾಡಿದ ನಿರ್ದೇಶಕ, ತಮ್ಮ ಕಥೆಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದು, ಅದೇ ರೀತಿಯಾಗಿ ನಾಯಕ ನಿರೂಪ ಭಂಡಾರಿ ಮತ್ತು ಸಾಯಿ ಕುಮಾರ್ ರಂತಹ ದಿಗ್ಗಜ ಕಲಾವಿದರು,ನನ್ನ ಕಥೆಗೆ ಅತೀ ದೊಡ್ಡ ವೆಪನ್ ಆಗಿ ಕೆಲಸ ಮಾಡಿದ್ದಾರೆ ಎಂದರು.ಎತ್ತಣ ಕೋಗಿಲೆ ಎತ್ತಣ ಮಾಮರ ಎಂಬಂತೆ, ಪೂನಾದಲ್ಲಿದ್ದ […]

ಡೈಲಾಗ್ ಕಿಂಗ್ ಇದ್ದಲ್ಲಿ – ಎನರ್ಜಿ ಇಲ್ಲಾಂದ್ರೆ …??

ಸತ್ಯ ಸನ್ ಆಫ್ ಹರಿಶ್ಚಂದ್ರ ಟೀಸರ್ ಲಾಂಚ್ ಆದನಂತರ ಮಾತನಾಡಿದ ನಿರ್ದೇಶಕ ಸಚಿನ್ ವಾಲಿ,,

ನಿರ್ಮಾಪಕರಿಗೆ ಧನ್ಯವಾದ ಹೇಳುವುದರ ಮೂಲಕ ಮಾತು ಶುರು ಮಾಡಿದ ನಿರ್ದೇಶಕ, ತಮ್ಮ ಕಥೆಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದು, ಅದೇ ರೀತಿಯಾಗಿ ನಾಯಕ ನಿರೂಪ ಭಂಡಾರಿ ಮತ್ತು ಸಾಯಿ ಕುಮಾರ್ ರಂತಹ ದಿಗ್ಗಜ ಕಲಾವಿದರು,ನನ್ನ ಕಥೆಗೆ ಅತೀ ದೊಡ್ಡ ವೆಪನ್ ಆಗಿ ಕೆಲಸ ಮಾಡಿದ್ದಾರೆ ಎಂದರು.
ಎತ್ತಣ ಕೋಗಿಲೆ ಎತ್ತಣ ಮಾಮರ ಎಂಬಂತೆ, ಪೂನಾದಲ್ಲಿದ್ದ ಕನ್ನಡಿಗ,ನನ್ನ ಕಥೆಗೆ ನಿರ್ಮಾಪಕ ಆಗಿ ಬಂದದ್ದು ನಮ್ಮ ಹೆಮ್ಮೆ,ಇದೊಂದು ಒಳ್ಳೆಯ ಚಿತ್ರವಾಗತ್ತೆ ಎಂದರು.

ನಂತರ ಮಾತು ಶುರು ಮಾಡಿದ
ನಿರೂಪ ಭಂಡಾರಿ,ಶಿವಣ್ಣ & ಶಿವಣ್ಣನ ಎನರ್ಜಿ ಬಗ್ಗೆ ನಿರರ್ಗಳವಾಗಿ ಹೆಮ್ಮೆ ಮತ್ತು ಅಭಿಮಾನದಿಂದ ಮಾತಾಡಿ, ಆ ಸಮಯದಲ್ಲಿ ಶಿವಣ್ಣ ಅವ್ರ ಆರೋಗ್ಯದ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ ನಾನು ಸುಮ್ಮನಾಗಿದ್ದೆ,ದೇವರ ಆಶೀರ್ವಾದ ಮತ್ತು ಸಿನಿಮಾ ಮೇಲಿನ ನಮ್ಮ ಪ್ರೀತಿ,ಕೊನೆಗೂ ಸಾಯಿಕುಮಾರ್ ಅವ್ರ ಮೂಲಕ ಶಿವಣ್ಣನಿಗೆ ವಿಷ್ಯ ಗೊತ್ತಾಗಿ
,ನಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದು ನಮಗೆ ದೊಡ್ಡ ಸಾರ್ಥಕ ಭಾವ ಕೊಟ್ಟಿದೆ ಎಂದು ಹೊಗಳಿದರು,ಅದೇ ರೀತಿಯಾಗಿ ಶಿವಣ್ಣನ ಎನರ್ಜಿ ನೆಕ್ಸ್ಟ್ ಲೆವೆಲ್ ಅದೇ ರೀತಿಯಾಗಿ,ಸಾಯಿಕುಮಾರ್ ಸರ್ ಕೂಡಾ ಖಡಕ್,ಸಿನಿಮಾ ಉದ್ಯಮಕ್ಕೆ ಬಂದು ಐವತ್ತು ವರ್ಷ ಕಳೆದಿದ್ದರು ಇದರ ಮೇಲಿನ ಪ್ರೀತಿ ಹಾಗೆ ಉಳಿಸಿಕೊಂಡಿದ್ದು ನೋಡಿ ನಮಗೆ ಹೆಮ್ಮೆ ಅನ್ನಿಸುತ್ತೆ
ನಾವು ಅದೃಷ್ಟವಂತರು ಎಂದುಕೊಂಡರು.

ಹಾಗೆ ಚಿತ್ರದಲ್ಲಿನ ಇಬ್ಬರು ಪ್ರತಿಭಾವಂತ ನಾಯಕಿಯರು,ಒಬ್ಬರು ಬೃಂದಾ ಆಚಾರ್ಯ ಇನ್ನೊಬ್ಬರು ಅಂಕಿತಾ ಅಮರ್ ಇಬ್ಬರ ನಟನೆ ಬಗ್ಗೆ ಹೊಗಳಿದ ನಿರೂಪ,ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ಲಹರಿ ವೇಲು ಮಾತನಾಡಿ,
ರಂಗಿತರಂಗ ಮತ್ತು ಬಾಹುಬಲಿ,ಎರಡು ನಮ್ಮ ಆಡಿಯೋ ಸಂಸ್ಥೆಯ ಕೂಸುಗಳು, ಎರಡು ಒಂದೇ ದಿನ ರಿಲೀಸ್ ಹಾಗೆ ಎರಡು ಸೂಪರ್ ಹಿಟ್, ಅದರಲ್ಲೂ ಕನ್ನಡ ಸಿನಿಮಾಗಳು ಗೆದ್ದಾಗ ನಮಗೆ ಬಹಳ ಖುಷಿ ಮತ್ತು ಹೆಮ್ಮೆ ಆಗತ್ತೆ ಎಂದರು.
ಸಾಯಿ ಕುಮಾರ್ ಒಂದು ದೊಡ್ಡ ಹಿಮಾಲಯ ಇದ್ದಂಗೆ,ನಾವೆಲ್ಲ ಅವರಿಂದ ಕಲಿಯುವುದು ತುಂಬಾ ಇದೇ ಎಂದರು.

ನಿರ್ಮಾಪಕ ಅಂಕಿತ್ ಮಾತನಾಡಿ,
ಎಲ್ಲ ಕನ್ನಡಿಗರಿಗೆ ನಮಸ್ಕಾರ,ನಾನು ಮೂಲತಃ ಮಹಾರಾಷ್ಟ್ರ ಮೂಲದ ಪುಣೆಯವನು,ನಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಕನ್ನಡದಲ್ಲಿ ಆಗ್ತಾ ಇದೆ ಎಂಬುದೇ ನನ್ನ ಸೌಭಾಗ್ಯ.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್,ಮಾಡಿದ ಪಾತ್ರ ಅವ್ರು ಕೊಟ್ಟ ಸಪೋರ್ಟ್ ಗೆ ಧನ್ಯವಾದ ಹೇಳಿ,ನಿರ್ದೇಶಕ ಸಚಿನ್ ವಾಲಿ ಹೇಳಿದ ಕಥೆ ಸಖತ್ ಆಗಿತ್ತು ಅದೇ ರೀತಿಯಲ್ಲಿ ಸಿನಿಮಾ ಮಾಡಿ ಕೊಟ್ಟಿದ್ದಾರೆ,ಸತ್ಯ ಸನ್ ಆಫ್ ಹರಿಶ್ಚಂದ್ರ ಅದ್ಭುತವಾಗಿ ಬಂದಿದೆ ಎಂದರು.

ಬೃಂದಾ ಆಚಾರ್ಯ..
ಇಂತದೊಂದು ಒಳ್ಳೆಯ ಚಿತ್ರದ ಭಾಗವಾಗಿರುವುದಕ್ಕೆ ನಾನು ಧನ್ಯ,ಕಲಾವಿದರಾದ ನಾವು ಎಷ್ಟೇ ಒಳ್ಳೇ ಕಥೆಗಳನ್ನು ಕೇಳಿ,ಅದರ ಭಾಗವಾಗಿ ಪಾತ್ರಗಳನ್ನು ಮಾಡಿ ಬಂದ ಮೇಲೆಯೂ ಸಹ ನಮಗೆ ಅನ್ನಿಸೋ ಫೀಲ್ ಅಂದ್ರೆ, ಅಯ್ಯೋ ನಾನು ಇನ್ನೂ ಚೆನ್ನಾಗ್ ಮಾಡಬೇಕಿತ್ತು ಅನ್ನಿಸತ್ತೆ, ಇದು ಕನ್ನಡದಲ್ಲಿ ಒಂದೊಳ್ಳೆ ಚಿತ್ರವಾಗತ್ತೆ ಎಂಬ ಭರವಸೆ ನನಗಿದೆ ಎಂದರು.

ಅಂಕಿತಾ ಅಮರ್ ಮಾತನಾಡಿ,ನಾನಿಲ್ಲಿ ಗಾನಾ ಎಂಬ ಪಾತ್ರ ಮಾಡ್ತಾ ಇದ್ದು, ಮಾಧ್ಯಮದ ಪ್ರತಿನಿಧಿಯಾಗಿ ನಟಿಸಿದ್ದು ನಿಮ್ಮೆಲ್ಲರ ಕೆಲಸ ಎಷ್ಟು ಮುಖ್ಯ ಅನ್ನೋದನ್ನು ನಾನು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.

ನಾಯಕ ನಟ ನಿರೂಪ ಭಂಡಾರಿ ಯವರ ತಂದೆ,ಲೆಜೆಂಡರಿ ನಿರ್ದೇಶಕ ಸುಧಾಕರ್ ಭಂಡಾರಿ ತಮ್ಮ ಮಗನ ಚಿತ್ರಕ್ಕೆ ಶುಭ ಹಾರೈಸಿ,ಡಾಕ್ಟರ್ ರಾಜಕುಮಾರ್ ರವರ ಸಿನಿಮಾಗಳು ಯಾಕೆ ಗೆಲ್ಲುತ್ತಿದ್ಧವು ಎಂಬುದಕ್ಕೆ ಬೆಸ್ಟ್ ಉದಾಹರಣೆ ಕೊಟ್ಟು,ಈಗಿನ ಕನ್ನಡ ಸಿನಿಮಾ ಉದ್ಯಮ ಮತ್ತು ನಿರ್ಮಾಪಕನ ಪರಿಸ್ಥಿತಿ ಹೇಗಿದೆ ಅಂದು ವಿವರಿಸಿದರು.

ಸಂಗೀತ ನಿರ್ದೇಶಕ
ಸಚಿನ್ ಬಸ್ರೂರು ಮಾತನಾಡಿ, ಅತೀ ದೊಡ್ಡ ತಾರಾಗಣವಿರುವ ಚಿತ್ರಗಳಿಗೆ ಕೆಲಸ ಮಾಡುವಾಗ,ಪ್ರತಿ ತಂತ್ರಜ್ಞನು ಸಹ ಹೆಮ್ಮೆ ಪಡ್ತಾನೆ ಎನ್ನುವುದರ ಮೂಲಕ ಎಲ್ಲರಿಗೂ ಗೌರವ ಸಲ್ಲಿಸಿದರು.

ಚಿತ್ರದಲ್ಲಿ ಇನ್ನೂ ಬಹಳ ಜನ ಕಲಾವಿದರು ನಟಿಸಿದ್ದು,ಅವರೆಲ್ಲರೂ ಹೇಳುವಂತೆ ಇದೊಂದು ಟೆಕ್ನಿಕಲಿ ಸೌಂಡ್ ಮಾಡುವ ಚಿತ್ರವಾಗತ್ತೆ,
ಪ್ರತಿಯೊಬ್ಬ ಕಲಾವಿದ, ಒಳ್ಳೇ ಕಂಟೆಂಟ್ ನ ಕಥೆಗೆ ಪಾತ್ರವಾಗಬೇಕು ಅಂತಾ ಕನಸು ಕಾಣ್ತಾರೆ,ಕೆಲವರಿಗೆ ಅದು ಸಾಧ್ಯ ಆಗೋದಿಲ್ಲ,ಅದು ನನ್ನ ವಿಷ್ಯ ಸತ್ಯ ಆಗಿದೆ. ಸಾಯಿ ಕುಮಾರ್ ಅವ್ರ ಸಿನಿಮಾಗಳನ್ನು ನೋಡ್ತಾ ಬೆಳೆದವರು ನಾನು,ಊರಲ್ಲಿದ್ದಾಗ ಟಿವಿಲಿ ಅವ್ರ ಸಿನಿಮಾ ಬರ್ತಾ ಇದ್ದಾಗ ಎಲ್ಲರನ್ನೂ ಕರೆದು ಕರೆದು ಖುಷಿ ಖುಷಿಯಿಂದ ನೋಡ್ತಾ ಇದ್ದ ನೆನಪು ಆಯ್ತು ಎಂದರು ಚೇತನ್ ದುರ್ಗಾ,

ನಟ ಅಶ್ವಿನ್ ಹಾಸನ ಮಾತನಾಡಿ,ಸಾಯಿ ಕುಮಾರ್ ಅವ್ರ ಜತೆಗೆ ಕೆಲಸ ಮಾಡೋದಕ್ಕೆ ಆಗ್ಲಿಲ್ಲ,ಆದ್ರೂ ನಾನು ನಟನೆ ಮಾಡುವಾಗ ಸದಾ ನನ್ನ ಜತೆ ಇದ್ದೆ ಇರ್ತಾರೆ, ಅದು ಹೇಗೆ ಅಂದ್ರೆ ಸಾಯಿ ಕುಮಾರ್ ಸರ್ ಹಿಟ್ ಆಗಿದ್ದು ಅವ್ರು ಮಾಡಿದ ಖಡಕ್ ಪೊಲೀಸ್ ಪಾತ್ರಗಳಿಂದ,ನಾನು ಕೂಡಾ ನನ್ನ ಸಿನಿ ಜರ್ನಿಯಲ್ಲಿ ಬಹಳಷ್ಟು ಪೊಲೀಸ್ ಪಾತ್ರಗಳನ್ನು ಮಾಡಿದ್ದು ಕನೆಕ್ಟ್ ಆಯ್ತು ಎಂದರು..

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.