Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ರಾಮನ” ಯುಗದ ಆರಂಭ
- ಸಿನಿಮಾ

“ರಾಮನ” ಯುಗದ ಆರಂಭ

‘ರಾಮನ ಯುಗದ ಆರಂಭ’ – ನವೆಂಬರ್ 5ರಂದು ವಿಶ್ವಾದ್ಯಂತ ‘ರಾಮಾಯಣ’ ಭಾಗ 1 ಬಿಡುಗಡೆ ನವರಾತ್ರಿಯ ಮೊದಲ ದಿನವೇ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ದಸರಾ ಹಬ್ಬದಂದು ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದ ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ನವೆಂಬರ್ 5, 2026ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ನವರಾತ್ರಿಯ ಮೊದಲ ದಿನದ ವಿಶೇಷ ಸಂದರ್ಭದಲ್ಲಿ ಹೊಸ ಪಾತ್ರ ಪರಿಚಯದ ಪೋಸ್ಟರ್‌ ಅನ್ನು […]

‘ರಾಮನ ಯುಗದ ಆರಂಭ’ – ನವೆಂಬರ್ 5ರಂದು ವಿಶ್ವಾದ್ಯಂತ ‘ರಾಮಾಯಣ’ ಭಾಗ 1 ಬಿಡುಗಡೆ

ನವರಾತ್ರಿಯ ಮೊದಲ ದಿನವೇ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ

ದಸರಾ ಹಬ್ಬದಂದು ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದ ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ನವೆಂಬರ್ 5, 2026ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ನವರಾತ್ರಿಯ ಮೊದಲ ದಿನದ ವಿಶೇಷ ಸಂದರ್ಭದಲ್ಲಿ ಹೊಸ ಪಾತ್ರ ಪರಿಚಯದ ಪೋಸ್ಟರ್‌ ಅನ್ನು ಅನಾವರಣಗೊಳಿಸಲಾಗಿದೆ. ‘ಯೇ ರಾಮ್ ಕೆ ಯುಗ್ ಕಾ ಆರಂಭ್ ಹೈ’ (ಇದು ರಾಮನ ಯುಗದ ಆರಂಭ) ಎಂಬ ಸಂದೇಶದೊಂದಿಗೆ ಪ್ರಕಟಣೆ ಹೊರಬಿದ್ದಿದ್ದು, ದಸರಾ ಹಬ್ಬದಂದು ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಹೊಸದಾಗಿ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ನಟ ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ಇವರ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಭವ್ಯವಾಗಿ ಮೂಡಿಬಂದಿದ್ದಾರೆ. ಪಾತ್ರಗಳ ವಿನ್ಯಾಸ, ವೇಷಭೂಷಣ ಹಾಗೂ ಅದ್ದೂರಿ ಹಿನ್ನೆಲೆಯ ಮೂಲಕ ಚಿತ್ರದ ದೃಶ್ಯ ವೈಭವದ ಝಲಕ್ ಅನ್ನು ಪೋಸ್ಟರ್ ಕಟ್ಟಿಕೊಟ್ಟಿದೆ.

ನವರಾತ್ರಿಯ ಶುಭ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, “ಹೊಸ ಯುಗದ ಆರಂಭವನ್ನು ಸಂಭ್ರಮಿಸುವ ಈ ಶುಭ ಸಂದರ್ಭದಲ್ಲಿ, ಇದು ರಾಮನ ಯುಗದ ಆರಂಭ” ಎಂಬ ಸಂದೇಶ ನೀಡಿದೆ. ಜೊತೆಗೆ, ನಮಿತ್ ಮಲ್ಹೋತ್ರಾ ಅವರ ‘ರಾಮಾಯಣ’ ಭಾಗ 1 ನವೆಂಬರ್ 5ರಿಂದ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಹಾಗೂ ದಸರಾ ದಿನದಂದು ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ ಎಂದು ಘೋಷಿಸಿದೆ.

ವಿಶ್ವದಾದ್ಯಂತ ಕೋಟ್ಯಂತರ ಜನರ ಭಕ್ತಿ ಮತ್ತು ಭಾವನೆಗಳೊಂದಿಗೆ ಬೆಸೆದುಕೊಂಡಿರುವ ರಾಮಾಯಣ ಮಹಾಕಾವ್ಯವನ್ನು ದೊಡ್ಡ ಪರದೆಯ ಮೇಲೆ ಅದ್ದೂರಿಯಾಗಿ ಕಟ್ಟಿಕೊಡುವ ಪ್ರಯತ್ನವಾಗಿ ಈ ಚಿತ್ರ ರೂಪುಗೊಳ್ಳುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಡಿಎನ್‌ಇಜಿ ಸಂಸ್ಥೆಯ ಸಹಯೋಗದಲ್ಲಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಪಾಲುದಾರಿಕೆಯಲ್ಲಿ ನಿರ್ಮಿಸುತ್ತಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಮಹಾಕಾವ್ಯದ ಮೊದಲ ಭಾಗ ನವೆಂಬರ್ 5, 2026ರಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗವು ದೀಪಾವಳಿ 2027ರ ಸಂದರ್ಭದಲ್ಲಿ ತೆರೆಗೆ ಬರಲಿದೆ.

ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಐಮ್ಯಾಕ್ಸ್ ಸೇರಿದಂತೆ ವಿವಿಧ ಪ್ರೀಮಿಯಂ ಚಿತ್ರ ಪ್ರದರ್ಶನ ಸ್ವರೂಪಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಭಾರತದ ಹೊರಗಿನ ಜಾಗತಿಕ ವಿತರಣೆಯ ಜವಾಬ್ದಾರಿಯನ್ನು ಸೋನಿ ಪಿಕ್ಚರ್ಸ್ ವಹಿಸಿಕೊಂಡಿದ್ದು, ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಧರ್ಮಾ ಪ್ರೊಡಕ್ಷನ್ಸ್ ವಿತರಕರಾಗಿ ಕಾರ್ಯನಿರ್ವಹಿಸಲಿದೆ.

ಭಾರತೀಯ ಮಹಾಕಾವ್ಯದ ಕಥೆಯನ್ನು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಗುಣಮಟ್ಟ ಮತ್ತು ಅದ್ದೂರಿ ದೃಶ್ಯಗಳೊಂದಿಗೆ ತೆರೆಗೆ ತರಲು ಸಿದ್ಧವಾಗಿರುವ ‘ರಾಮಾಯಣ’ ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಹೊಸ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕದ ಘೋಷಣೆಯೊಂದಿಗೆ ಚಿತ್ರದ ಮೊದಲ ಭಾಗದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.