ಭಾವಾಂತರ ಟ್ರೈಲರ್ ಲಾಂಚ್ ಇವೆಂಟ್
ಭಾವಾಂತರ ಒಂದೊಳ್ಳೆ ಕಥಾವಸ್ತು ಹೊಂದಿರುವ ಸಿನಿಮಾ,
ಮಂಗಳಮುಖಿಯರು ಯಾವತ್ತಿಗೂ ಸಹ ಪಾಸಿಟಿವ್ ಎನರ್ಜಿ ಕೊಡುವಂತಹ ವ್ಯಕ್ತಿತ್ವ ಎಂದರೆ ತಪ್ಪಿಲ್ಲ ಎಂಬ ಮಾತುಗಳ ಜೊತೆಗೆ, ತಮ್ಮ ಕನಸಿನ ಕೂಸಿನ ಬಗ್ಗೆ ಮಾತು ಶುರು ಮಾಡಿದ ನಟ,ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಎಲ್ಲವೂ ಆದ ಕಾರ್ತಿಕ್ ಶರ್ಮಾ,,
ಹೊಂಬಾಳೆ ಸಂಸ್ಥೆಯಲ್ಲಿ ನಮ್ಮ ಚಿತ್ರದ ಆಡಿಯೋ ಹಕ್ಕುಗಳು ಇವೆ,ಮಂಗಳಮುಖಿಯರ ಮೇಲೆ ಈಗಾಗಲೇ ಬಹಳಷ್ಟು ಚಿತ್ರಗಳು ಬಂದಿದ್ದು,ನಮ್ಮ ಭಾವಾಂತರ ಬೇರೆ ತರಹದ ಕಂಟೆಂಟ್ ಕ್ಯಾರಿ ಮಾಡತ್ತೆ ಅನ್ನೋ ನಂಬಿಕೆ ಇದೆ.
ಚಿತ್ರದ ಮೂರು ವಿಭಾಗಗಳಲ್ಲಿ ನಾನು ಕೆಲಸ ಮಾಡಿದ್ದು ಎಲ್ಲವನ್ನೂ ನಾನು ತುಂಬಾ ಎಂಜಾಯ್ ಮಾಡಿದ್ದೇನೆ,ನಟನೆ, ಸಂಗೀತ ಮತ್ತು ನಿರ್ದೇಶನ ಎಲ್ಲವೂ ಬೇರೆ ಬೇರೆ ರೀತಿಯ ಅನುಭವ ಕೊಟ್ಟಿದೆ ಎಂದರು.ತುಂಬಾ ವರ್ಷಗಳ ಹಿಂದೆ ಒಂದು ಕಡೆ ನಡೆದ ಕಥೆ,ಆ ಊರು,ಆ ಜಾತ್ರೆ ಎಲ್ಲವನ್ನೂ ಬರೆದು ಇಟ್ಟುಕೊಂಡಿದ್ದೆ,ಅದು ಈಗ ಭಾವಾಂತರ ಚಿತ್ರವಾಗಿ ಆಚೆ ಬಂದಿದೆ,ತನ್ವಿ ತುಂಬಾ ಒಳ್ಳೆಯ ನಟಿ ಹಾಗೆ ಶನಿ ಧಾರಾವಾಹಿ ಖ್ಯಾತಿಯ ಪ್ರಣವ ಕೂಡಾ ಸೂಪರ್ ನಟ,ಚಿತ್ರ ನೋಡುಗರಿಗೆ ಒಳ್ಳೇ ಅನುಭವ ಕೊಡತ್ತೆ ಎಂದರು.
ನಾಯಕಿ ತನ್ವಿ ಮಾತನಾಡಿ,
ಈ ಪಾತ್ರಕ್ಕಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡೆ.ನಾನಿಲ್ಲಿ ರಾಧಾ ಆಗಿ ಕಾಣಿಸಿಕೊಂಡಿದ್ದು,ಇದರಲ್ಲಿ ನಾನೊಬ್ಬ ಡಾಕ್ಯುಮೆಂಟರಿ ಮಾಡುವ ನಿರ್ದೇಶಕಿಯಾಗಿ ಪಾತ್ರವನ್ನು ಮಾಡಿದ್ದೇನೆ,ಅದರ ಜೊತೆ ಜೊತೆಗೆ ನನ್ನ ಜೀವನದಲ್ಲಿ ಆಗುವ ಪ್ರೀತಿ,ಪ್ರೀತಿಗಾಗಿ ನನ್ನಲ್ಲಿ ಆಗುವ ತಳಮಳ, ಗೊಂದಲ ಇದೆಲ್ಲದರ ನಡುವೆ ನಡುವೆ ನಡೆಯುವ ಹೋರಾಟ, ಮಾಧವನನ್ನು ಹುಡುಕುವ ಪರಿ ಇದೆಲ್ಲವೂ ಸಖತ್ ಆಗಿ ಮೂಡಿ ಬಂದಿದೆ,ಚಿತ್ರದಲ್ಲಿ ಬರುವಂತಹ ಮೂರು ನಿಮಿಷದ,ಸಿಂಗಲ್ ಟೇಕ್ ನ ಆ ಹಾಡು ಶೂಟ್ ಮಾಡುವಾಗ ಬಹಳ ಚಾಲೆಂಜ್ ಇತ್ತು,ನೀವು ಹೇಳಿದ ಹಾಗೆ ನಾನು ಚೆನ್ನಾಗಿ ಡಾನ್ಸ್ ಮಾಡಿದ್ದೇನೆ ಆದರೆ ನನಗಿಂತ ಹೆಚ್ಚು ಪರ್ಫೆಕ್ಟ್ ಆಗಿ ಕ್ಯಾಮರಾ ಹ್ಯಾಂಡಲ್ ಮಾಡಿದ DOP ಗ್ರೇಟ್ ಅನ್ನೋದು ಒಪ್ಪುತ್ತೇನೆ ಎಂದರು.
ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಶನಿ ಧಾರಾವಾಹಿ ಖ್ಯಾತಿಯ ಪ್ರಣವ ಮಾತನಾಡಿ,ಕಥೆ ತುಂಬಾ ಕಾಡಿದಾಗ ಮಾತ್ರ,ಚಿತ್ರವು ಕೂಡಾ ಅಷ್ಟೇ ಕಾಡುತ್ತೆ,ಹಾಗೆ ಪಾತ್ರಗಳು ಸಹ ಕಾಡುತ್ತವೆ ಅಂತಹ ಕಾಡುವಿಕೆಗೆ ಹಚ್ಚುವ ಸಿನಿಮಾ ಭಾವಾಂತರ ಎಂದರು.
ಚಿತ್ರದಲ್ಲಿ ಒಂದು ಹಾಡಿಗೆ ಧ್ವನಿಯಾದ ಐಶ್ವರ್ಯ ರಂಗರಾಜನ್ ಮಾತನಾಡಿ,ತುಂಬಾ ಸೆನ್ಸಿಬಲ್ ಆದಂತಹ ಅಪ್ರೋಚ್ ಇರುವ ಯಾವುದೇ ಹಾಡುಗಳನ್ನು ನಾನಾಗಲಿ ಅಥವಾ ಯಾರೇ ಹಾಡಿದರೂ,ಅವೆಲ್ಲವೂ ಹಿಟ್ ಆಗುತ್ತವೆ, ಅದೆಲ್ಲವೂ ಆಯಾ ಸಾಹಿತ್ಯಕ್ಕೆ ಇರುವ ಶಕ್ತಿ ಎಂದು ರೈಟರ್ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,ನಂತರ ಕಾರ್ಯಕ್ರಮಕ್ಕೆ ಶುಭ ಕೋರಲು ಬಂದಿದ್ದ ಕನ್ನಡದ ಮತ್ತೊಬ್ಬ ಪ್ರತಿಭಾವಂತ ಗಾಯಕ ಅನಿರುದ್ಧ ಶಾಸ್ತ್ರಿ ಮಾತನಾಡಿ,ನಿರ್ದೇಶಕ ಕಾರ್ತಿಕ್ ಶರ್ಮಾ,ನನ್ನ ಆತ್ಮೀಯ ಗೆಳೆಯ, ತುಂಬಾ ಬ್ರಿಲಿಯಂಟ್ ಕಥೆಗಾರ ಮತ್ತು ನಿರ್ದೇಶಕ ಭಾವಾಂತರ ಚಿತ್ರದಲ್ಲಿ ಬಹುತೇಕ ಕನ್ನಡಿಗರಿಗೆ ಅವಕಾಶ ಕೊಟ್ಟಿದ್ದಾನೆ ಇದು ಆತನ ಕನ್ನಡ ಪ್ರೇಮ ತೋರಿಸುತ್ತದೆ ಎಂದರು.

ಭಾವಾಂತರ ಚಿತ್ರದ ಬಿಡುಗಡೆಯ ಕುರಿತು ಮತ್ತಷ್ಟು ಮಾಹಿತಿ,ಕೊಡುತ್ತೇವೆ ಎಂದರು ನಿರ್ದೇಶಕ ಕಾರ್ತಿಕ್ ಶರ್ಮಾ.
ರವೀ ಸಾಸನೂರ್ MasterNews365.Com

