ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವೊಂದು, ತುಂಬಾ ಒಳ್ಳೆಯ ಪ್ರದರ್ಶನಗಳನ್ನ ಕಾಣುವುದರ ಜೊತೆಗೆ ಇಡೀ ಕರ್ನಾಟಕದ ಸಿನಿಮಾ ಪ್ರೇಕ್ಷಕ ಮಹಾಪ್ರಭುಗಳನ್ನ ಚಿತ್ರಮಂದಿರಗಳತ್ತ ಕರೆದುಕೊಂಡು ಬರುತ್ತಿದೆ ಎನ್ನುವ ಮಾತು, ಬಹುತೇಕ ಎಲ್ಲ ಕನ್ನಡಿಗರಿಗೆ ಹಾಗೂ ವಿಶೇಷವಾಗಿ ಸಿನಿಮಾ ನಿರ್ಮಾಪಕರಿಗೆ ಕಲಾವಿದರಿಗೆ ತುಂಬಾ ಖುಷಿ ಕೊಟ್ಟಿರುತ್ತದೆ ಎಂದರೆ ತಪ್ಪಿಲ್ಲ.
ದೊಡ್ಡ ತರಾಗಣವಿರುವ ದೊಡ್ಡ ನಿರ್ಮಾಣ ಸಂಸ್ಥೆಯ ದೊಡ್ಡ ನಿರ್ದೇಶಕರ ಫ್ಯಾಮಿಲಿ ಕಂಟೆಂಟ್ ಹೊಂದಿದ ಚಿತ್ರವೊಂದು ತಾನು ಬಿಡುಗಡೆಯಾಗಬೇಕಾಗಿದ್ದ ದಿನಾಂಕವನ್ನು ಮುಂದಕ್ಕೆ ಹಾಕಿ, ತುಂಬಾ ಒಳ್ಳೆಯ ರೆಸ್ಪಾನ್ಸ್ ನೊಂದಿಗೆ ಮುನ್ನಡೆಯುತ್ತಿರುವ ಅದಾಗಲೇ ಬಿಡುಗಡೆಯಾಗಿರುವ ಚಿತ್ರ ಒಂದಕ್ಕೆ ಸಪೋರ್ಟ್ ಮಾಡುವುದು ಎನ್ನುವುದು,ನಿಜವಾಗಿಯೂ ಹೆಮ್ಮೆ ಮತ್ತು ಗೌರವ ತರುವಂತಹ ವಿಚಾರ.
ತನ್ನ ಒಳ್ಳೆಯ ಕಂಟೆಂಟ್ ಮತ್ತು ಹಾಡುಗಳಿಂದ ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಸಮೃದ್ಧಿ ಮಂಜುನಾಥ್ ನಿರ್ಮಾಣದ, ಶ್ರೀನಿವಾಸ್ ರಾಜು ನಿರ್ದೇಶನದ, ಬೃಂದಾವಿಹಾರಿ ಎನ್ನುವ ಅಪ್ಪಟ ಕನ್ನಡ ಚಿತ್ರ ತನ್ನ ಸಿನಿಮಾ ಪ್ರೇಮವನ್ನು, ಇನ್ನೊಂದು ತಂಡಕ್ಕೆ ಬೆಂಬಲ ನೀಡುವುದರ ಮೂಲಕ ಪ್ರೋತ್ಸಾಹ ನೀಡಿದೆ.
ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಬೇಕಿದ್ದ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನವೆಂಬರ್ 20ಕ್ಕೆ ಮುಂದೂಡಿಕೆ ..
ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಸಮೃದ್ಧಿ ಮಂಜುನಾಥ್ ಅವರು ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರ ಅಕ್ಟೋಬರ್ 16 ರಂದು ಬಿಡುಗಡೆಯಾಗಬೇಕಿತ್ತು. ನವೆಂಬರ್ 20ಕ್ಕೆ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.

ಹೊಸತಂಡದ “ಪ್ರೇಮದ ಊರಲಿ” ಚಿತ್ರ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 16 ರಂದು ನಮ್ಮ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಲಿದೆ. ಕನ್ನಡ ಚಿತ್ರವೊಂದು ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ಹಾಗಾಗಿ ನಮ್ಮ ಚಿತ್ರದ ಬಿಡುಗಡೆಯನ್ನು ನವೆಂಬರ್ 20 ಕ್ಕೆ ಮುಂದೂಡಿರುವುದಾಗಿ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹಾಗೂ ನಾಯಕ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ತಿಳಿಸಿದ್ದಾರೆ.

