ನಾಡ ಹಬ್ಬ ದಸರಾ ಬಂತೆಂದರೆ ಸಾಕು, ಕರ್ನಾಟಕದಲ್ಲಿನ ಎಲ್ಲ ಮಕ್ಕಳಲ್ಲಿ ಉತ್ಸಾಹ ತುಂಬಿ ತುಳುಕುತ್ತದೆ, ಇದಕ್ಕೆ ಎರಡು ಕಾರಣ ಮೊದಲನೆಯದು ಶಾಲೆಗಳಿಗೆ ರಜೆ, ಎರಡನೆಯದು ಹಬ್ಬಗಳು ಶುರುವಾಗುವ ಸಂದರ್ಭ ಅದು ವಿಶೇಷವಾಗಿ ನಾಡಹಬ್ಬ ದಸರಾ.
ಮೈಸೂರು ಎಂದ ತಕ್ಷಣ ಜಗನ್ಮಾತೆ ತಾಯಿ ಚಾಮುಂಡೇಶ್ವರಿ, ಎಲ್ಲರ ಸ್ಮೃತಿ ಪಟಲದಲ್ಲಿ ಹೃದಯದಲ್ಲಿ ಮತ್ತು ಅವರವರ ಭಕ್ತಿ ಭಾವದಲ್ಲಿ ಬರುತ್ತಾಳೆ ಹಾಗೂ ಎಲ್ಲರನ್ನ ಆಶೀರ್ವದಿಸುತ್ತಾಳೆ.
ಮೈಸೂರು ದಸರಾ ಎಷ್ಟೊಂದು ಸುಂದರ, ಈ ಹಾಡನ್ನು ಪ್ರತಿ ಸಾರಿಯೂ ನೋಡುವಾಗ ಕೇಳುವಾಗ ಆಗುವ ಅನುಭವ ಆಗುವ ಹೆಮ್ಮೆ ಹೇಳುತ್ತೀರದು. ಅದರಲ್ಲೂ ವಿಶೇಷವಾಗಿ ಕನ್ನಡ ಚಲನಚಿತ್ರ ಗೀತೆಯಲ್ಲಿ ಬಂದಂತಹ ಈ ಹಾಡು, ನಮ್ಮೆಲ್ಲರಿಗೂ ಮೈಸೂರು ದಸರಾ ಇಂತಹ ಭಾವನ ಕೊಡುತ್ತದೆ.
ಪ್ರತಿಸಾರಿಯು ಮೈಸೂರು ದಸರಾ ಬಂತೆಂದರೆ ಚಂದನವನದ ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಹೊಸದಾಗಿ ಸಿನಿಮಾ ಮಾಡಿದ ನಿರ್ಮಾಪಕರಿಗೆ, ದಸರಾ ಅದೃಷ್ಟದ ಜಾಗವಾಗಿ ಕಂಗೊಳಿಸುತ್ತದೆ, ಗುರುನಂದನ್ ಮತ್ತು ತಪಸ್ವಿನಿ ತಾರಾ ಗಣವಿರುವ ಮಿಸ್ಟರ್ ಜಾಕ್ ಚಿತ್ರತಂಡಕ್ಕೂ ನಾಡಹಬ್ಬ ದಸರಾ ಪ್ಲಸ್ ಆಗಲಿದೆ.
ನಾಡಹಬ್ಬ ದಸರಾ ಸಂದರ್ಭದಲ್ಲಿ ಅನಾವರಣವಾಗಲಿದೆ “MR ಜಾಕ್” ಚಿತ್ರದ ಮತ್ತೊಂದು ಹಾಡು .
ಸಾಕಷ್ಟು ಕುತೂಹಲ ಮೂಡಿಸಿದೆ “ಫಸ್ಟ್ rank ರಾಜು” ಗುರುನಂದನ್ ಹಾಗೂ “ಪ್ರೇಮದ ಊರಲಿ” ಖ್ಯಾತಿಯ ತಪಸ್ವಿನಿ ಪೂಣಚ್ಛ ಅಭಿನಯದ ಈ ಚಿತ್ರ .
“ಫಸ್ಟ್ rank ರಾಜು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ ಹಾಗೂ ಪ್ರಸ್ತತ ಭರ್ಜರಿ ಯಶಸ್ಸು ಕಾಣುತ್ತಿರುವ, ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಜಯಭೇರಿ ಬಾರಿಸುತ್ತಿರುವ “ಪ್ರೇಮದ ಊರಲಿ” ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ನಾಯಕಿಯಾಗಿ ನಟಿಸಿರುವ ಚಿತ್ರ “MR ಜಾಕ್”.

ಸುಮಂತ್ ಗೌಡ ನಿರ್ದೇಶನದ ಹಾಗೂ ಮಂಡಿಮನೆ ಟಾಕೀಸ್ ಲಾಂಛನದಲ್ಲಿ ಗುರುನಂದನ್ ಅವರು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿರುವ “MR ಜಾಕ್” ಚಿತ್ರದ ಮೊದಲ ಹಾಡು ಗಣಪತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 19 ರಂದು ಚಿತ್ರದ ಮತ್ತೊಂದು ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಅನಾವರಣವಾಗಲಿದೆ. ಹೆಸರಾಂತ ಗೀತರಚನೆಕಾರ ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟೀಸರ್ ಗೆ ಕೂಡ ಪ್ರಶಂಸೆ ವ್ಯಕ್ತವಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.

ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಗುರುನಂದನ್ ಹಾಗೂ “ಪ್ರೇಮದ ಊರಲಿ” ಚಿತ್ರದ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ತಪಸ್ವಿನಿ ಪೂಣಚ್ಛ ಅವರ ಜೋಡಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಮುಂತಾದವರಿದ್ದಾರೆ. ಶಿವಸೇನ ಛಾಯಾಗ್ರಾಹಕರಾಗಿ ಹಾಗೂ ವಿಜಯ್ ರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

