Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ದಾವಣಗೆರೆಗೆ” ಹೋದಾಗಿನ ಘಟನೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

“ದಾವಣಗೆರೆಗೆ” ಹೋದಾಗಿನ ಘಟನೆ

ದಾವಣಗೆರೆಗೆ ಹೋದಾಗಿನ ಘಟನೆ ಚೌಡಕಿ ಮೇಳ ತಗೊಂಡು ಒಮ್ಮೆ ದಾವಣಗೆರೆಗೆ ಹೋಗಿದ್ದೆವು. ದಾವಣಗೆರೆಯಿಂದ ಮರಳಿ ನಾವು ಬರಬೇಕಾಗಿತ್ತು. ಅವಾಗ ದೀಪಾವಳಿಯ ಸಮಯ ಅಲ್ಲಿ ಭಯಂಕರ ಮೆಣಸಿನಕಾಯಿ ಬೆಳೆಯುತ್ತಾರೆ. ಆ ಕಡೆ ರಾಶಿ ಮಾಡಿಂದ ಮೆಣಸಿನಕಾಯಿ ಬಣಿಮೆ ಒಟ್ಟುತ್ತಾರೆ. ಅವರು ನಮ್ಮ ಕಡೆಯ ಜನರಿಗೆ ಎರೆ ಸೀಮೆ ಅವರು ಅನ್ನುತ್ತಾರೆ. ನಾವು ಅಲ್ಲಿ ಒಂದು ತಿಂಗಳು ಇದ್ದು ಹಾಡಿದೆವು. ನಮ್ಮೂರ ಹೆಣ್ಣುಮಗಳು ಅಲ್ಲಿ ಜೋಗಮ್ಮ ಅದಾಳ.ಅಕ್ಕಿ ನಮ್ಮ ಕರೆದಿದ್ದಳು ಅದಕ್ಕಾಗಿ ನಾವು ಹೋಗಿದ್ದೆವು ದಾವಣಗೆರೆ ಅಂದ್ರ ದೊಡ್ಡ ಊರು […]

ದಾವಣಗೆರೆಗೆ ಹೋದಾಗಿನ ಘಟನೆ

ಚೌಡಕಿ ಮೇಳ ತಗೊಂಡು ಒಮ್ಮೆ ದಾವಣಗೆರೆಗೆ ಹೋಗಿದ್ದೆವು. ದಾವಣಗೆರೆಯಿಂದ ಮರಳಿ ನಾವು ಬರಬೇಕಾಗಿತ್ತು. ಅವಾಗ ದೀಪಾವಳಿಯ ಸಮಯ ಅಲ್ಲಿ ಭಯಂಕರ ಮೆಣಸಿನಕಾಯಿ ಬೆಳೆಯುತ್ತಾರೆ. ಆ ಕಡೆ ರಾಶಿ ಮಾಡಿಂದ ಮೆಣಸಿನಕಾಯಿ ಬಣಿಮೆ ಒಟ್ಟುತ್ತಾರೆ. ಅವರು ನಮ್ಮ ಕಡೆಯ ಜನರಿಗೆ ಎರೆ ಸೀಮೆ ಅವರು ಅನ್ನುತ್ತಾರೆ. ನಾವು ಅಲ್ಲಿ ಒಂದು ತಿಂಗಳು ಇದ್ದು ಹಾಡಿದೆವು. ನಮ್ಮೂರ ಹೆಣ್ಣುಮಗಳು ಅಲ್ಲಿ ಜೋಗಮ್ಮ ಅದಾಳ.ಅಕ್ಕಿ ನಮ್ಮ ಕರೆದಿದ್ದಳು ಅದಕ್ಕಾಗಿ ನಾವು ಹೋಗಿದ್ದೆವು ದಾವಣಗೆರೆ ಅಂದ್ರ ದೊಡ್ಡ ಊರು ಒಂದು ತಿಂಗಳುಗಟ್ಟಲೆ ನಾವು ಹಾಡಿದರು ನಮಗೆ ಸಿಗಲಿಲ್ಲ ಮುಂದೆ ಎಲ್ಲಮ್ಮನ ಜಾತ್ರೆ ಬಂತು ನಾವು ಹೋಗ್ತಿವಿ ಯವ್ವ ಅಂದೆವು ಆಯ್ತು ಹೋಗ್ ಬಸಪ್ಪ ದಾರಿಯಾಗ ಮೆಣಸಿನಕಾಯಿಬೆಳೆದಿರುತ್ತಾರ ಊರಾಗ ಜ್ವರ ಅಡ್ಡಾಡಿದರೆ ಎರಡು ಮೂರು ಚೀಲ ಮೆಣಸಿನಕಾಯಿ ತಿನ್ನಕ್ ಆಗ್ತದೆ ಅಂತ ಹೇಳಿದರು.

      ಆಯ್ತು ಅಂತ ಹೇಳಿ ದಾವಣಗೆರೆಯಿಂದ ನಾವುಗುಡುಗೇರಿಗೆ ಇಳಿದೆವು. ಅಲ್ಲಿ ಹೈಸ್ಕೂಲ್ ಕಾಲೇಜು ಎಲ್ಲವೂ ಅದಾವು ತೋಟ ಅದಾವು ಅಲ್ಲಿ ಎಲ್ಲಾ ತರದ ಬೆಳೆಯು ಬೆಳೆಯುತ್ತಾರೆ. ಅವುಗಳನ್ನೇ ಹರಿದು ಶಾಲಾ ಮಕ್ಕಳಿಗೆ ಅಡುಗೆ ಮಾಡ್ಲಿಕ್ಕೆ ಉಪಯೋಗಿಸುತ್ತಾರೆ.ಮಕ್ಕಳಿಗೆಬಹಳ ಚಲೋ ವ್ಯವಸ್ಥೆ ಮಾಡ್ತಾರೆ.

  ಅಲ್ಲಿ ಹುಡುಗರು ಬೆಳಿಗ್ಗೆ ಸರಿಯಾಗಿ ಮೂರು ಗಂಟೆಗೆ ಏಳುತ್ತಾರೆ. ಎದ್ದು ಜಳಕ ಮಾಡಿ ಶಿಶುವಿನಾಳ ಶರೀಫರ ಮುಂದೆ ನಿಂತು ಬಿಡ್ತಾರೆ ಒಂದು ಕಡೆ ಗದ್ದುಗೆ ಶರೀಫ ಬಜಾರ ಅದು. ಗೋವಿಂದ ಅಜ್ಜ ಅಂತ ಅಲ್ಲಿ ಅದಾರ ಅವರು ಮೂರ್ತಿನೇ ಅದು ಧರ್ಮಕ್ಕನುಸಾರ ಪೂಜೆ ಮಾಡ್ತಾರೆ.

  ನಾವು ಅಲ್ಲೇ ವಸ್ತಿ ಮಾಡಿದೆವು ನಶುಕಿನಲ್ಲಿ ಎದ್ದು ಜಳಕ ಪೂಜೆ ಮಾಡಿಕೊಂಡೆವು. ಪ್ರಸಾದ ಇತ್ತು ಅಲ್ಲೇ ಪ್ರಸಾದ ಮಾಡಿದೆವು. ಅಲ್ಲಿಂದ ಶಿಶುವಿನಾಳ ಹತ್ತಿರ   ಅತಗೇರಿಅಂತ ಆದ ಅಲ್ಲಿಗೆ ಹೋದೆವು. ಅಲ್ಲಿ ಒಬ್ಬಾಕಿ ಜೋಗಮ್ಮ ನಮಗಲ್ಲಿ ಯಾರು ಗೊತ್ತಿಲ್ಲ. ಯಾರಾದರೂ ಒಬ್ಬರಿಗೆ ಕರ್ಕೊಂಡು ಹೋದರನ ನಮಗೆ ದಾನ ಕೊಡ್ತಾರೆ ಅಂತ ತಿಳಿದು ಆ ಜೋಗಮ್ಮನ ಶೋಧ ಮಾಡಿ ಆಕೆಯ ಮನೆಗೆ ಹೋದೆವು.

    ನಮ್ಮನ್ನು ನೋಡಿ ಒಳಗೆ ಕರೆದು ಯಾರೆಂದು ವಿಚಾರಿಸಿದಳು. ಚಹಾ ಪಾಣಿ ಮಾಡಿಸಿದಳು. ನಾವು ಎರಿ ಸೀಮೆಯವರು ಅಂತ ಹೇಳಿದೀವಿ . ಹಿಂಗ ಇಲ್ಲಿ ಮೆಣಸಿನಕಾಯಿ ಬಹಳ ಬೆಳಿತರಂತೆ. ನಾವು ಊರಿಗೆ ಹೋಗುವವರು. ನಿಮ್ಮನ್ನು ಕರ್ಕೊಂಡು ಊರಾಗ ಒಂದಿಷ್ಟು ಜೋಗ ಆಡಿ ಮೆಣಸಿನಕಾಯಿ ತೊಗೊಂಡು ಹೋಗಬೇಕಂತ ಮಾಡಿವಿಅಂತ ಹೇಳಿದೆವು.

      ಅದೆಲ್ಲ ಕರೆಯದ ಆದರ ಇವತ್ತು ನಮ್ಮ ಗುರುಗಳು ಬರ್ತಾರಾ ಅಂದಳು. ಆ ಜೋತಿ ಜೋಗತಿಯೂ ಗುರು ಪುತ್ರಳು. ಆಯ್ತು ನಿಮ್ಮ ಗುರುಗಳು ಬರುವತನಕ ನಮ್ಮ ಜೊತೆ ಬರ್ರಿ, ಅವರು ಬಂದು ಬಳಿಕ ನಾವು ವಾಪಸ್ ಬರ್ತೀವಿ. ಗುರುವಿನ ದರ್ಶನ ನಮಗೂ ಬೇಕು. ಬಹಳ ದಿವಸ ನಮಗೂ ಗುರುವಿನ ದರ್ಶನ ಆಗಿಲ್ಲ. ನಮ್ಮ ಗುರು ಬರ್ತಾರಂದ್ರೆ ನಾ ಬಂದು ಬಿಡಾಕಿ, ಅನ್ನುವ ಶರತ್ತಿನ ಮೇಲೆ ನಮ್ಮೊಂದಿಗೆ ಜೋಗತಿ ಹಾಡಲು ಬಂದಳು.

     ಎಲ್ಲರೂ ಕೂಡಿ ಹೋದೆವು.ಅಲ್ಲಿ ಆರಾರು ಎಂಟೆಂಟು ಮಾರೋ ಗಟ್ಟಲೆ ಮೆಣಸಿನಕಾಯಿ ಬಣ್ಣಿಮೆ ಹೊತ್ತುತ್ತಾರೆ.ಹಿಂಗ ನಾವು ಎರೆ ಸೀಮೆಯವರು. ಬಂದವರು ಒಂದಿಷ್ಟು ಮೆಣಸಿನಕಾಯಿ ಕೊಡ್ರಿ. ಅನ್ನಕ್ಕ ಡೊಳ್ಳು ಹೆಡಿಗೆ ತುಂಬಿಕೊಡವರು. ಎರಡು ಮೂರು ಹುಣ್ಣಿಮೆ ಬಣಿಮೆ ತಿರುಗಿದೆವು. ಅಷ್ಟಕ್ಕ ಎರಡು ಮೂರು ಚೀಲ ಆಗಿ ಬಿಟ್ಟು ಅಷ್ಟೊತ್ತಿಗೆ ಆ ಗುರುಗಳು ಬಂದರಂತೆ ಸುದ್ದಿ ಬಂದುಬಿಟ್ಟಿತು.

   ಯಪ್ಪಾ ನಮ್ಮ ಗುರುಗಳು ಬಂದರೂ ನಾ ಇನ್ನು ಹೋಗ್ತೀನಿ ಅಂದಳು ಜೋಗಮ್ಮ ನಾವು ಬರ್ತೀವಿ ನೋಡ್ರಿ ಅಂತ ಹೊರಟೆವು. ಗುರು ಶಿಷ್ಯ ಇಬ್ಬರು ಬಂದಿದ್ದರು.ಅವನಿಗೆ ಮೈತುಂಬ ಜಟ ಹೊಡೆದು ಸುತ್ಕೊಂಡಿದ್ದ. ಬರಿ ಮೈ ಅಲ್ಲಿ ಹೋಗಿ ನಾವು ನಮ್ಮ ಜೊತೆ ಒಬ್ಬ ಹೆಣ್ಣು ಮಗಳು ಆಕೆ ನಮ್ಮ ಕಾಕನ ಮಗಳು ನಾವಿಬ್ಬರೂ ಗಂಡು ಮಕ್ಕಳು. ಹಾಡಕ್ಕ ಹ್ಯಾಂಗ ಕುಂಡ್ರುತ್ತಿವೆ ಹಂಗ ಕುಳಿತೆವು. ಗುರುಗಳಿಗೆ ಪ್ರಶ್ನೆ ಮಾಡಲಾರದ ಬಹಳ ದಿನ ಆಗಿತ್ತು. ಮತ್ತು ದರ್ಶನ ಪಡೆಯಲಾರದ ಬಹಳ ದಿನ ಆಗಿತ್ತು. ಅಂತ ಹೇಳಿ ಗುರುವಿಗೆ ಮಾತನಾಡಿದೆ. ನೀವು ಬರ್ತಾರಂತ ಅಮ್ಮವರು ಹೇಳಿದರು. ಅದನ್ನು ನಾನು ಕೇಳಿದ್ದೆ  ಅಂದೆ.

   ನಿಮ್ದು ಏನ್ ಕೆಲಸದ ಅಲ್ಲಿಗೆ ಹೋಗಪ್ಪ. ಇದು ನಿಮಗೆ ತಿಳಿಯುವ ಮಾತಲ್ಲ ಅಂದ್ರು ..ಮೂರು ಮುಷ್ಟಿಯಾಗಿ ಇರಬೇಕು. ಮೂರು ಮುಷ್ಟಿಯಾಗ ಇರಬೇಕು ಅಂದ್ರು.

   ಹಂಗಂದ್ರೆ ಏನು ಜ್ವರ ಬಿಡಿಸಿ ಹೇಳ್ರಪ್ಪ ಅಂದೆ, ಅವು ತಿಳಿಯೋ ಮಾತಲ್ಲ ನೀವು ಸುಮ್ಮನೆ ಹಾಡು ಸಲುವಾಗಿ ಬಂದಿರಿ ಒಂದು ಪಾಡು ಪದ ಹಾಡಿ ಹೋಗ್ರಿ ಅಂದ್ರು.

  ಅವರು ನಮ್ಮನ್ನು ತಪ್ಪಾಗಿ ತಿಳಿದುಕೊಂಡುಬಿಟ್ರು. ಹೆಣ್ಣು ಮಗಳು ಬೇರೆ ಮಧ್ಯದಲ್ಲಿ ಇದ್ದಳಲ್ಲ,ನಾವು ಏಕ ತೊಡಿ ಮ್ಯಾಗ ತೊಡೆ ಹಾಕಿಕೊಂಡು ಹಾಡುವರು, ನಾವು ಮೊದಲು ಹಾಡಿದ ಬಡಬಟ್ಟಿ ಅವರ ಪದವನ್ನೇ ಹಾಡಿದೆವು.

ಜೋ ಜೋ ಎನ್ನ ಪ್ರಾಣ ಲಿಂಗೇಶ
ಜೋ ಜೋ ಎಲ್ಲಾ ಅಂಗದ ವಾಸ
ಜೋ ಜೋ ಎನ್ನ ಸಂಘ ಸರ್ವೇಶ ಹಿಂಗ ಭಂಗ ಬಾಹುಬಲಿ ಮಾಡಿದಿ ನಾಶ ಜೋ ಜೋ Il

ಮುಂದುವರೆಯುತ್ತದೆ …..

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.