Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *ನಿಜಗುಣರು* ಹೇಳುವಂತೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

*ನಿಜಗುಣರು* ಹೇಳುವಂತೆ

ನಡುವೆ ಹುಟ್ಟಿದ ಅಡುಗೆ ಅದು ಹೆಂಗ ತೊರೆಯದ ಅದರಂತೆ ಮೊದಲು ಇತ್ತುಏನು? ಈ ದೇಹ.. ಇಲ್ಲ ಇದೊಂದು ವಿಚಿತ್ರ. ತಂದಿದು ಒಂದು ಹನಿ ಬಿಂದು ತಾಯಿದು ಒಂದು ಹನಿ ರಕ್ತ ಕೂಡಿಕೊಂಡು ಇದೊಂದು ದೇಹ ಆಗಿದೆ ಹೆಂಗ್ ಆಗ್ಯದ ಏನೋ ? ಆ ಭಗವಂತ ಹೆಂಗ ಸೃಷ್ಟಿ ಮಾಡಿದನು ಏನೊ ? ನಿಜಗುಣರು ಹೇಳುವಂತೆ – ಭೂತ ಪಂಚಕದ ರೂಪಾಗಿ ಯೋಷದಿಯಾಗಿದಾತು ಸಪ್ತಕದ ರೂಪಾಗಿ ತಂದೆಯೊಳುಮಾತೆಯ ಸೂತಕ  ರುಧಿರರೂಪಾಗಿ ಮತ್ತಿತನುವಾಗು ವಚ್ಚರಿಯನು ಕೇಳಿ II೨ll ಬಾಲಕ ತರುಣ […]

ನಡುವೆ ಹುಟ್ಟಿದ ಅಡುಗೆ ಅದು ಹೆಂಗ ತೊರೆಯದ ಅದರಂತೆ ಮೊದಲು ಇತ್ತುಏನು? ಈ ದೇಹ.. ಇಲ್ಲ ಇದೊಂದು ವಿಚಿತ್ರ. ತಂದಿದು ಒಂದು ಹನಿ ಬಿಂದು ತಾಯಿದು ಒಂದು ಹನಿ ರಕ್ತ ಕೂಡಿಕೊಂಡು ಇದೊಂದು ದೇಹ ಆಗಿದೆ ಹೆಂಗ್ ಆಗ್ಯದ ಏನೋ ? ಆ ಭಗವಂತ ಹೆಂಗ ಸೃಷ್ಟಿ ಮಾಡಿದನು ಏನೊ ? ನಿಜಗುಣರು ಹೇಳುವಂತೆ –

ಭೂತ ಪಂಚಕದ ರೂಪಾಗಿ ಯೋಷದಿಯಾಗಿ
ದಾತು ಸಪ್ತಕದ ರೂಪಾಗಿ ತಂದೆಯೊಳು
ಮಾತೆಯ ಸೂತಕ  ರುಧಿರರೂಪಾಗಿ ಮ
ತ್ತಿತನುವಾಗು ವಚ್ಚರಿಯನು ಕೇಳಿ II೨ll

ಬಾಲಕ ತರುಣ ಜ್ವರ ಜೀವನ ರೂಪವಾಗಿ
ಮೇಲೆ ನರಕಿಯಾಗಿ ಬಳಿಕೀ ಕ್ರಮದೋಳು
ತಾಳಲಾರೆನು ತನುವನು ಶಂಭುಲಿಂಗವೇ
ಪಾಲಿಸೆಂದರಗಿ ಭಿನ್ನೈಪೆ ಭೀತಿಯೊಳು ll ೩II

   ಬರಿ ಒಂದೆರಡು ಹನಿ ರಕ್ತ ರೇತುಕುಡಿ ಒಂದು ರೂಪ ಆಗಿದೆ ಮತ್ತು ಅದಕೂಸು ಆಗಿದ ಮತ್ತು ತರುಣ ಆಗ್ಯದ ಮತ್ತು ವಯಸ್ಸಿನವ ಆಗಿದ ಮತ್ತು ಜೀರ್ಣ ಆಗ್ಯದ ಮತ್ತು ನರಕಕ್ಕೆ ಬಿದ್ದದ . ಇದರೊಳಗ ಯಾವಾಗಲೂ ಸುಖ ಅನ್ನೋದಿಲ್ಲ. ತಾಳಲಾರೆನು ಅಪ್ಪ ಶಂಬುಲಿಂಗ.... ನಾ ನಿನ್ನ ಪಾದಕ್ಯರಗತಿನಿ ನನಗ ಇಲ್ಲಿಂದ ಕಡಿಗ ಮಾಡು ಅಂತ ನಿಜಗುಣರು ಬೇಡಿಕೊಂಡಾರ.  ಇದು ಬಹಳ ವಿಚಿತ್ರ ಐತಿ ಜಗತ್ತು ನಿಜಗುಣೋರು ಬಹಳ ಜ್ಞಾನಿಗಳು ಅವರು 

ಹೇಳ್ತಾರೆ –

ಓಂ ಶ್ರೀ ಗುರುದೇವೋ
ಮಹಾದೇವೋ ಗುರುದೇವೋ
ಸದಾಶಿವ ಗುರುದೈವಪರನ್ನಾಸ್ತಿ
ತಸ್ಮೈ ಶ್ರೀಗುರುವೇ ನಮೋ: ನಮಃ Il

   ನಮ್ಮೂರಾಗ ಪಕೀರಯ್ಯ ಮುತ್ಯ ಅಂತ ಅದಾನ ಅವ ಶಾಣೇರಿಅವನಿಗೆ ಕರ್ಕೊಂಡ್ ಬಂದು ಭಜನಾ ಮಾಡಿಸಿದರು ನಮ್ಮೂರಿನವರು ಅಂದ್ರ, ಹಳ್ಳೂರಿನವರನ್ನು ಕರೆಸಿದರು. ಮತ್ತು ನನಗೂ ಕರಿಸಿದ್ರು ಬಜನಾಕ್ಕ ಜಾಲವಾದಿ ಬೀಗರು' ಶರಣರು ಬಹಳಷ್ಟು ಜನ ಬಂದರು. ಮತ್ತು ಪೂಜಾ ನಮ್ಮನ್ನು ಹಚ್ಚಿದರು. ಎಲ್ಲೇ ಪೂಜೆ ಮಾಡಿದರೂ ನನಗ ಹಸ್ತಾರ್ರಿ. ಇವರಿಗೆ ಯಾರಿಗೂ ಪದ ಅನ್ನಕ್ಕೆ ಬರುವುದಿಲ್ಲ. ನಾನು ಎಲ್ಲ ಪದ ಮುಗಿಸಿ ಬಿಟ್ಟೆ. ಬಂದು ಬಂದವನೇ ನನಗೆ ತೆಕ್ಕಿ ಬಡದು -

     ಹೇ ಬಸಣ್ಣ ನಿನಗೆ ಬಸಣ್ಣ ಅನ್ನಲಿ, ಏನು ತಮ್ಮ ಅನ್ನಲೇ,ಏನ್ ಗುರು , ಏನು ಅಣ್ಣ , ಯಪ್ಪಾ ಅಂತ ನನಗೆ ಎಲ್ಲೆಲ್ಲೂ . ಇವತ್ತು ನನ್ನ ಮನ ಶಾಂತ ಆಯ್ತು ನೋಡು ಅಂದ. ನಾನು ಫಕೀರಯ್ಯ ಮುತ್ಯಾಗ ಕರ್ಕೊಂಡು ಬಂದು ಶಾಂತಿ ಮಾಡಿಸಿದ್ದೆ ಏನು ಆಗಿಲ್ಲ ಇವತ್ತು ಶಾಂತಿ ಆಯ್ತ್ ನೋಡು ನನ್ನ ಮನೆ ಅಂದ.

   ಬೆಳಗಾಗುತನ ಭಜನಾ ಮಾಡುವುದು ಹೊಡೆದ ಹೇಳೋದು ಮಾಡಿದಿವಿ ಜಾಲವಾದಿಯವರು ಸಂಜೆತನಕ ಬಿಡಲಿಲ್ಲ ಇವೆಲ್ಲ ಬಾಯಿಪಾಠ ಕುಂದ್ರೋದಿಲ್ಲರೀ . ಇವು ನಿಜಗುಣರ ಕೈವಲ್ಯದನ್ನು ಸಂಸ್ಕೃತ ಜೊತೆಗೆ ಹಳೆಗನ್ನಡ ಕೂಡಿದ್ದು ಆದ ಯು ಕಲೀಬೇಕಾದರೆ ನಾನು ಬಹಳಷ್ಟು ಶ್ರಮಪಟ್ಟು ಕಲ್ತಿನ್ರಿ.

     ಈ ವಿಷಯದಲ್ಲಿ ನಮ್ಮ ಅಪ್ಪಾಜಿ ಬಹಳ ಶಾಣೆ ಅದಾನ ಅವ0ಗ ಆಗಿಂದಾಗೆ ಕೂಡ್ತಾವು. ಅವನಿಗೆ ಒಳ್ಳೆ ಸ್ಮರಣ ಶಕ್ತಿಯಾದರಿ. ಒಮ್ ಸಾಲವಾಡಗೀಗೆ ಕಾಮನಕೇರಿ ಬೂದಿಹಾಳ ಶರಣರು ಕರೆಸುತ್ತಿದ್ದರು.ನಾವಿಬ್ಬರೂ ಕೂಡಿ ಅಲ್ಲಿಗೆ ಹೋಗುತ್ತಿದ್ದೆವು. ಅಲ್ಲಿ ಪರಪ್ಪ ಮುತ್ಯಾನ ಪುಣ್ಯತಿಥಿ ಆ ಕಾರ್ಯಕ್ರಮಕ್ಕ ಒಳ್ಳೊಳ್ಳೆ ಜ್ಞಾನಿಗಳು ಬರ್ತಾರಿ .

      ಸಾಲ್ವಡ್ಗಿ ವಕೀಲ ಅಧ್ಯಕ್ಷರಾದವರು ಅವರು ಜ್ಞಾನಿಗಳು ಹೌದು. ಅಲ್ಲಿ ಸಭಾದಾಗ ಮಾತನಾಡಕ್ಕೆ ನಮಗಾಗುವುದಿಲ್ಲ ಕಾಮನ್ ಕೆರೆ ಬೂದಿಹಾಳ ಸರ್ ಅವರು ಪಂಚಮಸಾಲಿಯವರು ತುಂಬಾ ವಿನಯವಂತರು ಮತ್ತು ಜಾಣರು. ಅವರು ಹೇಗೆಂದರೆ ಅಗದಿ ತೋಳದ ಮುತ್ತಿನಂಗ.
        ಅವರು ಮನೆಯಾಗಿ ಕರ್ಕೊಂಡು ಹೋಗಿ ಹೆಂಗ್ ಕುಂದರವರು ಏಕ ತಾಟು .ಏನು ಮಾಡಿದರು ತಾಟು ತೊಳಿಗೊಡವರಲ್ಲ ಅಂತ ಬೇದರಹಿತರು .ಅಂತವರು ಬೂದಿಹಾಳಿಗೆ ಹಾದುಹೋಗಿವಿರಂತೆ ಬರ್ರಿ ಅಂತ ಕರೆದು ತಂದರುಅಲ್ಲಿ ಅವರು ಮಾತಾಡಿದರು ಬೂದಿಹಾಳ ಶರಣರು ಮಾತನಾಡಿದರು ನನಗೂ ಮಾತಾಡಲು ಹೇಳಿದರು ನನಗೇನು ಅಷ್ಟೊಂದು ಸರಿಯಾಗಿ ಮಾತನಾಡಲು ಬರುವುದಿಲ್ಲನನಗೇನು ಅಷ್ಟೊಂದು ಸರಿಯಾಗಿ ಮಾತನಾಡಲು ಬರುವುದಿಲ್ಲ ಆದರೂ ಮಾತನಾಡಿದೆನು ನಂತರ ಮೈಕ್ ಹತ್ತಿರಕ್ಕೆ ಬಂದು ಇವರು ಅಪ್ಪಾಜಿ ಅಂತ ಹಳ್ಳೂರಿನವರು ಬಸಪ್ಪ ಶರಣರ ಚಿರಂಜೀವರು ಆದ್ರ ಈ ಅಪ್ಪಾಜಿಯವರಿಗೆ ನಮಗೆಲ್ಲರಿಗೂ ಅಪ್ಪಾರು ಇವರು ವೇದಿಕೆಗೆ ಬಂದು ಭಾಷಣ ಮಾಡಬೇಕು ಅಂತ ಕರೆದರು.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.