ಹ್ಯಾಟ್ರಿಕ್ ಗೆಲುವಿನಲ್ಲಿ ದುನಿಯಾ ವಿಜಯ್ ಕುಮಾರ್
ಭೀಮಾ, ಸಲಗ ನಂತ್ರ ಸಿಟಿಲೈಟ್ಸ್ ಮೂಲಕ ಹ್ಯಾಟ್ರಿಕ್ ಡೈರೆಕ್ಟರ್ ಆದ ದುನಿಯಾ ವಿಜಯ್,ಗೆಲುವಿನ ಸಂಭ್ರಮದಲ್ಲಿ ಸಿಟಿಲೈಟ್ಸ್ ಸಿನಿಮಾತಂಡ..ಹ್ಯಾಟ್ರಿಕ್ ಬಾರಿಸಿದ ದುನಿಯಾ ವಿಜಯ್
ಭೀಮಾ, ಸಲಗ ಸಿನಿಮಾ ನಂತ್ರ 3ನೇ ಬಾರಿ
ಸಿಟಿಲೈಟ್ಸ್ ಸಿನಿಮಾ ನಿರ್ದೇಶನ ಮಾಡಿ ದುನಿಯಾ ವಿಜಯ್ ಗೆಲುವು ಸಾಧಿಸಿದ್ದಾರೆ.. ವಿನಯ್ ರಾಜ್ ಕುಮಾರ್ ಹಾಗೂ ಮೋನಿಷಾ ಅಭಿನಯದ ಸಿಟಿಲೈಟ್ ಸಿನಿಮಾ ಬಿಡುಡಗೆಯಾಗಿ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದೆ..ಮೋನಿಷಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದು ವಿನಯ್ ಮಾಸ್ ಸಿನಿಮಾಗಳಿಗೂ ಸೈ ಅಂತ ನಿರೂಪಿಸಿದ್ದಾರೆ…
ಸಿನಿಮಾ ಗೆದ್ದಿರೋ ಖುಷಿಯಲ್ಲಿ ಸಿನಿಮಾತಂಡ ಸುದ್ದಿಗೋಷ್ಠಿಯನ್ನ ಹಮ್ಮಿಕೊಂಡಿತ್ತು ..ಸುದ್ದಿಗೋಷ್ಠಿಯಲ್ಲಿ ಇಡೀ ಸಿನಿಮಾತಂಡ ಮಾತನಾಡಿ ಹ್ಯಾಟ್ರಿಕ್ ಹಿಟ್ ಕೊಟ್ಟಿರೋ ದುನಿಯಾ ವಿಜಯ್ ಅವರಿಗೆ ಶುಭಾಶಯ ತಿಳಿಸಿದ್ರು..ಪ್ರತಿ ಕಲಾವಿದರು ಸಿನಿಮಾ ಬಿಡುಡಗೆ ಆದ ನಂತರ ತಮಗೆ ಸಿಗುತ್ತಿರೋ ಪ್ರತಿಕ್ರಿಯೆಗೆ ಸಂತಸ ವ್ಯಕ್ತ ಪಡಿಸಿದರು…
ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿರೋ ಸಿಟಿಲೈಟ್ಸ್ ಸಿನಿಮಾ ತಂಡ ಸಕ್ಸಸ್ ಮೀಟ್ ನಲ್ಲಿ ಕೊಂಚ ಎಮೋಷನಲ್ ಆಗಿಯೇ ಮಾತನಾಡಿದ್ರು.. ನಟಿ ಮೋನಿಷಾ ಮಾತನಾಡಿ ನನ್ನ ಅಪ್ಪ ಎಂದಿಗೂ ನನ್ನ ಅಭಿನಯ ಚೆನ್ನಾಗಿದೆ ಅಂತ ಹೇಳಲೇ ಇಲ್ಲ ಹಿಟ್ ಸಿನಿಮಾಗಳನ್ನ ನೀಡಿ ಸಕ್ಸಸ್ ಆಗಿದ್ದಾಗ ನನಗೋಸ್ಕರ ಸಿನಿಮಾ ನಿರ್ದೇಶನ ಮಾಡಿದ್ರು ಥ್ಯಾಂಕ್ಯೂ ಅಪ್ಪ ಅಂತ ಎಮೋಷನಲ್ ಆದ್ರು…
ಇನ್ನು ನಟ ವಿನಯ್ ರಾಜ್ ಕುಮಾರ್ ಮಾತನಾಡಿ ನನಗಿಂತ ಹೆಚ್ಚು ನಂಬಿಕೆ ನನ್ನಮೇಲಿಟ್ಟ ನಮ್ಮ ಡೈರೆಕ್ಟರ್ ವಿಜಿ ಸರ್ ಗೆ ತುಂಬಾ ಥ್ಯಾಂಕ್ಯ್ ಯಾವಾಗಲು ನಮ್ಮ ಅಭಿಮಾನಿಗಳು ನನ್ನ ಮೇಲೆ ನಂಬಿಕೆ ಇಟ್ಟಿದ್ರು ಈಗ ಅವ್ರ ಕಣ್ಣಲ್ಲಿ ಹೆಮ್ಮೆ ನೋಡಿದಕ್ಕೆ ಖುಷಿ ಆಗ್ತಿದೆ ಥಿಯೇಟರ್ ವಿಸಿಟ್ ಮಾಡಿದಾಗ ಪ್ರತಿ ಪಾತ್ರವನ್ನ ಇಷ್ಟಪಟ್ಟಿದ್ದಾರೆ ಇದು ನಮ್ಮ ಗೆಲುವು ಮಾತ್ರವಲ್ಲ ಈ ಸಿನಿಮಾಗೆ ಕೆಲಸ ಮಾಡಿದ ಪ್ರತಿಯೊಬ್ಬರದ್ದು ಹಾಗೂ ಸಿನಿಮಾ ನೋಡಿ ಪ್ರೋತ್ಸಹ ಕೊಟ್ಟವರು ಧನ್ಯವಾದ ಎಂದರು..
ನಿರ್ದೇಶಕ ನಟ ದುನಿಯಾ ವಿಜಯ್ ಮಾತನಾಡಿ ಎಲ್ಲರಿಗೂ ಧನ್ಯವಾದ ಹೇಳಬೇಕು ಅಷ್ಟೇ …ಸಿನಿಮಾಗೆ ಸಪೋರ್ಟ್ ಮಾಡಿದ ಶಿವಣ್ಣ ಗೀತಕ್ಕ , ದೊಡ್ಮನೆ ಕುಟುಂಬಕ್ಕೆ ಧನ್ಯವಾದ ..ದುನಿಯಾ ಮಾಡಿದಾಗ ನಾನು ಯಾರು ಅಂತ ನೋಡದೆ ಜನರು ದೇವರಾಗಿ ಬಂದು ಕೈ ಹಿಡಿದು ನಡೆಸಿಕೊಂಡು ಹೋದ್ರಿ ಈಗ ನನ್ನ ಮಕ್ಕಳಿಗೂ ಅದೇ ಆಶೀರ್ವಾದ ಮಾಡಿದ್ದೀರ …ದೊಡ್ಮನೆಯಿಂದ ವಿನಯ್ ಕರ್ಕೊಂಡು ಬಂದಾಗ ಭಯ ಇತ್ತು …ಈ ಸಾರಿ ಎಲ್ಲಾ ಹೀರೋ ಅಭಿಮಾನಿಗಳು ಸಿಟಿಲೈಟ್ಸ್ ಸಿನಿಮಾ ನೋಡಿ ವಿನಯ್ ಹಾಗೂ ಮೋನಿಷಾ ಗೆ ಆಶೀರ್ವಾದ ಮಾಡಿದ್ದಾರೆ ಧನ್ಯವಾದ ಎಂದರು..ಸದ್ಯ ಸಕ್ಸಸ್ ಮೀಟ್ ಮಾಡಿರೋ ಸಿಟಿಲೈಟ್ಸ್ ಸಿನಿಮಾತಂಡ ಇಂದಿನಿಂದ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ..ಪ್ರತಿ ಜಿಲ್ಲೆಗೂ ಭೇಟಿಕೊಟ್ಟು ಅಭಿಮಾನಿಗಳನ್ನ ಭೇಟಿ ಮಾಡಿ ಧನ್ಯವಾದ ತಿಳಿಸಲಿದ್ದಾರೆ,

