” ದೇವೂರಿಗೆ ಹೋದಾಗ ಹುಣಶ್ಯಾಳದವರು ಬಲವಂತ ಪಕ್ಷ ಹಾಗೂ ಯಮುನಪ್ಪ ಶರಣರು ಇಬ್ಬರು ಜ್ಞಾನಿಗಳು ಅವರಿಬ್ಬರೂ ಬಜನಾಪದ ಹಾಡಕ್ಕ ಅಲ್ಲಿಗೆ ಬರುತ್ತಿದ್ದರು. ನಾವು ಅಲ್ಲಿಗೆ ಹೋಗಿದ್ದೆವು. ಮಾತಾಡಿಕೊಂಡು ಕುಂತಾಗ ಭಜನಾ ಚಾಲು ಆಯ್ತು. ನಾವು ಎಲ್ಲಿ ಹೋದಲ್ಲಿ ಹ್ಯಾಂಗ್ ಹಾಡ್ತೀವಿ ಹಂಗೆ ಹಾಡೋರು ಮತ್ತ ಅದನ್ನು ಬಿಡಿಸಿ ಹೇಳವರು. “
” ಹಿಗ್ಗುವೆ ಯಾಕೋ ಈ ದೇಹಕ್ಕೆ ಹಿಗ್ಗುವೆ ಯಾಕೋ,
ರಾಗ ಭೋಗಗಳೆಲ್ಲ ಆಗ ಮಾಡುತಲಿದ್ದು ರೋಗ ಬಂದರೆ ಬಿದ್ದು ಹೋಗುವ ಈ ದೇಹಕ್ಕೆ ಹಿಗ್ಗುವೆ ಯಾಕೋ ಅಂತ ನಾ ಹಾಡಿದೀನ್ರಿ.”
“ಅಂವಾ ಹಂಗಲ್ಲರಿ ಅಂದ. ಅವ ಕಲಿತವ ಅಲ್ಲ ನಿರಕ್ಷರಿ ಹಂಗೆ ಇದ್ದರೂ ನಿಜಗುಣರ ಎಲ್ಲಾ ಪದಗಳನ್ನು ಬಿಡಿಸಿ ಹೇಳುತ್ತಿದ್ದ .”
“ಹಂಗ ಹ್ಯಾಂಗ ರೀ ?
“ಅದು ರಾಗಭೋಗಗಳಲ್ಲ ತ್ಯಾಗ ಭೋಗಗಳು ಅಂದ”.
“ಹ್ಯಾಂಗ್ರೀ…”
“ತ್ಯಾಗ ಆಗಬೇಕು ಅಂದ “
“ತ್ಯಾಗ ಆಗಿಂದ ಆಗ ಮಾಡೋದೇನಾದ ಮತ್ತು ಇಲ್ಲಿ ಏನು ಹೇಳಿದರು ರಾಗಭೋಗಗಳೆಲ್ಲ ತ್ಯಾಗ ಮಾಡುತ್ತಲಿದ್ದು ಅದನ್ನು ಬಿಡಬೇಕಾಗಿದೆ. ತ್ಯಾಗ ಭೋಗ ಅಂದ್ರೆ ತ್ಯಾಗ ಆಗಿಂದ ಮುಂದೆ ಐತೇನಲ್ಲಿ ? ತ್ಯಾಗ ಹೆಂಗ ಮಾಡ್ತೀರಿ?”
“ಹೌದ್ರಿ ಕೈಮುಗಿತೀನಿ ನೀವು ಹೇಳೋದು ಖರೆ ಆದ ಅಂದ್ರಿ. ಕಡಕೋಳದವರ ಪದ ….
ಮೂಕನಾಗಬೇಕು..
ಜಗದೊಳು ಜ್ವಾಕ್ಯಾಗಿರಬೇಕು..
ಮೂಕನಾಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು..
ಕಾಕಬುದ್ಧಿ ಕಡೇ ಘಾಯಿಸಲಾರದೆ
ಕಾಕಬುದ್ಧಿ ಕಡೇ ಘಾಯಿಸಲಾರದೆ
ಲೋಕದ ಗೊಡವೀ…
ನಿನಗ್ಯಾಕ ಬೇಕು
ಮೂಕನಾಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು
ಹೂಂ.. ಹುಂ ಹುಂ ಹುಂ ಹುಂ
ಆ… ಆ… ಆ…
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಆ ಆ.. ಆಆ ಆ
ಆಆ..ಆ..ಆಆ..ಆ
ಮಾತು ಕಲಿಯ ಬೇಕೂ…
ಮಾತಿನ.. ಮರ್ಮ ತಿಳೀ..ಬೇಕು
ಮಾತು ಕಲಿಯ ಬೇಕೂ…
ಮಾತಿನ.. ಮರ್ಮ ತಿಳೀಬೇಕು..
ಮಾತು ಬಲ್ಲ.. ಮಹಾ ಜ್ಞಾನಿಯಕೂಡ
ಮಾತು ಬಲ್ಲ.. ಮಹಾ ಜ್ಞಾನಿಯಕೂಡ
ಕೋತಿ ಹಾಂಗ.. ಬೆನ್ ಹತ್ತಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾ..ಗಿರಬೇಕು
ಹೂಂ…ಆಆಆ…ಆಆ..
ಹೂಂ…ಆ…ಆ..
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಆ ಆ.. ಆಆ ಆ
ಆಆ..ಆ..ಆಆ..ಆ
ತತ್ವ ಕಲೀಬೇಕೂ…
ತತ್ವದಾ.. ಅರ್ಥಾ ತಿಳೀಬೇಕು..
ತತ್ವ ಕಲೀಬೇಕೂ…
ತತ್ವದಾ… ಅರ್ಥಾ ತಿಳೀಬೇಕು..
ತತ್ವ ಬಲ್ಲ.. ಮಹಾ ಜ್ಞಾನಿಯಕೂಡ
ತತ್ವ ಬಲ್ಲ.. ಮಹಾ ಜ್ಞಾನಿಯಕೂಡ
ಕತ್ತೀ.. ಹಾಂಗ ಬೆನ್ ಹತ್ತಿರಬೇಕು
ಮೂಕನಾಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು..
ಹೂಂ.. ಹುಂ ಹುಂ ಹುಂ ಹುಂ
ಹೂಂ.. ಹೂಂ.. ಹೂಂ..
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಸೆಯನಳೀಬೇಕೂ…
ಮನಸಿನಾ.. ಹೇಸಿಕಿ ತೊಳೀಬೇಕು..
ಆಸೆಯನಳಿಬೇಕೂ…
ಮನಸಿನಾ.. ಹೇಸಿಕಿ ತೊಳೀಬೇಕು..
ಆಆಆಆಆ..
ಆಸೆಯನಳಿದು.. ಹೇಸಿಕಿ ತೊಳೆದು
ಈಶ ಮಹಾಂತನ.. ಪಾದಾ ಹಿಡೀಬೇಕು
ಮೂಕನಾ..ಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು
ಮೂಕನಾ..ಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು..
ಕಾಕಬುದ್ಧಿ ಕಡೇ ಘಾಯಿಸಲಾರದೆ
ಲೋಕದ ಗೊಡವೀ…
ನಿನಗ್ಯಾಕ ಬೇಕು
ಮೂಕನಾ..ಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು..
ಹೂಂ.. ಹುಂ ಹುಂ ಹುಂ ಹುಂ
ಹೂಂ… ಹೂಂ.. ಆ..
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಆ ಆ.. ಆಆ ಆ
ಆಆ..ಆ..ಆಆ..ಆ
ಆಆ ಆ.. ಆಆ ಆ
ಆಆ..ಆ..ಆಆ..ಆ
“ಕಡಕೋಳ ಮಡಿವಾಳರ ಪ್ರಧಾರಿ ಇದು.ಮಾತು ಕಲಿಯಬೇಕಾದರೆ ಮಾತಿನ ಮರ್ಮ ತಿಳಿಯಬೇಕು. ಯಾಕೆಂದರೆ ಎಲ್ಲರಿಗೂ ಮಾತಾಡಕ್ ಬರೋದಿಲ್ಲ. ಒಬ್ಬೊಬ್ಬರು ಮಾತಾಡಿದರ ಮುಂದೆ ಪ್ರಶ್ನೆನೂ ಬರೋದಿಲ್ಲ ಅಷ್ಟು ವಿಚಾರ ಮಾಡಿ ಮಾತಾಡ್ತಾರೆ. ಒಬ್ಬೊಬ್ಬರು ಮಾತಾಡಕ್ ಬರಲಾರದ ಮಾತಿನ್ಯಾಗ ಸಿಕ್ಕು ಒದ್ದಾಡ್ತಾರ.
ಮುಂದುವರಿಯುತ್ತದೆ ….
ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.

