ಅಮ್ಮ ಇರಬೇಕಿತ್ತು “ಪವನ್ ಭಾವುಕ”
ಇಂತಹ ಅದ್ಬುತ ಸಂದರ್ಭದಲ್ಲಿ “ನಮ್ಮಮ್ಮ” ಇರಬೇಕಿತ್ತು ಎಂದು ಭಾವುಕರಾಗಿ, ಕಣ್ತುಂಬಿಕೊಂಡು ಮಾತನಾಡುತ್ತಿದ್ದ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಪಕ್ಕದಲ್ಲಿ ಕೂತಿದ್ದ ದೊಡ್ಮನೆಯ ದೊಡ್ಡ ಮಗ ಶಿವಣ್ಣನ ಕಣ್ಣಲ್ಲು ಆ ಭಾವುಕತೆ ಇದ್ದದ್ದು ಎದುರಿಗೆ ಕೂತಿದ್ದ ನಾನು ಕಣ್ಣಾರೆ ಕಂಡೆ,ನನ್ನ ಮನಸ್ಸು ಕೂಡಾ ಸ್ವಲ್ಪ ಡಿಸ್ಟರ್ಬ್ ಆಯ್ತು.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡುವ ಅವಕಾಶ ಸಿಕ್ಕರೆ ಯಾವ ನಿರ್ದೇಶಕ ತಾನೇ ಸುಮ್ಮನಿರುತ್ತಾನೆ, ಶಿವರಾಜ್ ಕುಮಾರ್ ನಾಯಕ ನಟರಾಗಿ (1986) ರಂದು ಎಂಟ್ರಿ ಅದಾಗಿನಿಂದಲೂ (2026) ಇಲ್ಲಿಯ ತನಕ ಅವರ ಸಿನಿ ಜರ್ನಿಯ ವಿಷಯಕ್ಕೆ ಬಂದಾಗ, ಅಖಂಡ ೪೦ ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ ಶಿವರಾಜ್ ಕುಮಾರ್ ರವರ ಬಳಿ ಯಾವುದೇ ನಿರ್ದೇಶಕ ಒಂದೊಳ್ಳೆ ಕಥೆ ಇಟ್ಟುಕೊಂಡು ಹೋದಾಗ, ಅಂಥವರಿಗೆ ಶಿವಣ್ಣ ಯಾವತ್ತೂ ಬೇಜಾರು ಆಗದ ಹಾಗೆ ನೋಡಿದ್ದಲ್ಲದೆ ಕೆಲವು ಕಥೆಗಳಿಗೆ ಕೆಲವು ಚಿತ್ರಗಳಿಗೆ ತಮ್ಮ ಹಳೆಯ ಚಿತ್ರಗಳ ಕಮಿಟ್ಮೆಂಟ್ ನೋಡ್ಕೊಂಡು ಒಪ್ಪಿಗೆ ಕೂಡ ಸೂಚಿಸುತ್ತಾರೆ, ವಿನಃ ಯಾವುದೇ ಒಳ್ಳೆಯ ಕಥೆಯನ್ನು ಅವರು ಅಷ್ಟು ಸಲೀಸಾಗಿ ಬಿಟ್ಟ ಉದಾಹರಣೆಗಳೇ ಇಲ್ಲ.
ಚಂದನವನದಲ್ಲಿ ಗೋವಿಂದಾಯ ನಮಃ ಎಂಬ ಕಂಪ್ಲೀಟ್ ಮನೋರಂಜನೆಯ ಚಿತ್ರವನ್ನು ನೀಡಿ, ಕೋಮಲ್ ಕುಮಾರ್ ಮತ್ತು ಪಾರುಲ್ ಯಾದವ್ ಮೇಲೆ, ಇಡೀ ಕರ್ನಾಟಕವೇ ಬ್ಯಾನ್ ಮಾಡುವ ಹಾಗೆ ಮಾಡಿದ್ದನ್ನ ಯಾರಾದರೂ ಮರೆಯಲು ಸಾಧ್ಯವೇ ??
ಆ ಹಾಡು ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತೋ,ಅಷ್ಟೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಮತ್ತೊಬ್ಬ ವ್ಯಕ್ತಿ ಅದು ನಮ್ಮ ಹೆಮ್ಮೆಯ ಕನ್ನಡಿಗ, ಪ್ರತಿಭಾವಂತ ರೈಟರ್, ಡೈರೆಕ್ಟರ್ ಪವನ್ ಒಡೆಯರ್.
ಗೋವಿಂದಾಯ ನಮಃ ಚಿತ್ರದ ನಂತರ ಪವನ್ ಒಡೆಯರ್ ಹಾಕಿದ್ದೆಲ್ಲವೂ ಗೂಗ್ಲಿಗಳೇ. ಒಂದಕ್ಕೊಂದು ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಎಲ್ಲ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ದು ಅವರ ಪ್ರತಿಭೆಗೆ ಹಿಡಿದ ಸ್ಪಷ್ಟ ಕನ್ನಡಿ.
ಇಂತಹ ಪವನ್ ಒಡೆಯರ್ ಮತ್ತು ಅವರ ಪತ್ನಿ ಅಪೇಕ್ಷ ಪುರೋಹಿತ್ ರವರಿಗೆ ಈ ಬರುವ ಅಕ್ಟೋಬರ್ ಎರಡರಂದು ಮಹಾಸಂಭ್ರಮ ನೀಡಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ,ಇದಕ್ಕೆ ಕಾರಣ ಈ ದಂಪತಿಗಳಿಗೆ ಬಹಳ ಇಷ್ಟವಾದ ನಟ ಹಾಗೂ ವಿಶೇಷವಾಗಿ ಪವನ್ ಒಡೆಯರ್ ಅವರ ಫೇವರೆಟ್ ಮ್ಯಾನ್ ದೊಡ್ಮನೆ ದೊಡ್ಮಗ ಶಿವಣ್ಣನಿಗೆ ಮಾಡಿದ ಬೇಲ್ ಚಿತ್ರ.
ಶಿವಣ್ಣನ ಮುಖ್ಯ ಭೂಮಿಕೆಯಲ್ಲಿ, ಕೆವಿಎನ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಒಂದು ಗಂಭೀರವಾದಂತಹ ಸಮಸ್ಯೆ,ಅದರ ಸುತ್ತಮುತ್ತಲು ಆರಕ್ಷಕರು ಎಂಬ ಪವರ್ಫುಲ್ ವ್ಯವಸ್ಥೆ, ಎಲ್ಲರನ್ನ ಕಂಟ್ರೋಲ್ ಮಾಡಲು ಪ್ರಯತ್ನಿಸುವ ಕೆಟ್ಟ ರಾಜಕಾರಣ,ಅವರಿಗೆ ಸಪೋರ್ಟ್ ಮಾಡುವ ರೌಡಿಗಳು ಹಾಗೂ ರೌಡಿಸಂ, ಇದರ ಮಧ್ಯೆ ಇಬ್ಬರೂ ಯುವ ಪ್ರೇಮಿಗಳು ಹಾಗೇ ಇದೆಲ್ಲದರ ಮಧ್ಯೆ ವಯಸ್ಸಾದರೂ ಸಹ ಯುವಕರಂತೆ ಕಾಣುವ ಮೂರು ಜನ ಜಬರ್ದಸ್ತ್ ದೋಸ್ತಿಗಳು, ಸವಾಲಿಗೆ ಪ್ರತಿ ಸವಾಲು ಒಡ್ಡುವ ಕಡಕ್ ಅಧಿಕಾರಿ ಶಿವಣ್ಣನ ಪಾತ್ರ, ಇಂತಹ ಪ್ರಮುಖ ಕಂಟೆಂಟ್ ಅನ್ನ ಒಳಗೊಂಡಿರುವ ಬೇಲ್ ಚಿತ್ರ ಗ್ಯಾರಂಟಿ ಎಲ್ಲ ಅಭಿಮಾನಿಗಳಿಗೆ ಸಿನಿ ಪ್ರೇಮಿಗಳಿಗೆ ಒಂದು ದೊಡ್ಡ ಹಬ್ಬ ಎನ್ನಬಹುದು.
ಬೇಲ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮತ್ತು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕಂಟೆಂಟ್ ಗಳನ್ನು ತೋರಿಸಿ ಕುಮಾರಿ ಕುಮಾರಿ ಹಾಡಿಗೆ ಇಡೀ ಚಿತ್ರತಂಡ ಹೆಜ್ಜೆಯನ್ನು ಹಾಕುವುದರ ಮೂಲಕ ಬೇಲ್ ಎಲ್ಲರಿಗೂ ಇಷ್ಟವಾಗುವ ಕಥೆ ಎಂಬ ಮಾತುಗಳನ್ನು ಹೇಳಿದರು.
ಸಣ್ಣ ಸಿನಿಮಾ ದೊಡ್ಡ ಸಿನಿಮಾ ಅಂತ ಯಾವುದೇ ತರಹದ ಬೇಧಭಾವ ಇಲ್ಲ ಎಲ್ಲವೂ ಕನ್ನಡ ಸಿನಿಮಾಗಳೇ, ಇತ್ತೀಚಿಗೆ ಬಿಡುಗಡೆಯಾಗಿ ಸಕ್ಸಸ್ ಆದಂತಹ ದೀಕ್ಷಿತ್ ಶೆಟ್ಟಿ ನಿರ್ಮಾಣದ ವಿಡಿಯೋ, ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್, ಪ್ರೇಮದ ಊರಲ್ಲಿ ಹೀಗೆ ಎಲ್ಲ ಸಿನಿಮಾಗಳು ಚೆನ್ನಾಗೆ ಆಗ್ತವೆ ಪವನ್ ಒಡೆಯರ್ ಅಪೇಕ್ಷ ಪುರೋಹಿತ್ ಕಂಡ ಕನಸು ಬಿಲ್ ನನಗೆ ತುಂಬಾ ಇಷ್ಟವಾದ ಕಥೆ ಎಂದರು ಶಿವಣ್ಣ.
ಬೇಲ್ ಚಿತ್ರದಲ್ಲಿ ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಮ್, ಲೂಸ್ ಮಾದ ಯೋಗಿ, ನಲ್ಲ ಚಿತ್ರದ ಖ್ಯಾತಿಯ ಸಂಗೀತ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ಸುನಿಲ್ ಪುರಾಣಿಕ್, ನಿವೇದಿತಾ ಗೌಡ, ಜಗ್ಗಪ್ಪ ಸೇರಿದಂತೆ ಇನ್ನೂ ಬಹಳಷ್ಟು ಕಲಾವಿದರು ಕಾಣಿಸಿ ಕೊಂಡಿದ್ದಾರೆ.
ಇನ್ನು ಬೇಲ್ ಚಿತ್ರದ ತಂತ್ರಜ್ಞರ ಬಗ್ಗೆ ಹೇಳುವುದಾದರೆ, ಚಿತ್ರಕ್ಕೆ ವೈದಿ ಛಾಯಾಗ್ರಹಣ, ಅಜಿನೀಶ್ ಲೋಕನಾಥ್ ಸಂಗೀತ, ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ, ಎಲ್ಲವೂ ಚಿತ್ರಕ್ಕೆ ಮತ್ತೊಂದು ವೇಗವನ್ನ ತಂದುಕೊಟ್ಟಿದೆ. ತಮ್ಮ ಫೇವರೆಟ್ ನಟನ ಚಿತ್ರವನ್ನು ತಾನೇ ನಿರ್ದೇಶನ ಮಾಡಿ ಫ್ಯಾನ್ ಬಾಯ್ ಮೂಮೆಂಟ್ ನಲ್ಲಿರುವ ನಿರ್ದೇಶಕ ಪವನ್ ಒಡೆಯರ್ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಲಿ ಎಂಬುದು ನಮ್ಮ ಆಶಯ.

ವೇದಿಕೆಯ ಮೇಲೆ ಮಾತನಾಡುವಾಗ ತಮ್ಮ ಅಮ್ಮನ ಅನುಪಸ್ಥಿತಿ ಆ ಮಹಾತಾಯಿ ದೈಹಿಕವಾಗಿ ತಮ್ಮ ಜೊತೆ ಇಲ್ಲದಿರುವುದು ನೆನೆದು ಭಾವುಕರಾಗಿ ಕಣ್ಣೀರು ಹಾಕುವ ಸಮಯ ಪಕ್ಕದಲ್ಲಿ ಅಣ್ಣನಂತೆ ಕೂತಿದ್ದ ಶಿವಣ್ಣ ಕೂಡ ಸ್ವಲ್ಪ ಭಾವುಕರಾಗಿದ್ದು ಅಲ್ಲಿದ್ದ ಎಲ್ಲರನ್ನೂ ಒಂದು ಕ್ಷಣ ಭಾವಕರನ್ನಾಗಿಸಿತು.
ಒಂದೊಳ್ಳೆಯ ಚಿತ್ರ ಒಂದೊಳ್ಳೆಯ ಕಂಟೆಂಟ್ ಮೂಲಕ ಬೇಲ್ ನಿಮ್ಮೆಲ್ಲರನ್ನ ತಲುಪಲಿದ್ದು,ಇದೆ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಡುಗಡೆ ಆಗ್ತಾ ಇದೆ, ಇದೊಂದು ಘಟ್ ಫೀಲ್ ಇರೋ ಸಿನಿಮಾ ಮಿಸ್ ಮಾಡದೆ ನೋಡಿ ಎಂದರು ನಿರ್ದೇಶಕ ಪವನ್ ಒಡೆಯರ್.
ರವೀ ಸಾಸನೂರ್
MasterNews365.Com
