ಸುಖವು ನಿನ್ನದಲ್ಲ ದುಃಖವು ನಿನ್ನದಲ್ಲ ಈ ದೇಹವೇ ನಿನ್ನದಲ್ಲ.ಜೀವನವೇ ನಿನ್ನದಲ್ಲ ಇದು ಎದಕ್ ಸಂಬಂಧಪಟ್ಟಿದ್ದು ಜೀವನಿಗೆ ? ಈ ಪ್ರಪಂಚ
ಜೀವನಿಗೆ ಮತ್ತು ಈ ದೇಹಕ್ಕೆಇದೆಲ್ಲವೂ ಸುಳ್ಳು ಯಾಕಂದ್ರೆ ಮೊದಲೇನರ
ಇತ್ತೇನು ?.
ಮಾಯೆಯಿಂದ ಜನಿಸಿ ಬೆಳೆದು
ಕಾಯವೆನಿಸಿ ಸತ್ತು ಕಡೆಗೆ
ನಾಯಿ ನರಿಯು ತಿಂದು ಕೆಡುವ
ಹೇಯವಾದ ಒಡಲೊಳು ಜನಿಸಿ
ನಂಬಬೇಡಲೋ ಮನುಜ ನಂಬಬೇಡಲೋ II
ನಂಬಿಕೆ ಇಡುವವರು ಉಂಟೆ ಮಣ್ಣು ಗೊಂಬೆಯಂತೆ
ದೇಹವಿಧನು.
ನಂಬಬೇಡ ನಂಬಬೇಡ ಅಂತ ಹೇಳಿ ಯಾರಂತ ಮಹಾತ್ಮರು ಹೇಳಿಯಾರು.ಈ ಭಾವ ಹೋಗಬೇಕು.
ಬರಲುಳ್ಳ ದುಃಖವನು ಮೀರಲಾರಿಂದಹುದು
ಮರುಳೆ ನಿಯಮಿಸುವ
ವಿಧಿಬೇರಿರುರತಿರೆ
ಹಿರಿದು ಸಾಹಸಿಗಳೆನಿಪ ರಾಮನಳಪಾಂಡವರು
ಇನ್ನೇನು ಗತಿಯಾದರು ಅದು ನರಿಯೇ ಮರುಳೆ.
ಈ ದೇಹ ಯದರಿಂದ ಬಂತಂದ್ರ ಪ್ರಾರಂಭದಿಂದ ಬಂದದ . ಪ್ರಾರಬ್ಧದಲ್ಲಿ ದೇಹಕ್ಕ ಹಿಂಗಿಂಗ ಆಗಬೇಕಂತ ಅದರಾಗ ಬರಲದು ಕಳಿಸಿದೆ.ಯಾವ ವಯಸ್ಸಿಗೆ ಉದ್ಯೋಗ ಮಾಡಬೇಕು, ಯಾವ ವಯಸ್ಸಿಗೆ ಅಧಿಕಾರ ಮಾಡಬೇಕು, ಯಾವ ವಯಸ್ಸಿಗೆ ಲಗ್ನ ಆಗಬೇಕು, ಯಾವ ವಯಸ್ಸಿಗೆ ಮಕ್ಕಳಾಗಬೇಕು, ಯಾವ ವಯಸ್ಸಿಗೆ ಆಸ್ತಿ ಮಾಡಬೇಕು, ಯಾವ ವಯಸ್ಸಿಗೆ ಯಾವ ರೋಗ ಬರಬೇಕು, ಯಾವ ವಯಸ್ಸಿಗೆ ಏನು ಮಾಡಬೇಕು, ಎಲ್ಲವೂ ಬರೆದಾದ ಮೇಲೆ ದೇವರು ನಮಗೆ ಕಳುಹಿಸಿಕೊಟ್ಟಾನ .
ಅದಕ್ಕೆ ಬರಲಿಲ್ಲ ದುಃಖವನ್ನು ಮೀರಲಾರಿಂದಹುದು. ದುಃಖಗಳು ಮನುಷ್ಯನಿಗೆ ಬರುವ .ಬರಲು ದುಃಖವನನುಭವಿಸದೆ ಬೇರೆ ಪರಿಹರವದಕ್ಕಿಲ್ಲಬಹುದೆಂದಡೆ .
ತೇಕು ಬಂದನೀನು ಉಣ್ಣು ನಡಿ,ಕುರಿ ಬಂದುವಾ ಉಣ್ಣು ನಡಿ,ಆರಾಮ ಆಯಿತಾ ಹೂಂ ,
ಆರಾಮಾಗಿ ಏನೈತೆ ಅದನ್ನು ಅನುಭವಿಸಬೇಕು.
ನಿನ್ನಂತೆ ತಿಳಿದು ರಾಮ ನವ ಪಾಂಡವರು ಅವರು ನಮ್ಮಂಗ ಸಾಮಾನ್ಯ ಮನುಷ್ಯರಲ್ಲ. ದೇವರು ಅವರು ಹತ್ತು ಅವತಾರ ಅದಾವ್ರಿ. ಅಂಥವರಿಗೆ ಬಿಟ್ಟಿಲ್ಲ ಈ ದುಃಖ . ರಾಮ ಸೀತನ್ನ ಕಳಕೊಂಡು 12 ವರ್ಷ ವನವಾಸಕ್ಕೆ ಹೋಗಿ ಸೀತಾ ಅಂತ ಅಳಕೊಂತ ಕಾಡಿನ ತುಂಬ ತಿರುಗಿದ.
ಅಂತವ ಶ್ರೀ ರಾಮಆತನಿಗೆ ಪರಮಾತ್ಮ ಬಿಡ್ಲಿಲ್ಲ ನಳರಾಜ ಎಲ್ಲಾ ಕಳಕೊಂಡು ಹಾಳಾಗಿ ದುಡಿದಾನು ಅವನಿಗೆ ಬಿಟ್ಟಿಲ್ಲ. ಪಂಚಪಾಂಡವರು ಸಾರ್ವಭೌಮ ರಾಜರು. ಎಲ್ಲ ಸೋತು 12 ವರ್ಷ ವನವಾಸ ಮಾಡ್ಯಾರ. ತಿರಕೊಂಡು ತಿಂದಾರ.ಅಂತ ದುಃಖ ಅಂತೂ ನಮಗಿಲ್ಲ ಅವರಿಗೆ ಬಂದಂತಹ ದುಃಖ ಕಷ್ಟ ನಿನಗೆ ಬಂದಿಲ್ಲ ಅವರನ್ನು ನೋಡಿ ನೀನು ಧೈರ್ಯತಾಳು.
ನಿನ್ನಂತೆ ತಿಳಿದು ರಾಮನವ ಪಾಂಡವರು ಇನ್ನೇನು ಗತಿಯಾದರು, ಇದನರಿ ಎಲೆ ಮರುಳೆ.ಅವರನ್ನು ನೋಡು ನೀನು ಸ್ವಲ್ಪ ದುಃಖಕ್ಕೆ ಇಷ್ಟು ಮಾಡುತ್ತೀ ಅವರಷ್ಟುಆಯುಷ್ಯವು ನಿಮಗಿಲ್ಲ ಶ್ರೇತಾಯುಗದ ಆಯುಷ್ಯ 17, 28,000.ಆವಾಗ ಮನುಷ್ಯನ ಆಯುಷ್ಯ 1.00,000 ವರ್ಷ. ದೇಹ ಎಷ್ಟು ಇತ್ತು ಅಂದ್ರೆ 28 ಮೊಳ ಹಂತಕಾಲದಾಗ ನಳಹರಿಶ್ಚಂದ್ರ ಆಳ್ಯಾರು.ಅವಾಗ ವಿಶ್ವಾಮಿತ್ರ 60,000 ವರ್ಷ ತಪಸ್ಸು ಮಾಡಯಾನ ಮಾಡಿದ್ದೆಲ್ಲ
ವಶಿಷ್ಠ ಗ ಬಿಟ್ಟು ಕೊಟ್ಟಾನ •ಈಗ ಅಷ್ಟೆಲ್ಲ ಮಾಡೋಕೆ ಆಗೋದಿಲ್ಲ ಅಷ್ಟು ವಯಸ್ಸು ಈಗಿಲ್ಲ.
ಮುಂದುವರೆಯುತ್ತದೆ ……
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

