ತಾಳಿಕೋಟೆಯಲ್ಲಿ ನಡೆದ ಘಟನೆ –
ಆಗ ತಾಳಿಕೋಟೆಯಲ್ಲಿ ವಿರಕ್ತ ಸ್ವಾಮಿಗಳು ಇದ್ದರು ಆದರೆ ಅವರು ಲಿಂಗೈಕ್ಯವಾದ ನಂತರ ಇಂದು ಸಿದ್ದಲಿಂಗಜೇಬರು ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದಿರುವರು.ಮೊದಲಿನ ಖಾಸಗತ ಸ್ವಾಮಿಗಳು ಹುಬ್ಬಳ್ಳಿಯ ಸಿದ್ಧಾರೂಢರ ಶಿಷ್ಯರು. ಹೆಣ್ಣು ಮಕ್ಕಳು ಅವರಿಗೆ ನಮಸ್ಕಾರ ಮಾಡಲು ಗುಡಿಗೆ ಬಂದರೆ ಭಯದಿಂದ ಓಡೋಡಿ ಹೋಗಿ ಡಬ್ಬಗುಳಿಯ ಕಂಟಿಯೊಳಗ ಹೋಗಿ ಇದ್ದು ಬಿಡುತ್ತಿದ್ದರು.
ಇವರನ್ನು ಹತ್ತಿರಕ್ಕೆ ಕರೆದು ಹೀಗೇಕೆ ಎಂದು ಪ್ರಶ್ನಿಸಿದರೆ ಹೆಣ್ಣು ಮಕ್ಕಳಿಗೆ ನೋಡಿದರೆ ಪಾಪ ಬರುತ್ತದೆ ಎಂಬ ಭಯ ಅಂತಹ ಪಾಪಪ್ರಜ್ಞೆ ಇವರಿಗೆ ಕಾಡುತ್ತಿತ್ತಂತೆ, ಈ ಸುದ್ದಿ ಸಿದ್ದಾರೂಢರಿಗೆ ತಿಳಿಯಿತು. ಅವರು ಖಾಸಗತ ಸ್ವಾಮಿಗಳನ್ನು ಕರೆದು ಕೇಳಿದರಂತೆ ಹಾಸ್ಗತ ಹೆಣ್ಣು ಮಕ್ಕಳನ್ನು ನೋಡಿದ ತಕ್ಷಣ ಓಡಿಹೋಗಿ ಡಬ್ಬಗುಳಿ ಕಂಠಿ ಒಳಗ ಹೋಗಿ ಬೀಳುತ್ತೀಯ ಅಂತ ಸುದ್ದಿ ಯಾಕಪ್ಪ ಅಂತ ಕೇಳಿದರು.
ನಿಮ್ಮ ಊರು ನೋಡಕ್ಕೆ ನಿಮ್ಮ ಅವ್ವನ ನೋಡಕ್ಕೆ ನಿನಗೆ ಹೆದರಿಕೆ ಆಗಲಿಲ್ಲ ಏನು ?ನಿಮ್ಮ ತಾಯಿಯ ಮೊಲೆ ಹಾಲು ಕುಡಿಯುವಾಗ ನಿನಗೇನು ಅನ್ನಿಸಲಿಲ್ಲ ಏನು ?ಅಂದ್ರಂತೆ .ಆಗ ಖಾಸಗತ ಶ್ರೀಗಳು ಅದೇನಿಲ್ಲ ಅಪ್ಪ ಅಂದರಂತೆ. ಹೂಂಹಾಗಿದ್ರೆ ಇದು ಹಿಂಗೆ ನೋಡಪ್ಪ ಅಂದ್ರಂತೆ ಸಿದ್ದಾರೋಡರು . ಅಂದಿನಿಂದ ಹೆಣ್ಣೆಂದರೇನ ಭಯ ಇವರಿಗೆ ದೂರ ಆಯಿತ್ತಂತೆ. ತಾಳಿಕೋಟೆಯಲ್ಲಿ ಭಜನಾ ಪದಗಳನ್ನು ಹಾಡಿದ್ದು ಅದ. ಸ್ವಾಮಿಗಳು ಜಾತ್ರಾ ಸಂದರ್ಭದಲ್ಲಿ ಅವರ ಸಪ್ಪಂಡಿ ಅವರ (ಸರ್ಪಭೂಷಣ ಶಿವಯೋಗಿಗಳು) ಪದಗಳನ್ನು ಹಾಡಿದ್ದು ಅದ.
*ಜ್ಞಾನ ಅರುಹಿದ ಗುರು ಶಂಕರ್ ಹಾಗೂ ದೂತರು ಹಾಗೂ ಗುರು ಉಪದೇಶದ ಬಗೆ –
ಹಳ್ಳೂರಿನ ಮಡಿವಾಳಪ್ಪನವರಿಗೂ ಅವಧೂತರಿಗೂ ಬಹಳಷ್ಟು ಪರಿಚಯ. ಮೇಲಾಗಿ ಮಡಿವಾಳಪ್ಪನವರು ಅವಧೂತರ ಶಿಷ್ಯರು ಹೌದು. ಅವರು ಹಣಕಾಸಿನ ವಿಚಾರಕ್ಕಾಗಿ 1982 ರಲ್ಲಿ ಶಂಕರಾವದೂತರುಹಳ್ಳೂರಿಗೆ ಬಂದಿದ್ದರು. ಇವರು ಹಾಲು ಮತದವರು.
ನನಗೆ ತುಂಬಾ ಅರಿಯದ ವಯಸ್ಸು ಗುಡಿಗುಂಡಾರ ಬಜನಾ ಪದಗಳ ಸಂಘ ಇವುಗಳ ಕೂಡಿ ನನಗೂ ಗುರುವಿನಿಂದ ಉಪದೇಶ ಪಡೆದುಕೊಳ್ಳಬೇಕು. ಅನ್ನುವಂತ ಆಸೆ, ಮೊದಲಿನಿಂದ ಬಹಳ ಇತ್ತು ಮತ್ತು ಮಡಿವಾಳಪ್ಪನವರ ಮುಂದೆ ನನ್ನ ಆಸೆಯನ್ನು ವ್ಯಕ್ತಪಡಿಸಿದ್ದನು. ನೋಡಪ್ಪ ನನಗೆ ಆಧ್ಯಾತ್ಮದ ಒಲವು ಬಹಳಾದ ಒಬ್ಬ ಸಾರ್ಥಕ ಗುರುಗಳಿದ್ದರೆ ಉಪದೇಶ ಪಡೆದುಕೊಳ್ಳುತ್ತೇನೆ ಅಂತ ಅಂದಿದ್ದೆ. ನಾ ನಿನಗ ಎಲ್ಲಾ ಉಪದೇಶ ಕೊಡುಸ್ತೀನಿ ಬಲ್ಲಿದವರು ಅದಾರಂತ ಮಡಿವಾಳಪ್ಪನವರು ನನಗೆ ಹೇಳಿಕೊಂಡೆ ಬಂದಿದ್ದರು.
ಮುಂದೆ ಎಲ್ಲಮ್ಮನ ಹುಣ್ಣಿಮೆ ಚೌಡಕಿ ಪದ ಹಾಡಿಕೊಂತ ಊರ್ ಒಳಗೆ ತಿರುಗುತ್ತಿದ್ದೆವು ಎಲ್ಲಮ್ಮನ ಗುಡ್ಡಕ್ಕೂ ಹೋಗುತ್ತಿದ್ದೇವು. ಅಚಾನಕ್ಕಾಗಿ ಆ ಗುರುಗಳು ನಮ್ಮೂರಿಗೆ ಬಂದು ಬಿಟ್ಟರು .ಅಪ್ಪರು ಬಂದ್ರು ಅಪ್ಪರು ಬಂದ್ರು ಅಂತ ಊರಾಗ ಸುದ್ದಿ ಆಯಿತು ಅವಾಗ ಸಂಜೆ 5:00 ಗಂಟೆ ಆಗಿತ್ತು.
ಅಪರೂ ಬಂದ್ರು ಅಂತ ಹೇಳಿ ಚೌಡಕಿ ಹಾಡುವುದನ್ನು ಬಿಟ್ಟು ಅವರನ್ನು ಕರೆದುಕೊಂಡು ಮನೆಗೆ ಹೋದೆನು. ನಾವು ಒಂದೆರಡು ಮನೆ ಹಾಡಿ ಬಂದ್ಬಿಟ್ಟಿವ್ರಿ .ಅವಾಗ ಗುರುಗಳಿಗೆ ನಮಗೆ ಪರಿಚಯ ಇದ್ದಿದ್ದಿಲ್ಲ.
ಅಪ್ಪ ಇದೊಂದು ವಸ್ತು ಚಲೋ ಅದ ನಿನ್ನ ಕಡೆಯಿಂದ ಒಂದು ಒಳ್ಳೆಯ ಕೆಲಸ ಆಗಬೇಕು ಅಂತ ಮಡಿವಾಳಪ್ಪನವರು ಅಪ್ಪ ಅವರಿಗೆ ಹೇಳಿನಿ ಅಂದರು. ಅದಕ್ಕೆ ....
ಅಪ್ಪಾವ್ರು ಏನಂದ್ರಪ್ಪಾ …ಅಂತ ನಾ ಕೇಳಿದೆ. ಅವಾಗ ಬನದ ಹುಣ್ಣಿಮೆ ಇತ್ತು ಮುಂದೆ ಶಿವಯೋಗ ಮೂರು ತಿಂಗಳಿಗಿತ್ತು.
ನೋಡಪಾ ಶಿವಯೋಗಕ್ಕೆ ಒಳ್ಳೆ ಯೋಗ ಐತಿ. ಗುರುಗಳದ್ದು ಆವಾಗ ಭಜನಾ ಇರ್ತದಆವಾಗ ಮಾಡೂನ ಅಂದಾರ ಅಪ್ಪಾವ್ರು ಅಂದ್ರು ಅದಕ್ಕೆ ನಾ ಅಂದೆ.
ದಿವ್ಸ ಭಾಳ ಆಗ್ತಾವು. ಮೂರು ತಿಂಗಳುತನ ಕಳಿಬೇಕಂದ್ರ ಭಾಳ ಆಗ್ರದ . ಅಲ್ಲೀ ತನಕ ನನಗೂ ತಡೆಯೋದು ಆಗೂದಿಲ್ಲ ಶಿವಯೋಗದ ತನಕ ಅಂದ್ರ ಹ್ಯಾಂಗಪಾ ಅಂದೆ.
ಇಲ್ಲಾ ಶಿವಯೋಗಕ್ಕ ಒಳ್ಳೆಯ ಮುಹೂರ್ತ ಅದ ಆವಾಗ ಮಾಡೋಣ ಅಂದಾರ ಅಂತ ಹೇಳಿದರು.
ಮುಂದುವರೆಯುತ್ತದೆ …
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

