Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಯುವ ದಿವ್ಯ ಜ್ಞಾನಿ ಯಾರು ??
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯುವ ದಿವ್ಯ ಜ್ಞಾನಿ ಯಾರು ??

ಯುವ ದಿವ್ಯ ಜ್ಞಾನಿ ಯಾರು… ?? ನಮ್ಮ ಅಪ್ಪಾಜಿ ಹೇಳಕ್ಕಾಗಲ್ಲ ಚಾಲು ಮಾಡಿದ್ರ ಅಧ್ಯಕ್ಷ ಮಾರಿ ನೋಡಿಕೊಂಡು ಸುಮ್ಮನೆ ಕುಳಿತುಬಿಟ್ಟಿನ್ರಿ. ಇವ ಅಲ್ಲಿ ಒಂದು ತಿರುಕನ ಕಥೆ ತೊಗೊಂಡು ಹೇಳಿದ್ದ ಅದನ್ನು ಹಾಡಿ ಬಿಡಿಸಿ ಹೇಳಾಕ ಹತ್ತಿದ್ರೆ ಕಣ್ಣ ರೆಪ್ಪೆ ಬಡ್ಯಾಕ್ ತಯಾರಿಲ್ಲ. ಇಂದಾ ಆವಾಗ ಬಹಳ ಸಣ್ಣಾ0ವಾ. ತಿರುಕನೋರ್ವ ನೂರ ಮುಂದೆಮುರುಕು ಧರ್ಮಶಾಲೆಯಲ್ಲಿ … ಅಂತ ಮುಪ್ಪಿನ ಷಡಕ್ಷರಿಯಾ ಭೋಗ ಷಟ್ಪದಿ ಪದ ಹಾಡಿದ ಅದರಾಗ ಬಹಳ ಅನುಭವ ಇದಲ್ಲದೆ ಇನ್ನೊಂದು ಮುಪ್ಪಿನ ಷಡಕ್ಷರಿಗಳ ಹಾಡು […]

ಯುವ ದಿವ್ಯ ಜ್ಞಾನಿ ಯಾರು… ??

ನಮ್ಮ ಅಪ್ಪಾಜಿ ಹೇಳಕ್ಕಾಗಲ್ಲ ಚಾಲು ಮಾಡಿದ್ರ ಅಧ್ಯಕ್ಷ ಮಾರಿ ನೋಡಿಕೊಂಡು ಸುಮ್ಮನೆ ಕುಳಿತುಬಿಟ್ಟಿನ್ರಿ. ಇವ ಅಲ್ಲಿ ಒಂದು ತಿರುಕನ ಕಥೆ ತೊಗೊಂಡು ಹೇಳಿದ್ದ ಅದನ್ನು ಹಾಡಿ ಬಿಡಿಸಿ ಹೇಳಾಕ ಹತ್ತಿದ್ರೆ ಕಣ್ಣ ರೆಪ್ಪೆ ಬಡ್ಯಾಕ್ ತಯಾರಿಲ್ಲ. ಇಂದಾ ಆವಾಗ ಬಹಳ ಸಣ್ಣಾ0ವಾ.

ತಿರುಕನೋರ್ವ ನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ …

ಅಂತ ಮುಪ್ಪಿನ ಷಡಕ್ಷರಿಯಾ ಭೋಗ ಷಟ್ಪದಿ ಪದ ಹಾಡಿದ ಅದರಾಗ ಬಹಳ ಅನುಭವ ಇದಲ್ಲದೆ ಇನ್ನೊಂದು ಮುಪ್ಪಿನ ಷಡಕ್ಷರಿಗಳ ಹಾಡು ಹಾಡಿದ ಅದನ್ನು ಕೇಳಿದವರು ಅಬ್ಬಬ್ಬಾ ಯುವ ದಿವ್ಯ ಜ್ಞಾನಿ ಯಾರು ಇವನಿಗೆ ಸರಿಯಾಗುವುದಿಲ್ಲ. ಅಂದ್ರು ಇದಕ್ಕೆಲ್ಲ ಹಿಂದಿನ ಸುಕೃತ ಬೇಕು ಎಂದು ಆ ನೆನಪನ್ನು ಹಸಿರು ಮಾಡಿಕೊಂಡರು ಕುಲುಕುಲು ಬಾಯಲ್ಲೇ ನಕ್ಕು ಬಿಡುವರು. ತುಂಬಿದ ಸಭೆಯೊಳಗೆ ಮಾತಾಡುವುದು ಅಂದ್ರೆ ಧೈರ್ಯ ಬೇಕ್ರಿ. ನಾವು ಪದ ಹಾಡ್ತೀವಿ ಬಿಡಿಸಿ ಹೇಳುತ್ತೇವೆ ಅವಾಗ ಭಯ ಇರುವುದಿಲ್ಲ ಸಭಾದಾಗ ಜ್ಞಾನದ ಬಲದಿಂದ ಮಾತಾಡಬೇಕಲ್ಲ. ಅದು ಸ್ವಂತ ಅದರಾಗ ನಮಗೆ ಅಕ್ಷರ ಇಲ್ಲ ಸೂಕ್ಷ್ಮತೆ ಇಲ್ಲ ಸಭಾದಾಗ ಕುಂತವರಿಗೆ ಬಣ್ಣ ಹಚ್ಚಿ ಮಾತಾಡಬೇಕು.ನಮಗೆ ಬಣ್ಣ ಹಚ್ಚಾಕ ಬರುವುದಿಲ್ಲ ಏನಿದ್ದರೂ ಸೀದಾಸಾದ ಮಾತಾಡೋರು.

 ಇತ್ತೀಚೆಗೆ ನರಬೆಂಚಿಯೊಳಗೆ ಅನುಭವಗೋಷ್ಠಿ ಮಾಡಕತ್ಯಾರು. ಅಲ್ಲಿ ಹೋಗಲಾಕತ್ತಿಂದ ಜರಾ ಜರಾ ಮಾತನಾಡಕ ಹತ್ತೀನ್ರಿ. ಅಂತ ತಮ್ಮ ಸಭಾದೊಳಗ ಧೈರ್ಯ ತಗೊಂಡು ಸಾಧ್ಯವಾದಷ್ಟು ಪ್ರವಚನ ಮಾಡುವ ವಿಷಯವನ್ನು ಹಂಚಿಕೊಳ್ಳುತ್ತಾರೆ ಬಸಪ್ಪ ಶರಣರು.

ಬಸಪ್ಪಶರಣರು ಹಾಡಿದ ಒಂದು ಪದ –
*ಮೊದಲಿಗೆ ನೆನೆದೆನು ಆರಂಭ (ಬನದ ಹುಣ್ಣಿಮೆ)

ಮೊದಲಿಗೆ ನಿನಗೆ ಏನು ಆರಂಭ ಮತಿಯೆನಗ ಕೊಡಬೇಕು ಜಗದಂಬ IIಪII

ಬುದ್ಧಿಯನಗ ಕೊಡಬೇಕು ಜಗದಂಬ
ಮೂರು ಲೋಕ ಆಳುವ ನಿನ್ನ ಕೀರ್ತಿ
ಮರ್ತ್ಯ ಲೋಕ ಆಳುವ ನಿನ್ನ ಕೀರ್ತಿ
ಸಭಾದಾಗ ಬರಬೇಕು ಮಾಯಕಾರ್ತಿ
ಜನದಾಗ ಕಾಯಬೇಕು ಮಾಯ ಕಾರ್ತಿ |l 1 ll

ದಕ್ಷಿಣ ಗುಡಿಯ ಹುಚ್ಚಯ್ಯ ಮೂರ್ತಿ
ಹೆಚ್ಚಿನ ಗುಡಿಯ ಹುಚ್ಚಯ್ಯ ಮೂರ್ತಿ
ಕಾಮಧೇನಿಗಿ ಕೈಲಾಸ ಸ್ವರ್ಗದಾಕಿ
ಕಾಮಧೇನಿಗಿ ಕೈಲಾಸ ಸ್ವರ್ಗದಾಕಿ
II2II

ಕಾಮಧೇನಿಗಿ ಕೈಲಾಸ ಸ್ವರ್ಗದಾಕಿ
ಕಾಮಧೇನಿಗಿ ಕೈಲಾಸ ಸ್ವರ್ಗದಾಕಿ
ತುಂಬಿದ ಹುಣುವ್ಯಾಗ ಆದೆವ್ವ ಹೆಚ್ಚಿನಾಕಿ
ರಂಡಿ ಹುಣ್ಣಿಮೆಯಾಗ ಆದೆವ್ವ ಹೆಚ್ಚಿನಾಕಿ II 3 II

ತುಂಬಿದ ಹುಣುವ್ಯಾಗ ಆದೆವ್ವ ಹೆಚ್ಚಿನಾಕಿ
ರಂಡಿ ಹುಣ್ಣಿಮೆಯಾಗ ಆದೆವ್ವ ಹೆಚ್ಚಿನಾಕಿ
ಆದಿಶಕ್ತಿ ಜಗಕ್ಕೆಲ್ಲ ಹೆಚ್ಚಿನಾಕಿ
ಮಾಯಕಾರ್ತಿ ಜಗಕೆಲ್ಲ ಹೆಚ್ಚಿ ನಾಕಿ II 4 ll

ತೆಗ್ಗಿನ್ಯಾಗ ಐತ್ಯೋ ಸವದತ್ತಿ ಊರಾ
ತೆಗ್ಗಿನ್ಯಾಗ ಐತ್ಯೋ ಸವದತ್ತಿ ಊರಾ
ರಾಮದಾಸ ಪದ ಮಾಡ್ಯಾನ ತೋಡಿ
ರಾಮದಾಸ ಪದ ಮಾಡ್ಯಾನ ತೋಡಿ II 5 II

ಮುಂದುವರೆಯುತ್ತದೆ, ತಪ್ಪದೇ ಓದಿ

ನಾಳಿನ ಸಂಚಿಕೆಯಲ್ಲಿ ಕಾದು ನೋಡಿ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.