ನೀರಲಕೇರಿ ಬಸವಲಿಂಗ ಶರಣರ
ಪಲ್ಲವಿ:
ಪ್ರಣವ ಪಂಚಾಕ್ಷರಿ ಪರಶಿವ ಗುರುವನ್ನು
ಮನದೊಳು ನೆನೆಯಮ್ಮ ತಂಗಿ |
ಇದು ಘನವೆಂದು ತಿಳಿ ಮಂಗಳಾಂಗಿ ||
ಚರಣ 1:
ಹಿಂದಿನ ಜನ್ಮದಿ ಬಂದ ಪುಣ್ಯರಾಶಿ |
ಇಂದಿಗೆ ಒದಗಿತೇ ತಂಗಿ |
ಇದು ನಿಜವೆಂದು ತಿಳಿ ಮಂಗಳಾಂಗಿ ||
ಚರಣ 2:
ಬರಿದೆ ಮುಚ್ಚಿದೆ ಕೆಟ್ಟು ಜಗವಲ್ಲಿ ಕೆಡೆಗಟ್ಟು |
ನಿಜಮುಕ್ತಿ ಕೊಡುವಾನೆ ತಂಗಿ |
ಆತನ ಬಿಡಬೇಡ ತಿಳಿ ಮಂಗಳಾಂಗಿ ||
ಚರಣ 3:
ಶ್ರೀ ಗುರುಕರುಣವ ಪಡೆಯದಿದ್ದರೆ |
ಘೋರ ನರಕವು ತಪ್ಪದು ತಂಗಿ |
ಇದು ನಿಜವೆಂದು ತಿಳಿ ಮಂಗಳಾಂಗಿ ||
ಚರಣ 4:
ಗುರು ತಂದೆ ತಾಯವ್ವ ಗುರು ಬಂಧುಬಳಗವ್ವ |
ಗುರು ದೇವ ಜಗದೊಳು ತಂಗಿ |
ಆತನ ನೆನೆದರೆ ಮುಕ್ತಿ ಮಂಗಳಾಂಗಿ ||
2)ನಾ ನಿಮ್ಮ ಧ್ಯಾನದೊಳಗಿರಲು (ಕೀರ್ತನೆ)
ಪಲ್ಲವಿ:
ನಾ ನಿಮ್ಮ ಧ್ಯಾನದೊಳಗಿರಲು | ಮುಕ್ಯಪ್ರಾಣ |
ಏನೇನು ಮಾಡುವರು ಎನಗೆ ಅಪರಾಧಿಗಳು ||
ಅನುಪಲ್ಲವಿ:
ಭಾನುಪ್ರಕಾಶಪ್ರತಾಪ ಕಪಿಕುಲತಿಲಕ |
ದೀನರಕ್ಷಕ ದೇವ ದಿವ್ಯಸ್ವರೂಪ ||
ಚರಣ 1:
ಸುರರಾಯರನು ಕೆಡವಿ ಸದೆದು ಕೈಕೊಂಡಾಗ |
ಉರಗಗೌರಿಗಳ ಒಟ್ಟಿಗೆ ಬೆಸೆದಾಗ |
ಕರುಣದಿನ್ನಿಟ್ಟ ಕಣ್ಣು ಕೆಂಪಾದಾಗ |
ತರಲ ಮುನಿರಾಯ ತಲ್ಲಣಿಸುತ ನಡುಗುವಾಗ ||
ಚರಣ 2:
ಕಾಶಿ ರಮೇಶ ಕಾಳಹಸ್ತಿ ಈಶ್ವರಗೆ |
ವಾಸುದೇವನು ತಾನೆ ಒಲಿದು ಕೊಟ್ಟಾಗ |
ಲೇಸಾಗಿ ಜಗದೊಳು ಕೀರ್ತಿ ತಾ ಪಡೆದಾಗ |
ದಾಸನಿಗೆ ಮುಕ್ತಿ ಸುಲಭದಿ ದೊರೆತಾಗ ||
ಚರಣ 3:
ಒಡಲ ಒಳಗಿದ್ದು ಹಸಿವೆ ತೃಷೆಗಳ ಕಳೆದು |
ಒಡನೆ ಕಣ್ಣಲಿ ನೋಡಿ ಜಗವ ರಕ್ಷಿಸಿ ಕಾಯ್ದು |
ದೃಢ ಭಕುತಿಯನು ಕೊಟ್ಟು ಕಡೆಗೆ ಕಾಯುವ ನಮ್ಮ |
ಕಡು ಚಲುವ ಪುರಂದರವಿಠಲರಾಯನ ನೆನೆದಾಗ ||
ನಾ ನಿಮ್ಮ ಧ್ಯಾನದೊಳಗಿರುವಾಗ ಮಾನವರ ಭಯವೇ ಇಲ್ಲ ಜನ ನನ್ನನ್ನು ನೋಡಿ ಮತ್ಸರ ಪಟ್ಟರೆ ಅದಕ್ಕೆ ನಾನೇನು ಮಾಡಲಿ ನನಗೆ ಅಚ್ಚುತಾನಂದ ಅಂದರೆ ವಿಷ್ಣುವಿನ ನಾಮದ ಬಲವಿದೆ ಹಾಗಾಗಿ ನಾನು ಯಾರಿಗೂ ಹೆದರುವುದಿಲ್ಲ ಯುದ್ಧದ ಸಮಯದಲ್ಲಿ ಕುದುರೆ ಆರ್ಭಟದಿಂದ ಹಾರಾಡಿ ಕಾಲುಗಳನ್ನು ಕೆದರಿದರೆ ಅದರ ಧೂಳು ಸೂರ್ಯನಿಗೆ ಮುಸುಕುವುದೇ ಖಂಡಿತ ಇಲ್ಲ ಎಷ್ಟೇ ಬಿರುಗಾಳಿ ಬೀಸಿದರು ಗಾಳಿಗೆ ಬೆಟ್ಟ ಅಲುಗಾಡುವುದೇ ?ಖಂಡಿತ ಇಲ್ಲ ಹಾಗೆಯೇ -
ಕನ್ನಡದಲ್ಲಿ ಕನ್ನಡಿಯಲ್ಲಿ ಸಂಪತ್ತು ಇದೆ ಎಂದು ನೋಡಿ ಆ ಕನ್ನಡಿಯಲ್ಲಿನ ಸಂಪತ್ತನ್ನು ಅಪಹರಿಸಲಾದೀತೆ ?ಖಂಡಿತ ಸಾಧ್ಯವಿಲ್ಲ ಭಗವಂತನ ಕೃಪೆ ನಮ್ಮ ಮೇಲಿರುವಾಗ ಯಾರು ಏನು ಮಾಡಲಿಕ್ಕೆ ಸಾಧ್ಯವಿಲ್ಲ ಎಂಬುದೇ ಈ ಪದದ ತಾತ್ಪರ್ಯವಾಗಿದೆ .
ಇದು ಘನವೆಂದು ತಿಳಿಮಂಗಲಾಂಗಿ ಪ್ರಪ್ರಣಮ ಮತ್ತು ಪಂಚಾಕ್ಷರಿ ಪ್ರಣಮ ಅಂದ್ರೆ ಮಂತ್ರ ಪಂಚಾಕ್ಷರಿ ಎಂದರೆ ಐದು ಅಕ್ಷರ ಅದನ್ನು ಅರಿತಂತಹ ಗುರುವಿನ ಅದನ್ನು ಅರಿತಿರಬೇಕು. ಗುರು ಹ್ಯಾಂಗ ಇರಬೇಕು ಅಂದ್ರ ಶ್ರೋತ್ರೀಯ ಬೃಹ್ಮನಿಷ್ಠ ಸದ್ಗುರು.
ಮುಂದುವರಿಯುತ್ತದೆ ….
ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.
H R ಬಾಗವಾನ ಲೇಖಕರು

