ಪಂಚ ಭಾಷೆಗಳಲ್ಲಿ ಬರ್ತಿದೆ “ಆದಿ ರುದ್ರ”
ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿದೆ ‘ಆದಿ ರುದ್ರ’ ದಸರಾ ಸಂದರ್ಭದಲ್ಲಿ ದೈವಿಕ ನಿಗೂಢ ಕಥಾಹಂದರ ಹೊಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನಾವರಣ. ಜನವರಿಯಲ್ಲಿ ಚಿತ್ರೀಕರಣ. ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಆದಿ ರುದ್ರ’ (AADI RUDRRA) ಚಿತ್ರವು ದೈವಿಕ ನಿಗೂಢತೆ ಹಾಗೂ ರೋಚಕ ಸನ್ನಿವೇಶಗಳನ್ನು ಒಳಗೊಂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿಬರಲಿದೆ. ಆದಿ ಸಾಯಿಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ […]

