Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರೋರಿಂಗ್ ಸ್ಟಾರ್ “ಎಂಟ್ರಿ”
- ಸಿನಿಮಾ

ರೋರಿಂಗ್ ಸ್ಟಾರ್ “ಎಂಟ್ರಿ”

ಚಂದ್ರ ಚಕೋರಿ ಎಂಬ ಮುದ್ದಾದ ಕನ್ನಡ ಚಲನಚಿತ್ರ ಮೂಲಕ ನಾಯಕ ನಟನಾಗಿ ಎಂಟ್ರಿ ಪಡೆದ ಶ್ರೀಮುರಳಿಯನ್ನು, ಉತ್ತರ ಕರ್ನಾಟಕದ ಅಭಿಮಾನಿ ಬಳಗ ಇವತ್ತಿಗೂ ಅವರ ಆ ಮುಗ್ಧ ನಟನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಶ್ರೀಮುರಳಿಯನ್ನ ಸಂಭ್ರಮಿಸುತ್ತಾರೆ ಅವರ ಎಲ್ಲ ಸಿನಿಮಾಗಳನ್ನ ಚಿತ್ರಮಂದಿರದಲ್ಲೇ ಹೋಗಿ ನೋಡುತ್ತಾರೆ. ಚಂದ್ರ ಚಕೋರಿ ಚಿತ್ರದ ನಂತರ ಸಿರಿ ಮುರಳಿ ಇಲ್ಲಿಯ ತನಕ ಬಹಳಷ್ಟು ವಿಭಿನ್ನವಾದ ಕಥೆಗಳಲ್ಲಿ ನಾಯಕ ನಟರಾಗಿ ನಟಿಸುತ್ತಾ, ತಾವೊಬ್ಬ ವಿಭಿನ್ನ ಶೈಲಿಯ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ನನಗೆ ವೈಯಕ್ತಿಕವಾಗಿ ಶ್ರೀಮುರಳಿಯವರ ಚಂದ್ರ ಚಕೋರಿ, […]

ಚಂದ್ರ ಚಕೋರಿ ಎಂಬ ಮುದ್ದಾದ ಕನ್ನಡ ಚಲನಚಿತ್ರ ಮೂಲಕ ನಾಯಕ ನಟನಾಗಿ ಎಂಟ್ರಿ ಪಡೆದ ಶ್ರೀಮುರಳಿಯನ್ನು, ಉತ್ತರ ಕರ್ನಾಟಕದ ಅಭಿಮಾನಿ ಬಳಗ ಇವತ್ತಿಗೂ ಅವರ ಆ ಮುಗ್ಧ ನಟನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಶ್ರೀಮುರಳಿಯನ್ನ ಸಂಭ್ರಮಿಸುತ್ತಾರೆ ಅವರ ಎಲ್ಲ ಸಿನಿಮಾಗಳನ್ನ ಚಿತ್ರಮಂದಿರದಲ್ಲೇ ಹೋಗಿ ನೋಡುತ್ತಾರೆ.

ಚಂದ್ರ ಚಕೋರಿ ಚಿತ್ರದ ನಂತರ ಸಿರಿ ಮುರಳಿ ಇಲ್ಲಿಯ ತನಕ ಬಹಳಷ್ಟು ವಿಭಿನ್ನವಾದ ಕಥೆಗಳಲ್ಲಿ ನಾಯಕ ನಟರಾಗಿ ನಟಿಸುತ್ತಾ, ತಾವೊಬ್ಬ ವಿಭಿನ್ನ ಶೈಲಿಯ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ನನಗೆ ವೈಯಕ್ತಿಕವಾಗಿ ಶ್ರೀಮುರಳಿಯವರ ಚಂದ್ರ ಚಕೋರಿ, ಉಗ್ರಂ,ರಥಾವರ, ಮಿಂಚಿನ ಓಟ,ಮಫ್ತಿ ತುಂಬಾ ಇಷ್ಟವಾಗುವ ಹಾಗೂ ವಿಶಿಷ್ಟ ಶೈಲಿಯ ನಟನನ್ನ ನೋಡಿದ ಅನುಭವವಾಗುತ್ತದೆ.

ಶ್ರೀಮುರಳಿಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ಅವರ ಬಳಿ ಯಾವುದೇ ಹೊಸ ಚಿತ್ರದ ಹೋದರು, ಅವರ ಕಂಟೆಂಟ್ ಅನ್ನು ನೋಡಿ ಅದಕ್ಕೆ ಶುಭ ಹಾರೈಸಿ ತಮ್ಮ ಪ್ರೀತಿಯ ಮಾತುಗಳನ್ನ ಹಾಡಿ ಚಿತ್ತ ತಂಡಕ್ಕೆ ಪ್ರೋತ್ಸಾಹ ನೀಡುತ್ತಾರೆ.

ಕಂಟೆಂಟ್ ಚೆನ್ನಾಗಿದೆ ಎಂಬ ಸುದ್ದಿ ಬಂದರೆ ಆ ಚಿತ್ರ ತಂಡದ ಜೊತೆಗೂ ನಿಲ್ಲುತ್ತಾರೆ, ಅದಕ್ಕೆ ಮತ್ತೊಂದು ನಿದರ್ಶನ, ಗುರು ದೇಶಪಾಂಡೆ ನಿರ್ಮಾಣದ ಬಿ ಎಮ್ ಗಿರಿರಾಜ್ ನಿರ್ದೇಶನದ, ಬಹುತರ ಗಣವಿರುವ ಮತ್ತು ತನ್ನ ವಿಭಿನ್ನ ಕಂಟೆಂಟ್ ಮೂಲಕ ಸುದ್ದಿ ಮಾಡಿರುವ ರಾಮರಸ ಎನ್ನುವ ಕನ್ನಡ ಚಿತ್ರ.

ರಾಮರಸ ಕ್ಯಾಂಪ್ ಸೇರಿದ ರೋರಿಂಗ್ ಸ್ಟಾರ್ ಶ್ರೀಮುರಳಿ

ಈಗಾಗಲೇ ಬಹು ತಾರಾಗಣ ಹೊಂದಿರುವಂತಹ ರಾಮರಸ ಚಿತ್ರ ತಂಡದಲ್ಲಿ ಕಾಣಿಸಿಕೊಂಡ ನಾಯಕನಟ ಶ್ರೀಮುರಳಿ…. ಇತ್ತೀಚೆಗೆ ಲೀಕಾದ ಫೋಟೋದಲ್ಲಿ ಡಬ್ಬಿಂಗ್ ಮಾಡುತ್ತಿದ್ದ ಶ್ರೀಮುರಳಿಯವರ ಫೋಟೋ ಕಂಡು ತಲೆಕೆಡಿಸಿಕೊಂಡ ಚಿತ್ರ ಅಭಿಮಾನಿಗಳು ರಾಮರಸದಲ್ಲಿ ಶ್ರೀ ಮುರುಳಿ ಅವರ ಪಾತ್ರ ಏನು ????

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.