Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಾಕುತಂತಿ ಕಂಟೆಂಟ್ ಬೆಂಕಿ
- ಸಿನಿಮಾ

ನಾಕುತಂತಿ ಕಂಟೆಂಟ್ ಬೆಂಕಿ

ನಾಕುತಂತಿಪತ್ರಿಕಾ ಗೋಷ್ಠಿಯ ಹೈಲೈಟ್ ನಾಕುತಂತಿ ಹೆಸರಿನ ಸಿನಿಮಾವೊಂದು,ತಾನುತುಂಬಾ ವಿಭಿನ್ನ ಎನಿಸುವಷ್ಟು ಎಲ್ಲರ ಮನಸ್ಸು ಗೆದ್ದಿದೆ ಎನ್ನಬಹುದು,ಇಂದು,ನಾಕುತಂತಿ ಚಿತ್ರದ Exclusive ಕಂಟೆಂಟ್,ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಪತ್ರಕರ್ತರಿಂದ ಬಿಡುಗಡೆ ಮಾಡಿಸಿದ್ದು ತುಂಬಾ ವಿಶೇಷ ಎನಿಸಿತು. ನಂತರ ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ,ನಿರ್ಮಾಪಕ ಜಯರಾಮ್ ದೇವಸಮುದ್ರ,ಮಹಿಳೆಯ ಮೇಲೆ ಕೇಂದ್ರೀಕೃತ ಚಿತ್ರಗಳು ತುಂಬಾ ಬರ್ಬೇಕು, ಇವತ್ತಿನ ಕಾಲಘಟ್ಟದಲ್ಲಿ ಇಂತಹ ಕಥೆಗಳು ಬೇಕು.ಹೆಣ್ಣಿನ ಮಹತ್ವ,ಹೆಣ್ಣಿನ ತ್ಯಾಗ,ಹೆಣ್ಣಿನ ಮೇಲಿನ ಗೌರವ ಹೆಚ್ಚಾಗುತ್ತೆ. ಮಧ್ಯಮ ವರ್ಗದ ಹೆಣ್ಣುಮಕ್ಕಳನ್ನು ಅವ್ರ ಜೀವನ ಶೈಲಿ,ಅವ್ರು ಹೇಗೆ ಬದುಕನ್ನ ಹೇಗೆ […]

ನಾಕುತಂತಿ
ಪತ್ರಿಕಾ ಗೋಷ್ಠಿಯ ಹೈಲೈಟ್

ನಾಕುತಂತಿ ಹೆಸರಿನ ಸಿನಿಮಾವೊಂದು,ತಾನು
ತುಂಬಾ ವಿಭಿನ್ನ ಎನಿಸುವಷ್ಟು ಎಲ್ಲರ ಮನಸ್ಸು ಗೆದ್ದಿದೆ ಎನ್ನಬಹುದು,ಇಂದು,ನಾಕುತಂತಿ ಚಿತ್ರದ Exclusive ಕಂಟೆಂಟ್,ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಪತ್ರಕರ್ತರಿಂದ ಬಿಡುಗಡೆ ಮಾಡಿಸಿದ್ದು ತುಂಬಾ ವಿಶೇಷ ಎನಿಸಿತು.

ನಂತರ ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ,ನಿರ್ಮಾಪಕ ಜಯರಾಮ್ ದೇವಸಮುದ್ರ,
ಮಹಿಳೆಯ ಮೇಲೆ ಕೇಂದ್ರೀಕೃತ ಚಿತ್ರಗಳು ತುಂಬಾ ಬರ್ಬೇಕು, ಇವತ್ತಿನ ಕಾಲಘಟ್ಟದಲ್ಲಿ ಇಂತಹ ಕಥೆಗಳು ಬೇಕು.
ಹೆಣ್ಣಿನ ಮಹತ್ವ,ಹೆಣ್ಣಿನ ತ್ಯಾಗ,ಹೆಣ್ಣಿನ ಮೇಲಿನ ಗೌರವ ಹೆಚ್ಚಾಗುತ್ತೆ.

ಮಧ್ಯಮ ವರ್ಗದ ಹೆಣ್ಣುಮಕ್ಕಳನ್ನು ಅವ್ರ ಜೀವನ ಶೈಲಿ,ಅವ್ರು ಹೇಗೆ ಬದುಕನ್ನ ಹೇಗೆ ಕಟ್ಟಿಕೊಳ್ತಾರೆ ಅನ್ನೋದು ಈ ಚಿತ್ರದ ಮುಖ್ಯ ಹೈಲೈಟ್.

ಜಗತ್ತಿನಲ್ಲಿರುವ ಎಲ್ಲ ಮಧ್ಯಮ ವರ್ಗದ ಹೆಣ್ಣುಮಕ್ಕಳ ಬದುಕಿನ ಕಥೆ ನಾಕುತಂತಿ.

ಶುರು ಮಾಡಿದ್ದ ಸಿನಿಮಾ,ನಂತರ ನನ್ನ ಹತ್ತಿರ ಬಂತು,ತುಂಬ ಸೆನ್ಸಿಬಲ್ ಆದಂತಹ ಕಥೆ ಎಂದು ತಿಳಿದ ಮೇಲೆ ಇದನ್ನ ನಾನು ಟೇಕಾಫ್ ಮಾಡಿದೆ,ಇದು ನನ್ನ ಸಿನಿಮಾ ನಿರ್ಮಾಣದ ಕೆರಿಯರ್ ನಲ್ಲಿಯೇ ಬೆಸ್ಟ್ ಆಗತ್ತೆ,ಅದರಿಂದ ಹಣ ಬರತ್ತೆ ಅಂತಾ ನಂಬಿಕೆಯಿದೆ ಎಂದರು.

ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಬಂದಂತಹ ಇನ್ನುಳಿದ ಇಬ್ಬರು ಸಹ ನಿರ್ಮಾಪಕರು ಮಾತನಾಡಿ,ಅಂತಿಮ ಹಂತದ ಹಣಕಾಸಿನ ಸಮಸ್ಯೆಗೆ ಸಹಾಯ ಮಾಡಿ ಜೊತೆಗೆ ನಿಂತ, ಸುರಂ ಮೂವೀಸ್ ನ ಜಯರಾಮ್ ದೇವಸಮುದ್ರ ರವರ ಸಹಾಯ ಮಾಡಿದರು ಎಂದು ಹೇಳಿದರು.

ನಂತರ ಮಾತನಾಡಿದ ಮೂರು ಜನ ನಾಯಕಿ ಮಣಿಯರು,

ಅದರಲ್ಲಿ ಸಂಗೀತಾ ಭಟ್ ಮನೆಯಲ್ಲಿನ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,,ಖುಷಿ ರವಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಪಾತ್ರ ಮಾಡಿದ್ದು,,ಸಿಂಧು ಶ್ರೀನಿವಾಸ ಮೂರ್ತಿ ಟ್ರಾಫಿಕ್ ಪೊಲೀಸ್ ಆಗಿ ಪಾತ್ರ ಮಾಡಿದ್ದು ಇನ್ನೂ ಕೊನೆಯದಾಗಿ
ರೋಶನಿ ಪ್ರಕಾಶ್ ಸಾಫ್ಟ್ ವೇರ್ ಉದ್ಯೋಗಿಯಾಗಿ ತಮ್ಮ ಪಾತ್ರವನ್ನು ಮಾಡಿದ್ದಾರೆ.

ನಾಲ್ಕು ಜನರ ಬದುಕು..ಕೆಲಸದ ಜಾಗದಲ್ಲಿನ ತೊಂದರೆ,ತಾಪತ್ರಯ,ಗೊಂದಲ,ಸ್ವತಂತ್ರ ಇಲ್ಲದ ಜೀವನ,ಒಂಟಿ ಹೋರಾಟ,ಅಸಹಾಯಕತೆ ಇಂತಹ ದಿನನಿತ್ಯದ ಸಮಸ್ಯೆಗಳನ್ನು ಪ್ರಮುಖವಾಗಿಟ್ಟು ಕೊಂಡು ಮಾಡಿದ ಮಹಿಳಾ ಪ್ರಧಾನ ಗಟ್ಟಿಯಾಗಿದೆ,ಪಾತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಬಿಟ್ಟರೆ,ಸಿನಿಮಾ ನೋಡುವ ಇಂಟ್ರೆಸ್ಟ್ ಕಮ್ಮಿ ಆಗುತ್ತದೆ ಎಂದು,ಒಂದಷ್ಟು ವಿಷಯಗಳನ್ನು ಬಿಟ್ಟು ಕೊಟ್ಟಿದ್ದು,ಸಿಂಧು ಶ್ರೀನಿವಾಸ ಮೂರ್ತಿ,ರೋಶನಿ ಪ್ರಕಾಶ್ ಮತ್ತು ಖುಷಿ ರವಿ.

ಇನ್ನು ಈ ಚಿತ್ರಕ್ಕೆ ಒಟ್ಟು ನಾಲ್ಕು ಜನ ನಿರ್ದೇಶಕರು.ಗೌತಮ್ ಅನ್ವಿತ್,ಪ್ರೀತಂ ಶಿವಕುಮಾರ್,ಶಶಿಕುಮಾರ್ ವಿ ಮತ್ತು ಮಹೇಶ್ ರಾಜ್ ನಾಲ್ಕು ಜನ ನಿರ್ದೇಶಕರ ಒಬ್ಬೊಬ್ಬರಾಗಿ ಮಾತಾಡುತ್ತಲೇ,ತಮ್ಮ ಕಥೆಯನ್ನು ಸಿನಿಮಾ ಮಾಡಿದ ರೀತಿಯನ್ನು ವಿವರಿಸಿದರು.

ನಾವು ನಾಲ್ಕು ಜನ ಒಂದೇ ಹಂತದಿಂದ ಬಂದವರು,ನಮ್ಮ ಹಳೆಯ ದಿನಗಳ ಬಗ್ಗೆ ಮಾತನಾಡುವುದಾದರೆ,ಎಂಟು ವರ್ಷಗಳ ಹಿಂದೆನೇ ನಾವೆಲ್ಲ ಮೊಬೈಲ್ ನಲ್ಲಿಯೇ ಶಾರ್ಟ್ ಫಿಲಂಸ್ ಮಾಡ್ತಾ ಮಾಡ್ತಾ ಇಲ್ಲಿಯ ತನಕ ಬಂದಿದ್ದೀವಿ.

ದುಬೈ ಮತ್ತು ಹಾಸನ ಕಡೆಯ ಇಬ್ಬರು ಶುರು ಮಾಡಿದ ಸಿನಿಮಾ,ನಂತರ ಹಣಕಾಸಿನ ಸಮಸ್ಯೆ ಬಂದಾಗ ಜಯರಾಮ್ ದೇವಸಮುದ್ರ ನಮಗೆ ಹೆಲ್ಪ್ ಮಾಡಿ, ಟೇಕಾಫ್ ಮಾಡಿದ್ದಾರೆ.

ನಾಕುತಂತಿ ಚಿತ್ರ ಸಿನಿಮಾ ಆಗಿದ್ದು ದೊಡ್ಡ ಸಾಹಸ,ಚಿತ್ರದ ಟೈಟಲ್ ಗೆ ಸಂಬಂಧ ಪಟ್ಟ ಹಕ್ಕುಗಳನ್ನು ಪಡೆದಿದ್ದೇವೆ,ಇದಕ್ಕೆ ಯಾವುದೇ ಸಮಸ್ಯೆ ಆಗಲ್ಲ ಎಂದರು.

ಸಧ್ಯದ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ಎಲ್ಲ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಮಸ್ಯೆ ಮತ್ತು ಗೊಂದಲಮಯ ಬದುಕು ಕೊನೆಗೆ ಅವರು ಹೇಗೆ ಬದುಕನ್ನ ಸ್ವೀಕರಿಸಿ,ಸವಾಲುಗಳನ್ನು ಎದುರಿಸುತ್ತಾರೆ ಎಂಬುದು ನಮ್ಮ ಕಥೆ ಹೇಳುತ್ತೆ.

ಈ ಚಿತ್ರದಲ್ಲಿ ಬರುವಂತಹ ನಾಲ್ಕು ಕಥೆಗಳಿಗೆ ತುಂಬಾ ವಿಭಿನ್ನವಾದಂತ ನರೇಟಿವ ಪ್ರೋಸೆಸ್,
ಛಾಯಾಗ್ರಾಹಕರು,ಮುಖ್ಯ ತಂತ್ರಜ್ಞರು ನುರಿತವರಾಗಿದ್ದ ಕಾರಣ ನಾಕುತಂತಿ ತುಂಬಾ ವಿಭಿನ್ನವಾದ ಸಿನಿಮಾ ಆಗುವುದರಲ್ಲಿ ಸಂಶಯ ಇಲ್ಲ ಎಂದರು.

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.