Tuesday, 29 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮದರ್ ಪ್ರಾಮಿಸ್
- ಸಿನಿಮಾ

ಮದರ್ ಪ್ರಾಮಿಸ್

ಹೊಸ ತರಹದ ಕಥೆಗಳನ್ನು ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ, ಪ್ರತಿಸಾರಿಯು ಒಂದು ಹೆಜ್ಜೆ ಮುಂದೆ, ಇಡುತ್ತಲೇ ಹೊಸ ಕಥೆಗಾರರಿಗೆ ಹೊಸ ನಿರ್ದೇಶಕರಿಗೆ ಹೊಸ ಕಲಾವಿದರಿಗೆ ಅವಕಾಶಗಳನ್ನು ನೀಡುತ್ತಾ ತಮ್ಮ ನಿರ್ಮಾಣ ಸಂಸ್ಥೆಯನ್ನ ಸದಾ ಚಟುವಟಿಕೆಯಿಂದಲೇ ಇಟ್ಟಂತಹ ನಿರ್ಮಾಪಕ ಡಾಲಿ ಧನಂಜಯ್. ನಿರ್ದೇಶಕರು ಹೊಸಬರಾಗಿರಲಿ ಅಥವಾ ಹಳಬರಾಗಿರಲಿ, ಡಾಲಿ ಧನಂಜಯ್ ಅವರ ಗಮನಕ್ಕೆ ಒಂದೊಳ್ಳೆ ಕಥೆಯನ್ನು ಹೇಳಿದಾಗ ಅಥವಾ ಚರ್ಚೆ ಮಾಡಿದಾಗ ಅಂತಹ ಕಥೆಯನ್ನ, ಸಿನಿಮಾವಾಗಿ ನಿರ್ಮಾಣ ಮಾಡುವುದರಲ್ಲಿ ಸಾಧ್ಯವಾದಷ್ಟು ಡಾಲಿ ಧನಂಜಯ್ ಮನಸ್ಸು ಮಾಡುತ್ತಾರೆ ಅದಕ್ಕೆ ಸಂಬಂಧಪಟ್ಟಂತೆ […]

ಹೊಸ ತರಹದ ಕಥೆಗಳನ್ನು ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ, ಪ್ರತಿಸಾರಿಯು ಒಂದು ಹೆಜ್ಜೆ ಮುಂದೆ, ಇಡುತ್ತಲೇ ಹೊಸ ಕಥೆಗಾರರಿಗೆ ಹೊಸ ನಿರ್ದೇಶಕರಿಗೆ ಹೊಸ ಕಲಾವಿದರಿಗೆ ಅವಕಾಶಗಳನ್ನು ನೀಡುತ್ತಾ ತಮ್ಮ ನಿರ್ಮಾಣ ಸಂಸ್ಥೆಯನ್ನ ಸದಾ ಚಟುವಟಿಕೆಯಿಂದಲೇ ಇಟ್ಟಂತಹ ನಿರ್ಮಾಪಕ ಡಾಲಿ ಧನಂಜಯ್.

ನಿರ್ದೇಶಕರು ಹೊಸಬರಾಗಿರಲಿ ಅಥವಾ ಹಳಬರಾಗಿರಲಿ, ಡಾಲಿ ಧನಂಜಯ್ ಅವರ ಗಮನಕ್ಕೆ ಒಂದೊಳ್ಳೆ ಕಥೆಯನ್ನು ಹೇಳಿದಾಗ ಅಥವಾ ಚರ್ಚೆ ಮಾಡಿದಾಗ ಅಂತಹ ಕಥೆಯನ್ನ, ಸಿನಿಮಾವಾಗಿ ನಿರ್ಮಾಣ ಮಾಡುವುದರಲ್ಲಿ ಸಾಧ್ಯವಾದಷ್ಟು ಡಾಲಿ ಧನಂಜಯ್ ಮನಸ್ಸು ಮಾಡುತ್ತಾರೆ ಅದಕ್ಕೆ ಸಂಬಂಧಪಟ್ಟಂತೆ ತಮಗೆ ಸರಿಹೊಂದುವ ಸಮಾನ ಮನಸ್ಕರು ತಂಡವನ್ನು ಕೂಡ ಕಟ್ಟುತ್ತಾರೆ, ಇಂಥದ್ದೇ ಯೋಜನೆಯ ಒಂದು ಚಿತ್ರ ಮದರ್ ಪ್ರಾಮಿಸ್.

ಬಿಡುಗಡೆಯಾದ ನಂತರ ಚಿತ್ರಮಂದಿರಗಳಲ್ಲಿ ತನ್ನದೇ ಆದಂತಹ ಅಭಿಮಾನಿ ವರ್ಗವನ್ನ ರಂಜಿಸಿ ವಿಭಿನ್ನಕತೆ ಮಾಡಿದ ಸಿನಿಮಾ ಎಂದು ಪ್ರೇಕ್ಷಕರಿಂದ ಪ್ರಶಂಸೆ ಪಟ್ಟುಕೊಂಡ ಚಿತ್ರ OTT ಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರೋಚಕ ಓಟ: ಅಕ್ಟೋಬರ್ 2 ರಂದು ‘ಜೀ5’ ಒಟಿಟಿಯಲ್ಲಿ ಧನಂಜಯ ಅಭಿನಯದ ‘ಮದರ್ ಪ್ರಾಮಿಸ್’ ಡಿಜಿಟಲ್ ಪ್ರೀಮಿಯರ್!

ನಟ ಧನಂಜಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಅಪರಾಧ ಜಗತ್ತು, ಹಾಸ್ಯ ಹಾಗೂ ತಾಯಿ-ಮಗನ ನಡುವಿನ ಭಾವನಾತ್ಮಕ ಬಂಧದ ಸುತ್ತ ಹೆಣೆದಿರುವ ವಿಶಿಷ್ಟ ಡಾರ್ಕ್-ಕಾಮಿಡಿ ಸಿನಿಮಾ ‘ಮದರ್ ಪ್ರಾಮಿಸ್’ ಇದೀಗ ಒಟಿಟಿ ವೇದಿಕೆಗೆ ಲಗ್ಗೆಯಿಡಲು ಸಜ್ಜಾಗಿದೆ. ಚಿತ್ರಮಂದಿರಗಳ ಯಶಸ್ವಿ ಪ್ರದರ್ಶನದ ಬಳಿಕ, ಪ್ರತಿಷ್ಠಿತ ಒಟಿಟಿ ವೇದಿಕೆ ‘ಜೀ5 ಕನ್ನಡ’ (ZEE5 Kannada) ಈ ಚಿತ್ರವನ್ನು 2026ರ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ವಿಶೇಷವಾಗಿ ನೇರವಾಗಿ ಪ್ರೇಕ್ಷಕರ ಮನೆ-ಮನಕ್ಕೆ ತಲುಪಿಸುತ್ತಿದೆ.

ಬೆಂಗಳೂರಿನ ಕಾಲ್ಪನಿಕ ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾ, ಎಲ್ಲವನ್ನೂ ಕಳೆದುಕೊಂಡು ದಿಕ್ಕುತೋಚದೆ ಕಂಗಾಲಾಗುವ ‘ರೋಸ್ಸಿ’ ಎಂಬ ವಿಚಿತ್ರ ಸ್ವಭಾವದ ಜೂಜುಕೋರನ ಸುತ್ತ ಗಿರಕಿ ಹೊಡೆಯುತ್ತದೆ. ಈತನ ಎಡವಟ್ಟುಗಳು ನಗರದ ಪ್ರಭಾವಿ ಡಾನ್‌ಗಳು, ಸ್ಮಗ್ಲರ್‌ಗಳು ಹಾಗೂ ವಿಚಿತ್ರ ವ್ಯಕ್ತಿಗಳ ನಡುವಿನ ಭೀಕರ ಬೆನ್ನಟ್ಟುವಿಕೆಗೆ ಕಾರಣವಾಗುತ್ತವೆ. ಈ ರೋಚಕ ಸಂಘರ್ಷ ಮತ್ತು ಅಪಾಯದ ನಡುವೆ ಅನಿರೀಕ್ಷಿತವಾಗಿ ಆತನ ತಾಯಿಯೂ ಸಿಲುಕಿಕೊಳ್ಳುವುದು ಕಥೆಗೆ ಹೊಸ ತಿರುವು ನೀಡುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸಲು ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ಹೋರಾಡಬಲ್ಲ ಎಂಬುದನ್ನು ಚಿತ್ರವು ರೋಚಕ ಸನ್ನಿವೇಶಗಳ ಮೂಲಕ ತೆರೆದಿಡುತ್ತದೆ.

ಚಿತ್ರದಲ್ಲಿ ನಟ ಧನಂಜಯ ಜೊತೆಗೆ ಪೂರ್ಣಚಂದ್ರ ಮೈಸೂರು, ಹಿರಿಯ ನಟಿಯರಾದ ವಿನಯಾ ಪ್ರಸಾದ್, ಗೀತಾ, ನಟರಾದ ನಾಗಭೂಷಣ ಎನ್.ಎಸ್., ಚಿ. ಗುರುದತ್, ಮಹಾದೇವ್ ಪ್ರಸಾದ್, ನರೇಶ್ ಡಿಂಗ್ರಿ ಮತ್ತು ಶ್ರೀವತ್ಸ ಶ್ಯಾಮ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ಗ್ಯಾಂಗ್‌ಸ್ಟರ್ ದ್ವೇಷ, ಅನಿರೀಕ್ಷಿತ ತಿರುವುಗಳು ಮತ್ತು ಊಹಿಸಲಾಗದ ಸನ್ನಿವೇಶಗಳ ನಡುವೆಯೂ ಚಿತ್ರದ ಆಂತರ್ಯದಲ್ಲಿರುವ ತಾಯಿ-ಮಗನ ಸೆಂಟಿಮೆಂಟ್ ಇಡೀ ಕಥೆಗೆ ಭದ್ರವಾದ ಭಾವನಾತ್ಮಕ ನೆಲೆಯನ್ನು ಒದಗಿಸಿದೆ.

ಚಿತ್ರದ ಡಿಜಿಟಲ್ ಬಿಡುಗಡೆ ಕುರಿತು ಹರ್ಷ ವ್ಯಕ್ತಪಡಿಸಿರುವ ನಟ ಧನಂಜಯ, “‘ಮದರ್ ಪ್ರಾಮಿಸ್’ ಹಾಸ್ಯ, ಅಪರಾಧ, ಗೊಂದಲ ಮತ್ತು ಕೌಟುಂಬಿಕ ಭಾವನೆಗಳ ಅಪರೂಪದ ಹೂರಣ. ಭೂಗತ ಜಗತ್ತಿನ ಕಥೆಯಾದರೂ ತಾಯಿ-ಮಗನ ಬಾಂಧವ್ಯವೇ ಇದರ ಪ್ರಮುಖ ಜೀವಾಳ. ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರು ಈಗ ಜೀ5 ಮೂಲಕ ಮನೆಯಲ್ಲೇ ಕುಟುಂಬ ಸಮೇತರಾಗಿ ಈ ವಿಶಿಷ್ಟ ಜಾನರ್‌ನ ಚಿತ್ರವನ್ನು ಆನಂದಿಸಬಹುದು” ಎಂದಿದ್ದಾರೆ.

ಇನ್ನು ಚಿತ್ರದ ನಿರ್ದೇಶಕ ಪೂರ್ಣಚಂದ್ರ ಮೈಸೂರು ಮಾತನಾಡಿ, “ಕ್ರೈಂ ಜಾನರ್‌ನಲ್ಲಿ ಹಾಸ್ಯ ಮತ್ತು ತಾಯಿಯ ಮಾತಿನ ಪಾವಿತ್ರ್ಯತೆಯನ್ನು ಒಟ್ಟಿಗೆ ತರುವುದು ಸವಾಲಿನ ಕೆಲಸವಾಗಿತ್ತು. ಇಂತಹ ಪ್ರತಿಭಾನ್ವಿತ ಕಲಾವಿದರ ಜೊತೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವವಾಗಿದ್ದು, ಒಟಿಟಿಯಲ್ಲಿ ಸಿನಿಮಾ ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುವ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಜೀ ಕನ್ನಡ ಹಾಗೂ ಜೀ ಪವರ್‌ನ ಮುಖ್ಯ ಚಾನೆಲ್ ಅಧಿಕಾರಿ ಮತ್ತು ಜೀ5 ಕನ್ನಡದ ಬಿಸಿನೆಸ್ ಹೆಡ್ ಎಸ್. ದೀಪಕ್ ಅವರು, “ಕನ್ನಡ ಪ್ರೇಕ್ಷಕರಿಗೆ ಸದಾ ಹೊಸ ಬಗೆಯ, ವಿಶಿಷ್ಟ ಕಂಟೆಂಟ್ ತಲುಪಿಸುವ ನಿಟ್ಟಿನಲ್ಲಿ ‘ಮದರ್ ಪ್ರಾಮಿಸ್’ ಚಿತ್ರ ನಮ್ಮ ಒಟಿಟಿ ಲೈಬ್ರರಿಗೆ ಮಹತ್ವದ ಸೇರ್ಪಡೆಯಾಗಿದೆ. ಪ್ರೇಕ್ಷಕರು ಅಕ್ಟೋಬರ್ 2 ರಿಂದ ಈ ಮನರಂಜನಾತ್ಮಕ ಚಿತ್ರವನ್ನು ವೀಕ್ಷಿಸಬಹುದು” ಎಂದು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.