Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ದೇಶವ್ಯಾಪಿ “ಮಹಾಕವಿ” ದರ್ಶನ
- ಸಿನಿಮಾ

ದೇಶವ್ಯಾಪಿ “ಮಹಾಕವಿ” ದರ್ಶನ

ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಿಕ್ಕ, ದೊಡ್ಡ ಆಸ್ತಿಯೆಂದರೆ ತಪ್ಪಿಲ್ಲ, ಅತ್ಯುತ್ತಮವಾದ ಕಥೆಗಳನ್ನು ಬರೆಯುವುದು ಅಂತಹ ಎಲ್ಲ ಕಥೆಗಳನ್ನು ಸಿನಿಮಾ ವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು, ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಸಮಾಜದ ಸ್ವಾಸ್ಥ್ಯವನ್ನು ತಿದ್ದುವಂತಹ ಪ್ರಕ್ರಿಯೆಯನ್ನು ಮಾಡುವಂತದ್ದು ಇವು ಬರಗೂರು ರಾಮಚಂದ್ರಪ್ಪ ಅವರ ಮೃತ್ಯು ಜೀವನದ ವೈಖರಿ ಅಂದರೆ ತಪ್ಪಿಲ್ಲ. ಕಾರ್ಯಕ್ರಮ ಒಂದಕ್ಕೆ ಬರಗೂರು ರಾಮಚಂದ್ರಪ್ಪ ಬರುತ್ತಾರೆಂದರೆ ಸಾಕು, ಅಲ್ಲಿ ಸಿಕ್ಕಾಪಟ್ಟೆ ಜನ ಸಮೂಹ ಸೇರುತ್ತದೆ ಕಾರಣ ಅವರೆಲ್ಲರೂ ಬರಗೂರು ರಾಮಚಂದ್ರಪ್ಪನವರ ಮಾತುಗಳನ್ನ […]

ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಿಕ್ಕ, ದೊಡ್ಡ ಆಸ್ತಿಯೆಂದರೆ ತಪ್ಪಿಲ್ಲ, ಅತ್ಯುತ್ತಮವಾದ ಕಥೆಗಳನ್ನು ಬರೆಯುವುದು ಅಂತಹ ಎಲ್ಲ ಕಥೆಗಳನ್ನು ಸಿನಿಮಾ ವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು, ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಸಮಾಜದ ಸ್ವಾಸ್ಥ್ಯವನ್ನು ತಿದ್ದುವಂತಹ ಪ್ರಕ್ರಿಯೆಯನ್ನು ಮಾಡುವಂತದ್ದು ಇವು ಬರಗೂರು ರಾಮಚಂದ್ರಪ್ಪ ಅವರ ಮೃತ್ಯು ಜೀವನದ ವೈಖರಿ ಅಂದರೆ ತಪ್ಪಿಲ್ಲ.

ಕಾರ್ಯಕ್ರಮ ಒಂದಕ್ಕೆ ಬರಗೂರು ರಾಮಚಂದ್ರಪ್ಪ ಬರುತ್ತಾರೆಂದರೆ ಸಾಕು, ಅಲ್ಲಿ ಸಿಕ್ಕಾಪಟ್ಟೆ ಜನ ಸಮೂಹ ಸೇರುತ್ತದೆ ಕಾರಣ ಅವರೆಲ್ಲರೂ ಬರಗೂರು ರಾಮಚಂದ್ರಪ್ಪನವರ ಮಾತುಗಳನ್ನ ಕೇಳುವಂತಹ ಅಭಿಮಾನಿಗಳು, ಅದರಲ್ಲೂ ವಿಶೇಷವಾಗಿ ಬರಗೂರು ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ವೇದಿಕೆ ಮೇಲಿಂದ ಎಲ್ಲ ಜನರಲ್ಲಿ ಹಾಗೂ ಎದುರಿಗೆ ಕೂತಂತಹ ಎಲ್ಲಾ ಪ್ರೇಕ್ಷಕರಲ್ಲಿ ಉತ್ಸಾಹ ಇಮ್ಮಡಿಯಾಗುತ್ತದೆ, ಇದು ಬರಗೂರು ರಾಮಚಂದ್ರಪ್ಪ ನವರಿಗಿರುವಂತಹ, ದೊಡ್ಡ ಶಕ್ತಿ.

ಇಲ್ಲಿಯ ತನಕ ಬರಗೂರು ರಾಮಚಂದ್ರಪ್ಪನವರು ಮಾಡಿದ ಚಿತ್ರಗಳ ಬಗ್ಗೆ ಚರ್ಚೆ ಮಾಡಿದಾಗ ಹಾಗೂ ವಿಮರ್ಶೆ ಮಾಡಿದಾಗ ನಮ್ಮೆಲ್ಲರಲ್ಲಿಯೂ ಒಂದು ಪ್ರೇರಣೆ ಬರುತ್ತದೆ ಅದು ವಿಶೇಷವಾಗಿ ಕನ್ನಡ ಸಾಹಿತ್ಯದ ಕುರಿತಾಗಿ ಮತ್ತು ಕನ್ನಡದ ಮಹಾನ್ ಸಾಧಕರು ಕುರಿತಾಗಿ.

ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿದಿರುವಂತಹ, ಎಲ್ಲ ಮಹಾನ್ ಸಾಧಕರ ಕಥೆಗಳು ಚರಿತ್ರೆಗಳು ಇಂದಿನ ಯುವ ಸಮೂಹಕ್ಕೆ ತಲುಪಿದಾಗ ಅವರಲ್ಲಿಯೂ ಸಹ ದೇಶ ಪ್ರೇಮ ನಾಡಪ್ರೇಮ ಕಲೆ ಸಂಸ್ಕೃತಿಯ ಮೇಲೆ ಪ್ರೇಮ ಪಸರಿಸಿ ಅವರಲ್ಲೂ ಸಹ ಒಂದು ಶಕ್ತಿ ಜಾಗೃತವಾಗುತ್ತದೆ ಎಂಬುದನ್ನು ನಾವೆಲ್ಲರೂ ನೆನಪಿಡಬೇಕಾಗುತ್ತದೆ.

ಬರಗೂರು ಎಲ್ಲೇ ಇರಲಿ ಹೇಗೆ ಇರಲಿ, ಆದರೆ ಅವರು ಮಾಡಿದಂತಹ ಚಿತ್ರಗಳು, ಕರ್ನಾಟಕ ಸೇರಿದಂತೆ ಭಾರತದ ಅತ್ಯಂತ ಮತ್ತು ಭಾರತದಿಂದ ಆಚೆಗೂ ಹೋಗಿ ಸುದ್ದಿ ಮಾಡುತ್ತಲೇ ಇರುತ್ತವೆ ಅಂತದೊಂದ ಸುದ್ದಿ ಮಾಡಿದ್ದು, “ಮಹಾಕವಿ”

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಮಹಾಕವಿ’ ಕನ್ನಡ ಚಿತ್ರವು ಜಾರ್ಖಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರವನ್ನು ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್ ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಿಸಿದ್ದಾರೆ. ಈ ಚಿತ್ರೋತ್ಸವವು ಅಕ್ಟೋಬರ್ ಕೊನೆಯವಾರದಲ್ಲಿ ನಡೆಯಲಿದೆ.

ಮಹಾಕವಿ' ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧವಾದ ಪಂಪನ ಜೀವನ ಹಾಗೂ ಕಾವ್ಯಗಳ ಆಶಯಗಳನ್ನು ಆಧರಿಸಿ ರೂಪುಗೊಂಡಿದೆ. ಪಂಪಕವಿಯ ಆದಿಪುರಾಣಂ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಎರಡು ಕಾವ್ಯಗಳಲ್ಲಿರುವ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಹೊಂದಿರುವ ಸನ್ನಿವೇಶಗಳನ್ನು ಮಹಾಕವಿ’ ಚಿತ್ರವು ಅಳವಡಿಸಿಕೊಂಡಿದೆ. ಜಾತಿ ತಾರತಮ್ಯ ವಿರೋಧಿ ಮತ್ತು ಯುದ್ಧವಿರೋಧಿ ನಿಲುವಿನ ಜೊತೆಗೆ ಸೃಜನಶೀಲ ಸ್ವಾತಂತ್ರ್ಯದ ಸಮಸ್ಯೆಯನ್ನು ಚಿತ್ರಿಸಲಾಗಿದೆ.

ಬರಗೂರರೇ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಬಹುಭಾಷಾಕಲಾವಿದ ಕಿಶೋರ್, ಅನುಷಾರೈ, ಸುಂದರರಾಜ್ ಕುಮಾರ್‍ಗೋವಿಂದ್, ಪ್ರಮೀಳಾಜೋಷಾಯ್, ಅಕಾಂಕ್ಷ್‍ಬರಗೂರ್, ಅರಸು, ದಳವಾಯಿ, ಶಾಂತರಾಜು ಮುಂತಾದವರು ಅಭಿನಯಿಸಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು-ಪ್ರವೀಣ್ ಸಹ ನಿರ್ದೇಶನವಿರುವ ಈ ಚಿತ್ರವು ಈಗಾಗಲೇ ಬಿಡುಗಡೆಗೊಂಡು ಪ್ರದರ್ಶನ ಕಂಡಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.