Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಡಿಸೆಂಬರ್ 4ಕ್ಕೇ “ಫಾದರ್”
- ಸಿನಿಮಾ

ಡಿಸೆಂಬರ್ 4ಕ್ಕೇ “ಫಾದರ್”

ಕನ್ನಡಿಗರು ತುಂಬಾ ಭಾವುಕ ಕಥೆಗಳನ್ನು ಇಷ್ಟ ಪಡ್ತಾರೆ,ಅಂತಹ ಕಥೆಗಳು ಚಿತ್ರಗಳು ಬಂದಾಗ ಗ್ಯಾರಂಟಿ ಗೆಲ್ಲಿಸುತ್ತಾರೆ, ತುಂಬಾ ಸೆನ್ಸಿಬಲ್ ಆದಂತಹ ಪೋಸ್ಟರ್,ತುಂಬಾನೇ ವೈರಲ್ ಆಗುವಂತಹ ಹಾಡುಗಳು,ತುಂಬಾನೇ ಕಾಡುವಂತಹ ಕಂಟೆಂಟ್ ಯಾವುದೇ ಚಿತ್ರದೇ ಆಗಿರಲಿ,ಅವೆಲ್ಲವೂ ಒಂದು ಸಾರಿ ಜನರ,ಪ್ರೇಕ್ಷಕ ಮಹಾಪ್ರಭುಗಳ ಹೃದಯದಲ್ಲಿ ಉಳಿದುಕೊಂಡರೆ ಸಾಕು,ಅವರೆಲ್ಲರೂ ಚಿತ್ರ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಾರೆ ಹಾಗೂ ಅಂತಹ ಚಿತ್ರಗಳ ಬಗ್ಗೆ ಜೋರಾಗಿಯೇ ಮಾತನಾಡುತ್ತಾರೆ,ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ನಲ್ಲಿ ಬರ್ತಾ ಇರುವ ಫಾದರ್ ಚಿತ್ರದ ಬಗ್ಗೆ ಇಲ್ಲಿದೆ ಅಪ್ಡೇಟ್. ಡಿಸೆಂಬರ್‌ 4 […]

ಕನ್ನಡಿಗರು ತುಂಬಾ ಭಾವುಕ ಕಥೆಗಳನ್ನು ಇಷ್ಟ ಪಡ್ತಾರೆ,ಅಂತಹ ಕಥೆಗಳು ಚಿತ್ರಗಳು ಬಂದಾಗ ಗ್ಯಾರಂಟಿ ಗೆಲ್ಲಿಸುತ್ತಾರೆ, ತುಂಬಾ ಸೆನ್ಸಿಬಲ್ ಆದಂತಹ ಪೋಸ್ಟರ್,ತುಂಬಾನೇ ವೈರಲ್ ಆಗುವಂತಹ ಹಾಡುಗಳು,ತುಂಬಾನೇ ಕಾಡುವಂತಹ ಕಂಟೆಂಟ್ ಯಾವುದೇ ಚಿತ್ರದೇ ಆಗಿರಲಿ,ಅವೆಲ್ಲವೂ ಒಂದು ಸಾರಿ ಜನರ,ಪ್ರೇಕ್ಷಕ ಮಹಾಪ್ರಭುಗಳ ಹೃದಯದಲ್ಲಿ ಉಳಿದುಕೊಂಡರೆ ಸಾಕು,ಅವರೆಲ್ಲರೂ ಚಿತ್ರ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಾರೆ ಹಾಗೂ ಅಂತಹ ಚಿತ್ರಗಳ ಬಗ್ಗೆ ಜೋರಾಗಿಯೇ ಮಾತನಾಡುತ್ತಾರೆ,ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ನಲ್ಲಿ ಬರ್ತಾ ಇರುವ ಫಾದರ್ ಚಿತ್ರದ ಬಗ್ಗೆ ಇಲ್ಲಿದೆ ಅಪ್ಡೇಟ್.

ಡಿಸೆಂಬರ್‌ 4 ರಂದು ಡಾರ್ಲಿಂಗ್ ಕೃಷ್ಣ – ಪ್ರಕಾಶ್ ರಾಜ್ ಅಭಿನಯದ “ಫಾದರ್” ಚಿತ್ರ ತೆರೆಗೆ .

ಬಹು ನಿರೀಕ್ಷಿತ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ ಆರ್ ಸಿ ಸ್ಟುಡಿಯೋಸ್ .

ಖ್ಯಾತ ನಿರ್ಮಾಪಕ – ನಿರ್ದೇಶಕ ಆರ್ ಚಂದ್ರು ನೇತೃತ್ವದ ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ ಚಂದ್ರು ಅವರು ನಿರ್ಮಿಸಿರುವ, ಈ ವರ್ಷದ ಬಿಗ್ ಹಿಟ್ ಚಿತ್ರ “ಲವ್ ಮಾಕ್ಟೇಲ್ 3” ಸೇರಿದಂತೆ ಅನೇಕ ಚಿತ್ರಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಪ್ರಕಾಶ್ ರಾಜ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಫಾದರ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಣ ಸಂಸ್ಥೆ ಆರ್ ಸಿ ಸ್ಟುಡಿಯೋಸ್ ಘೋಷಣೆ ಮಾಡಿದ್ದು, ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಸದಭಿರುಚಿ ಚಿತ್ರಗಳ ನಿರ್ದೇಶಕರೆಂದೆ ಹೆಸರಾಗಿರುವ ಆರ್ ಚಂದ್ರು, “ಕಬ್ಜ” ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ನಿರ್ಮಾಪಕರೂ ಸಹ ಆದರು. ಪ್ರಸ್ತುತ ಆರ್ ಚಂದ್ರು ಅವರು ತಮ್ಮದೇ ಆದ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಈ ಸಂಸ್ಥೆಯ ಮೊದಲ ಚಿತ್ರವಾಗಿ “ಫಾದರ್” ಚಿತ್ರ ನಿರ್ಮಾಣವಾಗಿದೆ. ಯಮುನ ಚಂದ್ರು ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಜಮೋಹನ್ ನಿರ್ದೇಶಿಸಿದ್ದಾರೆ.

“ಫಾದರ್” ಅಪ್ಪ – ಮಗನ ಬಾಂಧವ್ಯದ ಚಿತ್ರವಾಗಿದ್ದು, ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌ಹೆಸರಾಂತ “ಮ್ಯಾಕೀಸ್” ಸಂಸ್ಥೆ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕುಟುಂಬ, ಭಾವನೆಗಳು ಮತ್ತು ಸಂಬಂಧಗಳ ಸುತ್ತ ಸಾಗುವ ಕಥಾಹಂದರ ಹೊಂದಿರುವ ‘ಫಾದರ್’, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂತಹ ಕಥಾಹಂದರ ಹೊಂದಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್‌ಗೆ ಇದೊಂದು ಕೇವಲ ಚಿತ್ರವಾಗದೆ, ಸಂಬಂಧಗಳೊಂದಿಗೆ ಪಯಣಿಸುವ ಭಾವನಾತ್ಮಕ ಅನುಭವವಾಗಲಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.