Wednesday, 23 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಭಾವಾಂತರ” ಬಿಡುಗಡೆಗೆ ಸಿದ್ದ
- ಸಿನಿಮಾ

“ಭಾವಾಂತರ” ಬಿಡುಗಡೆಗೆ ಸಿದ್ದ

ಹೊಸಬರ ಪ್ರತಿ ಪ್ರಯತ್ನವೂ ಅದರದೇ ಆದಂತಹ, ಸ್ಪೆಷಲ್ ಕಂಟೆಂಟ್ ಜೊತೆಗೆ, ಕ್ರಿಯೇಟಿವ್ ಯೋಚನೆಗಳೊಂದಿಗೆ, ತಮ್ಮ ಜರ್ನಿಯನ್ನು ಶುರು ಮಾಡಲು ಸದಾ ಒಂದು ಹೆಜ್ಜೆ ಮುಂದೆ ಹೋಗಿ ,ಕೆಲಸ ಮಾಡುತ್ತಲೇ ಇರುತ್ತದೆ.ವರ್ಷದಲ್ಲಿ ಸೂಪರ್ ಸ್ಟಾರ್ಗಳ ಸಿನಿಮಾಗಳು ಕೇವಲ ಬೆರಳಣಿಕೆಯಷ್ಟು ಮಾತ್ರ ಬಂದು,ಪ್ರೇಕ್ಷಕರನ್ನು ರಂಜಿಸಿ ಹೋಗಬಹುದು,ಆದರೆ ವರ್ಷಪೂರ್ತಿ ನಾವು ಎಂಗೇಜ್ ಆಗಬೇಕು ಅಂದಾಗ ನಮಗೆ ಹೊಸಬರ ಚಿತ್ರಗಳೇ ಬೇಕು, ಅವೇ ನಮ್ಮನ್ನ ಕಾಯುತ್ತವೆ ಎಂದು ಎಷ್ಟೋ ಜನ ಥಿಯೇಟರ್ ಮಾಲೀಕರು heliddu, ನಾವು ಗಮನಿಸಿದ್ದೇವೆ. ಸಧ್ಯ ಗಾಂಧಿನಗರದಲ್ಲಿ ಮತ್ತೊಂದು ಹೊಸ […]

ಹೊಸಬರ ಪ್ರತಿ ಪ್ರಯತ್ನವೂ ಅದರದೇ ಆದಂತಹ, ಸ್ಪೆಷಲ್ ಕಂಟೆಂಟ್ ಜೊತೆಗೆ, ಕ್ರಿಯೇಟಿವ್ ಯೋಚನೆಗಳೊಂದಿಗೆ, ತಮ್ಮ ಜರ್ನಿಯನ್ನು ಶುರು ಮಾಡಲು ಸದಾ ಒಂದು ಹೆಜ್ಜೆ ಮುಂದೆ ಹೋಗಿ ,ಕೆಲಸ ಮಾಡುತ್ತಲೇ ಇರುತ್ತದೆ.ವರ್ಷದಲ್ಲಿ ಸೂಪರ್ ಸ್ಟಾರ್ಗಳ ಸಿನಿಮಾಗಳು ಕೇವಲ ಬೆರಳಣಿಕೆಯಷ್ಟು ಮಾತ್ರ ಬಂದು,ಪ್ರೇಕ್ಷಕರನ್ನು ರಂಜಿಸಿ ಹೋಗಬಹುದು,ಆದರೆ ವರ್ಷಪೂರ್ತಿ ನಾವು ಎಂಗೇಜ್ ಆಗಬೇಕು ಅಂದಾಗ ನಮಗೆ ಹೊಸಬರ ಚಿತ್ರಗಳೇ ಬೇಕು, ಅವೇ ನಮ್ಮನ್ನ ಕಾಯುತ್ತವೆ ಎಂದು ಎಷ್ಟೋ ಜನ ಥಿಯೇಟರ್ ಮಾಲೀಕರು heliddu, ನಾವು ಗಮನಿಸಿದ್ದೇವೆ. ಸಧ್ಯ ಗಾಂಧಿನಗರದಲ್ಲಿ ಮತ್ತೊಂದು ಹೊಸ ತಂಡ ಒಂದೊಳ್ಳೆ ಯೋಚನೆ ಜತೆಗೆ ಬರ್ತಾ ಇದೆ, ಇಲ್ಲಿದೆ ಅದರ ಅಪ್ಡೇಟ್..

ಐನ್‌ಫ್ಯಾಕ್ ಸ್ಟುಡಿಯೋಸ್ ಹಾಗೂ ಕಿಕ್ ಮೀಡಿಯಾ ಸಹಯೋಗದಲ್ಲಿ ‘ಭಾವಾಂತರ’: ಅಕ್ಟೋಬರ್ 2026ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜು!

ವಿಶಿಷ್ಟ ಕಥಾಹಂದರದ ಮೂಲಕ ಗಮನಸೆಳೆಯುತ್ತಿರುವ ‘ಭಾವಾಂತರ’ ಸಿನಿಮಾವನ್ನು ಪ್ರೇಕ್ಷಕರ ಎದುರು ತರಲು ಪ್ರತಿಷ್ಠಿತ ಐನ್‌ಫ್ಯಾಕ್ ಸ್ಟುಡಿಯೋಸ್ (Einfach Studios) ಹಾಗೂ ಕಿಕ್ ಮೀಡಿಯಾ (Kick Media) ಸಂಸ್ಥೆಗಳು ಅಧಿಕೃತವಾಗಿ ಕೈಜೋಡಿಸಿವೆ. ನಿರ್ಮಾಪಕರಾದ ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಅವರ ಜಂಟಿ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರವನ್ನು ಅಕ್ಟೋಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ.

ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮಾ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಅವರಿಗೆ ಜೋಡಿಯಾಗಿ ತನ್ವಿ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಂಗಳಮುಖಿಯರ ನೈಜ ಬದುಕು, ಅವರು ಸಮಾಜದಲ್ಲಿ ಎದುರಿಸುವ ಸವಾಲುಗಳು ಹಾಗೂ ಅವರ ಸೂಕ್ಷ್ಮ ಭಾವನಾತ್ಮಕ ಅನುಭವಗಳ ಸುತ್ತ ಈ ಸಿನಿಮಾದ ಕಥಾಹಂದರ ಸಾಗಲಿದ್ದು, ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ಈಗಾಗಲೇ 100ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವ ಹೊಂದಿರುವ ಕಾರ್ತಿಕ್ ಶರ್ಮಾ, ಸ್ವತಃ ‘ಕಿಕ್ ಮೀಡಿಯಾ’ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಸಲುವಾಗಿ ಇದೀಗ ಐನ್‌ಫ್ಯಾಕ್ ಸ್ಟುಡಿಯೋಸ್‌ನ ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಅವರೊಂದಿಗೆ ಕೈಜೋಡಿಸಿದ್ದಾರೆ. ತಮಿಳಿನಲ್ಲಿ ಬಹುಮೆಚ್ಚುಗೆ ಗಳಿಸಿದ ‘ಕೊಂಡ್ರಾಲ್ ಪಾವಂ’ ಸಿನಿಮಾದ ಯಶಸ್ಸಿನ ಬಳಿಕ ಐನ್‌ಫ್ಯಾಕ್ ಸ್ಟುಡಿಯೋಸ್ ಸಂಸ್ಥೆ ನಿರ್ಮಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.

ಇನ್ನು ಚಿತ್ರದ ಹಾಡುಗಳು ಹಾಗೂ ಸಂಗೀತಕ್ಕೆ ಈಗಾಗಲೇ ದೊಡ್ಡ ಮನ್ನಣೆ ಸಿಕ್ಕಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಕನ್ನಡದ ಹೆಮ್ಮೆಯ ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ ಅಧಿಕೃತವಾಗಿ ಪಡೆದುಕೊಂಡಿದೆ. ಇದು ಚಿತ್ರದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಹಾಗೂ ಬಹುನಿರೀಕ್ಷಿತ ಟ್ರೇಲರ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.