“418″ ಹಿಂದೆ – “ಕೆಜಿಎಫ್” ಮಾಸ್ಟರ್
ಉಗ್ರಂ ತರಹದ ಬ್ರಿಲಿಯಂಟ್ ಸ್ಟಫ್ ಇರುವಂತಹ ಕಥೆಯನ್ನು, ಸಿನಿಮಾವಾಗಿ ಮಾಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ತರಹದ ಮೇಕಿಂಗ್ ಅಲೆಯನ್ನು ಕ್ರಿಯೇಟ್ ಮಾಡಿ, ನಂತರ ಕೆಜಿಎಫ್ ಪಾರ್ಟ್ 1 & 2 ಮತ್ತು ಸಲಾರ್ ದಂತಹ ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಮಾಡಿ,ಈಗ ಮತ್ತೊಂದು ಮೆಗಾ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಯಾಗಿರುವ ಪ್ರಶಾಂತ್ ನೀಲ್,ತಮ್ಮ ಜೊತೆಗೆ ಹೆಜ್ಜೆ ಹಾಕಿರುವ ಪ್ರತಿಭಾವಂತ ತಂತ್ರಜ್ಞರಿಗೆ ಅವಕಾಶ ಕೊಟ್ಟು,418 ಚಿತ್ರವನ್ನು ಪ್ರೆಸೆಂಟ್ಸ್ ಮಾಡಿದ ವಿಷಯಕ್ಕೆ,ನಮ್ಮ ಕನ್ನಡಿಗ ಪ್ರಶಾಂತ್ ನೀಲ್ ಹೆಸರು ಮತ್ತೇ ಕೇಳಿಬರುತ್ತಿದೆ.
ಪ್ರಶಾಂತ್ ನೀಲ್ ಪ್ರೆಸೆಂಟ್ಸ್ ಮಾಡಿರುವ 418 ಚಿತ್ರ ಬಿಡುಗಡೆಯಾಗಿ,ಎಲ್ಲ ಕಡೆ ತುಂಬಾ ಚೆನ್ನಾಗ್ ಓಡ್ತಾ ಇದೇ, ಇದೇ ವಿಷಯಕ್ಕೆ ನಡೆದ 418 ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡ ಕೊಟ್ಟ ವಿವರ ಹೀಗಿದೆ.
418 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ
ಚೈತ್ರಾ ಜೆ ಆಚಾರ್ಯ, ಮಾತನಾಡಿ.ಯಾರೇ ಕಲಾವಿದರು ಆಗಲಿ,ತಮ್ಮ ಬಳಿ ಒಂದೊಳ್ಳೆ ಕಥೆ ಬರಲಿ ಅದರಲ್ಲಿ ನಾನು ನಟಿಸಬೇಕು,ಚಿತ್ರ ಚೆನ್ನಾಗ್ ಆಗ್ಬೇಕು ಅನ್ನೋ ಆಸೆ ಇದ್ದೆ ಇರತ್ತೆ,ಆದರೆ ಅವಕಾಶ ಸಿಗಲ್ಲ,ಅವಕಾಶ ಸಿಕ್ಕರು ಸಹ ಚಿತ್ರಗಳು ಸ್ವಲ್ಪ ತಡವಾಗತ್ತೆ,ಆದ್ರೆ ಕೆಲವು ಕಥೆಗಳು ಎಲ್ಲರಿಗೂ ಒಮ್ಮೆ ಸಿಗುತ್ತವೆ,
ಒಬ್ಬ ಕಲಾವಿದೆಯಾಗಿ ನನ್ನ ಬಳಿ 418 ತರಹದ ಕಥೆ ಬಂದಾಗ,ನಾನು ಹೇಗೆ ಬಿಡಲಿ ನಿರ್ದೇಶಕ ಕೀರ್ತನ ಇಂತಹ,ಮಾಸ್ಟರ್ ಕ್ಲಾಸ್ ಕಥೆನಾ ಹೇಳಿದಾಗ ನಾನು ಪ್ರೀತಿಯಿಂದ ಒಪ್ಪಿಕೊಂಡೆ,ಮೈತ್ರಿಯಂತಹ ದೊಡ್ಡ ನಿರ್ಮಾಣ ಸಂಸ್ಥೆ ಇಂತಹ ಕಂಟೆಂಟ್ ಮೇಲೆ ಹಣ ಹಾಕಿದ್ದು,ಹೊಸ ಕಲಾವಿದರಿಗೆ ಅವಕಾಶ ಕೊಟ್ಟಿದ್ದು ಗ್ರೇಟ್,ನಾನೀಗಾಗಲೇ ಇವ್ರ ಸಂಸ್ಥೆಯಲ್ಲಿ ಫೌಜಿ ಸೇರಿದಂತೆ ಈಗಾಗಲೇ ಎರಡು ಚಿತ್ರ ಮಾಡಿದ್ದೇನೆ,ಇನ್ನೊಂದು ಚಿತ್ರ ಮಾಡೋಣ ಎಂಬ ವಿನಂತಿ ಮಾಡಿಕೊಂಡರು.
ಮೈತ್ರಿ ಮೂವೀಸ್ ನಂತಹ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ,418 ಅನ್ನೋ ಕಥೆನಾ ಸಿನಿಮಾ ಮಾಡೋದಕ್ಕೆ ಒಪ್ಪಿಕೊಂಡು,ಅಂದುಕೊಂಡ ಹಾಗೆ ಮಾಡಿ ತೋರಿಸಿ ವೀಕ್ಷಕ ಪ್ರಭುಗಳಿಗೆ ಇಷ್ಟವಾಗುವ ಹಾಗೆ ಆಗುವ ತನಕ ಮತ್ತು ಇನ್ನೂ ಮುಂದೆಯೂ ಸಹ ಅದೇ ಎನರ್ಜಿ ಪಾಸ್ ಆಗುವ ಹಾಗೆ ಮಾಡ್ತಾ ಇರುವ ಮೈತ್ರಿ ಮೂವೀಸ್ ನಮಗೆ ಅಸಲಿ ಶಕ್ತಿ,ಎಲ್ಲ ಬರಹಗಾರರು ಕಥೆಗಳನ್ನು ಬರೀತಾರೆ,ಕೆಲವು ಕಥೆಗಳು ಸಿನ್ಮಾ ಆಗ್ತವೆ ಕೆಲವು ಸ್ವಲ್ಪ ಸಮಯ ತೆಗೆದು ಕೊಳ್ಳುತ್ತವೆ, ಕೆಲವು ಕಥೆಗಳು ಸಿನಿಮಾಗಳು ಆಗೋದಿಲ್ಲ.ಅಂತಹದರಲ್ಲಿ ನಾವು ಅದೃಷ್ಟವಂತರು ಅಂತ ಭಾವಿಸ್ತಿವಿ ಕಾರಣ ನಮ್ಮ ಕಥೆ 418 ಚಿತ್ರವಾಗಿ ಆಚೆ ಬಂದು ಚಿತ್ರ ಮಂದಿರದಲ್ಲಿ ಚೆನ್ನಾಗ್ ಓಡ್ತಾ ಇದೇ ಎಂದರು,ನಿರ್ದೇಶಕ ಕೀರ್ತನ.

ಕೀರ್ತನ ಅವ್ರ ಐಡಿಯಾ ತುಂಬಾ ಇಂಟ್ರೆಸ್ಟಿಂಗ್ ಆಗಿತ್ತು,ಅಂತಹ ಐಡಿಯಾ ಪ್ರಶಾಂತ್ ನೀಲ್ ತನಕ ಹೋದಾಗ,ಅವರು ಅದನ್ನು ಒಪ್ಪಿದ್ದು,ನಂತರ ಕಥೆ 418 ಆಗಿ ಸಿನ್ಮಾ ಆಗುತ್ತೆ ಅನ್ನೋದೇ ಒಂದೊಳ್ಳೆ ಬೂಸ್ಟರ್ ಪಾಯಿಂಟ್ ಎಂದರು 418 ಚಿತ್ರದ ಕೋ ರೈಟರ್.
ನಂತರ ಮಾತನಾಡಿದ 418 ಚಿತ್ರದ
ಛಾಯಾಗ್ರಾಕ,ಸಂಗೀತ ನಿರ್ದೇಶಕ ಮತ್ತು ಸಂಕಲನಕಾರ,ಚಿತ್ರ ನಾವಂದುಕೊಂಡ ರೀತಿಗಿಂತಲೂ ಸಖತ್ ಆಗಿ ಮೂಡಿ ಬಂದಿದೆ.ಚಿತ್ರ ನೋಡುವ ಪ್ರತಿ ವೀಕ್ಷಕನು ಸೀಟ್ ಎಡ್ಜ್ ನಲ್ಲಿ ಕೂತಿರುವ ಬಗ್ಗೆ ನೋಡಿದ್ದೇವೆ ಎಂದರು.
ಎಲ್ಲ ಕಡೆ ಚೆನ್ನಾಗ್ ಹೋಗ್ತಾ ಇರುವ 418 ಇನ್ನೂ ಚೆನ್ನಾಗ್ ಆಗತ್ತೆ ಅನ್ನೋ ಭರವಸೆ ನಮಗಿದೆ ಎಂದರು ನಿರ್ದೇಶಕ ಕೀರ್ತನ.
ರವೀ ಸಾಸನೂರ್ MasterNews365.Com

