ಉಪಕಥೆ…………..
ಒಬ್ಬ ಒಕ್ಕಲಿಗ 5 ಕೊಂಡು ಮಾರಲಿಕ್ಕೆ ಬಜಾರಕ್ಕೆ ಬಂದ ಆ ಬಜಾರ್ದಾಗ ಒಬ್ಬ ತೊಗಲ ಇದ್ದ. ಬಂದಮಾಲನ್ನು ಅವನೇ ಖರೀದಿ ಮಾಡವ. ಇವಾಗ ಒಕ್ಕಲಿಗ ಜೋಳ ಗಾಡ್ಯಾಗ ಹೇರಿಕೊಂಡು ಬಂದ. ಅಷ್ಟೊತ್ತಿಗೆ ದಲ್ಲಾಳಿ ನಿಂತಿದ್ದ . ಏನ್ ಹೇಳ್ತೀಯೋ ಈ ಗಾಡಿ ಜೋಳ ಅಂದನು. ಐದು ಚೀಲ ಅಂದ್ರೆ ಐದು ಎರಡಲಿ ಹತ್ತು ಸಾವಿರ ಅಂದ 10,000 ದಲ್ಲಾಳಿ ಕೊಟ್ಟು, ಬಾರ್ಕೊಳ್ಳುತ ಹೋಗು ಎಂದ . ಒಕ್ಕಲಿಗ ಯಾಕ್ರಿ ಎಂದ. ಎಲಾ ಇವನ ನಾ ಇದನ್ನು ತಗೊಂಡ್ ಇದೀನಿ. ಹಂಗಿದ್ರ ನೀವು ಎಲ್ಲಾ ಜೋಳ ಇಳ್ಕೋರಿ ಮತ್ತೆ ನಾ ಗಾಡಿ ತಗೊಂಡ್ ಹೋಗ್ತೀನಿ ಅಂದ.ಅದಕ್ಕೆ ಅವನು ಅಂದರೆ ದಲ್ಲಾಳಿ ಅಂದ ಏಯ್ ಗಾಡಿ, ಜೋಳ ಕೂಡಿ ನಾ ತಗೊಂಡಿದೀನಿ ಎಂದ .
ನಾ ಮೊದಲು ಹೇಳಿನಿ ಏಟು ಕೊಡ್ತೀಯೋ ತಮ್ಮ ಈ ಗಾಡಿ ಜೋಳಕ್ಕೆ ಅಂದೀನಿ. ನಾನು ಕೇಳಿಲ್ಲ ಬಿಡ್ರಿ ಅಂದ. ಗಾಡಿ ಜೋಳಕ ಅಂದು ಕೂಡಲೇ ಜೋಳ ತಗೊಂತಾರಂತ ನಾ ಹೇಳಿನಿ, ಇಲ್ಲ ನಾ ಗಾಡಿ ಜೋಳ ಕೂಡಿ ತಗೊಂತೀನಿ.ಬಾರ್ಕೋಲ್ ಕೊಟ್ಟು ಹೋಗ್ ನೀ ಅಂದ. ಅದಕ್ಕೆ ಅದನ್ನು ಕೇಳಿದ ಒಕ್ಕಲಿಗ ಅಳಲಾಕ್ ಹತ್ತಿದ. ಹೆಂಗ್ ರಿ ಎತ್ತುಗಾಡಿ ಅಂದ. ಏಯ್ ಎಲ್ಲ ತೊಗೊಂಡೀನಿ ಮತ್ತೆ ರೊಕ್ಕನೂ ಕೊಟ್ಟಿನಿ ನಿನಗ ಅಂದ. ಈ ಕಡೆ ಇಂವಾ ಅಳ್ಕೊಂತ ನಿಂತ.ನಂದಿನಿ ಕೂಡಲಕ್ ಹತ್ತಿತು ಬಂದೋರ್ ಕೆಳಕ ಹತ್ತಿದ್ರು.
ಯಾಕೋ ತಮ್ಮ ಯಾಕ ಅಳಲಾಕ ಹತ್ತಿದಿ ? ನಿ ಏನ್ ಹೇಳುತ್ತೀಪ್ಪಾ ಗಾಡಿ ಜೋಳಕ ಅಂದ.10,000 ಕೇಳಿದೆ 10,000 ಕೊಟ್ಟಾನ . ಈಗ ಬಾರ್ಕೋಲ್ ಕೊಡು ಎತ್ತು ಗಾಡಿ ಎಲ್ಲಾ ಬಿಟ್ಟು ಹೋಗು ಅಂತಾನು . ಅದನ್ನು ಕೇಳಿ ಹೆಂತವ್ನ ಕೂಡ ವ್ಯಾಪಾರ ಮಾಡಿದ್ಯೋ ಮಾರಾಯ. ಅವಂಗ ಯಾರು ಹೇಳುವುದಿಲ್ಲ ಇಲ್ಲಿ. ನೀನು ಕೊಡೋಕಿಂತ ಮೊದಲು ವಿಚಾರ ಮಾಡಬೇಕಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಅವನಿಗಿಂತ ಹೆಚ್ಚು ತಗಲ ಇದ್ದ ಇನ್ನೊಬ್ಬ ದಲ್ಲಾಳಿ ಬಂದ.
ಯಾಕ್ ಅಳ್ತೀಯೋ ತಮ್ಮ ಅಂದ. ಹಿಂಗ ನಾನು ಜೋಳ ತಗೋತೀನಿ ಗಾಡಿ ಜೋಳಕ್ಕೆ ಏನು ಹೇಳುತ್ತೀ ಅಂತ ಆ ದಲ್ಲಾಳಿ ಅಂದ. ಅದಕ್ಕೆ ನಾನು 10,000 ಎಂದೆ. ಹತ್ತು ಸಾವಿರ ರೂಪಾಯಿ ಕೊಟ್ಟು ಈಗಿದ್ದರ ನನಗ ಎತ್ತುಗಾಡಿ ಜೋಳ ಬಿಟ್ಟು ಹೋಗು ಅನ್ನಲಿಕ್ಕ ಹತ್ಯಾನ . ಯಾಕಪ್ಪಾ ನೀ ಹ್ಯಾಂಗ ತಗೊಂಡ್ ಇದ್ದಿ, ನಾ ಗಾಡಿ ಜೋಳ ಎತ್ತು ಪೂರ ತಗೊಂಡಿದೀನಿ. ಅದಕ್ಕೆ ಕೊಳ್ಳ ಹರಿ ಅಂತ ಮತ್ತೋಬ್ಬ ದಲ್ಲಾಳಿ ಅಂದ. ಯಾಕ್ ಹರಿಬೇಕು ?ಅಂತ ಅಂತಾನ. ಏಯ್ ನಿನ್ನ ಗಾಡಿ ಜೋಳ ಮುಟ್ಟಿದರೆ ಕೇಳು ? ಮೊದಲ ಕೊಳ ಹರಿ ತಮ್ಮ .. ಒಕ್ಕಲಿಗ ಕೊಳ್ಳ ಹರದ .. ಎತ್ತು ಒಯ್ದು ಆ ಕಡೆ ಕಟ್ಟುವ ಅಂದ.ಅದಕ್ಕೆ ಯಾಕ್ರೀ ಎಂದ. ಎತ್ತು ಏನರ ತಗೊಂಡಿದೆನೋ ನೀನು ? ಗಾಡಿ ಜೋಳ ತಗೊಂಡಿದೀ . ನಿನ್ನ ಗಾಡಿ ಜೋಳ ಮುಟ್ಟಿದರೆ ಕೇಳು. ಅಂದಮೇಲೆ ಎತ್ತು ಆಕಡೆ ಒಯ್ದು ಕಟ್ಟಿದ ..ಗಾಡಿ ಒಳಗಿನ ಚೀಲ ಇಳುವು ಅಂದ . ಏಯ್ ನನ್ನು ಜೋಳ್ರೀ. ಹೇ ನಿನ್ನ ಜೋಳ ಮುಟ್ಟುವುದಿಲ್ಲ. ಚೀಲ ತೆಗೆದು ಆ ಕಡೆ ಇಡು ತಮ್ಮ ಅಂದ. ಚೀಲ ತೆಗೆದು ಆ ಕಡೆ ಇಟ್ಟ. ನೊಗ ಬಿಚ್ಚು. ಯಾಕ್ರಿ ಎಂದ. ಗಾಡಿ ನಿನ್ ಗಾಡಿ ಮುಟ್ಟೋದಿಲ್ಲ. ಮಗ ಏನರ ತಗೊಂಡಿದೇನು ? ಇಲ್ಲ್ರಿ ….! ತಮ್ಮ ಎರಡು ಗಾಡಿ ಬಿಚ್ಚು. ಯಾಕ್ರಿ ಅಂದ . ನೀನು ಗಾಲಿ ತಗೊಂಡಿದೆನು ? ಇಲ್ಲಿ. ಹಿಂಗ ಗಾಡಿಯ ಎಲ್ಲ ಭಾಗಗಳನ್ನು ಬೇರೆ ಬೇರೆ ಮಾಡಿಸಿ ಬಿಟ್ಟು ಎಲ್ಲಾ ಗಾಡಿನು ಇಲ್ಲ. ಜೋಳನು ಇಲ್ಲ. ಒಯ್ಯೋ ನಿನ್ನ ಜೋಳ ಅಂದ .
ಹಂಗ ಈ 25 ತತ್ವಗಳು ಕೂಡಿಕೊಂಡು ಆಯಾಯ ತತ್ವಗಳನ್ನು ಹಂಚಿಬಿಟ್ಟರೆ ಗಾಡಿ ಇಲ್ಲ ಗಾಡಿನ ನಾವು ಅಂತ ನಂಬಿಬಿಟ್ಟಿವಿ. 25 ತತ್ವಗಳು ಅದಾವು. ಇದರಾಗ ಅಪ್ಪು ತೇಜ ವಾಯು ಆಕಾಶ ಇವು ಐದು ಕೂಡಿಕೊಂಡಾವು. ಪಂಚಭೂತಗಳಿಂದ ಒಂದಿಷ್ಟು ಮಣ್ಣು ತೆಗೆದುಕೊಂಡಾನ . ಅದು ಮಣ್ಣಿ ನ್ಯಾಗ ನೀರ್ ಹಾಕಿ ಕಲಶ್ಯಾನ.ಅದರಿಂದಲೇ ಗಡಿಗಿ ಮಾಡ್ಯಾನಮತ್ತು ಅದನ್ನು ಗಾಳಿಗಿ ಇಟ್ಟಾನ . ನಂತರ ಒಯ್ದು ಸುಟ್ಟಾನ .
ಮುಂದುವರೆಯುತ್ತದೆ ….
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

