Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೆದ್ದಾರಿಯಲ್ಲಿ ಪ್ರಮೋದ್ ಶೆಟ್ಟಿ
- ಸಿನಿಮಾ

ಹೆದ್ದಾರಿಯಲ್ಲಿ ಪ್ರಮೋದ್ ಶೆಟ್ಟಿ

NH66 ಟೀಸರ್ ಲಾಂಚ್.ಒಂದು ಹೆದ್ದಾರಿ – ಅನೇಕ ರಹಸ್ಯಗಳು ಎಂಬ,ಅಡಿಬರಹ ಹೊಂದಿರುವ ಈ ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.T R ಮಂಜುನಾಥ್ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ NH66 ಪ್ರಮೋದ ಶೆಟ್ಟಿ ಮಾತನಾಡಿ, ದಿನಗಳ ನಂತರ ಬೇರೆ ತರಹದ ಪಾತ್ರ ಸಿಕ್ಕಿದೆ,ಪೊಲೀಸ್ ಪಾತ್ರ ಮಾಡಿ ಮಾಡಿ ಸಾಕಾಗಿತ್ತು.ಒಂದು ಕ್ಯಾಬ್ ನಲ್ಲಿ ಶೃತಿ ಹರಿಹರನ್ ಪಾತ್ರ ಮತ್ತು ರಾಜೇಶ್ ನಟರಂಗ,ಇಬ್ಬರ ಪಾತ್ರಧಾರಿಗಳು ನಾನು ಓಡಿಸುವ ಕ್ಯಾಬ್ ನಲ್ಲಿ ಪ್ರಯಾಣ ಮಾಡ್ತಾರೆ,ಅದರಿಂದ ಕ್ಯಾಬ್ ಡ್ರೈವರ್ ಆದ ನನ್ನ ಜೀವನದಲ್ಲಿ ಆಗುವ […]

NH66 ಟೀಸರ್ ಲಾಂಚ್.
ಒಂದು ಹೆದ್ದಾರಿ – ಅನೇಕ ರಹಸ್ಯಗಳು ಎಂಬ,ಅಡಿಬರಹ ಹೊಂದಿರುವ ಈ ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.
T R ಮಂಜುನಾಥ್ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ NH66

ಪ್ರಮೋದ ಶೆಟ್ಟಿ ಮಾತನಾಡಿ, ದಿನಗಳ ನಂತರ ಬೇರೆ ತರಹದ ಪಾತ್ರ ಸಿಕ್ಕಿದೆ,ಪೊಲೀಸ್ ಪಾತ್ರ ಮಾಡಿ ಮಾಡಿ ಸಾಕಾಗಿತ್ತು.
ಒಂದು ಕ್ಯಾಬ್ ನಲ್ಲಿ ಶೃತಿ ಹರಿಹರನ್ ಪಾತ್ರ ಮತ್ತು ರಾಜೇಶ್ ನಟರಂಗ,ಇಬ್ಬರ ಪಾತ್ರಧಾರಿಗಳು ನಾನು ಓಡಿಸುವ ಕ್ಯಾಬ್ ನಲ್ಲಿ ಪ್ರಯಾಣ ಮಾಡ್ತಾರೆ,ಅದರಿಂದ ಕ್ಯಾಬ್ ಡ್ರೈವರ್ ಆದ ನನ್ನ ಜೀವನದಲ್ಲಿ ಆಗುವ ಅನಾಹುತ ಇತ್ಯಾದಿ ಮೇಲೆ ಕಥೆ ಸಾಗುತ್ತೆ.

ರಾಜೇಶ್ ನಟರಂಗ ಮಾತನಾಡಿ,
NH66 ಸಿನಿಮಾ ಶೂಟಿಂಗ್ ಮಾಡುವಾಗ ನನಗೆ ಸೂರಿ ಕೆಂಡಸಂಪಿಗೆ ನೆನಪಾಯ್ತು,ಕಾರಣ ಆ ಚಿತ್ರಕ್ಕೆ ನಾನು ಡೈರೆಕ್ಷನ್ ಟೀಮ್ ನಲ್ಲಿ ಕೆಲಸ ಮಾಡಿದ್ದೆ.ಈ ತರಹದ ಕಥೆಗಳು ಚಿತ್ರ ನೋಡುವ ವೀಕ್ಷಕರಿಗೆ ಕುತೂಹಲ ಮೂಡಿಸತ್ತೆ.ವೈಯಕ್ತಿಕವಾಗಿ ನನಗೆ ಗೊತ್ತಿರೋ ಮಾಹಿತಿ ಪ್ರಕಾರ ಪ್ರತಿ ಕಥೆನು ಅದ್ಭುತವಾಗಿ ಇರತ್ತೆ ಕಲಾವಿದರಾಗಿ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಅಷ್ಟೇ,ಹಾಗೆ ಮಾತು ಮುಂದುವರೆಸಿ ಮಾತನಾಡಿದ ರಾಜೇಶ್,ನಿರ್ಮಾಪಕರೇ ಯಾವುದೇ ಕಾರಣಕ್ಕೂ ಇನ್ಮುಂದೆ ಕಲಾವಿದರಿಗೆ ಧನ್ಯವಾದ ಆಗ್ಲೀ ತುಂಬಾ ಸಪೋರ್ಟ್ ಮಾಡಿದ್ರಿ ಅಂತಾ ಹೇಳ್ಬೇಡಿ,ಸಿನಿಮಾ,ನಟನೆ ನಮ್ಮ ನಾಯಕ ನಾವು ಮಾಡಲೇಬೇಕು ಎಂದರು.

T R ಮಂಜುನಾಥ್ ಮಾತನಾಡಿ,ನಾನು ಕಲಿತಂತಹ ಕೆಲಸ ಅದರಲ್ಲೂ ವಿಶೇಷವಾಗಿ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಮತ್ತು ರಾಜೇಶ್ ನಟರಂಗ ತರಹದ ಕಲಾವಿದರು ಜೊತೆಗಿದ್ದಾಗ ಪ್ರತಿ ಪ್ರಾಜೆಕ್ಟ್ ಕೂಡಾ ಅದ್ಭುತವಾಗಿ ಮೂಡಿ ಬರತ್ತೆ ಅನ್ನೋ ಭಾವನೆ ನನಗೆ ಬರತ್ತೆ,NH66 ಚಿತ್ರದ ಕಥೆಯನ್ನು ಪ್ರಮೋದ್ ಶೆಟ್ಟಿ ಅವ್ರಿಗೆ ಹೇಳ್ದೆ ನಂತರ ನಾನು ರಾಜೇಶ್ ನಟರಂಗ ಅವ್ರಿಗೆ ಕಥೆ ಹೇಳಿದ್ದೆ ಒಂದು ವಿಶೇಷ,ಶೃತಿ ಹರಿಹರನ್ ಅವ್ರಿಗೆ ಗೂಗಲ್ ಮೀಟ್ ನಲ್ಲಿ ಕಥೆ ಹೇಳಿದೆ,ನಾನು ಅಂದುಕೊಂಡ ಹಾಗೂ ಬರೆದುಕೊಂಡ ರೀತಿಯಲ್ಲೇ ಸಿನಿಮಾ ಶೂಟಿಂಗ್ ಮಾಡಿದ್ವಿ,ಎಲ್ಲವೂ ಅದ್ಭುತವಾಗಿ ಆಯ್ತು.

ನಾನೇ ನಿರ್ದೇಶಕ ಮತ್ತು ನಿರ್ಮಾಪಕನಾಗಿ ಹ್ಯಾಂಡಲ್ ಮಾಡಿದ್ದರಿಂದ,ಚಿತ್ರ ಎಲ್ಲಿಯೂ ಗೊಂದಲಕ್ಕೆ ಈಡಾಗದೇ ಕ್ಲಾರಿಟಿಯಲ್ಲಿ ಮುಗಿದಿದೆ,ನನಗೆ ಗೊತ್ತಿರೋ ಹಾಗೆ ಎಷ್ಟೋ ಸಾರಿ ಪ್ರತಿದಿನ ಐನೂರು ಅಥವಾ ಆರುನೂರು ಕಿಲೋಮೀಟರ್ ಟ್ರಾವೆಲ್ ಮಾಡಿದ ಉದಾಹರಣೆ ಇದೆ,NH66 ಇದೊಂದು ಗಟ್ಟಿ ಕಥೆ ಹೊಂದಿರುವ ಫ್ಯಾಮಿಲಿ ಎಮೋಷನಲ್ ಮತ್ತು ಥ್ರಿಲ್ಲರ್ ಫೀಲ್ ಇರುವ ಸಿನಿಮಾ,ನೋಡುಗರಿಗೆ ಬಹಳ ಇಷ್ಟವಾಗುತ್ತೇ,ಚಿತ್ರ ಒಟ್ಟು ಒಂದು ಗಂಟೆ ಮುಕ್ಕಾಲು ನಿಮಿಷದ ಕಥೆ ಮುಗಿಯುತ್ತೆ ಎಂದರು.

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.